#MlrLitFest
  • mlrlitfest@gmail.com

Kashmir, Sharada and PoK

Audi 1 – Session 4 : 2.15 pm

The launch of the book ‘In quest of Guru’ by Ananda Mathew marked the beginning of the fourth session of the Mangaluru LIT Fest on the topic ‘Kashmir, Sharada and PoK’. The panelists for the discussion were Mr Ravinder Pandita and Ms Bhasha Sumbli.

While talking about Sharada,Ms Bhasha says that she lives in this exile consciousness which will bring the truth about Kashmir to the world and want to reclaim her place in her homeland Kashmir. When there was a fight between Devas and Asuras, devi sharada took amritha to Kashmir. Therefore it’s redder to as a very special land with a lot of significance. It is very important that the truth and reality of Kashmir has to told to the people of the world.

Mr Ravinder while talking about Sharada says that the major connect between Kashmir and the southern part of India is that all the statues that are present in south India are from Kashmir and brought to the south during the 13th century when the Muslim rulers invaded India. There are different takes on Kashmir by the different countries but the actual truth about Kashmir and Sharada is clearly know only by the Kashmirs and Indian. He says that Buddhism had overshaded the sadana of the Indians and says that Kashmir is the reason for the spread of Buddhism to the whole world. In his concluding statement Mr Ravinder says that in the LOC treaty it much be added that people must be allowed to enter PoK for pilgrimages too.

ಕಾಶ್ಮೀರ, ಶಾರದಾ ಮತ್ತು ಪಿ ಓ ಕೆ

ಆನಂದ್ ಮ್ಯಾಥ್ಯೂ ರವರು ಬರೆದ ಇನ್ ಕ್ವೆಸ್ಟ್ ಆಫ್ ಗುರು ಎಂಬ ಪುಸ್ತಕ ಬಿಡುಗಡೆಯಿಂದ ಪ್ರಾರಂಭವಾದ ಕಾಶ್ಮೀರ, ಶಾರದಾ ಮತ್ತು ಪಿ ಓ ಕೆ ವಿಷಯದ ವಿಚಾರಗೋಷ್ಠಿಯಲ್ಲಿ ಕಾಶ್ಮೀರಿ ಪಂಡಿತರಾದ ರವೀಂದ್ರ ಪಂಡಿತ ಮತ್ತು ದ ಕಾಶ್ಮೀರ ಫೈಲ್ಸ್ ಖ್ಯಾತಿಯ ಭಾಷಾ ಸುಂಬ್ಲಿ ಯವರು ಭಾಗವಹಿಸಿದರು. ಹರ್ಷಾ ಭಟ್ ನಿರ್ವಹಿಸಿದರು.

ಭಾಷಾ ಸುಂಬ್ಲಿ ಅವರು ಅಮೃತ ಕಲಶಕ್ಕಾಗಿ ನಡೆದ ಸಮುದ್ರ ಮಂಥನದ ದೇವಾಸುರ ಸಂಗ್ರಾಮದಲ್ಲಿ ಸಿಕ್ಕಿದ ಅಮೃತಕಲಶವನ್ನು ಮೈನಾ ಹಾಕಿ ಮುಖಾಂತರ ದೇವಿ ಸರಸ್ವತಿ ಉಳಿಸಿಕೊಂಡಿದ್ದು ಕಾಶ್ಮೀರದಲ್ಲಿ. ಶಾರದಾ ದೇಶ ಕಾಶ್ಮೀರವನ್ನು ಜ್ಞಾನದ ಗಂಗೋತ್ರಿ ಎಂದು ಎಂದಿನಿಂದಲೂ ಹೇಳಲಾಗುತ್ತದೆ. ಅದಕ್ಕೇ ದೇವಿ ಶಾರದೆಯನ್ನ ಕಾಶ್ಮೀರಪುರವಾಸಿನಿ ಎನ್ನುವುದು.

ಕಾಶ್ಮೀರ ವೀರಶೈವ ಪರಂಪರೆಯ ನಾಡಾಗಿದೆ. ಶ್ರೀರಾಮನ ಪರೀಕ್ಷೆ ನಡೆಸಿ ತಮ್ಮೆಲ್ಲಾ ಶಕ್ತಿಯನ್ನು ಕಳೆದುಕೊಂಡ ನಂತರ ಪರಶುರಾಮ ರಾಮ್ ರಾಧನ್ ಪರ್ವತಕ್ಕೆ ಹೋಗಿದ್ದರು, ಅದು ಈಗಲೂ ಕಾಶ್ಮೀರದಲ್ಲಿದೆ. ಆದಿಶಂಕರಾಚಾರ್ಯರಿಗೂ ಶೃಂಗೇರಿ ಕ್ಷೇತ್ರಕ್ಕೂ, ಕಾಶ್ಮೀರಕ್ಕೂ ಅವಿನಾಭಾವ ಸಂಬಂಧವಿದೆ. ಇಂಥ ಪುಣ್ಯಭೂಮಿಯಲ್ಲಿಯೇ ದೇವಿ ಶಾರದೆಗೆ ಅಸ್ತಿತ್ವವಿಲ್ಲದಂತಾಗಿದೆ. ರಾಮಲಲ್ಲಾ ವಿಚಾರದಲ್ಲಿಯೂ ನಿನ್ನೆಯ ತನಕ ನಮ್ಮೆಲ್ಲರ ಮನಸ್ಸಿನಲ್ಲೂ ಬೇಸರವಿತ್ತು. ಈಗ ಆ ಬೇಸರವೂ ದೂರವಾದಂತೆ, ಕಾಶ್ಮೀರದ ನಿಜವಾದ ಅಸ್ಮಿತೆಯನ್ನು, ಶಾರದೆಯ ಅಸ್ತಿತ್ವವನ್ನು ಮರುಸ್ಥಾಪಿಸಬೇಕಾಗಿದೆ ಎಂದರು.

ಕಾಶ್ಮೀರ ಮತ್ತು ದಕ್ಷಿಣ ಭಾರತದೊಂದಿಗೆ ಬಹಳ ಐತಿಹಾಸಿಕ ಸಂಬಂಧವಿದೆ. 13ನೇ ಶತಮಾನದಲ್ಲಿ ಹಲವಾರು ಮುಸ್ಲಿಂ ರಾಜರುಗಳ ಆಕ್ರಮಣದಿಂದಾಗಿ ಈ ಸಂಬಂಧ ಬೆಳೆಯಿತು ಎನ್ನಬಹುದು ಎಂದರು.