Bharat on My Platter

Audi 3 – Session 2 : 2.15 pm

‘It’s the hand that makes magic’-Chef Komal Prabhu. The fourth session of the Mangaluru LIT Fest began with the moderator Ms Kavita Nagasampige Introducing the panelists of the discussion Ms Laxmi Shenoy, Chef Komal Prabhu, and Millet Ram Babu. The topic of discussion was ‘Bharat on My Platter’.

Chef Komal Prabhu spoke on how the traditional way of cooking has changed with the change in generation. The traditional way of cooking was directly on fire then it shifted to gas stoves and now it has become electric. It has made the food unhealthy.

Ms Komal says that people nowadays crave for traditional food. She further says that people try new food for a certain time but will eventually come back to traditional food. She says that every Chef plays with the flavour and that’s what they train their chefs to do.

Millet Ram Babu shares his insights and says that the traditional way of cooking in India is more of a physical activity rather than just a daily chore. Food is directly connected to mother earth. He says that when he enters the kitchen he feels as if he’s Bhrama-the creator. He further says that we must help our farmers by giving a good amount for the crops that they produce.

Laxmi Shenoy says that the Global effect on the india food has had a huge effect. She says that even though there are many modern food restaurant but the essence of the traditional food will never lose it’s importance. Ms Laxmi says that food in the modern world is not only for the belly but for all our senses. Along with being tasty the food has to even be appealing to look at. She says packaging traditional food in modern ways is the way forward. She says that you can’t have a closed mindset, we need all cultures in the modernization of food. The session concluded with a couple of audience giving their opinion on the modernization of food.

ಹರಟೆ ಕಟ್ಟೆಯಲ್ಲಿ – ಭಾರತ ನನ್ನ ತಟ್ಟೆಯಲ್ಲಿ ಆಹಾರ ಆಸಕ್ತರಗಾಗಿಯೇ ನಡೆದ ಈ ವಿಚಾರಗೋಷ್ಠಿಯಲ್ಲಿ ಶೆಫ್ ಕೋಮಲ್ ಪ್ರಭು, ಮಿಲೆಟ್ ರಾಮ್ ಬಾಬು, ಮತ್ತು ಆಹಾರ ಬ್ಲಾಗರ್ ಲಕ್ಷ್ಮಿ ಶೆಣೈ ಭಾಗವಹಿಸಿದರು.

ಕಾರ್ಯಾಗಾರದಲ್ಲಿ ಮಾತನಾಡಿದ ಕೋಮಲ್ ಪ್ರಭು ಪಾರಂಪರಿಕ ಶೈಲಿಯ ಅಡುಗೆ ಪದ್ಧತಿ ಎಂದಿಗೂ ಆಧುನಿಕತೆಯ ಕಾರಣ ಹೇಳಿ ಮರೆಯಾಗಿ ಹೋಗುವುದಿಲ್ಲ. ಜನಗಳು ಎಷ್ಟೇ ಬದಲಾದರೂ ತಮ್ಮ ನಿಜವಾದ ರುಚಿಯನ್ನು ಎಂದಿಗೂ ಮರೆಯುವುದಿಲ್ಲ. ಹೀಗಾಗಿ ನಾವು ಆಹಾರವನ್ನು ತಯಾರಿಸುವಾಗಲೂ ಅಷ್ಟೇ ಮಸಾಲೆಗಳೊಂದಿಗೆ, ಆಹಾರ ಪದಾರ್ಥಗಳೊಂದಿಗೆ ಆಟವಾಡುತ್ತಾ ಮಂಗಳೂರಿನ ಆಹಾರ ಶ್ರೀಮಂತಿಕೆಯನ್ನು ತೋರಿಸುತ್ತೇವೆ. ನಾವೇ ವಿದೇಶಿ ಆಹಾರವನ್ನು ಆಸ್ವಾದಿದುವುದಷ್ಟೆ ಅಲ್ಲದೆ, ನಮ್ಮ ಆಹಾರಕ್ಕೂ ಜಾಗತಿಕ ಮನ್ನಣೆ ದೊರಕುವಂತೆ ಮಾಡಬೇಕು.

ಭಾರತೀಯ ಅಡುಗೆಮನೆಗಳು ನಮ್ಮಲ್ಲಿ ಔಷಧಾಲಯ ಇದ್ದಂತೆ. ನಮ್ಮ ಆಹಾರ ಪದಾರ್ಥಗಳೇ ನಮ್ಮಿಂದ ಒಂದಿಷ್ಟು ವ್ಯಾಯಾಮವನ್ನು ಬಯಸುತ್ತದೆ. ಅಡುಗೆ ಮಾಡುವುದಂದ್ರೆ ದೇಹಕ್ಕಾಗಿ ಔಷಧವನ್ನು ತಯಾರಿಸಿದಂತೆ. ನಮ್ಮ ರೀತಿಗಳು ಬದಲಾಗಬಹುದು, ಆದ್ರೆ ಆಹಾರ ಅಸ್ಮಿತೆ ಬದಲಾಗಬಾರದು. ಭಾರತಕ್ಕೆ ವರ್ಷದ 365 ದಿನವೂ ಸೂರ್ಯನ ಬೆಳಕು ಪಡೆಯುವ ಭಾಗ್ಯವಿದೆ. ಹೀಗಾಗಿ ನಮ್ಮ ಬಹಳಷ್ಟು ಭೂಪ್ರದೇಶ ಫಲವತ್ತಾಗಿದೆ ಎಂದು ರಾಮ್ ಪ್ರಭು ಹೇಳಿದರು.

ಲಕ್ಷ್ಮಿ ಶೆಣೈ ಮಾತನಾಡಿ ಜಾಗತೀಕರಣದ ಫಲವಾಗಿ ನಾವು ಪ್ರತಿ ಹೊತ್ತು ಸ್ವೀಕರಿಸುವ ಆಹಾರಗಳು ಬದಲಾಗುತ್ತಿದೆ. ಹೀಗಿದ್ದರೂ ಪ್ರಾದೇಶಿಕ ಆಹಾರಗಳಿಗೆ ಡಿಮ್ಯಾಂಡ್ ಎಂದಿಗೂ ಕಡಿಮೆಯಾಗಿಲ್ಲ, ಅದು ಖಂಡಿತವಾಗಿಯೂ ಮುಂದುವರಿಯುತ್ತದೆ. ಯಾವುದೇ ಪ್ರದೇಶದ ಆಹಾರಕ್ರಮವನ್ನು ದೂಷಿಸದೆ ಕಾಲದೊಂದಿಗೆ ಬದಲಾಗುವುದನ್ನು ಕಲಿಯಬೇಕಿದೆ ಎಂದು ತಮ್ಮ ವಿಚಾರ ಮಂಡಿಸಿದರು. ಕವಿತಾ ನಾಗಸಂಪಿಗೆ ನಿರ್ವಹಿಸಿದರು.