Sight and Insight

Day 1 | Audi 2 – Session 5 : 4.15 pm

Dr. Mallappa Bandi, O. Aishwarya and Prithvi Karinje

The participants in this discussion forum were Dr. Mallappa Bandi, who was born in Herkal village in Bilagi taluk of Bagalkot district. He serves as an Assistant Professor at Karnataka University, Dharwad. Dr. Bandi has made significant contributions in the fields of literature, language, and culture. He has authored seven books, including one translated from Tamil. His book Discourse of Disability Through the Lens of Language is highly influential. He has also written a book titled Literature and Culture Synthesis. Under his mentorship, eight students are currently pursuing their Ph.D. degrees.

O. Aishwarya is a Ph.D. scholar and research scholar at the IIIT in Bangalore. She is pursuing a Ph.D. on the topic Assistive Technology for People with Visual Impairment and Other Disabilities. Prior to this, she worked with an NGO called Vision Empower. Aishwarya has also written a story in the book And Lived Ever After, and her stories have been published in two anthologies. Additionally, her poems have been featured in several magazines.

Mallappa expressed his desire for a time when literature written by differently-abled individuals will be discussed within the mainstream literary framework. He acknowledged the efforts made by the Mangalore Literature Festival to break the silence of history and offer a new interpretation. He felt that the issues that were once neglected, pushed to the margins, and filled with silence have now found expression through the written word in this discussion.

Aishwarya, while speaking later, thanked the event organizers for providing such a platform. Reflecting on her own experiences, she mentioned that her stories often feature characters with visual impairments. This is because, growing up, she never saw anyone like herself, which led her to create characters with similar disabilities.

Her stories, Swan in Disguise and Finding Home, depict the lives of differently-abled individuals who experience acceptance and joy. According to her, we should question whether it is possible to find happiness without developmental or medical interventions for disabilities. In her stories, the beautiful endings don’t imply blindness should disappear, but rather highlight that even the extraordinary lives of individuals can end happily. Using a modern interpretation of The Ugly Duckling, she emphasizes the importance of acceptance.

She was born blind and had to face society’s judgments regarding disability and blindness from the beginning. Society labeled it as something bad or wrong. People would often ask, “Is there no cure for this? Can eye surgery fix it?” As a result, she internalized the notion that disability was something negative from a young age.

Mallappa added that viewing disability purely as a personal or medical issue is a very narrow perspective. He explained that disability involves challenges in accessing environmental factors and dealing with issues of accessibility. He emphasized that disability is not necessarily a problem by itself. When we look at disability from the societal perspective, it can be seen in two ways: either as a disabled individual or as a special person.

The discussion concluded with an engaging question-and-answer session.

ನೋಟ ಹಾಗು ಒಳನೋಟ

ಈ ಚರ್ಚಾ ವೇದಿಕೆಯಲ್ಲಿ ಡಾಕ್ಟರ್ ಮಲ್ಲಪ್ಪ ಬಂಡಿ ಇವರು ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ಹೆರ್ಕಲ್ ಗ್ರಾಮದಲ್ಲಿ ಜನಿಸಿದವರು. ಇವರು ಕರ್ನಾಟಕದ ಕರ್ನಾಟಕ ಯೂನಿವರ್ಸಿಟಿ ಆಫ್ ದಾರವಾಡದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದಾರೆ. ಇವರು ಸಾಹಿತ್ಯ, ಭಾಷೆ ಮತ್ತೂ ಸಂಸ್ಕೃತಿಯ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದವರು. ಇವರು ಏಳು ಪುಸ್ತಕಗಳನ್ನ ಬರೆದಿದ್ದಾರೆ, ಅದರಲ್ಲಿ ಒಂದು/ಒಂದನ್ನು ತಮಿಳಿನಿಂದ ಅನುವಾದ ಮಾಡಿದ್ದಾರೆ. ಇವರ ಡಿಸಕೋರ್ಸ್ ಆಫ್ ಡಿಸೇಬಿಲಿಟಿ ಥ್ರೂ ದ ಲೆನ್ಸ್ ಆಫ್ ಲ್ಯಾಂಗ್ವೇಜ್ ಬಹಳ ಪ್ರಭಾವಕಾರಿಯಾದ ಪುಸ್ತಕ, ಲಿಟರೇಚರ್ ಅಂಡ್ ಕಲ್ಚರ್ ಸಂಕಥನ ಅನ್ನುವಂತಹ ಒಂದು ಪುಸ್ತಕವನ್ನು ಬರೆದಿದ್ದಾರೆ. ಇವರ ಅಡಿ ಅಲ್ಲಿ ಎಂಟು ಜನ ಮಕ್ಕಳು/ವಿದ್ಯಾರ್ಥಿಗಳು ಪಿಎಚ್‌ಡಿ ಮಾಡುತ್ತಿದ್ದಾರೆ.

ಒ. ಐಶ್ವರ್ಯ, ಇವರು ಬೆಂಗಳೂರಿನ ಟ್ರಿಪಲ್ ಐಟಿ ಅಲ್ಲಿ ಪಿಎಚ್ಡಿ ಸ್ಕಾಲರ್, ರಿಸರ್ಚ್ ಸ್ಕಾಲರ್. ಇವರು ಅಸಿಸ್ಟಿವ್ ಟೆಕ್ನಾಲಜಿ ಫಾರ್ ಪೀಪಲ್ ವಿತ್ ವಿಶುವಲಿ ಇಂಪೇರ್ಡ್ ಅಂಡ್ ಇಂಪೇರ್ಡ್ ಅನ್ನುವಂತಹ ಒಂದು ವಿಷಯದ ಮೇಲೆ ಪಿಎಚ್ಡಿ ಮಾಡುತ್ತಿದ್ದಾರೆ. ಇದಕ್ಕಿಂತ ಮೊದಲು ಅವರು ವಿಶನ್ ಎಂಪವರ್ ಅನ್ನುವಂತಹ ಎನ್ ಜಿ ಒ ದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅಂಡ್ ಲಿವ್ಡ್ ಎವರ್ ಆಫ್ಟರ್ ಅನ್ನುವಂತಹ ಒಂದು ಪುಸ್ತಕದಲ್ಲಿ ಒಂದು ಕಥೆಯನ್ನ ಕೂಡ ಐಶ್ವರ್ಯ ಬರೆದಿದ್ದಾರೆ. ಎರಡು ಕಥೆಗಳನ್ನ ಎರಡು ಆಂಥೊಲಾಜಿಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಮತ್ತೂ ಅನೇಕ ಮ್ಯಾಗಜಿನ್‌ಗಳಲ್ಲಿ ಇವರ ಕವನಗಳು ಪಬ್ಲಿಷ್ ಆಗಿವೆ.

ಅಂಗವಿಕಲ ವ್ಯಕ್ತಿಗಳು ಬರೆದ ಸಾಹಿತ್ಯವನ್ನ ಮುಖ್ಯಧಾರೆಯ ಸಾಹಿತ್ಯದ ಪರಿಧಿಯೊಳಗೆ ಚರ್ಚಿಸುವ ಕಾಲ ಒಂದು ಬರಲಿ ಎನ್ನುವುದು ಮಲ್ಲಪ್ಪರವರ ಅಭಿಲಾಷೆ. ಚರಿತ್ರೆಯ ಮೌನವನ್ನ ಬಿಡಿದು ಅದಕ್ಕೆ ಹೊಸ ಭಾಷೆ ಬರೆಯುವ ಪ್ರಯತ್ನ ಮಂಗಳೂರು ಸಾಹಿತ್ಯೋತ್ಸವದಿಂದ ಆಗು ತ್ತಿರುವ ಪ್ರಯತ್ನಕ್ಕೆ ತಮ್ಮ ಕೃತಜ್ಞತೆ ಸಲ್ಲಿಸಿದರು. ಚರಿತ್ರೆಯುದ್ದಕ್ಕೂ ಯಾವುದು ಅಲಕ್ಷಿತವಾಗಿದ್ದೂ, ಯಾವುದು ಅಂಚಿಗೆ ತಳ್ಳಲ್ಪಟ್ಟಿತ್ತು, ಮತ್ತೆ ಮೌನದ ಆಕೃತಿಯೊಳಗೆ ತುಂಬಿ ಹೋಗಿತ್ತು ಅದಕ್ಕೆ ಇವತ್ತು ಅಕ್ಷರದ ರೂಪ ಈ ಚರ್ಚೆಯ ಮೂಲಕ ಸಲ್ಲಿದೆ ಎಂದು ಅವರು ಭಾವಿಸಿದರು.

ನಂತರ ಮಾತನಾಡಿದ ಐಶ್ವರ್ಯ ಅವರು ಈ ಕಾರ್ಯಕ್ರಮದ ಆಯೋಜಕರಿಗೆ ಇಂತಹ ವೇದಿಕೆ ಮೂಡಿಸಿದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ವಿಕಲಚೇತನತೆಯನ್ನು ಗಮನದಲ್ಲಿಟ್ಟುಕೊಂಡು ಕಥೆಗಳನ್ನು ಬರೆಯುಟ್ಟಿರುವ ಇವರು, ಸಾಮಾನ್ಯವಾಗಿ ಕಣ್ಣಿನ ದೋಷ ಇರುವ ಪಾತ್ರಗಳನ್ನು ರಚಿಸುತ್ತಾರೆ, ಇವರ ಕಥೆಗಳು, Swan in Disguise ಮತ್ತು Finding Home, ವಿಕಲಚೇತನರು ಅನುಭವಿಸುವ ಜೀವನವನ್ನು ಚಿತ್ರಿಸುತ್ತವೆ. ಅವರ ಪ್ರಕಾರ ನಾವು ’ವಿಕಲಚೇತನತೆಗೆ ವಿಕಾಸ ಅಥವಾ ವೈದ್ಯಕೀಯ ಪರಿಹಾರವಿಲ್ಲದೆ ಸುಖಾಂತ ನೀಡಬಹುದೆ?’ ಎನ್ನುವುದಾಗಿದೆ.

ಅವರ ಕತೆಗಳಲ್ಲಿ ಸುಂದರ ಅಂತ್ಯದ ಅರ್ಥವು ಅಂಧತ್ವವು ಮಾಯವಾಗಬೇಕೆಂದಲ್ಲ, ಆದರೆ ಅಸಾಧಾರಣ ವ್ಯಕ್ತಿಯ ಬದುಕು ಕೂಡ ಸಂತೋಷದಿಂದ ಮುಗಿಯಬಹುದು ಎಂಬುದನ್ನು ತೋರಿಸುತ್ತದೆ. The Ugly Duckling ಕಥೆಯ 21ನೇ ಶತಮಾನದ ಆಧುನಿಕ ಅಭಿಪ್ರಾಯವನ್ನು ಬಳಸಿಕೊಂಡು, ಸ್ವೀಕಾರದ ಪ್ರಾಮುಖ್ಯತೆಯನ್ನು ತೋರಿಸುವಂತೆ ರಚನೆ ಮಾಡಿದ್ದಾರೆ.

ಇವರು ಜನ್ಮತಃ ಅಂಧೆ. ಶುರುವಿನಿಂದಲೇ ಅವರು ಅಂಗವಿಕಲತೆ ಮತ್ತು ಅಂಧತ್ವದ ಬಗ್ಗೆ ಸಮಾಜವು ಹೇಳುವುದನ್ನೇ ಎದುರಿಸಬೇಕಾಯಿತು. ಸಮಾಜವು ಇದನ್ನು ಕೆಟ್ಟದ್ದೆಂದು, ತಪ್ಪು ಎಂದು ಹೇಳಿತು. ಜನ ಅವರನ್ನು ನೋಡಿ ಮೊದಲ ಪ್ರಶ್ನೆಯಾಗಿ “ಇದಕ್ಕೆ ಚಿಕಿತ್ಸೆ ಇಲ್ಲವೇ? ಕಣ್ಣಿನ ಶಸ್ತ್ರಚಿಕಿತ್ಸೆಯಿಂದ ಸರಿ ಮಾಡಬಹುದೇ?” ಎಂದು ಕೇಳುತ್ತಿದ್ದರು. ಇದರಿಂದ, ಅಂಗವಿಕಲತೆ ಒಂದು ಕೆಟ್ಟ ಸಂಗತಿ ಎಂಬ ಭಾವನೆ ಅವರಿಗೆ ಸಣ್ಣವರಿದ್ದಾಗಲೇ ಬಂದಿತ್ತು.

ಇದಕ್ಕೆ ಮಲ್ಲಪ್ಪನವರು ಸೇರಿಸುತ್ತಾ ಅದು ಡಿಸ್‌ಅಬಿಲಿಟಿ ಅನ್ನೋದು ಒಂದು ವೈಯಕ್ತಿಕ ಸಮಸ್ಯೆ ಅಂತ ನೋಡೋದಾಗಲಿ ಅಥವಾ ಬರೀ ಅದೊಂದು ವೈದ್ಯಕೀಯ ಸಮಸ್ಯೆ ಅಂತ ನೋಡೋದಾಗಲಿ ಎರಡು ಬಹಳ ಸಂಕುಚಿತವಾದವುಗಳು. ಆಕ್ಸೆಸಿಬಿಲಿಟಿ ಇಶ್ಯೂಸ್ ಆಯ್ತು ಅಂದ್ರೆ ಡಿಸ್‌ಅಬಿಲಿಟಿ ಅನ್ನೋದು ಅಷ್ಟೊಂದು ಸಮಸ್ಯೆ ಇಲ್ಲ ಆದ್ರಿಂದ ಡಿಸ್‌ಅಬಿಲಿಟಿ ಅನ್ನೋದು ಸಮಾಜ ನೋಡುವ ದೃಷ್ಟಿ ಏನು ಅಂತ ಹೇಳಿದ್ರೆ ಎರಡು ದೃಷ್ಟಿಯಿಂದ ನೋಡುತ್ತೆ. ಒಬ್ಬ ಅಂಗವಿಕಲ ವ್ಯಕ್ತಿಯೆಂದು, ಅಥವಾ ವಿಶೇಷ ವ್ಯಕ್ತಿಯೆಂದು ಎಂದು ಹೇಳಿದರು.