Saga of Maratha Naval force

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 2 ರಲ್ಲಿ ಡಾ. ಸಂದೀಪ್‌ ಮಹಿಂದ್‌ ಮತ್ತು RJ ಆಜಯ್‌ ಅವರು Saga of Maratha Naval force ಕುರಿತು ಸಂವಾದ ನಡೆಸಿದರು.

ಅಜಯ್‌ ಅವರು ಮಾತನಾಡಿ, ಶಿವಾಜಿ ಮಹಾರಾಜರ ಬಗ್ಗೆ ನಾವು ಭಾರತದ ವಿಚಾರದಲ್ಲಿ ವಾಸ್ತವ ಇತಿಹಾಸ ಏನಿತ್ತು? ಎಂದರು.

ಡಾ. ಸಂದೀಪ್‌ ಮಹಿಂದ್‌ ಅವರು ಮಾತನಾಡಿ, ಅಮೃತಮಹೋತ್ಸವದ ಸಂದರ್ಭದಲ್ಲಿ ನಮ್ಮ ನಿಜವಾದ ಇತಿಹಾಸವನ್ನು ಅರಿಯುವುದು ಬಹಳ ಮುಖ್ಯ. ನಾವು ಈಗ ಶಿಕ್ಷಣದಲ್ಲಿ ಆಂಗ್ಲರು ಬರೆದ ಇತಿಹಾಸವನ್ನು ಓದುತ್ತಾ ಇದ್ದೇವೆ. ಛತ್ರಪಜಿ ಶಿವಾಜಿಯವರು ದುರ್ಗ ದುರ್ಗೇಶ್ವರ್ ರಾಯಗಢದಲ್ಲಿ ಮೊದಲ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದರು.

ಇತಿಹಾಸವನ್ನು ಅಧ್ಯಯನ ಮಾಡಲು ಒಂದು ಗ್ರಂಥವನ್ನು ಅವಲಂಬಿಸುವುದು ತಪ್ಪು. ಕೊನೆಯ ಹಿಂದೂ ರಾಜನ ಪರಾಜಯದ ನಂತರ ಭಾರತದ ನೌಕಾಸೇನೆಯ ಬಗ್ಗೆ ಮರೆತೇ ಹೋಗಿತ್ತು. ಆ ಬಳಿಕ ಸಾವಿರಾರು ವರ್ಷಗಳ ಬಳಿಕ ಮತ್ತೆ ನೌಕಾಸೇನೆ ಕಟ್ಟಿದ ಕೀರ್ತಿ ಶಿವಾಜಿ ಮಹಾರಾಜರದ್ದು. ಕೆಲವು ಪೋರ್ಚುಗೀಸರ ಸಹಕಾರದಿಂದ ನೌಕಾದಳ ಕಟ್ಟದ್ದ. ಯಸ್ಯ ನೌಕಃ ತಸ್ಯ ಸಮುದ್ರಂ, ಯಸ್ಯ ಸಮುದ್ರಃ ತಸ್ಯ ವಿಶ್ವಃ ಎಂಬ ನಂಬಿಕೆಯೊಂದಿಗೆ ನೌಕಾದಳ ಕಟ್ಟಿದ. ಯಾರೂ ಕೂಡ ನೌಕಾಸೇನೆಯ ಮೂಲಕ ತಮ್ಮನ್ನು ಪರಾಜಿತಗೊಳಿಸಬಾರದೆಂಬ ಜಲನೀತಿ ಶಿವಾಜಿಯದ್ದು ಎಂದರು.

ಬಸ್ರೂರು ಸ್ವಾತ್ಂತ್ರ್ಯದ ಬಗ್ಗೆ ಮಾತನಾಡಿದ ಮಹಿಂದ್‌ ಅವರು, ಬಸ್ರೂರಿಗೆ ಬಂದ ಪೋರ್ಚುಗೀಸರು ಆಡಳಿತ ಸ್ಥಾಪಿಸಿದರು. ಆಗ ಸೋಮಶೇಖರ ರಾಜ ಶಿವಾಜಿಯ ಸಹಾಯ ಕೇಳಿದ. ಶಿವಾಜಿಯ ಸೈನ್ಯ ಪೋರ್ಚುಗೀಸರ ವಶದಲ್ಲಿದ್ದ ಕೋಟೆ ಹಾಗೂ ಬಂದರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಸಿಂಧುದುರ್ಗದಿಂದ ಹೊರಟ ಶಿವಾಜಿ ನೌಕಾದಳ, ಫೆ. 13 ರಂದು ಶಿವಾಜಿ ಸಮುದ್ರ ಮಾರ್ಗವಾಗಿ ಬಸ್ರೂರು ತಲುಪುತ್ತದೆ. ಸ್ಥಳೀಯರು ಹಾಗೂ ಪಾಳೇಗಾರರು ತಮ್ಮ ಬಂದರು, ನದಿ ಹಿನ್ನೀರ ಪ್ರದೇಶ ಸಹಿತ ಸಂಪೂರ್ಣ ಕೋಟೆ ತಮ್ಮ ವಶಕ್ಕೆ ಬಂದುದರ ವಿಜಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಇಂದಿಗೂ ಫೆಬ್ರವರಿ 13 ರಂದು ಬಸ್ರೂರಿನ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತದೆ.

ಯಾರು ಇತಿಹಾಸವನ್ನು ಮರೆಯುತ್ತಾರೋ ಅವರು ಉನ್ನತಿ ಹೊಂದಲು ಸಾಧ್ಯವಿಲ್ಲ. ನಾವು ಎಂದಿಗೂ ನಮ್ಮ ಇತಿಹಾಸವನ್ನು ಮರೆಯಬಾರದು. ನಾವು ನಮ್ಮ ಇತಿಹಾಸವನ್ನು, ನಮ್ಮ ಮಹಾಪುರುಷರನ್ನು, ಪರಂಪರೆಯನ್ನು ನೆನಪಿಸಿ ಗೌರವಿಸದೇ ಇದ್ದರೆ ನಾವು ಮುಂದುವರಿಯಲು ಸಾಧ್ಯವಿಲ್ಲ. ನೈಜ ಇತಿಹಾಸವನ್ನು ಅಧ್ಯಯನ ಮಾಡಿ ಅರಿತುಕೊಂಡು ಸ್ಮರಿಸಿಕೊಳ್ಳಬೇಕು.

ಯಾವುದೇ ಮಹಾಪುರುಷರನ್ನು ಒಂದು ಪ್ರದೇಶಕ್ಕೆ ಅಥವಾ ಭಾಷೆಗೆ ಸೀಮಿತವಾಗಿಸಬಾರದು. ಎಲ್ಲಾ ಮಹಾಪುರುಷರೂ ಹಿಂದೂಸ್ತಾನದವರು ಎಂದು ಗರ್ವದಿಂದ ಹೇಳಿಕೊಳ್ಳಬೇಕು. ನಾವು ಭಾರತೀಯರು ಎಂಬ ಭಾವನೆ ಇರಬೇಕಾದದ್ದು ಮುಖ್ಯ. ತಾಯಿ ಭಾರತಿಯನ್ನು ವಿಶ್ವಗುರುವಿನ ಸ್ಥಾನದಲ್ಲಿ ನೋಡುವ ದಿನ ಖಂಡಿತ ಬಂದೇ ಬರುತ್ತದೆ ಎಂದರು.