ಮಂಗಳೂರು : ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯನ್ನು ಲೇಖಕ ಹಾಗೂ ಕವಿ ಶತಾವಧಾನಿ ಡಾ. ಆರ್ ಗಣೇಶ್ ಉದ್ಘಾಟಿಸಿದರು. ದೀಪ ಪ್ರಜ್ವಲನೆ ಮತ್ತು ಮಂಗಳವಾದ್ಯದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಶತಾವಧಾನಿ ಡಾ. ಆರ್. ಗಣೇಶ್ ಅರಿವಿನ ಆಳಕ್ಕೆ ಬಹುಭಾಷೆಗಳನ್ನು ಅರಿಯುವುದು ಅಗತ್ಯ. ಸಾಹಿತ್ಯದ ಅಧಿಕೃತತೆಗೆ ಬಹುಭಾಷೆಗಳ ಅಧ್ಯಯನ ಪರಿಣಾಮಕಾರಿ. ಮೂಲ ಸಾಹಿತ್ಯವನ್ನು ಸರಿಯಾಗಿ ಅರಿಯದೆ ಅಭಿಜಾತ ಸಾಹಿತ್ಯವನ್ನು ಪುನರ್ ರಚನೆ ಮಾಡುವಾಗ ಅನೇಕರು ಮೂಲ ಕವಿಗೆ ಅನ್ಯಾಯ ಮಾಡುತ್ತಾರೆ. ಪ್ರಸ್ತುತದ ಇಂತಹ ಅಸಂಗತಗಳನ್ನು ದೂರಗೊಳಿಸುವುದಕ್ಕೆ ತರ್ಕ ಶುದ್ಧವಾದ ಸಾಹಿತ್ಯದ ಅಧ್ಯಯನ ಅಗತ್ಯ. ಭಾರತೀಯ ಸಾಹಿತ್ಯದಲ್ಲಿ ಸತ್ಯದ ಅರಿವು ಮೂಡಿಸುವುದೇ ಸಾರ್ವಭೌಮ ತತ್ವ ಎಂದು ಹೇಳಿದರು.
ಉಡುಪಿ, ದಕ್ಷಿಣ -ಕನ್ನಡ ಜಿಲ್ಲೆ ನನಗೆ ಸಾಕಷ್ಟು ಪ್ರೇರಣೆ ನೀಡಿದೆ. ಇಲ್ಲಿನ ಕವಿಗಳಿಂದ ಸದಾ ಸ್ಪೂರ್ತಿ ಪಡೆದಿದ್ದೇನೆ. ಇಂತಹ ಸಾಹಿತ್ಯ ಹಬ್ಬ ಆಯೋಜನೆ ಇಂದು ಬಹುಮುಖ್ಯವಾಗಿದೆ. ಇಂಟರ್ನೆಟ್ ಯುಗದಲ್ಲಿ ವೈಯಕ್ತಿಕ ಬಾಂಧವ್ಯ ಕಳೆದುಕೊಂಡಿದ್ದೇವೆ. ಈ ಸಂದರ್ಭದಲ್ಲಿ ಇಂತಹ ಸಾಹಿತ್ಯ ಹಬ್ಬ ಆಯೋಜನೆ ಮಹತ್ವದ್ದಾಗಿದೆ. ಕಲೆ, ಸಾಹಿತ್ಯ ಹೀಗೆ ಬೇರೆ ಬೇರೆ ಕ್ಷೇತ್ರದ ಜನ ಒಂದೆಡೆ ಸೇರುವುದರಿಂದ ಸನಾತನತೆಯ ಸಬಲೀಕರಣವಾಗುತ್ತದೆ.
ಪ್ರತಿ ಕಲೆಯ ಪರಮೋದ್ಧೇಶವೇ ರಸೋತ್ಪತ್ತಿ. ಕಲಾ ಪ್ರಕಾರಗಳನ್ನು ದೇಶೀಯ ಸೊಗಡಿನ ಮೂಲಕ ತಿಳಿಸುವ ಕಾರ್ಯವಾಗಬೇಕು. ರಾಮಾಯಣ, ಮಹಾಭಾರತ ಮುಂತಾದ ಪುರಾಣ ಗ್ರಂಥಗಳು ಪರಮ ಸತ್ಯವನ್ನು ಸುಂದರವಾಗಿ ಪ್ರಕಟಿಸಿದ್ದರಿಂದಲೇ ಜನಪ್ರಿಯ ಕಾವ್ಯಗಳಾದವು. ಓದುಗ ತನ್ನ ಅನುಭಾವಗಳ ಮೂಲಕ ಸಾಹಿತ್ಯದ ಸೌಂದರ್ಯವನ್ನು ಆಸ್ವಾದಿಸುವಂತೆ ಗ್ರಂಥ ರಚನೆಯಾಗುತ್ತಿದ್ದವು. ಪ್ರಸ್ತುತ ಸಾಹಿತ್ಯ ರಚನೆಯಲ್ಲಿ ಈ ಅಂಶಗಳ ಕೊರತೆಯನ್ನು ಕಾಣಬಹುದು.
ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ, ಶಿಕ್ಷಣದಲ್ಲಿ ಭಾರತೀಯತೆಯ ಅಗತ್ಯತೆ ಇದೆ. ಎಲ್ಲಿ ಶುದ್ಧ ಸಾಹಿತ್ಯವಿಲ್ಲವೋ ಅಲ್ಲಿ ಓದುಗರ ಸಂಖ್ಯೆಯು ಇಳಿಮುಖವಾಗುತ್ತದೆ. ಸತ್ಯವನ್ನು ತಿಳಿಸುವಾಗ ಸಂಕುಚಿತತೆ ಇರುವುದರಿಂದ ಇಂದು ಹಲವು ಕಲೆಗಳ ಅಭಿವೃದ್ಧಿಗೆ ತೊಡಕುಂಟಾಗುತ್ತಿದೆ. ಅತ್ಯದ್ಭುತ ಸಾಹಿತ್ಯಗಳನ್ನು ಗುರುತಿಸುವಾಗ ಯಾವುದೇ ಸಂಕುಚಿತ ಮಾನದಂಡಗಳನ್ನಿಡದೆ ವಸ್ತುನಿಷ್ಠ ಸಂಗತಿಗಳನ್ನು ಮಾತ್ರ ಗಮನಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಕೃತ ಆಡುಭಾಷೆಯಾದಾಗ ಸ್ವಾರಸ್ಯ ಇರುತ್ತದೆ. ಭಾಷೆ ಕಲಿಯದೆ ಮೂಲಗ್ರಂಥಗಳ ಕಲಿಕೆ ಸಾಧ್ಯವಿಲ್ಲ. ವಿಜ್ಞಾನ ಅಂದರೆ ಶಾಸ್ತ್ರ. ತರ್ಕ ಶುದ್ಧ ಚಿಂತನೆ ಅತ್ಯಗತ್ಯ. ಕಲೆಯ ಪರಮೋದ್ದೇಶ ರಸ. ಲೋಹ ಅಂದರೆ ಹೆಚ್ಚಿನ ಅರಿವು. ಅರಿವೇ ಆನಂದ. ಅರಿವು ಆನಂದಗಳಿಗೆ ವ್ಯತ್ಯಾಸವಿಲ್ಲ. ರಸವನ್ನು ನಿರಾಕರಿಸಲು ಮುಖ್ಯ ಕಾರಣ ಭಾವಸಮೃದ್ಧಿ ಇಲ್ಲದೇ ಇರುವುದು. ನವೋದಯದ ವರಿಗೆ ಬಹುಪಾಂಡಿತ್ಯ ಇತ್ತು. ಆದರೆ ನಂತರದವರಿಗೆ ಅದು ಇಲ್ಲ. ಧ್ವನಿ ಇಲ್ಲದೆ ರಸ ಇಲ್ಲ. ಧ್ವನಿಪೂರ್ಣವಾಗಿ ಶೃಂಗಾರವನ್ನು ಅಭಿವ್ಯಕ್ತ ಮಾಡಬಹುದು.ರಸವೊಂದೇ ಕವಿ ನೀತಿ ಎಂದು ಕುವೆಂಪು ಹೇಳಿದ್ದರು. ಇಂದು ಕುವೆಂಪು ಅವರನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಸಲಾಗುತ್ತದೆ. ಶುದ್ಧ ಸಾಹಿತ್ಯವನ್ನು ಎಲ್ಲರಿಗೂ ತಿಳಿಯುವಂತೆ ಮಾಡುವುದು ಇಂದಿನ ಅಗತ್ಯ
ಸಾಹಿತ್ಯ, ದೃಶ್ಯ, ಶ್ರಾವ್ಯ, ಶಿಲ್ಪ, ಪ್ರತಿಯೊಂದು ಕಲೆ ಎಲ್ಲದರಲ್ಲೂ ಸಾರ್ವಭೌಮವಾಗಿ ರಸ ಇರಬೇಕು. ಕಲೆಯ ಪರಮೋದ್ದೇಶ ರಸ. ರಸ ಅಂದರೆ ಹೆಚ್ಚಿನ ಅರಿವು. ಅರಿವೇ ಆನಂದ. ಅರಿವು ಆನಂದಗಳಿಗೆ ವ್ಯತ್ಯಾಸವಿಲ್ಲ. ರಸವನ್ನು ನಿರಾಕರಿಸಲು ಮುಖ್ಯ ಕಾರಣ ಭಾವಸಮೃದ್ಧಿ ಇಲ್ಲದೇ ಇರುವುದು. ನವೋದಯದ ವರಿಗೆ ಬಹುಪಾಂಡಿತ್ಯ ಇತ್ತು. ಆದರೆ ನಂತರದವರಿಗೆ ಅದು ಇಲ್ಲ. ಧ್ವನಿ ಇಲ್ಲದೆ ರಸ ಇಲ್ಲ. ಧ್ವನಿಪೂರ್ಣವಾಗಿ ಶೃಂಗಾರವನ್ನು ಅಭಿವ್ಯಕ್ತ ಮಾಡಬಹುದು.ರಸವೊಂದೇ ಕವಿ ನೀತಿ ಎಂದು ಕುವೆಂಪು ಹೇಳಿದ್ದರು. ಇಂದು ಕುವೆಂಪು ಅವರನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಸಲಾಗುತ್ತದೆ. ಶುದ್ಧ ಸಾಹಿತ್ಯವನ್ನು ಎಲ್ಲರಿಗೂ ತಿಳಿಯುವಂತೆ ಮಾಡುವುದು ಇಂದಿನ ಅಗತ್ಯವಾಗಿದೆ.
ಅಭಿಜಾತ ಸಾಹಿತ್ಯ ಪುನರ್‌ರಚನೆ ಮಾಡುವಾಗ ಅನೇಕರು ಮೂಲ ಕವಿಗೆ ಅನ್ಯಾಯ ಮಾಡುತ್ತಾರೆ. ರಾಮಾಯಣ ಬರೆಯುವವರು ರಾಮನನ್ನೇ ಕೆಟ್ಟದಾಗಿ ಚಿತ್ರಿಸಿ ಮೂಲ ರಾಮಾಯಣಕ್ಕೆ ಧಕ್ಕೆ ತರುತ್ತಾರೆ. ಪ್ರಸಿದ್ಧ ವಿದ್ವಾಂಸನ ಬರವಣಿಗೆಯನ್ನು ತಿರುಚುವುದು ಅಪರಾಧ ಎಂದರು.
ಅಭಿಜಾತ ಸಾಹಿತ್ಯ ಎಂದರೆ ಅದು ಬ್ರಾಹ್ಮಣತ್ವ ಎಂದು ಸಂಕುಚಿತ ಮನಸ್ಸಿನಿಂದ ಯೋಚನೆ ಮಾಡಲಾಗುತ್ತದೆ. ಅವಧಾನ ಎಂದರೆ ಅದು ಬಂಡವಾಳಶಾಹಿಗಳದ್ದು ಎನ್ನುತ್ತಾರೆ. ಆದರೆ ಅದರ ಇತಿಹಾಸ, ಅದರ ಉತ್ತಮವಾದುದನ್ನು ತಿಳಿಯುವುದಿಲ್ಲ. ಅಕಾಡೆಮಿ ರಚನೆ ಮಾಡುವಾಗ ಜಾತಿ, ಪ್ರದೇಶ ನೋಡಲಾಗುತ್ತದೆ ಗುಣಮಟ್ಟವನ್ನು ನೋಡುವಾಗ ಜಾತಿ, ಪ್ರದೇಶ ಎಂಬ ಪ್ರಾತಿನಿಧ್ಯ ಇರಬಾರದು. ಅದು ತಾರತಮ್ಯ ರಹಿತವಾಗಿರಬೇಕು ಎಂದರು.
ಭಾರತೀಯ ಕಲೆ, ಸಂಸ್ಕೃತಿಯನ್ನು ನಾವು ಇಂದು ಅಖಂಡವಾಗಿ ನೋಡುತ್ತಿಲ್ಲ. ದೇಶಿಯತೆಯನ್ನು ಹೊಗಳುವುದು ಇಂದು ಫ್ಯಾಷನ್ ಆಗಿದೆ. ಆದರೆ ದೇಶೀಯತೆಯನ್ನು ಅರ್ಥ ಮಾಡಿಕೊಳ್ಳಲು ನಿಜವಾದ ಮಾರ್ಗ ಆರಿಸಬೇಕು ಎಂದರು.
ದೀಪ ಪ್ರಜ್ವಲನೆಯಲ್ಲಿ ನಾಡೋಜ ಕೆ. ಪಿ. ರಾವ್ ಅವರು ಪಾಲ್ಗೊಂಡರು. ಸಂವಾದ ಕಾರ್ಯಕ್ರಮವನ್ನು ಸಾಹಿತಿ ಡಾ. ಅಜಕ್ಕಳ ಗಿರೀಶ್ ಭಟ್ ನಿರ್ವಹಿಸಿದರು. ಭಾರತ್ ಫೌಂಢಶನ್‌ನ ಟ್ರಸ್ಟಿ ಮತ್ತು ಮಂಗಳೂರು ಲಿಟ್ ಫೆಸ್ಟ್ 2022ರ ಸಂಯೋಜಕರಲ್ಲೊಬ್ಬರಾದ ಸುನಿಲ್ ಕುಲಕರ್ಣಿ ಸ್ವಾಗತಿಸಿದರು. ಈ ಸಂದರ್ಭ ಲೇಖಕ ಹಾಗೂ ಕವಿ ಶತಾವಧಾನಿ ಆರ್. ಗಣೇಶ್ ಅವರನ್ನು ಸನ್ಮಾನಿಸಿ, ಗೌರವ ಪ್ರದಾನ ಮಾಡಲಾಯಿತು.
ವರದಿ : ಶರಣ್ಯ, ಅರುಣ್ ಕಿರಿಮಂಜೇಶ್ವರ, ಜಯಶ್ರೀ ಅರ್ಯಪು