Day 1 | Audi 3 – Session 5 : 5.00 pm
ಗೋಪಾಲಕೃಷ್ಣ ಕುಂಟಿನಿ, ಸ್ಮಿತಾ ರಾಘವೇಂದ್ರ, ಸಚಿನ್ ತೀರ್ಥಹಳ್ಳಿ ಮತ್ತು ವಿಷ್ಣುಧರನ್
ಮಂಗಳೂರು ಸಾಹಿತ್ಯದ 7ನೇ ಆವೃತ್ತಿಯ ಅಂಗವಾಗಿ ಕಥಾ ಓದು ಕಾರ್ಯಕ್ರಮವು ಸಾಹಿತ್ಯಪ್ರೇಮಿಗಳಿಗೆ ಅನನ್ಯ ಅನುಭವ ನೀಡಿತು ಈ ವಿಶೇಷ ಕಾರ್ಯಕ್ರಮದಲ್ಲಿ ಮೂರು ಪ್ರಮುಖ ವ್ಯಕ್ತಿತ್ವಗಳು ಭಾಗವಹಿಸಿದರು – ಪತ್ರಕರ್ತ ಹಾಗೂ ಲೇಖಕ ಗೋಪಾಲಕೃಷ್ಣ ಕುಂಟಿನಿ, ಕಥೆಗಾರ ಸಚಿನ್ ತೀರ್ಥಹಳ್ಳಿ ಮತ್ತು ಗುರುವಂದನ ಸಾಹಿತ್ಯ ಪ್ರಶಸ್ತಿ ವಿಜೇತೆಯಾದ ಲೇಖಕಿ ಸ್ಮಿತಾ ರಾಘವೇಂದ್ರ ರವರೂ ಕಥಾ ಓದು ಸಂವಾದದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವು ಕಥಾ ಓದು ಕಲೆ ಕುರಿತು ಪರಿಚಯ ನೀಡುವ ಮೂಲಕ ಆರಂಭವಾಯಿತು, ಇದು ಸಂಸ್ಕೃತಿಗಳನ್ನು ಸಂಪರ್ಕಿಸುವ, ಪರಂಪರೆಯನ್ನು ಕಾಪಾಡುವ ಮತ್ತು ಚಿಂತನೆಗೆ ಉತ್ತೇಜನ ನೀಡುವ ಒಂದು ಸಶಕ್ತ ಮಾಧ್ಯಮವಾಗಿದೆ. ಪ್ರತ್ಯೇಕವಾಗಿ ತಮ್ಮ ಕಥೆಗಳನ್ನು ಓದುವುದರ ಮೂಲಕ ಎಲ್ಲರೂ ತಮ್ಮ ವಿಶಿಷ್ಟ ಶೈಲಿಯನ್ನು ಪರಿಚಯಿಸಿದರು.
ಕಥೆಗಳ ಮೂಲಕ ಸಂಸ್ಕೃತಿಯ ಆಳವಾದ ವ್ಯಾಖ್ಯಾನ, ಸಾಹಿತ್ಯದ ಸಮಾಜಶಾಸ್ತ್ರೀಯ ಪ್ರಭಾವ, ಮತ್ತು ಕಾಲಾನುಗುಣವಾಗಿ ಅದರಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಚಿಂತನೆಗೆ ಆಹ್ವಾನ ನೀಡಿತು. ಪ್ರಖ್ಯಾತ ಲೇಖಕರು ಮತ್ತು ಕಥೆಗಾರರೊಂದಿಗೆ ನಡೆದ ಈ ಸಂವಾದವು ಕೇವಲ ಕಲಾತ್ಮಕತೆಗೆ ಮಾತ್ರವಲ್ಲ, ಸಾಹಿತ್ಯದ ಗಂಭೀರ ಚಿಂತನೆಗಳಿಗೆ ದಾರಿಯನ್ನೂ ತೆರೆಸಿತು. ಈ ಚರ್ಚೆಯಿಂದ ಪ್ರೇಕ್ಷಕರು ಸಾಹಿತ್ಯದ ಪ್ರಬಲತೆ ಮತ್ತು ಕಥಾ ಹೇಳುವಿಕೆಯ ಶಕ್ತಿ ಕುರಿತು ಹೊಸ ದೃಷ್ಟಿಕೋಣವನ್ನು ಪಡೆಯಲು ಸಾಧ್ಯವಾಯಿತು. ಹೊಸದಾಗಿ ಕಲಿಯಲು, ಅನ್ವೇಷಿಸಲು ಹಾಗೂ ಸಾಹಿತ್ಯದ ಮಹತ್ವವನ್ನು ಅರಿಯಲು ಅನೇಕ ಅವಕಾಶಗಳನ್ನು ಒದಗಿಸಿತು.
The 7th edition of the Mangaluru Literature Fest witnessed an engaging storytelling event featuring an impressive panel of writers and storytellers. The session brought together three prominent personalities: Gopalakrishna Kuntini, journalist and writer, Sachin Theerthahalli, an accomplished story writer, and Smita Raghavendra, a farmer, writer, and recipient of the prestigious Gurukula Sahitya Award. The session was moderated by Vishnudharan, whose expertise ensured a seamless and thought-provoking discussion.
The event opened with an introduction to the art of storytelling as a medium to connect cultures, preserve heritage, and inspire thought. Each speaker started to read the story.
The session concluded with an interactive discussion, where the panelists answered questions from the audience, exploring topics like the evolution of storytelling in the digital age, challenges faced by writers, and the role of literature in social change.
The event highlighted the diversity and richness of storytelling as an art form, leaving the audience inspired and eager to explore more. The 7th edition of the Mangaluru Literature Fest continues to showcase literary excellence, fostering meaningful dialogue and celebrating the written word.