Day 2 | Audi 3 – Session 2 : 2.15 pm
ಲತೇಶ್ ಬಕ್ರಬೈಲ್
ಮಂಗಳೂರು ಸಾಹಿತ್ಯ ಉತ್ಸವದ ಅಂಗವಾಗಿ ಕ್ವಿಜ್ ಫೈನಲ್ಸ್ ಸ್ಪರ್ಧೆ ಪತ್ರಕರ್ತ ಲತೇಶ್ ಬಕ್ರಬೈಲ್ ಅವರ ನಿರ್ವಹಣೆಯಲ್ಲಿ ನಡೆಯಿತು. ಈ ಸ್ಪರ್ಧೆಯು ಕನ್ನಡ ಸಾಹಿತ್ಯ, ಇತಿಹಾಸ, ಸಂಸ್ಕೃತಿ ಕುರಿತು ಸ್ಪರ್ಧಾರ್ಥಿಗಳ ಜ್ಞಾನವನ್ನು ಪರೀಕ್ಷಿಸುವ ಒಂದು ವೇದಿಕೆಯಾಗಿತ್ತು.
ಈ ಕ್ವಿಜ್ ಸ್ಪರ್ಧೆಯಲ್ಲಿ 12 ವಿದ್ಯಾರ್ಥಿಗಳು 6 ತಂಡಗಳಾಗಿ ಭಾಗವಹಿಸಿದ್ದರು. ನಾಲ್ಕು ಸುತ್ತುಗಳನ್ನು ಒಳಗೊಂಡ ಈ ಸ್ಪರ್ಧೆಯಲ್ಲಿ ಭಾರತೀಯ ಸಾಹಿತ್ಯದ ವಿ?ಯವಾಗಿತ್ತು. ಮೊದಲ ಸುತ್ತಿನಲ್ಲಿ ಬಹು ಆಯ್ಕೆ ಪ್ರಶ್ನೆಗಳು, ಎರಡನೇ ಸುತ್ತಿನಲ್ಲಿ ರ‍್ಯಾಪಿಡ್ ಫೈರ್, ಮೂರನೇ ಸುತ್ತಿನಲ್ಲಿ ಆಡಿಯೋ ಮತ್ತು ಫೋಟೋ ಆಧಾರಿತ ಪ್ರಶ್ನೆಗಳು ಹಾಗೂ ನಾಲ್ಕನೇ ಸುತ್ತಿನಲ್ಲಿ ನೇರ ಪ್ರಶ್ನೆಗಳು ಇದ್ದವು.
ಸ್ಪರ್ಧೆಯಲ್ಲಿ ಉಡುಪಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರಿನ ವಿಠ್ಠಲ ಮತ್ತು ಕೃಷ್ಣ ಪ್ರಥಮ ಸ್ಥಾನ ಪಡೆದರು.
ಬೆಳ್ತಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದುರ್ಗೇಶ್ ಮತ್ತು ರಕ್ಷಿತ್ ದ್ವಿತೀಯ ಸ್ಥಾನ ಪಡೆದರು.
ಮಂಗಳೂರಿನ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಂಕಿತ ಪಿ.ಸಿ. ಮತ್ತು ಮಲ್ಲಪ್ಪ ಕುರುಬರ್ ತೃತೀಯ ಸ್ಥಾನ ಪಡೆದರು.
ಈ ಕ್ವಿಜ್ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿರುವ ಭಾರತೀಯ ಸಾಹಿತ್ಯದ ಅಗಾಧ ಜ್ಞಾನವನ್ನು ಪ್ರದರ್ಶಿಸುವ ವೇದಿಕೆಯಾಗಿ ಪರಿಣಮಿಸಿತು.
Literary Quiz Finals
The quiz finals, hosted by journalist Lathesh Bakrabali, witnessed a thrilling battle of wits among six teams. The competition, divided into four rounds, tested the participants’ knowledge of Indian literature. The rounds included multiple-choice questions, rapid-fire queries, audio and photo identification, and direct questions. After a fierce contest, the winners were announced:
Vittala and Krishna, from Government First Grade College, Thenkanidiyur, Udupi, took home the first prize. Durgesh and Rakshith, from Government First Grade College, Betthangady, secured the second prize. Ankitha PC and Mallappa Kurubar, from S.V.P. Institute of Kannada Studies, Mangalore University, won the third prize. The quiz finals showcased the impressive literary knowledge of the participants, and the winners were congratulated on their outstanding performance.