ಪತ್ರಿಕೋದ್ಯಮ ಮತ್ತು ಸಾಹಿತ್ಯ : ಒಂದು ಹರಟೆ

Day 1 : Audi 2 – Session 2 : ‌11.45 am

ಪತ್ರಿಕೋದ್ಯಮ ಮತ್ತು ಸಾಹಿತ್ಯದ ವಿಷಯವಾಗಿ ಚರ್ಚೆ ಮಾಡಿದವರು ಜೋಗಿ ಗಿರೀಶ್ ರಾವ್ ಹತ್ವಾರ್, ಕನ್ನಡ ಬರಹಗಾರರು ಮತ್ತು ಪತ್ರಕರ್ತರು ಕನ್ನಡ ನವ ಸಾಹಿತ್ಯ ಬರಹಗಾರರಲ್ಲಿ ಒಬ್ಬರಾದ ಇವರು ಅನೇಕ ಕನ್ನಡ ನಿಯತಕಾಲಿಕರು ಮತ್ತು ದಿನ ಪತ್ರಿಕೆಯಲ್ಲಿ ಸಣ್ಣ ಕಥೆ, ಕಾದಂಬರಿ ಹಾಗೂ ಅಂಕಣಗಳನ್ನು ಬರೆದಿದ್ದಾರೆ.

ರವಿ ಹೆಗಡೆ ಅವರು ಕನ್ನಡಪ್ರಭಾ ಪತ್ರಿಕೆಯಲ್ಲಿ ಮುಖ್ಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೆ ಏಷಿಯಾನೆಟ್ ಸುವರ್ಣ ನ್ಯೂಸ್‌ನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಕಾಲಚಕ್ರದೊಂದಿಗೆ ಸಾಕಷ್ಟು ಬದಲಾವಣೆಗಳು ಕಾಣಸಿಗುತ್ತಿವೆ. ಪ್ರಿಂಟ್ ಮಾಧ್ಯಮದಿಂದ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಕ್ಕೆ ಓದುಗರು ವಲಸೆ ಬಂದಿದ್ದಾರೆ. ಇತ್ತೀಚಿನ ಕವಿಗಳು ತಮ್ಮ ಕವನಗಳನ್ನು ಪತ್ರಿಕೆಗೆ ಕಳಿಸುವ ಬದಲು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಹೆಚ್ಚು ಜನರನ್ನು ತಲುಪುತ್ತಿದ್ದಾರೆ. ಕೃತಿಗಳ ಪ್ರಾತಿನಿಧ್ಯ ಪ್ರಿಂಟ್‌ಗಿಂತ ಡಿಜಿಟಲ್ ಮೀಡಿಯಾದಲ್ಲಿ ಹೆಚ್ಚಾಗಿದೆ. ಸಹಜವಾದ ಕಾರ್ಯಕ್ರಮಗಳು ಮತ್ತು ಯುವ ಪೀಳಿಗೆಯ ಪ್ರಬಲ ಹಾಜರಾತಿ ಸಾಹಿತ್ಯಕ್ಕೆ ಹೊಸ ಭರವಸೆಯನ್ನು ಒದಗಿಸುತ್ತಿದೆ. ಸಂಸ್ಕೃತಿ, ಪಠನಶೀಲತೆ, ಮತ್ತು ಆಧುನಿಕತೆ ಪರಸ್ಪರ ಬೆರೆಯುವ ಮೂಲಕ ಸಾಹಿತ್ಯ ಮತ್ತು ಪತ್ರಿಕೋದ್ಯಮ ಹೊಸ ಹಾದಿಯಲ್ಲಿದೆ.

ನಮಗೆ ಡಿಜಿಟಲ್ ತಂತ್ರಜ್ಞಾನ ಆಧಾರಿತ ಮಾಧ್ಯಮದ ಬೆಳವಣಿಗೆ ಮುಖ್ಯ ಪಾತ್ರ ವಹಿಸುತ್ತಿರುವುದನ್ನು ಗಮನಿಸಬಹುದು. ಪತ್ರಿಕೋದ್ಯಮ, ಸಾಹಿತ್ಯ, ಮತ್ತು ಸಂಗೀತ ಕ್ಷೇತ್ರಗಳಲ್ಲಿ ಡಿಜಿಟಲ್ ಮಾಧ್ಯಮದ ಪ್ರವೇಶದಿಂದ ನಿರ್ವಹಣಾ ಕಾರ್ಯಗಳು ಸುಲಭವಾಗಿವೆ, ಆದರೆ ಓದುವ ಪ್ರಿಯರು ಇನ್ನೂ ಮುದ್ರಣ ಮಾಧ್ಯಮದ ಅನುಭವಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಬರವಣಿಗೆ ಡಿಜಿಟಲ್ ಮಾದರಿಯಲ್ಲಿಗೆ ಸ್ಥಳಾಂತರಗೊಂಡಿದ್ದರೂ, ಓದುಗರ ಮನಸ್ಥಿತಿಯು ಮುದ್ರಿತ ಮಾಧ್ಯಮದಿಂದ ದೂರ ಸರಿದಿಲ್ಲ.

ತಂತ್ರಜ್ಞಾನದ ಸಹಾಯದಿಂದ ಗ್ರಾಹಕರು ಹೆಚ್ಚು ಅನುಕೂಲವನ್ನ ಪಡೆಯುತ್ತಿದ್ದರೂ ಬದಲಾವಣೆಗಳು ಮೀಡಿಯಾದ ಭವಿಷ್ಯವನ್ನು ಹೇಗೆ ರೂಪಿಸುತ್ತವೆ ಎಂಬ ಪ್ರಶ್ನೆ ಮುಕ್ತಾಯದ್ದಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಪತ್ರಿಕೆಗಳ ಓದುಗರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. 2000 ರಲ್ಲಿ 17-18 ಲಕ್ಷ ಸಂಚಲನ ಹೊಂದಿದ್ದ ಕನ್ನಡದ ಪತ್ರಿಕೆಗಳು, ಕೊವಿಡ್ ನಂತರ ಮತ್ತೆ ಅದೇ ಮಟ್ಟಕ್ಕೆ ಕುಸಿಯುವ ಸ್ಥಿತಿಯಲ್ಲಿವೆ. ಕೇವಲ 50 ಪೈಸೆ ಹೆಚ್ಚಿಸಿದರೂ ಓದುಗರ ಸಂಖ್ಯೆ ತಕ್ಷಣವೇ ಬಿಳಿಯುತ್ತವೆ. ಟಿವಿ ಮಾಧ್ಯಮಗಳಲ್ಲಿ ಟಿಆರ್‌ಪಿ ಮೇಲೆ ಆಧಾರಿತ ಅಸಂಬದ್ಧ ಮಾದರಿಯೇ ಪಾರದರ್ಶಕತೆಯ ಕೊರತೆಗೆ ಕಾರಣವಾಗಿದೆ. ಪೇ ಚಾನೆಲ್ ಮಾಡಬೇಕಾದರೂ ಜನರು ಚಂದಾದಾರಿಕೆಗೆ ತಾತ್ಸಾರ ತೋರಿಸುತ್ತಾರೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಗೇಟ್‌ಕೀಪಿಂಗ್ ಕೊರತೆಯು ಕೀಳಮಟ್ಟದ ವಿಷಯಗಳನ್ನು ಪ್ರಚಲಿತಗೊಳಿಸುತ್ತಿದೆ. ಉತ್ತಮ ಕಂಟೆಂಟ್ ಉಂಟುಮಾಡಲು ಪ್ರಿಂಟ್, ಟೆಲಿವಿಷನ್, ಡಿಜಿಟಲ್ ಮಾಧ್ಯಮಗಳು ಸಮನ್ವಯ ಸಾಧಿಸಿ ಬದಲಾವಣೆ ತರಬೇಕಾಗಿದೆ.

ಎಐ ತಂತ್ರಜ್ಞಾನ ಮಾಧ್ಯಮ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಿದೆ. ನ್ಯೂಸ್ ರೂಮ್‌ಗಳಲ್ಲಿ, ಮಾದರಿಯ ವರದಿ ಬರೆಯಲು ಇಂಗ್ಲಿಷ್ ಗೊತ್ತಿರುವ ವ್ಯಕ್ತಿಗಳನ್ನು ಮಾತ್ರ ಅಗತ್ಯವಿದೆ. ಮಾಧ್ಯಮದ ಶ್ರಮವನ್ನು ಕಡಿಮೆ ಮಾಡಲು, ಚಾಟ್‌ಜಿಪಿಟಿ ಹೋಲುವ ಎಐ ಸಾಧನಗಳು ಕಚ್ಚಾ ವರದಿಗಳನ್ನು ಶುದ್ಧ ಮಾಡುತ್ತಿವೆ. ಮಧ್ಯಮ ಮಟ್ಟದ ಪತ್ರಕರ್ತರ ಕಾರ್ಯಗಳು ಅಶಕ್ತವಾಗುತ್ತಿದ್ದು, 40% ಮ್ಯಾನ್‌ಪವರ್ ಕಡಿತಗೊಂಡಿದೆ. ಉನ್ನತ ಮಟ್ಟದ ನಿರ್ಧಾರಗಳಿಗಾಗಿ ಎಡಿಟರ್‌ಗಳು ಮಾತ್ರ ಅಗತ್ಯವಿದ್ದಾರೆ. ಕನ್ನಡ ಮಾಧ್ಯಮಕ್ಕೆ ಈ ಬದಲಾವಣೆ ತಕ್ಷಣ ಪರಿಣಾಮ ಬೀರುವುದಿಲ್ಲ. ಆದರೆ, ಭವಿ‌ಷ್ಯದಲ್ಲಿ ಈ ತಂತ್ರಜ್ಞಾನ ಕನ್ನಡದಲ್ಲಿ ಸಹ ನಿಖರವಾಗಿ ಕಾರ್ಯನಿರ್ವಹಿಸಲು ಸುಧಾರಣೆಗೊಳ್ಳಬಹುದು ಎಂಬ ಸಾಧ್ಯತೆ ಇದೆ ಎಂದು ಹೇಳಿದರು.

Literature and Journalism: A Discussion

The discussion featured Jogi Girish Rao Hatwar, a well-known Kannada writer and journalist and a prominent figure in modern Kannada literature, having written numerous short stories, novels, and columns for various Kannada magazines and newspapers. The panel also included Ravi Hegde, who serves as the Chief Editor of Kannada Prabha and as the Editor of Asianet Suvarna News.

Over time, literature and journalism have undergone significant changes. Readers have gradually shifted from print media to digital and social media platforms. Modern poets now share their poems on social media instead of sending them to newspapers, reaching a larger audience. Their creative work appears more prominently in digital media compared to print.

Interactive events and the active participation of the younger generation are bringing fresh hope to literature. Culturally, reading habits and modernity intertwine. literature and journalism are paving new paths for the future.

The growth of digital technology-based media has played a crucial role in shaping literature, journalism, and even music. While digital media has simplified administrative tasks in these fields, many readers still value the experience of print media. Although writing has transitioned to digital formats, the mindset of readers remains attached to the tactile and cultural essence of print. This is influenced by traditional practices and reading habits. Despite the convenience offered by technology, the design and psychological appeal of print media continue to hold authenticity. This raises an open-ended question: how will such changes shape the future of media?

In recent years, Kannada newspapers have seen a significant decline in readership. While circulation was around 17-18 lakhs in the 2000s, it has plummeted to similar levels post-COVID. Even a small price hike, such as 50 paise, immediately impacts readership.

Television media’s reliance on TRP-driven, chaotic models has led to a lack of transparency. Despite the option of subscription-based pay channels, people show reluctance to subscribe. Meanwhile, the lack of gatekeeping on digital platforms has led to the spread of substandard content.

To create quality content, print, television, and digital media must work together and bring about necessary changes to adapt to evolving audience preferences.

AI technology is bringing significant changes to the media industry. In newsrooms, only individuals with knowledge of English are needed to draft structured reports. AI tools like ChatGPT are being used to refine raw reports, reducing the workload in media operations. Mid-level journalists are becoming less relevant, and manpower in newsrooms has decreased by 40%. Editors are now primarily required for making high-level decisions. While these changes may not immediately impact Kannada media, there is a possibility that in the future, such technologies will evolve to work efficiently in Kannada as well.

The session concluded with a question-and-answer segment, where attendees discussed various aspects of the future of media, AI’s impact, and the changing landscape of literature and journalism.