ಮಂಗಳೂರು ಲಿಟ್ಫೆಸ್ಟ್ 2023 ರಲ್ಲಿ Audi 2 ರಲ್ಲಿ ಡಾ. ಗಜಾನನ ಶರ್ಮ, ವಿದ್ವಾನ್ ಜಗದೀಶ ಶರ್ಮ ಸಂಪ ಮತ್ತು ಡಾ. ವಿಜಯ ಸರಸ್ವತಿ ಬಿ. ಇವರು ಪುರಾಣ ಕಥೆ ಹೊಸ ರೂಪ ಹೊಸ ದೃಷ್ಟಿ ಕುರಿತು ಗೋಷ್ಠಿ ನಡೆಸಿದರು.
ವಿಜಯ ಸರಸ್ವತಿ ಅವರು ಮಾತನಾಡಿ, ಇದು ಮುಖ್ಯವಾಗಿ ಕಾದಂಬರಿ ಆಧಾರಿತ ಸಂವಾದ. ಲೇಖಕರ ಒಂದೊಂದು ಕಾದಂಬರಿಗಳನ್ನು ಪರಿಗಣಿಸಿದ್ದೇವೆ. ಮೊದಲನೆಯದಾಗಿ, ಗಜಾನನ ಶರ್ಮ ಅವರ ಚೆನ್ನಭೈರಾದೇವಿ ಕಾದಂಬರಿ. ಚರಿತ್ರೆಯ ಪುಟಗಳಲ್ಲಿ ದಾಖಲಾಗದ ಚೆನ್ನಭೈರಾದೇವಿಯನ್ನು ಪರಿಚಯಿಸಿದವರು. 54 ವರ್ಷ ರಾಣಿಯಾಗಿದ್ದರೂ ಆತ್ಮೀಯರಿಗೆ ಆಕೆ ಸಣ್ಣಮ್ಮ. ನಂಬುಗೆಯಿಂದ ಬಂದಂಥವರಿಗೆ ಅಭಯ ಕೊಟ್ಟವಳು. ಆದ್ರೆ ಚರಿತ್ರೆಯ ಪುಟಗಳಲ್ಲಿ ದಾಖಲಾಗಿಲ್ಲ. ಕಳಂಕಿನಿ ಅನ್ನುವ ಕಾರಣಕ್ಕೊ? ಆಕೆ ಅಕಳಂಕಿನಿ ಎಂದು ಚಿಂತನೆಮಾಡಿ ಆಕೆಯ ಜೀವನವನ್ನು ಅನಾವರಣಗೊಳಿಸಿದ್ದು ಈ ಕಾದಂಬರಿ. ಇನ್ನೊಂದು ಕಾದಂಬರಿ, ಜಗದೀಶ ಶರ್ಮ ಅವರ ವಿದುರ. ಮಹಾಭಾರತದ ಕಥಾನಾಯಕ ಅಂತ ಎಲ್ಲೂ ಬಿಂಬಿಸಿರದ ವಿದುರ, ವಾಸ್ತವವಾಗಿ ನಾಯಕನೇ. ರಾಜನ ಎಲ್ಲಾ ಅರ್ಹತೆಗಳಿದ್ದೂ ರಾಜನಾಗದ ವಿದುರ.
ತಮ್ಮ ಕಾದಂಬರಿಯಲ್ಲಿ ಅನೇಕ ಸವಾಲುಗಳು, ಸಾಧ್ಯತೆಗಳನ್ನು ತೆರೆದಿಟ್ಟಿದ್ದೀರಿ. ಯಾಕೆ ಈ ಕಥೆಯನ್ನು ಬರೆಯುವ ಯೋಚನೆ ಬಂತು ಎಂದು ಡಾ. ಗಜಾನನ ಶರ್ಮ ಅವರನ್ನು ಕೇಳಿದರು.
ಡಾ. ಗಜಾನನ ಶರ್ಮ ಅವರು ಮಾತನಾಡಿ, ಚೆನ್ನಭೈರಾದೇವಿ ಸುದೀರ್ಘವಾಗಿ ರಾಜ್ಯವನ್ನಾಳಿದವಳು. ಅಂಥ ರಾಣಿಯ ಚರಿತ್ರೆ ಯಾಕೆ ಇತಿಹಾಸದಲ್ಲಿ ದಾಖಲಾಗಿಲ್ಲ ಎಂಬುದು ಆಶ್ಚರ್ಯ. ಇವತ್ತಿಗೂ ರಸ್ತೆಯಿರದ ಊರಿನಲ್ಲಿ ಆ ಕಾಲದಲ್ಲಿ ಹೆದ್ದಾರಿಯಿತ್ತು. ಸಾವಿರಾರು ಬಾವಿಗಳು, ಭಗ್ನಾವಶೇಷಗಳು ಇವೆ. ಆದ್ರೆ ಆಕೆಯ ಚರಿತ್ರೆ ದಾಖಲಾಗಿಲ್ಲ. ಆಕೆಯ ವಿರೋಧಿಗಳು ಮಾತ್ರ ಆಕೆಯ ಕುರಿತಾಗಿ ಕಳಂಕಿತ ಮಾತುಗಳನ್ನಾಡಿದ್ದು ಹೊರತು ಬೇರೆ ಯಾರೂ ಆ ರೀತಿ ಬರೆದಿಲ್ಲ. ಹಾಗಾಗಿ ನನ್ನ ಮಿತಿಗೆ ಒಳಪಟ್ಟು ಸಂಶೋಧನೆ ಮಾಡಿ ಕಾದಂಬರಿ ಬರೆದೆ ಎಂದರು.
ಮಹಾಭಾರತದ ನಾಯಕನಾಗುವ ಅರ್ಹತೆಯುಳ್ಳ ವಿದುರ. ಅಂಥ ವಿದುರನಿಗೆ ನೀವು ಕೊಟ್ಟ ಹೊಸರೂಪವನ್ನು ಹೇಗೆ ನಿರೂಪಿಸ್ತೀರಿ ? ಎಂದು ಕೇಳಿದ ಪ್ರಶ್ನೆಗೆ ವಿದ್ವಾನ್ ಜಗದೀಶ ಶರ್ಮ ಅವರು ಮಾತನಾಡಿ, ಹಳೆಯದ್ದು ಆದ್ರೆ ಇಂದಿನದ್ದು ಅಂತ ಎನಿಸುವ ಯೋಗ್ಯತೆ ಇರುವುದು ಇತಿಹಾಸ. ಇತಿಹಾಸ ಎಲ್ಲವೂ ಪುರಾಣವಾಗೋದಿಲ್ಲ. ಆದ್ರೆ ಪುರಾಣವೆಲ್ಲ ಇತಿಹಾಸ. ಅದು ಅವತ್ತಿನ ಕಾಲಕ್ಕೆ ಮಅತ್ರ ಸಲ್ಲುತ್ತೆ ಅಂದರೆ ಅದು ಪುರಾಣ. ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ಬೇರೆ, ಕಾರ್ಯ ನಿರ್ವಹಿಸುವುದು ಬೇರೆ. ಯಾರಾದ್ರೂ ಒಬ್ಬನನ್ನು ಆಸ್ಥಾನದಲ್ಇ ಕೂರಿಸುವುದು ಅಗತ್ಯ. ಅವರನ್ನು ರೂಪಿಸಿದವರನ್ನು ನಾವು ಪರಿಗಣಿಸ್ಬೇಕು. ವಿದುರ ರೂಪಿಸಿದ್ದು ಕೇವಲ ಒಬ್ಬ ರಾಜನನ್ನು ರೂಪಿಸಿದ್ದಲ್ಲ. ಭೀಷ್ಮ ತನ್ನ ಜೊತೆಗೆ ಇಟ್ಟುಕೊಂಡಿದ್ದು ವಿದುರನನ್ನು, ಪಾಂಡುವಿಗೆ ಸಲಹೆ ವಿದುರನದ್ದು, ದೃತರಾಷ್ಟ್ರನಿಗೆ, ಯುಧಿಷ್ಟಿರನಿಗೂ ವಿದುರನದ್ದೇ ಸಲಹೆ. ಅಧಿಕಾರಕ್ಕಾಗಿ ಹೋರಾಟ ನಡೆದ್ದರೂ, ಅಧಿಕಾರದ ಹಿಂದಿದ್ದ ಶಕ್ತಿ ಒಬ್ಬನೇ, ವಿದುರ. ಅಂಥ ಶಕ್ತಿ, ಇವತ್ತಿಗೆ ಬೇಕೇ ಬೇಕು ಅಂತ ಅನ್ನಿಸಿತು. ಹಾಗೆ ನೋಡಿದಾಗ, ವ್ಯಾಸರು ವಿದುರನ ಬಗ್ಗೆ ಏನು ಹೇಳಿದ್ದಾರೆಯೋ ಅದನ್ನೇ ನಾನು ಹೇಳಿದ್ದಾನೆ. ಬಟ್ಟೆಯ ಅಸ್ತಿತ್ವ ಇರುವುದು ನೂಲಿನಲ್ಲಿ ಎಂದರು.
ಎರಡೂ ಕಾದಂಬರಿಗಳು ಓದಿದವನಿಗೆ ಒಂದಿಷ್ಟು ಪ್ರಶ್ನೆಗಳು ಮೂಡ್ತವೆ. ಎರಡೂ ಕಾದಂಬರಿಗಳ ಪಾತ್ರಗಳು ತುಂಬಾ ಕಾಡುತ್ತವೆ. ಚೆನ್ನಭೈರಾದೇವಿ ಸಾಮಾನ್ಯ ಮಹಿಳೆಯ ಹಾಗೆ ತನ್ನಿಂದ ಏನಾದ್ರೂ ತಪ್ಪಾಗಿದೆಯೋ ಅಂತ ಒಂದು ರಾಜ್ಯವನ್ನು ಅತ್ಯಂತ ಚೆನ್ನಾಗಿ ನಿಭಾಯಿಸಬಲ್ಲ ಸಾಮರ್ಥ್ಯವಿದ್ದ ಚೆನ್ನಭೈರಾದೇವಿ. ವಿದುರ ಕಾದಂಬರಿಯೂ ಹಾಗೆ. ಪುರಾಣಗಳು ಒಂದರ್ಥದಲ್ಲಿ ನಾವು ಒಪ್ಪಿಕೊಂಡಂಥ ಸತ್ಯಗಳು. ಅವುಗಳಿಗೆ ಹೊಸದೃಷ್ಟಿ ಕೊಡುವಾಗ ಮೂಲ ಆಶಯಕ್ಕೆ ಧಕ್ಕೆಯಾಗ್ಬಾರ್ದು.
ನಾನು ಏನು ಹೇಳ್ತೇನೆ ಅನ್ನೂದಯ ಅದು ನನ್ನ ಯೋಚನೆ, ನೀವು ಏನು ಒಳಗೆ ತಗೊಳ್ತೀರೊ ಅದು ನಿಮ್ಮ ಯೋಚನೆ. ಹೊಸ ದೃಷ್ಟಿ ನಿಮ್ಮ ಪ್ರಕಾರ ಹೇಗೆ ಎಂದು ಡಾ. ವಿಜಯ ಸರಸ್ವತಿ ಅವರು ಕೇಳಿದರು.
ಡಾ. ಗಜಾನನ ಶರ್ಮ ಅವರು ಮಾತನಾಡಿ, ಕುವೆಂಪು ಕವನ. ರಾಜ ಮಹಾರಾಜರ ದೃಷ್ಟಿಯಿಂದ ಇತಿಹಾಸವನ್ನು ನೋಡುವ ಕಾಲ ಹೋಗಿದೆ. ಜನಸಾಮಾನ್ಯರ ದೃಷ್ಟಿಯಿಂದ ನೋಡುವ ಕಾಲ ಇದು. ನಾವು ನಮ್ಮ ಜನರ ದೃಷ್ಟಿಯಲ್ಲಿ ರಾಣಿ ಹೇಗೆ ಬಿಂಬಿತಳಾಗಿದ್ದಳು ಅನ್ನೋ ದೃಷ್ಟಿಯಲ್ಲಿ ಕಾದಂಬರಿ ಬರೆದೆ. ಎಲ್ಲರನ್ನೂ ಒಳಗೊಂಡು ಪ್ರಭುತ್ವ ಮಾಡಿದವಳು ಆಕೆ. ಒಂದು ಸತ್ಯವನ್ನು ಒಂದು ದೃಷ್ಟಿಕೋನದಿಂಡ ನೋಡಿದ್ರೆ ಸಾಲದು. ಎಲ್ಲಾ ದೃಷ್ಟಿಯಿಂದಲೂ ನೋಡ್ಬೇಕು. ಇಡೀ ರಾಜ್ಯದಲ್ಲಿ ರಸ್ತೆಗಳನ್ನು ಮಾಡಿದ್ದಳು, ಎಲ್ಲಾ ಸಮಾಜದವರ ಸಂಸ್ಕೃತಿಗೆ ಬೆಲೆ ಕೊಟ್ಳು. ಭಾರತೀಯರು ಇತಿಹಾಸವನ್ನು ಪುರಾಣವಾಗಿ ನೋಡುವವರು ಭಾರತೀಯರು. ಅಂಥದ್ದನ್ನು ಹೇಳ್ಬೇಕೆನ್ನುವ ಕಾರಣದಿಂಡ ಈ ಕಥನವನ್ನು ಕಟ್ಟಿದ್ದು. ಅದನ್ನು ಜನರು ಸ್ವೀಕರಿಸಿದ ರೀತಿ ಪ್ರಶಂಸಾರ್ಹ. ದಾಲ್ಚಿನ್ನಿಗೆ ಮಾರ್ಕೆಟ್ ಕೊಟ್ಟವಳು. ಕೆಂಪಕ್ಕಿಗೆ ಹೆಚ್ಚಿನ ಬೆಲೆ ತಂದುಕೊಟ್ಟವಳು. ವ್ಯಾಲ್ಯೂ ಆಡಿಂಗ್.
ತಮಗೆ ವಿದುರನನ್ನು ಈ ಕಾದಂಬರಿ ಮೂಲಕ ಯಾವ ರೀತಿಯಲ್ಲಿ ಹೊಸ ದೃಷ್ಟಿಯಲ್ಲಿ ನೋಡಲು ಸಾಧ್ಯವಾಯ್ತು ಎಂಬುದನ್ನು ವಿವರಿಸಿದ ವಿದ್ವಾನ್ ಜಗದೀಶ್ ಶರ್ಮ ಅವರು, ವಿದುರನ ಕುರಿತು ಸಹೃದಯ ಎಂಬ ಭಾವ. ಬರೆದವನ ಸಮಾನವಾದ ಭಾವ ಓಡುವವನಲ್ಲಿ ಇದ್ರೆ ಅದು ಸಹೃದಯ. ವ್ಯಾಸರು, ಕಾಳಿದಾಸರು ಬರೆದದ್ದನ್ನು ಅದೇ ರೀತಿ ನೋಡಲು ಇವತ್ತಿನವರು ತಯಾರಿಲ್ಲ. ನನಗೆ ವಿದುರರನನ್ನು ಆ ದೃಷ್ಟಿಯಲ್ಲಿ ನೋಡ್ಬೇಕಾಗಿತ್ತು. ಸುಳ್ಳಿಗೆ ಹೆಚ್ಚಿನ ವೇದಿಕೆ ಸಿಗುತ್ತೆ, ಆದ್ರೆ ಸತ್ಯ ಕೊನೆಗೆ ಗೆಲ್ಲುತ್ತೆ. ಎಲ್ಲಿ ಸತ್ಯದ ನಾಶ ನಿರಂತರವಾಗಿ ನಡೆಯುತ್ತಿತ್ತೋ ಅಲ್ಲಿ ವಿದುರ ಸತ್ಯವನ್ನು ಕಾಯುತ್ತಿದ್ದ. ಅಂಥ ವಿದುರ ನನಗೆ ಕಂಡ ಎಂದುತ್ತರಿಸಿದರು.
ವಿಜಯ ಅವರು ಮಾತನಾಡಿ, ಯಾವತ್ತೋ ನೆಟ್ಟ ಬೀಜ, ಇಟ್ಟವನಿಗೆ ಮರೆತರೂ, ಬೀಜ ಮೊಳಕೆಯೊಡೆಯೋದನ್ನು ಮರೆಯೋದಿಲ್ಲ. ಈ ಎರಡೂ ಕಾದಂಬರಿಗಳು, ಓದುಗನಿಗೂ ಹೊಸ ರೂಪ, ಕಲ್ಪನೆ ಕೊಡ್ತವೆ.
ನಮ್ಮ ಪುರಾಣ ಕಲ್ಪನೆಗಳಲ್ಲಿ ಪ್ರತಿ ಶಬ್ದಕ್ಕೂ ಅನೇಕ ಅರ್ಥಗಳಲ್ಲಿ ತೆರೆದುಕೊಳ್ತದೆ. ನಾನು ಓದುವಾಗ ನನಗೆ ಬೇರೆ ರೀತಿ ಕಂದ್ರೆ ಅದು ನನ್ನ ದೋಷವೋ ಅಥವಾ ಪುಸ್ತಕದ್ದೋ? ಕವಿ ಒಂದು ಶಬ್ದದಿಂದ ಏನು ಹೇಳಿದ್ದಾನೋ ಅದನ್ನು ಓದು ಅದೇ ರೀತಿ ಸ್ವೀಕರಿಸಿದ್ರೆ ಅದು ಸಹೃದಯ. ಕೃತಿಯ ಶಬ್ದ ಎಷ್ಟು ಹೇಳುತ್ತೋ ಅಷ್ಟು ಮಾತ್ರ ತಿಳಿಯುವುದಲ್ಲ. ವಿಶಾಲ ಅರ್ಥಗಳನ್ನು ತಿಳಿಬೇಕು. ವಿಸ್ತಾರವಾಗಬೇಕು.
ಸಂಶೋಧನಾ ಹಿನ್ನೆಲೆಯಲ್ಲಿ ಇಂದಿನ ಕಾಲಘಟ್ಟದಲ್ಲಿ ಪುರಾಣಗಳನ್ನು ಯಾವ ನೆಲೆಯಲ್ಲಿ ಕಟ್ಕೊಳ್ಭುದು? ಎಂಬ ಪ್ರಶ್ನೆಗೆ ಜಗದೀಶ್ ಶರ್ಮ ಅವರು, ವಿದುರನೂ ಸೂತ. ಪುರಾಣ ಎಂಬುದು ಕಲ್ಪಿತ ಅಲ್ಲ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಮೊದ್ಲು ಹರಪ್ಪ ಮೊಹೆಂಜಾದಾರೋ ಮಾತ್ರ ಅಗೆದರು. ಈಗ ಎಲ್ಲಾ ಕಡೇ ನೋಡ್ತಿದ್ದಾರೆ. ಸಂಶೋಧನೆಗಳು ನಡೆದರೆ, ಪಠ್ಯಪುಸ್ತಕಗಳಲ್ಲಿ ನಮ್ಮ ಪುರಾಣವನ್ನು ಕಾಣುವ ಸಮಯ ಬಂದೀತು ಎಂದರು.