Day 1 | Audi 1 – Session 1 : 5.00 pm
K. Annamalai and Jaideep Shenoy
Public participation is crucial for the success of democracy. The central government treats all states equally and does not discriminate against any state. Discrimination is not based on the number of members of parliament from a state, said Annamalai, former IPS officer and Tamil Nadu BJP President.
He was speaking at the last session of the first day of the 7th edition of the Mangaluru Lit Fest, organized by the Bharat Foundation, participating in a dialogue on “Democracy and Democratic Governance.” Senior journalist Jaideep Shenoy moderated the conversation.
Democracy is fully successful when people not only focus on their rights but also participate in all democratic processes. Participation is also a fundamental duty. Annamalai called on more educated young people to enter politics and participate actively in democracy through grassroots politics at the Panchayat level.
Understanding politics is different from working as an elected representative. Similarly, adhering to an ideology is different. These nuances need to be understood and duties performed accordingly. Prime Minister Narendra Modi has clearly understood these issues and has demonstrated them through his own actions. He is a living example for us, said Annamalai.
The number of new middle-class people in the country is increasing. This means that the benefits of economic development are reaching them. The aspirations and expectations of this class are increasing. At the same time, the number of senior citizens is also increasing, and their healthcare is also becoming a challenge. This is something that any country faces at some point. India, as a democratic country, has to manage all of this, said Annamalai.
Giving an example of a village near Kanchipuram in Tamil Nadu, he said that there was a system of active public participation in democracy there 1200 years ago. Grassroots democracy existed in India thousands of years ago. It is not a new concept that came from abroad, he said.
There is no place for VIP culture in the country, nor should there be, which is Prime Minister Modi’s policy. That is why he has implemented several reforms. He does not miss any opportunity to interact with people. He has practically demonstrated the lesson of public contact throughout his political life to newcomers entering politics, said Annamalai.
Answering a specific question about the alleged compromise politics in Karnataka, he said that primarily, politics has to proceed with some kind of compromise system. There should be no room for personal animosity in politics. Even though Prime Minister Modi came to power with a full majority in 2014, he did not revoke Article 370 in the first term. He waited for the right time and a conducive atmosphere and revoked it in August 2019. This is also compromise politics. Former Prime Minister Atal Bihari Vajpayee allied with the DMK in Tamil Nadu during his tenure. If the BJP had not been part of the ruling government in Jammu and Kashmir at one point, it would not have been possible to revoke Article 370. That was also a strategy of compromise politics. Therefore, the portrayal of it as just compromise politics is not correct, Annamalai argued.
The original constitution drafted by Ambedkar did not have the words “socialist” and “secular.” They were added by Indira Gandhi during her premiership in the 42nd amendment. In fact, according to Ambedkar’s opinion, the Indian social system is naturally secular. The Hindu way of life is all-inclusive. Therefore, Ambedkar did not agree to add that word, Annamalai recalled.
Hindi Controversy:
There is no need for the Hindi as national language controversy. The previous two national education policies had adopted a two-language policy and made Hindi compulsory. But the third national education policy implemented after the Modi government came to power has adopted a three-language study policy. No language has been called a national language, Annamalai clarified.
The people of Tamil Nadu are inherently patriotic. The patriotism shown by the people of the state when the former Chief of Defence Staff died in a helicopter crash was immense. The two Dravidian parties that have ruled the state are only dividing people for their own benefit. This situation must change one day, and it will, he said.
Answering a question from an audience member about why only Hindu temples are under government control in the name of being secular, he replied that the BJP would repeal the law of government control over temples the day it comes to power in Tamil Nadu.
The packed hall, especially the large number of students and young people, testified to Annamalai’s popularity. With all the seats filled, an equal number of curious spectators stood and listened to the conversation with Annamalai.
ಎಲ್ಲ ಹಂತದಲ್ಲಿ ಜನರ ಸಂಪೂರ್ಣ ಸಹಭಾಗಿತ್ವವೇ ಯಶಸ್ವೀ ಪ್ರಜಾಪ್ರಭುತ್ವ: ಅಣ್ಣಾಮಲೈ
ಪ್ರಜಾಪ್ರಭುತ್ವದ ಯಶಸ್ಸಿಗೆ ಜನರ ಪಾಲುದಾರಿಕೆ ಅತೀ ಅಗತ್ಯ. ಕೇಂದ್ರ ಸರಕಾರವು ಎಲ್ಲ ರಾಜ್ಯಗಳನ್ನು ಒಂದೇ ರೀತಿಯಾಗಿ ನೋಡುತ್ತದೆಯೇ ಹೊರತು, ಯಾವುದೇ ರಾಜ್ಯಕ್ಕೆ ತಾರತಮ್ಯದ ಧೋರಣೆಯಿಂದ ನೋಡುವುದಿಲ್ಲ. ರಾಜ್ಯದ ಸಮಸದರ ಸಂಖ್ಯೆ ಆಧರಿಸಿ ತಾರತಮ್ಯ ಮಾಡುವುದಿಲ್ಲ ಎಂದು ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದರು.
ಭಾರತ್ ಫೌಂಡೇಶನ್ ಆಯೋಜಿಸಿರುವ ಮಂಗಳೂರು ಲಿಟ್ ಫೆಸ್ಟ್ನ 7ನೇ ಆವೃತ್ತಿಯ ಮೊದಲ ದಿನದ ಕೊನೆಯ ಅಧಿವೇಶನದಲ್ಲಿ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಆಡಳಿತ ಎಂಬ ವಿಚಾರದಲ್ಲಿ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿರಿಯ ಪತ್ರಕರ್ತ ಜೈದೀಪ್ ಶೆಣೈ ಸಂವಾದವನ್ನು ನಡೆಸಿಕೊಟ್ಟರು.
ಜನರು ತಮ್ಮ ಹಕ್ಕುಗಳನ್ನಷ್ಟೇ ಗಮನಿಸದೆ ಪ್ರಜಾಪ್ರಭುತ್ವದ ಎಲ್ಲ ಪ್ರಕ್ರಿಯೆಗಳಲ್ಲಿ ಸಹಭಾಗಿತ್ವ ಹೊಂದಿದರೆ ಅದು ಸಂಪೂರ್ಣ ಯಶಸ್ವಿಯಾಗುತ್ತದೆ. ಸಹಭಾಗಿತ್ವ ನೀಡುವುದು ಮೂಲಭೂತ ಕರ್ತವ್ಯವೂ ಹೌದು. ಹೆಚ್ಚು ಹೆಚ್ಚು ವಿದ್ಯಾವಂತರಾದ ಯುವ ಜನತೆ ರಾಜಕೀಯ ಪ್ರವೇಶಿಸಬೇಕು. ಪಂಚಾಯತ್ ಮಟ್ಟದ ರಾಜಕೀಯದ ಮೂಲಕ ಪ್ರಜಾಪ್ರಭುತ್ವದ ಸಕ್ರಿಯ ಸಹಭಾಗಿತ್ವಕ್ಕೆ ಪ್ರವೇಶಿಸಬೇಕು ಎಂದು ಅಣ್ಣಾಮಲೈ ಕರೆ ನೀಡಿದರು.
ರಾಜಕೀಯವನ್ನು ಅರ್ಥಮಾಡಿಕೊಳ್ಳುವುದು ಬೇರೆ, ಚುನಾಯಿತ ಪ್ರತಿನಿಧಿಯಾಗಿ ಕೆಲಸ ಮಾಡುವುದು ಬೇರೆ. ಅದೇ ರೀತಿ ಸಿದ್ಧಾಂತಕ್ಕೆ ಬದ್ಧರಾಗಿ ವರ್ತಿಸುವುದು ಬೇರೆ. ಈ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿದುಕೊಂಡು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಪ್ರಧಾನಿ ನರೆಂದ್ರ ಮೋದಿಯವರು ಈ ವಿ?ಯಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಸ್ವತಃ ಅನುಸರಿಸಿ ತೋರಿಸಿದ್ದಾರೆ. ಅವರು ನಮಗೆ ಜೀವಂತ ಮಾದರಿಯಾಗಿದ್ದಾರೆ ಎಂದರು ಅಣ್ಣಾಮಲೈ.
ರಾಜಕೀಯವನ್ನು ಅರ್ಥಮಾಡಿಕೊಳ್ಳುವುದು ಬೇರೆ, ಚುನಾಯಿತ ಪ್ರತಿನಿಧಿಯಾಗಿ ಕೆಲಸ ಮಾಡುವುದು ಬೇರೆ. ಅದೇ ರೀತಿ ಸಿದ್ಧಾಂತಕ್ಕೆ ಬದ್ಧರಾಗಿ ವರ್ತಿಸುವುದು ಬೇರೆ. ಈ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿದುಕೊಂಡು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಪ್ರಧಾನಿ ನರೆಂದ್ರ ಮೋದಿಯವರು ಈ ವಿ?ಯಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಸ್ವತಃ ಅನುಸರಿಸಿ ತೋರಿಸಿದ್ದಾರೆ. ಅವರು ನಮಗೆ ಜೀವಂತ ಮಾದರಿಯಾಗಿದ್ದಾರೆ ಎಂದರು ಅಣ್ಣಾಮಲೈ.
ದೇಶದಲ್ಲೀಗ ನವ ಮಧ್ಯಮ ವರ್ಗದ ಜನಸಂಖ್ಯೆ ಹೆಚ್ಚಾಗುತ್ತಿದೆ. ಅಂದರೆ ಆರ್ಥಿಕ ಅಭಿವೃದ್ಧಿಯ ಫಲಗಳು ಅವರನ್ನು ತಲುಪುತ್ತಿವೆ. ಈ ವರ್ಗದ ಆಶೋತ್ತರಗಳು, ನಿರೀಕ್ಷೆಗಳು ಹೆಚ್ಚುತ್ತಿವೆ. ಅದೇ ವೇಳೆಗೆ ಹಿರಿಯ ನಾಗರಿಕರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಅವರ ಆರೋಗ್ಯಪಾಲನೆ ಕೂಡ ಸವಾಲಾಗುತ್ತಿದೆ. ಇದು ಯಾವುದೇ ದೇಶಕ್ಕೆ ಒಂದಲ್ಲ ಒಂದು ಹಂತದಲ್ಲಿ ಎದುರಾಗುತ್ತದೆ. ಇವನ್ನೆಲ್ಲ ಒಂದು ಪ್ರಜಾಸತ್ತಾತ್ಮಕ ದೇಶವಾಗಿ ಭಾರತ ನಿರ್ವಹಿಸಬೇಕಾಗಿದೆ ಎಂದು ಅಣ್ಣಾಮಲೈ ನುಡಿದರು.
ತಮಿಳುನಾಡಿನ ಕಾಂಚೀಪುರಂ ಸಮೀಪದ ಹಳ್ಳಿಯೊಂದರ ಉದಾಹರಣೆ ನೀಡಿದ ಅವರು, 1200 ವರ್ಷಗಳ ಹಿಂದೆಯೇ ಅಲ್ಲಿ ಜನರ ಸಕ್ರಿಯ ಸಹಭಾಗಿತ್ವದ ಪ್ರಜಾಪ್ರಭುತ್ವದ ವ್ಯವಸ್ಥೆ ಇತ್ತು ಎಂದು ಹೇಳಿದರು. ತಳಮಟ್ಟದಲ್ಲಿ ಪ್ರಜಾಪ್ರಭುತ್ವ ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಇತ್ತು. ಅದೇನು ವಿದೇಶದಿಂದ ಬಂದ ಹೊಸ ಕಲ್ಪನೆಯಲ್ಲ ಎಂದರು.
ದೇಶದಲ್ಲಿ ವಿಐಪಿ ಸಂಸ್ಕೃತಿಗೆ ಅವಕಾಶವಿಲ್ಲ. ಅದು ಇರಲೂ ಬಾರದು ಎನ್ನುವುದೇ ಪ್ರಧಾನಿ ಮೋದಿ ಅವರ ಧೋರಣೆ. ಅದಕ್ಕಾಗಿಯೇ ಅವರು ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಜನರ ಜತೆ ಬೆರೆಯುವ ಯಾವ ಅವಕಾಶಗಳನ್ನೂ ಅವರು ಬಿಡುವುದಿಲ್ಲ. ರಾಜಕೀಯ ಪ್ರವೇಶಿಸುವ ಹೊಸಬರಿಗೆ ಜನಸಂಪರ್ಕದ ಪಾಠವನ್ನು ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಅವರು ಪ್ರಾಯೋಗಿಕವಾಗಿ ಅನುಸರಿಸಿ ತೋರಿಸಿದ್ದಾರೆ ಎಮದು ಅಣ್ಣಾಮಲೈ ಹೇಳಿದರು.
ಕರ್ನಾಟಕದಲ್ಲಿ ನಡೆಯುತ್ತಿದೆ ಎನ್ನಲಾಗುವ ರಾಜಿ ರಾಜಕೀಯ- ಹೊಂದಾಣಿಕೆ ರಾಜಕೀಯದ ಬಗ್ಗೆ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸುತ್ತ, ಪ್ರಾಥಮಿಕವಾಗಿ ರಾಜಕೀಯ ಎಂಬುದು ಒಂದಲ್ಲ ಒಂದು ರೀತಿಯ ಹೊಂದಾಣಿಕೆಯ ವ್ಯವಸ್ಥೆಯೊಂದಿಗೇ ಸಾಗಬೇಕಿದೆ. ವೈಯಕ್ತಿಕ ದ್ವೇಷಕ್ಕೆ ರಾಜಕೀಯದಲ್ಲಿ ಅವಕಾಶ ಇರಕೂಡದು. ಪ್ರಧಾನಿ ಮೋದಿ ಅವರು 2014 ರಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರೂ ಮೊದಲ ಅವಧಿಯಲ್ಲಿ 370ನೇ ವಿಧಿ ರದ್ದು ಮಾಡಲಿಲ್ಲ. ಸೂಕ್ತ ಸಮಯ, ಹದಗೊಂಡ ವಾತಾವರಣಕ್ಕಾಗಿ ಕಾದು 2016 ರ ಆಗಸ್ಟ್ನಲ್ಲಿ ರದ್ದುಮಾಡಿದರು. ಇದೂ ಸಹ ಹೊಂದಾಣಿಕೆ ರಾಜಕೀಯವೇ ಆಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಅವಧಿಯಲ್ಲಿ ತಮಿಳುನಾಡಿನ ಡಿಎಂಕೆ ಜತೆಗೆ ಮೈತ್ರಿ ಮಾಡಿಕೊಂಡಿದ್ದರು. ಜಮ್ಮು- ಕಾಶ್ಮೀರದಲ್ಲಿ ಒಂದು ಹಂತದಲ್ಲಿ ಬಿಜೆಪಿ ಆಡಳಿತ ಸರಕಾರದ ಭಾಗವಾಗಿರದಿದ್ದರೆ 370ನೇ ವಿಧಿ ರದ್ದು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದೂ ಸಹ ಹೊಂದಾಣಿಕೆ ರಾಜಕೀಯದ ಒಂದು ಕಾರ್ಯತಂತ್ರವೇ ಆಗಿತ್ತು. ಹಾಗಾಗಿ ರಾಜಿ ರಾಜಕೀಯ ಎನ್ನುವ ಬಿಂಬಿಸುವಿಕೆ ಸರಿಯಲ್ಲ ಎಂದು ಅಣ್ಣಾಮಲೈ ಪ್ರತಿಪಾದಿಸಿದರು.
ಅಂಬೇಡ್ಕರ್ ಅವರು ರಚಿಸಿದ ಮೂಲ ಸಂವಿಧಾನದಲ್ಲಿ ಸೋಶಿಯಲಿಸ್ಟ್ ಮತ್ತು ಸೆಕ್ಯುಲರ್ ಎಂಬ ಪದಗಳಿರಲಿಲ್ಲ. ಅವುಗಳನ್ನು ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ 42ನೇ ತಿದ್ದುಪಡಿಯಲ್ಲಿ ಅವುಗಳನ್ನು ಸೇರಿಸಿದರು. ವಾಸ್ತವದಲ್ಲಿ ಅಂಬೇಡ್ಕರ್ ಅವರ ಅಭಿಮತದ ಪ್ರಕಾರ, ಭಾರತದ ಸಾಮಾಜಿಕ ವ್ಯವಸ್ಥೆ ಸಹಜವಾಗಿಯೇ ಸೆಕ್ಯುಲರ್ ಆಗಿದೆ. ಹಿಂದೂ ಜೀವನ ವಿಧಾನವೇ ಎಲ್ಲರನ್ನು ಒಳಗೊಂಡಿರುವಂಥದ್ದು. ಹಾಗಾಗಿ ಅಂಬೇಡ್ಕರ್ ಆ ಪದ ಸೇರಿಸಲು ಒಪ್ಪಿರಲಿಲ್ಲ ಎಂದು ಅಣ್ಣಾಮಲೈ ನೆನಪಿಸಿದರು.
ಹಿಂದಿ ವಿವಾದ:
ಹಿಂದಿ ರಾಷ್ಟ್ರ ಭಾಷೆ ಎಂಬ ವಿವಾದ ಬೇಕಿಲ್ಲ. ಹಿಂದಿನ ಎರಡು ರಾಷ್ಟ್ರೀಯ ಶಿಕ್ಷಣ ನೀತಿಗಳಲ್ಲಿ ಎರಡು ಭಾ?ಗಳ ನೀತಿ ಅಳವಡಿಸಿ ಹಿಂದಿಯನ್ನು ಕಡ್ಡಾಯ ಮಾಡಿದ್ದರು. ಆದರೆ ಮೋದಿ ಸರಕಾರ ಬಂದ ನಂತರ ಜಾರಿಗೊಳಿಸಲಾದ ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮೂರು ಭಾಷೆಗಳ ಅಧ್ಯಯನ ನೀತಿ ಅಳವಡಿಸಲಾಗಿದೆ. ಯಾವುದೇ ಭಾಷೆಯನ್ನು ರಾಷ್ಟ್ರ ಭಾಷೆ ಎಂದು ಕರೆದಿಲ್ಲ ಎಂದು ಅಣ್ಣಾಮಲೈ ಸ್ಪಷ್ಟ ಪಡಿಸಿದರು.
ತಮಿಳುನಾಡಿನ ಜನತೆ ಮೂಲತಃ ದೇಶಭಕ್ತರು. ಮಾಜಿ ರಕ್ಷಣಾ ಪಡೆಗಳ ಮುಖ್ಯಸ್ಥರು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಾಗ ರಾಜ್ಯದ ಜನತೆ ತೋರಿದ ದೇಶಪ್ರೇಮ ಅಗಾಧವಾಗಿತ್ತು. ರಾಜ್ಯವನ್ನು ಆಳಿದ ಎರಡು ದ್ರಾವಿಡ ಪಕ್ಷಗಳು ಜನರನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ ಅಷ್ಟೇ. ಒಂದಲ್ಲ ಒಂದು ದಿನ ಈ ಪರಿಸ್ಥಿತಿ ಬದಲಾಗಬೇಕು, ಆಗಿಯೇ ಆಗುತ್ತದೆ ಎಂದು ಅವರು ನುಡಿದರು.
ಸೆಕ್ಯುಲರ್ ಎಂದು ಹೇಳಿಕೊಂಡು ಹಿಂದೂ ದೇವಸ್ಥಾನಗಳ ಮೇಲೆ ಮಾತ್ರ ಸರಕಾರದ ನಿಯಂತ್ರಣ ಯಾಕೆ ಎಂಬ ಪ್ರೇಕ್ಷಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ದಿನವೇ ದೇವಸ್ಥಾನಗಳ ಮೇಲೆ ಸರಕಾರದ ನಿಯಂತ್ರಣದ ಕಾಯ್ದೆಯನ್ನು ರದ್ದುಪಡಿಸಲಾಗುತ್ತದೆ ಎಂದು ಉತ್ತರಿಸಿದರು.
ಅಣ್ಣಾಮಲೈ ಅವರ ಜನಪ್ರಿಯತೆ ಎಷ್ಟು ಎಂಬುದನ್ನು ಕಿಕ್ಕಿರಿದು ತುಂಬಿದ್ದ ಸಭಾಂಗಣವೇ ಸಾಕ್ಷಿ ನುಡಿಯಿತು. ಅದರಲ್ಲೂ ವಿದ್ಯಾರ್ಥಿಗಳು, ಯುವ ಜನತೆಯ ಸಂಖ್ಯೆ ಅಧಿಕವಾಗಿತ್ತು. ಆಸನಗಳು ಭರ್ತಿಯಾಗಿ ಬಹಳಷ್ಟು ಸಂಖ್ಯೆಯ ಕುತೂಹಲಿ ಪ್ರೇಕ್ಷಕರು ನಿಂತುಕೊಂಡು ಅಣ್ಣಾಮಲೈ ಅವರ ಜತೆಗಿನ ಸಂವಾದವನ್ನು ಆಲಿಸಿದರು.