#MlrLitFest
  • mlrlitfest@gmail.com

ಮಂಗಳೂರು ಲಿಟ್‌ಫೆಸ್ಟ್‌ನ 5ನೇ ಆವೃತ್ತಿ ಕುರಿತು ಪತ್ರಿಕಾಗೋಷ್ಠಿ

ಮಂಗಳೂರು : ಫೆಬ್ರವರಿ 18-19 ರಂದು ಎರಡು ದಿನಗಳ ಕಾಲ ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ʼThe Idea of Bharath’ ಎಂಬ ಥೀಮ್‌ನಡಿಯಲ್ಲಿ ಮಂಗಳೂರು ಲಿಟ್‌ ಫೆಸ್ಟ್‌ನ ಐದನೇ ಆವೃತ್ತಿಯು ನಡೆಯುಲಿರುವ ಹಿನ್ನೆಲೆಯಲ್ಲಿ ನಗರದ ಓಶಿಯನ್‌ ಪರ್ಲ್‌ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.

ಭಾರತ್‌ ಫೌಂಡೇಶನ್‌ನ ಟ್ರಸ್ಟಿಗಳಾದ ಸುನಿಲ್‌ ಕುಲಕರ್ಣಿ ಅವರು, ಮಂಗಳೂರು ಲಿಟ್‌ ಫೆಸ್ಟ್‌ ನಡೆದು ಬಂದ ದಾರಿ ಕುರಿತು ಮಾತನಾಡಿ, 5 ನೇ ಆವೃತ್ತಿಯ ವಿಶೇಷತೆಗಳನ್ನು ವಿವರಿಸಿದರು.

ಒಟ್ಟು 25  ಸೆಷನ್‌ಗಳ ವಿಚಾರ ಸಂಕಿರಣ  ಆಯೋಜಿಸಲಾಗಿದ್ದು, ಇದರಲ್ಲಿ 55 ಕ್ಕೂ ಅಧಿಕ ವಾಗ್ಮಿಗಳು ಭಾಗವಹಿಸಲಿದ್ದಾರೆ. ಪ್ರತಿ ಸೆಷನ್‌ನ ಕೊನೆಗೆ ಸಾಹಿತ್ಯಕ್ಕೆ ಸಂಬಂಧಿಸಿದ ರಸಪ್ರಶ್ನೆ ಇರಲಿದ್ದು, ಗೆದ್ದವರಿಗೆ ಪುಸ್ತಕವನ್ನು ಬಹುಮಾನವಾಗಿ ನೀಡಲಾಗುತ್ತದೆ. ಲಿಟ್‌ ಫೆಸ್ಟ್‌ನಲ್ಲಿ 2 ಸಿನಿಮಾಗಳ ಪ್ರದರ್ಶನ ಜರುಗಲಿದೆ. ಅಲ್ಲದೇ 16 ಪುಸ್ತಕ ಮಳಿಗೆಗಳು ಕೂಡ ಇರಲಿವೆ. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷರಾದ ಶ್ರೀ ತುಕಾರಾಮ್ ಪೂಜಾರಿ ಇವರಿಗೆ ಈ ಬಾರಿಯ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ.  ಪುಸ್ತಕ ಮಳಿಗೆ, ತುಳು ಅಕ್ಷರ ಕಲಿಕಾ ಕಾರ್ಯಾಗಾರ, ಮಕ್ಕಳ ಸಾಹಿತ್ಯ ಅಭಿರುಚಿ ಮತ್ತು ಕಥೆಯ ಬಗ್ಗೆ ಪಾಲಕರಿಗೆ ಆಸಕ್ತಿ ಬೆಳೆಸುವ ದೃಷ್ಟಿಯಿಂದ ಅವಧಿ, ಲೇಖಕರೊಂದಿಗೆ ಸಂವಾದ – (ಹರಟೆ ಕಟ್ಟೆ) ಈ ಬಾರಿಯ ಲಿಟ್ ಫೆಸ್ಟ್‌ನ ವಿಶೇಷತೆಯಾಗಿದೆ.

ಉದ್ಘಾಟನಾ ಅವಧಿ ʼThe Idea of Bharath In Amrithkal: Reclaiming The Right Path-The Way Forward ಪರಿಕಲ್ಪನೆಯ ಅಡಿ ಜರುಗಲಿದ್ದು, ಆರ್‌. ಜಗ್ನನಾಥ್‌, ವಿನಯ್‌ ಹೆಗ್ಡೆ, ವಿ. ನಾಗರಾಜ್‌ ಅವರು ಭಾಗಿಯಾಗಲಿದ್ದಾರೆ.

ರಿಷಭ್‌ ಶೆಟ್ಟಿ, ಪ್ರಕಾಶ್‌ ಬೆಳವಾಡಿ, ಸ್ಮಿತಾ ಪ್ರಕಾಶ್, ಶಿವ್‌ ಅರೂರ್‌, ಅಜಿತ್‌ ಹನಮಕ್ಕನವರ್‌, ಅಡ್ಡಂಡ ಕಾರ್ಯಪ್ಪ, ಬಸುಮ ಕೊಡಗು, ದಕ್ಕುಲ ಮುನಿಸ್ವಾಮಿ ಸೇರಿದಂತೆ ಅನೇಕ ವಾಗ್ಮಿಗಳು, ಸಾಹಿತಿಗಳು, ಸಂಸೋಧಕರು, ವಿಷಯ ಪರಿಣಿತರು ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಇರಲಿದ್ದಾರೆ ಎಂದರು.

ಕಾರ್ಯಕ್ರಮ ಆಯೋಜಕ ಸಮಿತಿ ಸದಸ್ಯರಾದ ಶ್ರೀರಾಜ್‌ ಗುಡಿ ಅವರು ಮಾತನಾಡಿ, ಈ ಬಾರಿ ಲೇಖಕರೊಂದಿಗಿನ ಸಂವಾದ ಕಾರ್ಯಕ್ರಮ ʻಹರಟೆ ಕಟ್ಟೆʼ ಗಮನ ಸೆಳೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಭಾರತ್‌ ಫೌಂಡೇಶನ್‌ ಟ್ರಸ್ಟಿಗಳಾದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ಆಯೋಜಕ ಸಮಿತಿ ಸದಸ್ಯರಾದ ಸುಜಿತ್‌ ಪ್ರತಾಪ್‌, ಈಶ್ವರ್‌ ಪ್ರಸಾದ್‌ ಶೆಟ್ಟಿ, ಸಂಜಯ ಪ್ರಭು ಉಪಸ್ಥಿತರಿದ್ದರು.