#MlrLitFest
  • mlrlitfest@gmail.com

ದೇಶ – ಕಾಲ -ಕಲೆ : ಜನಪದ ಸಾಹಿತ್ಯದ ಕೊಡುಗೆ ಅಪಾರ – ಡಾ. ನಾಗರಾಜ್

ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಏಳನೇ ಗೋಷ್ಠಿ ‘ ದೇಶ- ಕಾಲ-ಕಲೆ ‘ಎಂಬ ವಿಷಯದ ಮೇಲೆ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ನಾಗರಾಜ್ ಮತ್ತು ಡಾ. ರಾಮ ಮೂಲಗಿ ಸಂವಾದ ನಡೆಸಿದರು.

ಸಂವಾದದಲ್ಲಿ ಮಾತನಾಡಿದ ಡಾ. ನಾಗರಾಜ್, ಜನಪದ ಸಾಹಿತ್ಯ ಸಾಗರದಷ್ಟು ಆಳ, ಹೆತ್ತ ತಾಯಿ ಮತ್ತು ಹೊತ್ತ ಭೂಮಿಯಷ್ಟು ಪವಿತ್ರ. ಅತ್ಯಮೂಲ್ಯ ಸಂಸ್ಕೃತಿಯನ್ನು ದೇಶವಾಸಿಗಳು ಪಾಲಿಸಲು ಜನಪದ ಸಾಹಿತ್ಯದ ಕೊಡುಗೆ ಅಪಾರ. ನಮ್ಮ ನಾಡಿನ ನೆಲದ ಸೊಗಡನ್ನು ಪರಿಚಯಿಸುವ ಕೆಲಸ ಕಾರ್ಯಗಳು ಜನಪದರಿಂದಾಗಿದೆ ಎಂದರು.

ಜನಪದ ಸಾಹಿತ್ಯ ಸವಿಸ್ತಾರವಾದುದು. ಬಗೆದಷ್ಟು ಅಮೂಲ್ಯಗಳನ್ನು ಕೊಡುಗೆಯಾಗಿ ನೀಡುತ್ತಾ ಬಂದಿದೆ. ಸಾಮಾಜಿಕ ಮಾಧ್ಯಮಗಳು ನಮ್ಮ ಸಾಹಿತ್ಯ, ಕಲೆಗೆ ಹೆಚ್ಚು ಒತ್ತು ನೀಡಿದರೆ ಸಾಹಿತ್ಯ ಬೆಳೆಸಬಹುದು. ಕಲೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕು. ಮಂಗಳೂರು ಲಿಟ್ ಫೆಸ್ಟ್ ಅನೇಕ ಸಾಹಿತಿಗಳನ್ನು ಗುರುತಿಸುವ ಕಾರ್ಯವನ್ನು ನಡೆಸುತ್ತಿದೆ. ಸಂಘಟನೆಗಳು ಮುಖ್ಯವಾಗಿ ಜಾನಪದ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಮಾಡಬೇಕು.ಸಾಹಿತ್ಯವೆಂದು ಮುಗಿಯ ಕಥೆ‌. ನಮ್ಮಿಂದಲೇ ಸಾಹಿತ್ಯ, ಕಲೆ ಉಳಿಸುವ ಕಾರ್ಯ ಆರಂಭವಾಗಬೇಕು ಎಂದರು.

ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕಿಂತ ಮಿಗಿಲು ಎಂಬ ಮಾತಿನಂತೆ ಜಾನಪದ ಸಾಹಿತ್ಯ, ಕಲೆ, ಸಂಸ್ಕೃತಿ ನಮ್ಮ ದೇಶದಲ್ಲಿ ಅತ್ಯಂತ ಅಮೂಲ್ಯವಾದದ್ದು. ಜಾನಪದ ಸಾಹಿತ್ಯ ಕಲೆಗಳಿಗೆ ಮಾತ್ರ ಪ್ರಾಮುಖ್ಯತೆ ನೀಡದೆ ದೇಶ ಭಕ್ತಿ, ಸಂಸ್ಕೃತಿ ಉಳಿಸುವಲ್ಲೂ ಪ್ರಮುಖ ಪಾತ್ರವಹಿಸಿದೆ. ದೈವ ಹುಟ್ಟಿಕೊಂಡದ್ದು ಹೇಗೆ…?

ಈ ಸಂಸ್ಕೃತಿ ಜನಪದರ ಕೊಡುಗೆ, ಜನಪದರು ದೇವರನ್ನು ಸೃಷ್ಟಿ ಮಾಡಿಕೊಂಡರು. ಸೂರ್ಯ, ಚಂದ್ರ, ಗಾಳಿಯನ್ನು ಸಂರಕ್ಷಿಸಲು ದೈವ ಎಂಬ ಆಕಾರ ನೀಡಿ ಪೂಜಿಸಲು ಪ್ರಾರಂಭಿಸಿದರು.

ಸಾಹಿತ್ಯ ಸೊಗಡನ್ನು ವಿವರಿಸುವುದು ಸುಲಭದ ಮಾತಲ್ಲ. ಸಮುದ್ರ ಕಂಡಾಗ ಮುತ್ತು, ರತ್ನ, ಜಲಚರ ಪ್ರಾಣಿ ಇದೆ ಎಂದು ಹೇಳಬಹುದು, ಆದರೆ ಸಮುದ್ರದ ಆಳದಲ್ಲಿ ಏನು ಅಡಗಿದೆ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಜನಪದ ಸಂಸ್ಕೃತಿಯಲ್ಲಿಯೂ ಅನೇಕ ವಿಷಯಗಳು ಅಡಗಿದೆ. ಆಳಕ್ಕೆ ಹೋದಷ್ಟು ಅನೇಕ ಪ್ರಶ್ನೆಗಳು, ವಿಷಯಗಳು ಹೊಟ್ಟಿಕೊಳ್ಳುತ್ತದೆ. ಅನೇಕ ಜನಪದ ಮಹಕಾವ್ಯಗಳಿದೆ. ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ನಮ್ಮ ಸಾಹಿತ್ಯ, ಕಲೆಗೆ ಹೆಚ್ಚು ಒತ್ತು ನೀಡಿದರೆ ಸಾಹಿತ್ಯ ಬೆಳೆಸಬಹುದು. ಕಲೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕು. ಮಂಗಳೂರು ಲಿಟ್ ಫೆಸ್ಟ್ ಅನೇಕ ಸಾಹಿತಿಗಳನ್ನು ಗುರುತಿಸುವ ಕಾರ್ಯವನ್ನು ನಡೆಸುತ್ತಿದೆ. ಸಂಘಟನೆಗಳು ಮುಖ್ಯವಾಗಿ ಜಾನಪದ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಮಾಡಬೇಕು.ಸಾಹಿತ್ಯವೆಂದು ಮುಗಿಯ ಕಥೆ‌. ನಮ್ಮಿಂದಲೇ ಸಾಹಿತ್ಯ, ಕಲೆ ಉಳಿಸುವ ಕಾರ್ಯ ಆರಂಭವಾಗಬೇಕು ಎಂದು ಡಾ‌. ನಾಗರಾಜ್ ಜಾನಪದ ಸಾಹಿತ್ಯದ ಉದ್ದೇಶ ಮತ್ತು ಅಗತ್ಯತೆಯನ್ನು ತಿಳಿಸಿದರು.

ಡಾ. ರಾಮ ಮೂಲಗಿ ಮಾತನಾಡಿ ಜನರಿಂದ ಹುಟ್ಟಿದ ಸಾಹಿತ್ಯ ಜನರ ದೈನಂದಿನ ಬದುಕಿನ ನೋವು ನಲಿವು ಸುಖ ದುಖಗಳನ್ನು ಪದಗಳಲ್ಲಿ ಕಟ್ಟಿಕೊಂಡು ಜನಪದವಾಯಿತು. ಮಕ್ಕಳ ಶೈಕ್ಷಣಿಕ ಪಠ್ಯಗಳಲ್ಲಿ ಜನಪದ ಸಾಹಿತ್ಯವನ್ನು ಅಳವಡಿಸಿದರೆ ಜೀವನದ ಸಾರ ಅರಿಯಲು ನೆರವಾಗುತ್ತದೆ. ಸಾಹಿತ್ಯ ದೇಶ ಭಾಷೆಯನ್ನು ಮೀರಿದ್ದು. ಅದು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ ಎಂದರು.

ಸಂಸ್ಕೃತಿಯ ಬೇರು ಜನಪದ ಸಾಹಿತ್ಯ. ನಮ್ಮ ಸಂಸ್ಕೃತಿ, ಸಂಸ್ಕಾರ ಜೀವಂತವಾಗಿ ಉಳಿಯಲು ಜನಪದ ಸಾಹಿತ್ಯವನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯ ಇದೆ. ದೇಶಾಭಿಮಾನ ಮತ್ತು ಸ್ವಾಭಿಮಾನದ ಜಾಗೃತಿ ಮೂಡಿಸಲು ಮತ್ತು ಜನಪದ ಸಾಹಿತ್ಯ ದೇಶ ಕಾಲ ಕೂಡಿ ಕಳೆದು ಬೆಳೆದ ಬಗೆಯನ್ನು ಅರಿಯಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅರ್ಚನಾ ಆರ್ಯ ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು.

ವರದಿ : ಸೋನಿಕಾ ಪಾಣೆಮಂಗಳೂರು