Day 1 | Audi 2 – Session 4 : 3.15 pm
ಅರುಣ್ ಭಾರಧ್ವಾಜ್, ಶೈಲೇಶ್ ಕುಲಕರ್ಣಿ
ಪುಸ್ತಕ ಬಿಡುಗಡೆ : ಪ್ರಕಾಶ್ ಬೆಳವಾಡಿ
ಭಾರತ ಫೌಂಡೇಶನ್ ಈ ವರ್ಷ ಶ್ರೀಯುತ ಅರುಣ್ ಭಾರದ್ವಾಜ್ ಅವರ “ಸಿನಿಮೀಯ ಸಿನಿಕಿಯ” ಪುಸ್ತಕವನ್ನು ಪ್ರಕಟಿಸಿತು. ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀಯುತ ಪ್ರಕಾಶ್ ಬೆಳವಾಡಿ, ಲೇಖಕರಾದ ಅರುಣ್ ಭಾರದ್ವಾಜ್ ಮತ್ತು ಶೈಲೇಶ್ ಕುಲಕರ್ಣಿ ಉಪಸ್ಥಿತರಿದ್ದರು.
ಪುಸ್ತಕದ ಆವೃತ್ತಿ, ಸಿನಿಮಾ ವಿಮರ್ಶೆಯ ಆಳ, ವಿಭಿನ್ನ ಕಲೆಗಳ ವೈಶಿಷ್ಟ್ಯ, ಮತ್ತು ಪ್ರೇಕ್ಷಕರ ಚರ್ಚೆಯ ಗುಣಮಟ್ಟವನ್ನು ಆಳವಾಗಿ ವಿಶ್ಲೇಷಿಸುತ್ತದೆ. ಐದು ಅಧ್ಯಾಯಗಳಲ್ಲಿ, ಸಾಹಿತ್ಯಿಕ ವೈಶಿಷ್ಟ್ಯ ಮತ್ತು ಕಲಾ ತತ್ವಗಳನ್ನು ಪ್ರಸ್ತಾಪಿಸಲಾಗಿದೆ. ಅರುಣ್ ಭಾರದ್ವಾಜ್ ಅವರ ಅಭಿಪ್ರಾಯ ಪ್ರೇಕ್ಷಕರಿಗೆ ಸಿನಿಮಾ ವಿನ್ಯಾಸ, ತತ್ವ, ಮತ್ತು ಅದರ ಕಲೆ ಬಗ್ಗೆ ಆಳವಾದ ತಿಳಿವಳಿಕೆಯನ್ನು ಒದಗಿಸಿಕೊಟ್ಟರು.
ಭಾರತೀಯ ಮತ್ತು ಪಾಶ್ಚಾತ್ಯ ಚಿತ್ರಗಳ ನಡುವಿನ ವಿಶಿಷ್ಟ ಲಕ್ಷಣಗಳು ಚರ್ಚೆಗೆ ಒಳಗಾಗಿತ್ತು. ಭಾರತೀಯ ಕಮರ್ಷಿಯಲ್ ಸಿನಿಮಾಗಳಲ್ಲಿ ಐದು ಹಾಡು, ಹಾಸ್ಯ, ಹಾಗೂ ಪ್ರೇಕ್ಷಕರ ಮನರಂಜನೆಗೆ ತಕ್ಕಂತೆ ಮಸಾಲೆ ಸೇರಿಸುವುದು ಸಾಮಾನ್ಯ. ಇದನ್ನು ಕೆಲವು ವಿಮರ್ಶಕರು ಕೀಳಾಗಿ ನೋಡುವರು. ಪ್ಯಾರಲಲ್ ಸಿನಿಮಾಗಳು ವಾಸ್ತವವದ ಪ್ರತಿನಿಧಿ ಎಂದು ತೋರಿಸಿಕೊಳ್ಳುವಾಗ, ನಿಜವಾದ ವಾಸ್ತವವನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡುವುದು. ಚೈನಾದ ಪ್ರಭಾವವನ್ನು ಚಲನಚಿತ್ರ ತಂತ್ರಜ್ಞಾನದ ಮೂಲಕ ಪ್ರೋಪಗಂಡಾ ರೂಪದಲ್ಲಿ ಬಳಕೆ ಮಾಡುವುದು ಗಮನಾರ್ಹವಾಗಿದೆ. ಈ ನಿಟ್ಟಿನಲ್ಲಿ ವಿಮರ್ಶೆ ಮಾಡುವಲ್ಲಿ ಸೂಕ್ಷ್ಮ ನೋಟ ಅನಿವಾರ್ಯ.
ಸಿನಿಮಾ ಪ್ರಪಂಚವು ಪ್ರೊಪಗಂಡಾ ಸಾಧನವಾಗಿ ಬಳಸಲಾಗುತ್ತಿದೆ. ಚೀನಾ, ಟಿಬೆಟ್, ತೈವಾನ್, ಮತ್ತು ಥಿಯಾನಮೆನ್ ಸ್ಕ್ವೇರ್ ವಿಷಯಗಳಲ್ಲಿ ನಿಖರ ನಿರ್ವಹಣೆ ಮಾಡುವ ಚೀನಾ, ತನ್ನ ರಾಷ್ಟ್ರೀಯ ಅಜೆಂಡಾವನ್ನು ಕಠಿಣವಾಗಿ ಜಾರಿಗೆ ತರುತ್ತದೆ. ಇದಕ್ಕೆ ವಿರುದ್ಧವಾಗಿ, ಭಾರತದ ಸಿನಿಮಾ ಕ್ಷೇತ್ರದಲ್ಲಿ ಭಾರತೀಯ ಅಜೆಂಡಾ ಅಥವಾ ಅಭಿವ್ಯಕ್ತಿ ಸ್ಪಷ್ಟತೆ ಕಾಣದಿರುವುದು ವಿಚಾರಮಾಡಬೇಕಾದ ವಿಷಯವಾಗಿದೆ. ಹಲವು ಸಿನಿಮಾಗಳಲ್ಲಿ, ಜಾತಿ, ಪ್ರಾದೇಶಿಕತೆ, ಹಾಗೂ ಉಗ್ರಗಾಮಿ ಅಂಶಗಳನ್ನು ಅನಾವರಣ ಮಾಡಲಾಗಿದ್ದು, ಭಾರತೀಯ ಆಡಳಿತ ವ್ಯವಸ್ಥೆಯ ಸ್ಪಷ್ಟ ನಿಲುವಿಲ್ಲದ ಸ್ಥಿತಿ ತೋರಿಸುತ್ತದೆ. ಪ್ರಸ್ತುತ, ಚೀನಾದ ಮಾದರಿಯಲ್ಲಿ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ, ತಂತ್ರಜ್ಞಾನವನ್ನು ಪ್ರಭಾವಿಯಾಗಿ ಬಳಸುವ ಅಗತ್ಯ ಭಾರತೀಯ ಸಿನಿಮಾ ಕ್ಷೇತ್ರದ ಮುಂದಿರುವ ಪ್ರಮುಖ ಸವಾಲುಗಳಲ್ಲಿ ಒಂದು ಎಂದು ಅವರು ಹೇಳಿದರು.
Cinimiya cinikiya: Book Launch and Discussion
A discussion was held with Arun Bharadwaj—an author, thinker, and filmmaker. The session was moderated by Shailesh Kulkarni.
Bharat Foundation published Arun Bharadwaj’s book “Cinimiya cinikiya” this year. At the launch Prakash Belawadi, Arun Bharadwaj, and Shailesh Kulkarni were present. The book delves into the depth of film criticism, the uniqueness of various art forms, and the quality of audience discussions. Spread across five chapters, it explores literary features and artistic philosophy. Bharadwaj’s insights provided the audience with a deeper understanding of film design, theory, and artistry.
The discussion covered the distinct features of Indian and Western films. In Indian commercial cinema, it is common to include songs, humor, and elements tailored for audience entertainment—an approach often criticized by some reviewers. While parallel cinema aims to portray realism, it consciously selects specific aspects of reality. The influence of China in using film technology as a propaganda tool is noteworthy. As part of its effort to position itself as a global leader, China protects its markets with strict regulations while expanding its influence on the global film industry, including Hollywood. A nuanced perspective is essential for film criticism.
Cinema is increasingly being used as a tool for propaganda. China handles sensitive topics like Tibet, Taiwan, and Tiananmen Square with precision, strictly enforcing its national agenda. In contrast, the lack of a clear national agenda or expression in Indian cinema is a concern. Many films highlight issues such as caste, regionalism, and extremism, reflecting the Indian administration’s ambiguous stance. Currently, one of the key challenges for the Indian film industry is to adopt China’s model by systematically gathering comprehensive information and effectively utilizing technology to enhance its influence.
The session concluded with an engaging Q&A segment, where the audience raised pertinent questions regarding the role of cinema in shaping societal narratives and influencing public perception.