ದೃಶ್ಯ ಮಾಧ್ಯಮ: ಸಾಧನೆ, ಸವಾಲುಗಳು

Audi 1  – Session 6 : 4.00 pm

The last session of the Mangaluru LIT Fest organized by Barath Foundation in collaboration with Mythic Society began with the moderator of the session, Ms Divya Karanth Introducing the panelists, Mr Prakash Belawadi and Mr Parameshwar Gundkal. The topic of discussion was ‘Visual Media : Achievements and Challenges’.

Mr Prakash started his talk by saying that AI is slowly taking over and the upcoming generation won’t be required to do any work. He fears that because of AI humans will become useless. He next talks about his experiences of losing track of time while he is engrossed in reading a book. Time creates tension is a narrative Kalidasa’s play which is a model when I come to structure. Mr Prakash goes on to talk about how PoV in cinema is very distinct and different from that of literature. He says that children in the current era spend most of the time on visual media but there is noone to tell them to critically analyse the content that they are consuming. Most of the input the children receive through visual media, it goes in a subliminal way rather than consciously. He concluded his talk by saying that people understand what they see but they don’t understand how or why they understand what they understood.

Mr Parameshwar during his talk says that the writing required for visual media is complex compared to the other forms of written literature. Converting a story into a film is very different process than turning it into a novel. He says that every minute detail and decision in visual medium is not a small decision and can evoke different emotions. He further talks about the gap between demand and supply of stories for visual media. He concludes by saying that the road map from origin of an idea to a full script for visual media is a very complex process and requires alot of learning.

The discussion concluded with a Q and A session with the panelists giving their opinion of the queries of the audience.

ದೃಶ್ಯ ಮಾಧ್ಯಮ: ಸಾಧನೆ, ಸವಾಲುಗಳು

6ನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ ನ ಸಮಾರೋಪ ವಿಚಾರಗೋಷ್ಠಿಯಲ್ಲಿ ಖ್ಯಾತ ನಿರ್ದೇಶಕ, ರಂಗಕರ್ಮಿ ಪ್ರಕಾಶ್ ಬೆಳವಾಡಿ ಮತ್ತು ಕನ್ನಡ ಮಾಧ್ಯಮ ಲೋಕದ ಪ್ರಮುಖ ಚಹರೆ ಪರಮೇಶ್ವರ್ ಗುಂಡ್ಕಲ್ ಭಾಗವಹಿಸಿದರು. ದಿವ್ಯಾ ಕಾರಂತ್ ಗೋಷ್ಠಿಯನ್ನು ನಿರ್ವಹಿಸಿದರು.

ಮುಂದಿನ ಪೀಳಿಗೆಯ ಜನರು ಕ್ರಮೇಣ ನಿಷ್ಪ್ರಯೋಜಕರಾಗುತ್ತಾರೆ. AI ನಿಂದ ವೈವಿಧ್ಯತೆಗಳು ಕಡಿಮೆಯಾಗುತ್ತೆ, ಏಕರೂಪತೆ ಹೆಚ್ಚಾಗುತ್ತೆ. ಅಂತೆಯೇ ಈ ಕಾಲಘಟ್ಟದಲ್ಲಿ ಜನರ ನಡುವೆ ಹೆಚ್ಚು ಹೊತ್ತು ಗಮನ ಹರಿಸುವ ಮಟ್ಟ ಕಡಿಮೆ ಆಗಿದೆ, ಸ್ಕ್ರೀನ್ ಮುಂದಿನ ಅವಧಿ ಹೆಚ್ಚಾಗಿದೆ. ದಿನಕ್ಕೆ ಕನಿಷ್ಟ 5 ತಾಸು ಈಗ ಜನ ಪರದೆ ಮುಂದೆ ಕಳೀತಾರೆ ಎಂದು ಪ್ರಕಾಶ್ ಬೆಳವಾಡಿ ಅಭಿಪ್ರಾಯಪಟ್ಟರು. ಸಾಹಿತ್ಯಕ್ಕೆ ಹೋಲಿಸಿದರೆ ಸಿನಿಮಾದಲ್ಲಿ ದೃಷ್ಟಿಕೋನ ಬಹಳ ನಿರ್ದಿಷ್ಟವಾಗಿರುತ್ತೆ. ಪರದೆ ಮೇಲೆ ಕಾಣಿಸಿಕೊಳ್ಳುವ ಪ್ರತಿಯೊಂದು ಅಂಶವು ನಮ್ಮ ಮನಸ್ಸಿನಲ್ಲಿ ಒಂದು ಅರ್ಥವನ್ನು ಮೂಡಿಸುತ್ತದೆ. ಹಾಗಂತ ಸಿನಿಮಾದ, ದೃಶ್ಯ ಮಾಧ್ಯಮದ ಸೂಕ್ಷ್ಮತೆಗಳನ್ನು ಹೇಳಿಕೊಡುವ ಯಾವ ಕಾಲೇಜೂ ನಮ್ಮಲ್ಲಿಲ್ಲದಿರುವುದು ವಿ?ದಕರ ಎಂದರು.

ಯಾವುದೇ ವಿಚಾರದ ಬಗ್ಗೆ ಜನರಲ್ಲಿ ತಿಳುವಳಿಕೆ ಹೆಚ್ಚಾಗ್ಬೇಕಾದ್ರೆ ಅವರು ಓದ್ಬೇಕು. ಅದು ಪುಸ್ತಕವೇ ಆಗಿರಬೇಕೆಂದೇನಿಲ್ಲ. ಬೇರೆ ಬೇರೆ ರೀತಿಯ ಓದುಗಳು ಈಗಲೂ ಚಾಲ್ತಿಯಲ್ಲಿದೆ, ಅದೆಂದೂ ನಿಲ್ಲೋದಿಲ್ಲ. ಸಿನಿಮಾದಲ್ಲಿ ಬೇಕಾದ ಬರವಣಿಗೆಗೆ ಬಹಳ ಡಿಮ್ಯಾಂಡ್ ಇದೆ. ಒಂದು ಐಡಿಯಾದ ಮೂಲದಿಂದ ಸಂಪೂರ್ಣ ಸ್ಕ್ರಿಪ್ಟ್ ಆಗುವವರೆಗೆ ಬಹಳ ಕಾಂಪ್ಲೆಕ್ಸ್ ಪ್ರಕ್ರಿಯೆಗಳಿವೆ. ಮಾಧ್ಯಮಗಳು ನಮ್ಮ ಜೀವನದ ಮಧ್ಯ ಬರುವ ಕಥೆಗಳನ್ನೇ ಹೆಕ್ಕಿ ಸೀರಿಯಲ್, ಸಿನಿಮಾ ತೆಗೀತಾರೆ. ಆದರೆ ಈ ಪ್ರಕ್ರಿಯೆಯ ಮಧ್ಯೆ ಒಂದಿಷ್ಟು ಟೆಕ್ನಿಕಾಲಿಟಿಗಳನ್ನು ಅರ್ಥಮಾಡಿಕೊಳ್ಳಬೇಕಷ್ಟೆ ಅಂತ ಪರಮೇಶ್ವರ್ ಗುಂಡ್ಕಲ್ ಹೇಳಿದರು.