#MlrLitFest
  • mlrlitfest@gmail.com

ಕಾಶ್ಮೀರ್ ಪೈಲ್ಸ್ ಹಲವು ಒಳಾರ್ಥಗಳನ್ನು ಒಳಗೊಂಡಿರುವ ಸಿನಿಮಾ : ಪ್ರಕಾಶ್ ಬೆಳವಾಡಿ

ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಎರಡನೇ ದಿನದ ಐದನೇ ಗೋಷ್ಠಿ ‘Kashmir files – reel and real’ಎಂಬ ವಿಷಯದ ಕುರಿತು ನಡೆಯಿತು. ಈ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಕಾಶ್ ಬೆಳವಾಡಿ, ಸಹನಾ ವಿಜಯ್ ಕುಮಾರ್ ಭಾಗವಹಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಬೆಳವಾಡಿ ಮಾತನಾಡಿ , ಸಿನಿಮಾವನ್ನು ಎರಡು ಗಂಟೆಗಳಲ್ಲಿ ಕಟ್ಟಿಕೊಡಬೇಕು. ಕಾಶ್ಮೀರ್ ಪೈಲ್ಸ್ ಹಲವು ಒಳಾರ್ಥಗಳನ್ನು ಒಳಗೊಂಡಿರುವ ಸಿನಿಮಾವಾಗಿದೆ. ಚಿತ್ರ ಹಲವು ಸತ್ಯ ಶೋಧನೆಗೆ ಸಾಕ್ಷಿಯಾಗಿದೆ, ಹೀಗಾಗಿ ಸಿನಿಮಾ ಜನರ ಮನಮುಟ್ಟುವಲ್ಲಿ ಸಪಲವಾಗಿದೆ. ಈ ಸಿನಿಮಾ ಮುಖೇನ ಹಲವು ವಿಚಾರಗಳು ಬೆಳಕಿಗೆ ಬಂದಿದೆ. ಭಾರತೀಯರು ಸತ್ಯ ತಿಳಿಯಲು ತೋರಿದ ಸಿನಿಮಾಗೆ, ಜನ ಪ್ರೋತ್ಸಾಹ ನೀಡಿದ್ದು, ನಿಜಕ್ಕೂ ಇತಿಹಾಸವೇ ಎಂದು ಅಭಿಪ್ರಾಯಪಟ್ಟರು.

ಸಿನಿಮಾ ವಿರುದ್ದ ವ್ಯಕ್ತವಾದ ಅಭಿಪ್ರಾಯಗಳ ಬಗ್ಗೆ ಅಸಮಾಧಾನ ತಂದಿದೆ. ಅಂದಿನ ಅಡಳಿತ ವ್ಯವಸ್ಥೆ, ಕಾಶ್ಮೀರದ ದುರಂತಕ್ಕೆ ಸ್ಪಂದಿಸದಿರುವುದು ವಿಷಾದನೀಯ. ಪ್ರಸ್ತುತ ಆಡಳಿತ ಈ ಕುರಿತು ಕ್ರಮ ಕೈಗೊಳ್ಳುತ್ತಿರುವ ನಿರ್ಣಯಗಳು ಸ್ವಾಗತಾರ್ಹ ಎಂದರು.

ಲೇಖಕಿ ಸಹನಾ ವಿಜಯ್ ಕುಮಾರ್ ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು.

ವರದಿ : ದಿವ್ಯಶ್ರೀ ವಜ್ರದುಂಬಿ