#MlrLitFest
  • mlrlitfest@gmail.com

Armed to lead-Indiaʼs Way Ahead

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 1 ರಲ್ಲಿ ಎವಿಎಂ ಮನ್‌ಮೋಹನ್‌ ಬಹದ್ದೂರ್‌, ಭರತ್‌ ಕರ್ನಾಡ್‌, ಶಿವ್‌ ಕುನಾಲ್‌ ವೆರ್ಮಾ ಮತ್ತು ಶಿವ್‌ ಅರೂರು ಅವರು Armed to lead-Indiaʼs way ahead ಕುರಿತು ಸಂವಾದ ನಡೆಸಿದರು.

ಎವಿಎಂ ಮನ್‌ಮೋಹನ್‌ ಬಹದ್ದೂರ್‌ ಅವರು ಮಾತನಾಡಿ, ಯಾವುದೇ ದೇಶವಾದರೂ ಯಾವುದೇ ಬೆಲೆ ತೆತ್ತಾದರೂ ತನ್ನ ಗಡಿಗಳನ್ನು ರಕ್ಷಣೆ ಮಾಡುತ್ತದೆ. 2020ರಲ್ಲಿ ಚೀನಾ ಭಾರತ-ಚೀನಾ ಗಡಿಯಲ್ಲಿ ಭಾರೀ ಸಂಖ್ಯೆಯ ಸೇನೆ, ಸೇನಾ ಸೌಲಭ್ಯವನ್ನು ನಿಯೋಜಿಸಿತು. ಇದಕ್ಕೆ ಉತ್ತರವಾಗಿ ಭಾರತವೂ ಸೇನಾ ಸೌಲಭ್ಯವನ್ನು ಗಡಿಯತ್ತ ತಿರುಗಿಸಿತು. ಭಾರತ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವುದಿಲ್ಲ ಎಂಬುದನ್ನು ಚೀನಾ ಈಗ ಅರ್ಥ ಮಾಡಿಕೊಂಡಿದೆ. ಭಾರತದ ವಾಯುಸೇನೆ ಯಾವುದೇ ಪರಿಸ್ಥಿತಿಯನ್ನು ಎದುರಿಸುವಷ್ಟು ಈಗ ಸಿದ್ಧವಾಗಿದೆ.  ತನ್ನ ಶಸ್ತ್ರಾಸ್ತ್ರ ರಷ್ಯನ್‌ ಒರಿಜಿನ್‌ ಎಂಬುದನ್ನು ಚೀನಾ ಅರ್ಥ ಮಾಡಿಕೊಂಡಿದೆ. ರಷ್ಯಾ-ಉಕ್ರೇನ್‌ ಯುದ್ಧವನ್ನೂ ನೋಡುತ್ತಿದೆ. ರಷ್ಯಾ ಎಸಗಿದ ಪ್ರಮಾದವನ್ನು ಅರ್ಥ ಮಾಡಿಕೊಂಡಿದೆ. ಹೀಗಾಗಿ ಯುದ್ಧ ನಡೆಸುವ ಬಗ್ಗೆ ಅದು ಮರು ಚಿಂತನೆ ನಡೆಸುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ.  ಯುದ್ಧ ನಡೆಯುವುದಿಲ್ಲ ಎಂಬುದು ಕೂಡ ಸ್ಪಷ್ಟ. ಜಗತ್ತಿಗೂ ಯುದ್ಧ ಬೇಕಾಗಿಲ್ಲ. ಒಂದು ವೇಳೆ ಭಾರತ-ಚೀನಾ ನಡುವೆ ಯುದ್ಧ ನಡೆದರೆ ಜಗತ್ತಿನ ಅಭಿಪ್ರಾಯ ಭಾರತದ ಮೇಲೆ ಇರುತ್ತದೆ. ಯುದ್ಧವನ್ನು ನಿರ್ಧರಿಸುವಾಗ ನಾಯಕತ್ವ ಜಗತ್ತಿನ ಅಭಿಪ್ರಾಯವನ್ನು ಕೂಡ ಪರಿಗಣಿಸುತ್ತದೆ ಎಂದರು.

ಭರತ್ ಕರ್ನಾಡ್ ಅವರು ಮಾತನಾಡಿ, ಪ್ರಸ್ತುತ ಚೀನಾ ಪ್ರಚೋದನೆಗೆ ಭಾರತ ಕೇವಲ ಪ್ರತಿಕ್ರಿಯಿಸಿಲ್ಲ, ರಕ್ಷಣಾತ್ಮಕ ಕ್ರಮ ತೆಗೆದುಕೊಂಡಿದೆ. ಚೀನಾ ಮೂರ್ಖನಲ್ಲ, ಯುದ್ಧ ನಡೆಸದೆ ಪ್ರಚೋದಿಸುವುದು ಅದರ ತಂತ್ರ. 1962 ಯುದ್ಧದಲ್ಲಿ ಸಾಕಷ್ಟು ಗಡಿ ಅತಿಕ್ರಮಿಸಿದ್ದಾರೆ.  ಆಗ ಆ ಯುದ್ಧಕ್ಕೆ ಭಾರತ ಸಿದ್ಧವಾಗಿರಲಿಲ್ಲ. ವಾಯುಸೇನೆ ಯುದ್ಧದಲ್ಲಿ ಮುನ್ನುಗ್ಗಲು ಬಯಸಿದರೂ ರಾಜಕೀಯ ನಾಯಕತ್ವ ಅದನ್ನು ಬಳಸದಿರುವ ನಿರ್ಧಾರಕ್ಕೆ ಬಂತು.  ಕಳೆದ 70 ವರ್ಷಗಳಲ್ಲಿ ಚೀನಾ ಹೇಳಿದ್ದನ್ನು ಭಾರತ ಕೇಳುವ ಸ್ಥಿತಿಯಲ್ಲಿತ್ತು. ಭಾರತಕ್ಕೆ ಚೀನಾವನ್ನು ಎದುರಿಸಲು ಕಾರ್ಯತಂತ್ರದ ಕೊರತೆ ಇತ್ತು. ಈಗ ಪರಿಸ್ಥಿತಿ ಸುಧಾರಿಸಿದೆ ಎಂದರು.

ಶಿವ್‌ ಕುನಾಲ್‌ ವರ್ಮಾ ಅವರು ಮಾತನಾಡಿ, ಚೀನಾ ಭಾರತವನ್ನು ತನ್ನ ಪ್ರಮುಖ ಶತ್ರು ಎಂದೇ ಪರಿಗಣಿಸುತ್ತದೆ. ರಕ್ಷಣಾ ತಜ್ಞರು 1962 ಯುದ್ಧವನ್ನು ಊಹಿಸಿದ್ದರು. ಆದರೆ ಈಗ ನಾವು ಅಂದಿಗಿಂತ ಹೆಚ್ಚು ಸಿದ್ಧರಾಗಿದ್ದೇವೆ. ನಾವು ಸಾಕಷ್ಟು ಬಲಿಷ್ಠಗೊಂಡಿದ್ದೇವೆ. ಅವರು ಟ್ಯಾಂಕರ್‌ ನಿಯೋಜಿಸಿದರೆ ನಾವೂ ನಿಯೋಜಿಸುತ್ತಿದ್ದೇವೆ, ಅವರು ಗಡಿಯಲ್ಲಿ ಮೂಲಸೌಕರ್ಯ ಬಲಪಡಿಸುತ್ತಿದ್ದರೆ, ನಾವು ಕೂಡ ಮೂಲ ಸೌಕರ್ಯ ಬಲಪಡಿಸುತ್ತಿದ್ದೇವೆ. ಕೋವಿಡ್‌ ಸಾಂಕ್ರಾಮಿಕದ ಬಳಿಕ ಮೂರನೇ ವಿಶ್ವ ಯುದ್ಧದಂತಹ ಸನ್ನಿವೇಶ ಎದುರಾಗಿದೆ ಎಂದರು.

ಶಿವ್ ಆರೂರ್‌ ಅವರು ಮಾತನಾಡಿ, ಚೀನಿಯರು ಮೂಲತಃ ಕಾಲ್ಕೆರಕೊಂಡು ಜಗಳಕ್ಕೆ ಬರುವವರು. ಅವರಿಗೆ ಎದೆಗೊಟ್ಟು ನಿಲ್ಲದಿದ್ದರೆ ನಮ್ಮನ್ನು ಕೈಲಾಗದವರು ಎಂದು ಅಂದುಕೊಳ್ಳುತ್ತಾರೆ. ನಮ್ಮ ಸಮಸ್ಯೆ ಎಂದರೆ ಭಾರತ-ಚೀನಾ ಗಡಿ ಕಾಯುವ ಐಟಿಬಿಪಿ ಮತ್ತು ಸೇನೆಯ ನಡುವಣ ಸಮನ್ವಯದ ಕೊರತೆ. 1976ರಲ್ಲಿ ವಿಯೆಟ್ನಾಂ ಗಡಿ ಪಡೆ ಚೀನಾ ಪೀಪಲ್ಸ್‌ ಆರ್ಮಿಗೆ ದೊಡ್ಡ ಹೊಡತವನ್ನೇ ನೀಡಿತ್ತು ಎಂದರು.