Day 2 | Audi 2 – Session 4 : 2.00 pm
ವಿಕಾಸ್ ಕುಮಾರ್ ಪಿ. ಮತ್ತು ಎನ್. ಮಹೇಶ್
ಈ ಘೋಷ್ಠಿಯಲ್ಲಿ ಮಾತನಾಡಿದವರು ಎನ್. ಮಹೇಶ್, ರಾಜಕೀಯ ಪಂಡಿತರು ಹಾಗೂ ಮಾಜಿ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ. ವಿಕಾಸ್ ಕುಮಾರ್ ಪಿ. ಲೇಖಕರು ಹಾಗೂ ವಾಗ್ಮಿ.
ಸಂವಿಧಾನದ ಬಗ್ಗೆ, ಸಂವಿಧಾನದ ಆಳ ಅಗಲದ ಬಗ್ಗೆ, ಸಂವಿಧಾನದಲ್ಲಿ ಬಾಬಾಸಾಹೇಬರು ಯಾವ ಆಶಯಗಳನ್ನು ಇಟ್ಟುಕೊಂಡಿದ್ದಾರೆ ಎನ್ನುವ ಬಗ್ಗೆ ಸುದೀರ್ಘವಾದಂತಹ ಜ್ಞಾನ ಮತ್ತು ಅಧ್ಯಯನವೊಂದು ಇರತಕ್ಕಂತಹ ಕರ್ನಾಟಕದ ಕೆಲವೇ ಕೆಲವು ವ್ಯಕ್ತಿಗಳ ಪೈಕಿ ಎನ್ ಮಹೇಶ್ ಅವರು ಒಬ್ಬರು ಎಂದು ವಿಕಾಸ್ ಕುಮಾರ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಭಾರತಕ್ಕೆ ಸ್ವತಂತ್ರ ಬಂದ ಸಂದರ್ಭದಲ್ಲಿ ಭಾರತಕ್ಕೆ ಭಾರತದ್ದು ಎನ್ನುವ ಸಂವಿಧಾನ ಇರಲಿಲ್ಲ. ಭಾರತದ್ದು ಅನ್ನುವಂತ ಒಂದು ಸಂವಿಧಾನವನ್ನು ರಚನೆ ಮಾಡಬೇಕು. ಭಾರತಕ್ಕೆ ಭಾರತೀಯತೆಯ ಆಧಾರದ ಆಧಿಯಲ್ಲಿ, ಭಾರತದ ಪರಂಪರೆಯ ಆಧಾರದ ಆಧಿಯಲ್ಲಿ ಈ ರೀತಿ ಶ್ರೇಷ್ಠವಾದಂತ ಒಂದು ಸಂವಿಧಾನವನ್ನು ಭಾರತಕ್ಕೆ ಕುಡುಗೆಯಾಗಿ ಕೊಡಬೇಕು ಅನ್ನುವಂತ ಮಹತ್ತರ ಜವಾಬ್ದಾರಿ ಹೊರಿಸಿದ್ದು ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ.
ಇತ್ತೀಚೆಗೆ ನಮ್ಮ ದಿನನಿತ್ಯದ ಚರ್ಚೆಗಳಲ್ಲಿ ಬರುವ ವಿಷಯ, ದೇಶದ ಸಂವಿಧಾನವನ್ನು ಬದಲಾಯಿಸುವ ಅಥವಾ ಅದಕ್ಕೆ ಧಕ್ಕೆ ಹಾಕುವ ಕುರಿತು ನಡೆಯುತ್ತಿರುವ ವಾದ-ವಿವಾದಗಳಾಗಿದೆ. ಸರ್ಕಾರಗಳು, ವಿಶೇಷವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಥವಾ ಇತರ ಸರ್ಕಾರಗಳು ಆಳ್ವಿಕೆ ನಡೆಸಿದರೆ, ಸಂವಿಧಾನವು ಅಪಾಯಕ್ಕೆ ಒಳಗಾಗಬಹುದು ಎಂಬ ಭಯವು ನಿರಂತರವಾಗಿ ವ್ಯಕ್ತವಾಗುತ್ತಿದ್ದು, ಇದು ಸಾರ್ವಜನಿಕ ಚರ್ಚೆಯ ಪ್ರಮುಖ ವಿಷಯವಾಗಿದೆ.
ಈ ವಿಚಾರವು ಸದ್ಯದ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗಳ ಒಂದು ಪ್ರಮುಖ ಅಂಶವಾಗಿದೆ. ಅನೇಕವರು ಭರವಸೆ ವ್ಯಕ್ತಪಡಿಸುತ್ತಿರುವುದರಿಂದ, ಸಂವಿಧಾನದಲ್ಲಿ ಬದಲಾವಣೆಗಳನ್ನು ಮಾಡಲು ಯಾವುದೇ ಸಹಮತವಿಲ್ಲ. ಆದರೆ ಕೆಲವರು ಈ ಬದಲಾವಣೆಗಳನ್ನು ಸೂಕ್ತವನ್ನಾಗಿ ಅಂದಾಜಿಸುವುದರಿಂದ, ಇದರ ಬಗ್ಗೆ ಜಾಗೃತಿಯ ಅಗತ್ಯವಿದೆ.
ಮುಂದೆ ಎನ್ ಮಹೇಶ್ ಅವರು ಮಾತನಾಡಿದರು, ಶೋಷಿತ ಸಮುದಾಯಗಳನ್ನು ಪ್ರಜಾಪ್ರಭುತ್ವದ ಮುಖ್ಯಪ್ರವಾಹದಲ್ಲಿ ಸೇರಿಸಲು, ವಯಸ್ಕ ಮತದಾನ ಪದ್ಧತಿ ಮತ್ತು ಅಸ್ಪೃಶ್ಯತೆ ನಿಷೇಧ ಕಾನೂನು ಜಾರಿಗೆ ತರಬೇಕಾಗಿತ್ತು. ಜಾತಿ ಪದ್ಧತಿಯ ನಿ?ಧ ಮತ್ತು ಸಾಮಾಜಿಕ ಬಹಿಷ್ಕಾರ ಕಾನೂನಾತ್ಮಕವಾಗಿ ನಿಷೇಧಿಸಬೇಕು. ಅಸ್ಪೃಶ್ಯ ಸಮುದಾಯಗಳಿಗೆ ಸಾರ್ವಜನಿಕ ಸೇವೆಗಳಲ್ಲಿ ಮತ್ತು ರಾಜಕೀಯದಲ್ಲಿ ಪ್ರತಿನಿಧ್ಯ ನೀಡಬೇಕು. ಈ ಮನ್ನಣೆ 1918 ರ ಸೌತ್ ಬರೋ ಆಯೋಗ ಮತ್ತು 1928 ರ ಸೈಮನ್ ಕಮಿಷನ್ ಮುಂದೆ ಮಂಡಿಸಲಾಗಿತ್ತು. ಸೈಮನ್ ಕಮಿಷನ್‌ಗೆ ಮಂಡಿಸಿದ ಪ್ರಜಾಸತ್ತಾತ್ಮಕ ಅಂಶಗಳನ್ನು ವಿರೋಧಿಸಿದವು ಕಾಂಗ್ರೆಸ್ ಮತ್ತು ಕಾನ್ಫಿಡೆನ್ಸ್.
ಮಹಾತ್ಮಾ ಗಾಂಧಿಜಿಯವರು ಅಸ್ಪೃಶ್ಯರಿಗೆ ಪ್ರತ್ಯೇಕ ಚುನಾವನೆಯನ್ನು ವಿರೋಧಿಸಿದ್ದರು. ಬಾಬಾಸಾಹೇಬರ ಪ್ರಸ್ತಾವ ಅನ್ವಯ, 10 ವರ್ಷಗಳ ಕಾಲ ಅಸ್ಪೃಶ್ಯರಿಗೆ ಪ್ರತ್ಯೇಕ ಚುನಾವಣಾಧಿಕಾರ ನೀಡಬೇಕು ಎಂದು ಬ್ರಿಟಿಷರು ಒಪ್ಪಿದ್ದರು, ಆದರೆ ಗಾಂಧಿಜಿ ಹಾಗೂ ಕಾಂಗ್ರೆಸ್ ಈ ಪ್ರಸ್ತಾವವನ್ನು ತೀವ್ರವಾಗಿ ವಿರೋಧಿಸಿದರು. ಅವರು ಅಸ್ಪೃಶ್ಯರಿಗೆ ಸಾಮಾನ್ಯ ಮತದಾನದೊಂದಿಗೆ ಸಮಾನ ಹಕ್ಕುಗಳನ್ನು ನೀಡಬೇಕು ಎಂದು ಭಾವಿಸಿದರು. ಬ್ರಿಟಿಷರು ಇದರ ವಿರುದ್ಧ ಘೋಷಣೆ ಮಾಡಿದರೂ, ಮಹಾತ್ಮಾ ಗಾಂಧಿಜಿಯ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಅಮರಣಾಂತ ಉಪವಾಸ ಪ್ರಾರಂಭಿಸಿ, ನಂತರ ಪೂಣಾ ಒಪ್ಪಂದದಲ್ಲಿ ಇದು ಅಂತಿಮವಾಗಿ ಒಪ್ಪಿಗೆಯಾದುದು.
ನಮ್ಮ ಸಮಾಜದಲ್ಲಿ ಆರ್ಥಿಕ ಅಸಮಾನತೆ ಇಂದಿಗೂ ಕಾಣ ಸಿಗುತ್ತದೆ. ಇದನ್ನು ಹೋಗಲಾಡಿಸಬೇಕು. ಅಖಂಡ ಭಾರತ ಸಮಗ್ರ ಅಭಿವೃದ್ಧಿಗೆ ಶೋಷಿತ ವರ್ಗಗಳು ಮೇಲಕ್ಕೆ ಬರಬೇಕು ಹಾಗೂ ಮುಖ್ಯ ಪ್ರವಾಹಕ್ಕೆ ಸೇರಬೇಕು ಎಂಬ ಕಲ್ಪನೆಗೆ ನಮ್ಮ ದೇಶದಲ್ಲಿ 30 ವರ್ಷಗಳ ಕಾಲ ಆದ್ಯತೆ ನೀಡಿಲ್ಲ. ನೆಹರೂ ಸರ್ಕಾರ ಹಾಗೂ ಕಾಂಗ್ರೆಸ್ ಅವರನ್ನು ಪ್ರಜಾಪ್ರಭುತ್ವವಾದಿಗಳೆಂದು ಕರೆಯುವ ಕುರಿತು ಪ್ರಶ್ನೆಗಳು ಉದ್ಭವಿಸುತ್ತವೆ. 42ನೇ ತಿದ್ದುಪಡಿಯಲ್ಲಿ ಲೋಕಸಭಾ ಅವಧಿಯನ್ನು 5 ವರ್ಷದಿಂದ 6 ವರ್ಷಕ್ಕೆ ಹೆಚ್ಚಿಸಿದ ಇಂದಿರಾ ಗಾಂಧಿಯ ಕ್ರಮ, ತಮ್ಮ ಅಧಿಕಾರ ವಹಿಸಿಕೊಳ್ಳಲು ಮಾಡಿದ ನಡೆ ಎಂಬ ಟೀಕೆ ಇದೆ. ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿ, ಜನಸಂಘದ ವಿಲೀನ, ಮತ್ತು ಜನತಾ ಪಕ್ಷದ ಆಂದೋಲನಗಳ ನಡುವೆಯೂ ಜನತಾ ಪಕ್ಷವು ಅಧಿಕಾರಕ್ಕೆ ಬರದಿರುವುದು ಚಿಂತನೆಯ ವಿಷಯವಾಗಿದೆ.
ದಲಿತರು ಎದುರಿಸಿದ ಅನ್ಯಾಯವು ತುಂಬಾ ಗಂಭೀರವಾಗಿದೆ, ಇದು ಇವರ ಮನಸ್ಸಿಗೆ ಆಘಾತ ನೀಡುತ್ತದೆ. ದಲಿತರ ಹಿತಾಸಕ್ತಿ ಮತ್ತು ಭವಿಷ್ಯದ ಬಗ್ಗೆ ಚಿಂತನೆ ಮಾಡುವ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾಗಿರುವ ಸಂದರ್ಭದಲ್ಲಿ, ಹೀನಾಯ ಕೃತ್ಯಗಳಿಗೆ ಪಕ್ಷದ ಆಡಳಿತದೆಡೆಗೆ ಪ್ರಶ್ನೆ ಹುಟ್ಟಿಸುತ್ತಿದೆ.
ಇದರಿಂದ, ಪ್ರಜಾಪ್ರಭುತ್ವದ ಮೂಲಸಿದ್ಧಾಂತಗಳನ್ನು ಉಲ್ಲಂಘಿಸುವಂತೆ ಕಾಣುವ ಶಕ್ತಿಗಳ ವಿರುದ್ಧವಾಗಿ ಸ್ಪಷ್ಟವಾದ, ಸಮರ್ಥ ಮತ್ತು ನ್ಯಾಯಸಮ್ಮತ ಹೋರಾಟ ಅಗತ್ಯವಿದೆ.
Ambedkar and the Constitution: Truths and Myths
The panel discussion titled “Ambedkar and the Constitution: Truths and Myths” featured N Mahesh, a former legislator and prominent thinker on Dalit and Bahujan movements, and Vikas Kumar P, an author and orator. The session explored Dr. B.R. Ambedkar’s vision for India’s Constitution and its evolution over time.
Vikas Kumar P opened the session by welcoming N Mahesh and highlighting his extensive knowledge of Dr. Ambedkar’s principles and contributions. Mahesh began by reflecting on India’s independence in 1947 and the responsibility given to Dr. Ambedkar to draft the Constitution. He emphasized that this year marks the 75th anniversary of the Constitution and stressed the need to reflect on its progress and challenges.
Mahesh pointed out the concerning trend of using the Constitution and Dr. Ambedkar’s name for political purposes, which often misrepresents their true essence. He traced the history of constitutional governance, beginning with the Minto-Morley reforms in 1909 and their influence on India’s democratic framework. He emphasized Dr. Ambedkar’s role in advocating for universal adult suffrage and the abolition of untouchability and caste discrimination.
The discussion also covered the historical debate between Dr. Ambedkar and Mahatma Gandhi on the issue of separate electorates for untouchables. While Ambedkar supported separate electorates, Gandhi opposed them, believing they would perpetuate division. The Poona Pact ultimately replaced separate electorates with reserved seats for untouchables, marking a significant moment in India’s struggle for social inclusion.
The conversation moved to Ambedkar’s role in the post-independence period, including his determination to ensure the rights of the oppressed were enshrined in the Constitution. Despite significant opposition, Ambedkar continued his advocacy for marginalized groups, shaping a constitutional framework that would protect their interests.
The panel also discussed the evolution of the Constitution, highlighting significant amendments over the years, particularly under Indira Gandhi’s leadership. The 39th Amendment, which had a profound impact during the Emergency period, was seen as a shift in the political landscape. The landmark Kesavananda Bharati case of 1973, which introduced the ‘basic structure doctrine,’ was also mentioned as a safeguard against potential government overreach.
Further, the panel reflected on Ambedkar’s broader vision for equality, which extended beyond political rights to include social and economic justice. Despite his resignation from the position of Law Minister due to the rejection of the Hindu Code Bill, Ambedkar’s ideas continued to influence Indian discourse on social justice. His vision of education for all children and the formation of commissions for SC, ST, and OBC communities were later realized through government efforts, particularly during the tenure of Atal Bihari Vajpayee.
The discussion concluded by acknowledging the challenges in fully realizing Dr. Ambedkar’s vision and the role of the Indian Constitution in promoting social justice. The session ended with a questions-and-answers segment, where the panelists addressed audience queries, providing further insights into the topic.