Content 2.0 – Future of Digital Discourse

Audi 1 – Session 3 : 2.15 pm

‘Content 2.0 – Future of Digital Discourse’, the topic for the third session of the Mangaluru LIT Fest organized by Barath Foundation in collaboration with Mythic Society. The session was moderated by Mr Sharan Shetty. The panelists for session were podcasters Kushal Mehra, Abhijit Chavda, Vinamre Kasanaa.

The session started with Mr Kushal Mehra quoting Sachin Dallbagh ‘everybody is podcasting but noone is podlistening’, the panelists giving their opinion on the misconception of the people that podcasters and mainstream journalism are the same setup. Mr Vinamre Kasanaa spoke about how anyone who talks about religion or the army can get thousands of subscribes withing a couple of months. He says that content creation has become a business for many where as mainstream journalism is more about passion.

Mr Kushal Mehra says that content creators in India are the young people and that the creators must be allowed to talk about anything and have the freedom to talk about any topic. He says that creators on youtube must be ethical and people must not blindly talk about anything that can hurt the sentiments of any individuals.

Mr Abhijit Chavda gives his insights by saying that podcasting is a big industry and the quality is usually compromised. He says that news is going to the youth on podcasting where as mainstream media is stuck in a loop and the gap was filled by the youngsters on podcasts. He concluded by saying content creation has become democratic.

The session ended with a Q and A session with the panelists giving the audience their opinion on the topic.

ಡಿಜಿಟಲ್ ಮಾಹಿತಿ ಹರಡುವಿಕೆಯ ಭವಿಷ್ಯ ಎಂಬ ಶೀರ್ಷಿಕೆಯಲ್ಲಿ ಶರಣ್ ಶೆಟ್ಟಿಯವರು ನಡೆಸಿಕೊಟ್ಟ ಈ ವಿಚಾರಗೋಷ್ಠಿಯಲ್ಲಿ 3 ಪ್ರಮುಖ ಪಾಡ್ಕಾಸ್ಟರ್­ಗಳಾದ ಕುಶಾಲ್ ಮೆಹ್ರಾ, ಅಭಿಜಿತ್ ಚಾವ್ಡಾ, ಮತ್ತು ವಿನಮ್ರೆ ಕಸನಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮೂವರೂ ಯೂಟ್ಯೂಬ್‌ನಲ್ಲಿ ಬಹಳ ಸಕ್ರಿಯ ಮತ್ತು ಖ್ಯಾತರಾಗಿದ್ದಾರೆ.

ಕುಶಾಲ್ ಮೆಹ್ರಾ ಮಾತನಾಡುತ್ತಾ ಮಾಧ್ಯಮಗಳಲ್ಲಿ 8-11 pm ಫಾರ್ಮುಲಾ ಬಹಳ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ, ಮತ್ತದನ್ನು ಜನರೂ ಹೆಚ್ಚಾಗಿ ನೋಡುತ್ತಾರೆ, ಇಷ್ಟ ಪಡುತ್ತಾರೆ, ನಂಬುತ್ತಾರೆ. ರಾಜಕಾರಣಿಗಳು ಮಾತನಾಡುವ ಆಸಕ್ತಿಯುಳ್ಳವರಲ್ಲ. ಬದಲಾಗಿ ತಮಗೆ ಬೇಕಿದ್ದದ್ದನ್ನೇ ಹೆಚ್ಚೆಚ್ಚು ಮಾತನಾಡಲು ಬಯಸುವವರು. ಇದಕ್ಕಾಗಿಯೇ ಅವರು ಮಾಧ್ಯಮಗಳನ್ನು ನೆಚ್ಚುತ್ತಾರೆ. ಹೀಗಿರುವಾಗ ಮಾಧ್ಯಮಗಳೂ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾವೆ. ಯೂಟ್ಯೂಬ್ ನಲ್ಲೂ ಅಷ್ಟೇ, ಎಲ್ಲರೂ ವ್ಯೂಸ್­ಗಳ ಹಿಂದೆಯೇ ಓದುತ್ತಿದ್ದರೆ. ನೈತಿಕವಲ್ಲದ ವಿಚಾರಗಳೇ ಅದರಲ್ಲಿ ಹೆಚ್ಚು ಪ್ರಭಾವಶಾಲಿಯಾಗಿ ಜನರನ್ನ ತಲುಪುತ್ತದೆ ಎಂದರು.

ನಂತರ ಮಾತನಾಡಿದ ಅಭಿಜಿತ್ ಚಾವ್ಡಾ ಕಂಟೆಂಟ್ ತಯಾರಿಸುವಾಗ ನಮ್ಮ ಆಸಕ್ತಿಯೇನು, ಆ ಕಂಟೆಂಟ್­ನ ಉದ್ದೇಶವೇನೆಂದು ನಾವು ಮೊದಲು ಖಚಿತಪಡಿಸಬೇಕು. ನೈತಿಕತೆಗೆ ಬಹಳ ಒತ್ತು ಕೊಡಬೇಕು. ಪಾಡ್ಕಾಸ್ಟಿಂಗ್ ಬಹಳ ವಿಶಾಲ ಉದ್ಯಮವಾಗಿದ್ದರೂ, ಬಹಳ ಜನ ಪಾಡ್ಕಾಸ್ಟರ್ ಗಳು ಹುಟ್ಟಿಕೊಂಡಾಗ ಗುಣಮಟ್ಟದಲ್ಲಿ ಮರಿಚಿಕೆಯಾಗುತ್ತದೆ. ಯುವಕರು ವಾರ್ತೆಗಳನ್ನು ಬೋರಿಂಗ್ ಎನ್ನುತ್ತಾರೆ. ಮಾಧ್ಯಮಗಲು ಈ ಸನ್ನಿವೇಶವನ್ನು ಹುಟ್ಟುಹಾಕಿವೆ. ಈ ಖಾಲಿತನವನ್ನು  ಯೂಟ್ಯೂಬರ್­ಗಳು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಕಂಟೆಂಟ್ ತುಂಬಾ democratic ಆಗಿದೆ.

ಪಾಡ್ಕಾಸ್ಟರ್­ಗಳು ಬೇಗ ವ್ಯೂಸ್ ಪಡೆಯುವ ಉದ್ದೇಶದಿಂದ ಹಿಂದೂ ದೇವತೆಗಳು, ಆಯುರ್ವೇದ, ಜ್ಯೋತಿಷ್ಯ, ಭಾರತೀಯ ಸೇನೆ, ಇತ್ಯಾದಿ ವಿಷಯಗಳನ್ನೇ ಆಯ್ಕೆ ಮಾಡುತ್ತಾರೆ. ಅದೇ ಹಿಟ್ ಕೂಡ ಆಗುತ್ತೆ. ಎಲ್ಲರೂ ಇದೇ ಥರ ಮಾಡಿದಾಗ ವಿಶೇ?ವೇನೂ ಉಳಿಯುವುದಿಲ್ಲ. ಆಸಕ್ತಿಯನ್ನು ಆಧರಿಸಿ ಕಂಟೆಂಟ್ ಮಾಡಲು ಪ್ರಾರಂಭಿಸಿ ನಂತರ ಪಾಡ್ಕಾಸ್ಟರ್ ಗಳು ಹೆಚ್ಚು ಲಾಭದ ಉದ್ದೇಶದಿಂದ ಕಂಟೆಂಟ್ ರೀತಿಯನ್ನು ಬದಲಾಯಿಸುತ್ತಾರೆ. AI ಯಾವ ಕಾರಣಕ್ಕೂ ಜನರ ಕೆಲಸವನ್ನು ಬದಲಾಯಿಸಲು ಸಾಧ್ಯವಿಲ್ಲ. ನಮ್ಮ ಬುದ್ಧಿಮತ್ತೆಗೆ ತನ್ನದೇ ಆದ ಗೌರವವಿದೆ ಎಂದು ವಿನಮ್ರೆ ಕಸನಾ ಹೇಳಿದರು