#MlrLitFest
  • mlrlitfest@gmail.com

ಭಾರತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶ : ಪ್ರೊ. ರಮೇಶ್ ಗಣೇಶನ್

ಬೆಂಗಳೂರಿನ ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಏಳನೇ ಗೋಷ್ಠಿ State of the Economy ಎಂಬ ವಿಷಯದ ಕುರಿತು ನಡೆಯಿತು. ಈ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ. ರಮೇಶ್ ಗಣೇಶನ್ ಮತ್ತು ಡಾ. ವಿನೋದ್ ಅಣ್ಣಿಗೇರಿ ಭಾಗವಹಿಸಿದರು.

ಸಂವಾದದಲ್ಲಿ ಮಾತನಾಡಿದ ಪ್ರೊ. ರಮೇಶ್ ಗಣೇಶನ್ ಭಾರತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿಯನ್ನು ಕಾಣಲಿದೆ. ತಂತ್ರಜ್ಞಾನ, ವೇಗದ ಬೆಳವಣಿಗೆಗೆ ಅಡಿಪಾಯವಾಗಿದೆ. ಬದಲಾಗುತ್ತಿರುವ ವಿದ್ಯಮಾನಗಳಲ್ಲಿ ಆಹಾರ ಭದ್ರತೆ ಮತ್ತು ಹವಾಮಾನ ಭದ್ರತೆ ನೀಡುವ ಕಾರ್ಯವು ನಡೆಯುತ್ತಿದೆ. ಈ ಬದಲಾವಣೆಯಲ್ಲಿ ಯುವಕರ ಪಾತ್ರ ಮಹತ್ವವಾದದ್ದು. ಕೋವಿಡ್ 19 ಸಂದರ್ಭದಲ್ಲಿ ಎಲ್ಲಾ ಸೌಲಭ್ಯಗಳು ಸ್ಥಿರವಾಗಿತ್ತು. ಈ ಸಮಯದಲ್ಲಿ ಡಿಜಿಟಲ್ ವೇದಿಕೆಯ ಮೂಲಕ ಹಣ ವ್ಯವಹಾರಗಳು ನಡೆಯುತ್ತಿತ್ತು. ಕೃಷಿ ಕ್ಷೇತ್ರವು ಉತ್ತಮವಾದ ಬದಲಾವಣೆ ಕಂಡಿದ್ದು, ದೇಶದ ಬೆಳವಣಿಗೆಗೆ ಕೃಷಿಯ ಅಗತ್ಯತೆ ಬಹಳಷ್ಟಿದೆ. ದೇಶ ಎಷ್ಟೇ ಮುಂದುವರಿದರೂ, ಕೃಷಿಯ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿರಬೇಕು. ಯಾವುದೇ ಯೋಜನೆಯು ಯಶಸ್ವಿಗೆ ಸಮಯದ ಸದ್ವಿನಿಯೋಗ ಅಗತ್ಯ, ಶೀಘ್ರವಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಡಾ. ವಿನೋದ್ ಅಣ್ಣಿಗೇರಿ ಮಾತನಾಡಿ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಡಿಜಿಟಲ್ ಇಂಡಿಯಾ ಬಹುದೊಡ್ಡ ಪಾತ್ರ ವಹಿಸಿದೆ. ಪ್ರತಿ ವಿಚಾರಗಳಲ್ಲೂ ವಿಮರ್ಶೆ ಹಾಗೂ ಚಿಂತನೆ ಪ್ರಕ್ರಿಯೆಗಳು ನಡೆಯುತ್ತದೆ. ಆತ್ಮನಿರ್ಭರ ಭಾರತದಂತಹ ಯೋಜನೆಯು ಇಂತಹ ಚಿಂತನಾ ಪ್ರಕ್ರಿಯೆಯ ಭಾಗವಾಗಿದೆ. ಬಲಿಷ್ಠ ರಾಷ್ಟ್ರಗಳನ್ನು ಅವಲಂಬಿಸದೇ ಅಭಿವೃದ್ಧಿಯತ್ತ ಮುನ್ನಡೆದರೆ ವಿಶ್ವದ ಬಲಾಢ್ಯ ಶಕ್ತಿಯಾಗಿ ಪರಿವರ್ತನೆ ಹೊಂದಲು ಸಾಧ್ಯ. ಕೋವಿಡ್ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಭಾರತ ಆತ್ಮ ನಿರ್ಭರ ಭಾರತದ ಪರಿಕಲ್ಪನೆಯೊಂದಿಗೆ ಪರ್ಯಾಯ ಮಾರ್ಗವನ್ನು ಕಂಡುಕೊಂಡಿತ್ತು ಎಂದು ಹೇಳಿದರು.

ಸಂವಾದ ಕಾರ್ಯಕ್ರಮವನ್ನು ಡಾ. ದಶರಥ್ ರಾಜ್ ಶೆಟ್ಟಿ ನಿರ್ವಹಿಸಿದರು.

ವರದಿ : ಜಯಶ್ರೀ ಆರ್ಯಾಪು, ದಿವ್ಯಶ್ರೀ ವಜ್ರದುಂಬಿ