ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 1 ರಲ್ಲಿ ಶಿವ್ ಕುನಾಲ್ ವೆರ್ಮಾ ಮತ್ತು ಶರಣ್ ಸೆಟ್ಟಿ ಅವರು Life of an Industani ಪುಸ್ತಕದ ಕುರಿತು ಸಂವಾದ ನಡೆಸಿದರು.
ಶಿವ್ ಕುನಾಲ್ ವೆರ್ಮಾ ಅವರು ಮಾತನಾಡಿ, ಈ ಪುಸ್ತಕ ಆತ್ಮ ಚರಿತ್ರೆ ಅಲ್ಲ. ಮಿಲಿಟರಿಯ ಜೊತೆಗಿನ ಒಡನಾಟದ ಹಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಸೇನೆ ಬಗ್ಗೆ ಹೆಮ್ಮೆ, ಗೌರವ ಇರುವ ಪತ್ರಕರ್ತರ ಸಂಖ್ಯೆ ತೀರಾ ಕಡಿಮೆ ಇದೆ. ಇಂದು ಮಾಹಿತಿ ಪಡೆಯುವ ಹಸಿವು ಹೆಚ್ಚಿದೆ. ಮಿಲಿಟರಿ ಇತಿಹಾಸ ಬರೆಯಲು ಅತ್ಯಂತ ಕಠಿಣವಾದ ವಿಷಯ. ಪ್ರತಿಯೊಬ್ಬರು ತಮ್ಮದೇ ಆದ ಗ್ರಹಿಕೆ ಹೊಂದಿರುತ್ತಾರೆ. ತಾವು ಕಂಡಿದ್ದನ್ನು ತಮ್ಮದೇ ಆದ ದೃಷ್ಟಿಕೋನದೊಂದಿಗೆ ವಿಮರ್ಶಿಸುತ್ತಾರೆ. ನಾನು ಯುದ್ಧವನ್ನು ಬಂಕರ್‌ನಲ್ಲಿ ಕುಳಿತು ನೇರವಾಗಿ ಕಂಡಿದ್ದೇನೆ. ಇದು ನನಗೆ ಮಿಲಿಟರಿ ಬಗ್ಗೆ ಬರೆಯಲು ಪೂರಕವಾಯಿತು. ಮಿಲಿಟರಿ ಬಗ್ಗೆ ಕಲಿಸುವ ಮೊದಲು ಅದರ ಭೌಗೋಳಿಕ ಸನ್ನಿವೇಶವನ್ನು ಅರ್ಥ ಮಾಡಿಕೊಡಬೇಕು. ಸಂಶೋಧನೆ ಮಾಡಿದರೂ, ಪುಸ್ತಕ ಬರೆದರೂ ಮಿಲಿಟರಿ ಈ ನನ್ನ ಜ್ಞಾನ ಕಡಿಮೆಯೇ ಇದೆ ಎಂದರು.
ಚೀನಾ – ಭಾರತ ಗಡಿ ಬಗ್ಗೆ ಸಾಕಷ್ಟು ತಪ್ಪು ಗ್ರಹಿಕೆಗಳು ಇದೆ. ಇದು ಯಾವತ್ತೂ ಬಗೆ ಹರಿಯದ ಸಮಸ್ಯೆ. ವಿವಾದ ಬಗೆಹರಿಸಲು ಚೀನಾ ಆಸ್ಪದ ನೀಡುವುದಿಲ್ಲ ಎಂದರು.