#MlrLitFest
  • mlrlitfest@gmail.com

ಕನ್ನಡದ ರಾಜಮನೆತನಗಳು

ಬೆಂಗಳೂರಿನ ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಎರಡನೇ ದಿನದ ನಾಲ್ಕನೇ ಗೋಷ್ಠಿ ‘ಕನ್ನಡದ ರಾಜಮನೆತನಗಳು’ ಎಂಬ ವಿಷಯದ ಮೇಲೆ ನಡೆಯಿತು.

ಡಾ. ಸೋಂದಾ ಲಕ್ಷ್ಮೀಶ ಹೆಗಡೆ ಮಾತನಾಡಿ ಶಾಸ್ತ್ರ ಮತ್ತು ಸೂತ್ರಗಳಿಗೆ ಕಲಶಪ್ರಾಯವಾಗಿರುವಂತೆ ಮೌರ್ಯರ ಆಡಳಿತವಿತ್ತು.
ಕದಂಬರು ಭಾಷೆಗೆ ಪ್ರಮುಖ ಆದ್ಯತೆಯನ್ನು ನೀಡಿದ್ದರು. ಕನ್ನಡದ ಪ್ರಥಮ ಶಾಸನವಾದ ತಾಳಗುಂದದ ಸಿಂಹಖಟಾಂಜನ ಶಾಸನ ಕದಂಬರ ಕಾಲದ ಆಡಳಿತದಲ್ಲಿ ಭಾಷೆಗೆ ಆದ್ಯತೆ ನೀಡಿದ ಕುರುಹುಗಳು ಲಭ್ಯವಿದೆ. ಇತಿಹಾಸ ಓತಪ್ರೋತವಾಗಿದೆ. ನಾವು ಪಠ್ಯಗಳಲ್ಲಿ ಕಲಿಯುವ ವಿಷಯಗಳು ಸತ್ಯದ ಚರಿತ್ರೆಯಾಗಲಿ ಎಂದರು.

ಶಾತವಾಹನರು ಕನ್ನಡಕ್ಕೆ ಒಳ್ಳೆಯ ಆಡಳಿತವನ್ನೆ ನೀಡಿದ್ದಾರೆ. ಬನವಾಸಿಯಲ್ಲಿ ತಮ್ಮ ಹೆಜ್ಜೆ ಗುರುತನ್ನು ಗಟ್ಟಿ ಮಾಡಿಕೊಂಡರು. ವಾಣಿಜ್ಯ ವ್ಯಾಪಾರದಲ್ಲಿ ಪ್ರಸಿದ್ದಿ ಪಡೆದು ವಿದೇಶಿ ವ್ಯಾಪಾರದಲ್ಲಿ ಗಣನೀಯವಾಗಿ ಕಾಣಿಸಿಕೊಂಡಿದ್ದರು. ಹಾಗೆಯೇ ಕನ್ನಡಕ್ಕೆ ಪಲ್ಲವರಿಂದ ಹಿಡಿದಿದ್ದ ಗ್ರಹಣವನ್ನು ಕದಂಬರು ಹೊಡೆದು ಹೊಡಿಸಿದರು. ಕದಂಬರ ಬಗ್ಗೆ ಇರುವ ಪೂರ್ವಗ್ರಹ ನಮಗೆ ಹೋಗಬೇಕು. ಭಾಷೆಗೆ ಅವರು ಕೊಟ್ಟ ಪ್ರಾಮುಖ್ಯತೆಯ ಜೊತೆಗೆ ಅದ್ಭುತ ಶಾಸನಗಳನ್ನು ಕೊಟ್ಟರು. ಇಂತಹ ಕೊಡುಗೆಗಳನ್ನು ನಾವು ಸ್ಮರಿಸಲೇಬೇಕು ಎಂದರು.

ಡಾ ಅನುರಾಧ ವಿ ಮಾತನಾಡಿ, ಭಾರತದ ಶಾಸನಗಳ ಪಿತಾಮಹ ಚಕ್ರವರ್ತಿ ಅಶೋಕ. ಭಾರತದ ಇತಿಹಾಸವನ್ನು ಶಾಶ್ವತವಾಗಿಸುವಲ್ಲಿ ಶ್ರಮಿಸಿದ. ಕರ್ನಾಟಕದ ಇತಿಹಾಸ, ಅಶೋಕನ ಇತಿಹಾಸದಲ್ಲಿ ದೊಡ್ಡದಾದ ಮಹತ್ವ ಪಡೆದಿತ್ತು. ಹಾಗೆಯೇ ಅರಬ್ಬರು ಹಡಗಿನಲ್ಲಿ ಕರ್ನಾಟಕ ಕರಾವಳಿ ಭಾಗಕ್ಕೆ ಕೂಲಿ ಕೆಲಸಗಾರರಾಗಿ ಬರುತ್ತಿದ್ದರು, ರಸ್ತೆ ನಿರ್ಮಾಣ ಮೊದಲಾದ ಕೆಲಸಗಳಲ್ಲಿ ತೊಡಗುತ್ತಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ಸಂಪನ್ಮೂಲಗಳ ಶ್ರೀಮಂತಿಕೆ ತಿಳಿಯುತ್ತದೆ. ಅದೇ ರೀತಿ ಮಂಗಳೂರು, ಮಲ್ಪೆ, ಹೊನ್ನಾವರ ಶಾತವಾಹನರ ಪ್ರಮುಖ ವ್ಯಾಪಾರ ಕೇಂದ್ರಗಳಾಗಿದ್ದವು ಎಂಬುದನ್ನು ಇತಿಹಾಸ ಮೀರಿ ನಾವು ತಿಳಿದುಕೊಳ್ಳಬೇಕಾದ ವಿಷಯ ಎಂದರು.

ಕಾರ್ಯಕ್ರಮದಲ್ಲಿ ವಿರೂಪಾಕ್ಷ ಎಂ ರಾವ್ ಸಂವಾದ ನಿರ್ವಹಿಸಿದರು.

ವರದಿ : ದೀಕ್ಷಿತಾ ಜೇಡರಕೋಡಿ