#MlrLitFest
  • mlrlitfest@gmail.com

ಮಂಗಳೂರು ಲಿಟ್ ಫೆಸ್ಟ್­ನಲ್ಲಿ ಮೋದಿನಾಮಿಕ್ಸ್

Day 1 – 03-11-2018 at 11.30 am @ Manthan : Modinomics – Reactionary or Revolutionary

ದ ಐಡಿಯಾ ಆಫ್ ಭಾರತ್ ಪರಿಕಲ್ಪನೆಯೊಂದಿಗೆ ಇಂದು ಪ್ರಾರಂಭವಾದ ಎರಡು ದಿನಗಳ ರಾಷ್ಟ್ರಮಟ್ಟದ ಮಂಗಳೂರು ಲಿಟ್ ಫೆಸ್ಟ್ ಸಾಹಿತ್ಯ ಉತ್ಸವದ ಅಂಗವಾಗಿ ನವೆಂಬರ್ 3 ರಂದು ‘ಮೋದಿನಾಮಿಕ್ಸ್-ರಿಯಾಕ್ಷನರಿ ಆರ್ ರೆವಲ್ಯೂಷನರಿ’ ಎನ್ನುವ ವಿಚಾರವಾಗಿ ಚಿಂತನ ಮಂಥನ ಕಾರ್ಯಕ್ರಮವು ಡಾ. ಟಿ.ಎಂ.ಎ.ಪೈ ಇಂಟರ್­ನ್ಯಾಷನಲ್ ಕನ್ವೆನ್ಷನ್ ಹಾಲ್­ನ ಮಂಥನ ಸಭಾಂಗಣದಲ್ಲಿ ಜರುಗಿತು.

ಜಿಎಸ್­ಟಿ ನಂತರದ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳೆಲ್ಲದರ ಬಗ್ಗೆ ವಿಸ್ತೃತ ಚರ್ಚೆಗೆ ಅನುವು ಮಾಡಿಕೊಟ್ಟ ಈ ಕಾರ್ಯಕ್ರಮ ಸಭಿಕರ ಸಾಕಷ್ಟು ಅನುಮಾನಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಯಿತು.

ಐಎಎಸ್ ಅಧಿಕಾರಿಗಳ ಮಕ್ಕಳು ಸರ್ಕಾರ ಶಾಲೆಗಳಿಗೆ ದಾಖಲಾಗುವುದು, ಸರ್ಕಾರೀ ಅಧಿಕಾರಿಗಳೆಲ್ಲರೂ ಸರ್ಕಾರ ಆಸ್ಪತ್ರೆಗಳಿಗೆ ದಾಖಲಾಗುವುದು ಮತ್ತು ಸರ್ಕಾರೀ ಬಸ್ಸುಗಳಲ್ಲೇ ಪ್ರಯಾಣಿಸುವುದು ಖಡ್ಡಾಯವಾದರೆ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತವೆ. ಅಧಿಕಾರಶಾಹಿಯನ್ನು ಹತೋಟಿಯಲ್ಲಿಡದೇ ಯಾವುದೇ ಸಮಸ್ಯೆಗಳೂ ಪರಿಹಾರ ಕಾಣಲಾರವು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಮೋದಿ ಪ್ರಧಾನಿಯಾದ ನಂತರವಷ್ಟೇ ದೇಶ ಬೆಳವಣಿಗೆ ಕಾಣುತ್ತಿದೆ ಎನ್ನುವುದು ತಪ್ಪಾಗುತ್ತದೆ. ಎಲ್ಲರ ಕಾಲದಲ್ಲಿಯೂ ಭಾರತ ಬೆಳವಣಿಗೆ ಕಾಣುತ್ತಿದೆ ಹಾಗೂ ಹಿಂದಿನ ಎಲ್ಲಾ ಪ್ರಧಾನಿಗಳೂ ಹೊಣೆಗಾರಿಕೆಯ ನಡುವೆಯೂ ನಿಂದಿತರಾಗಿದ್ದಾರೆ ಎನ್ನುವ ಅಭಿಪ್ರಾಯಗಳೂ ಅಲ್ಲಿ ವ್ಯಕ್ತವಾದವು.

ಎಂ. ಆರ್. ವೆಂಕಟೇಶ್ ಮತ್ತು ಗೌತಮ್ ಚಿಕರ್ಮನೆ ಅವರು ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಶ್ರೀ ವಿವೇಕ್ ಮಲ್ಯ ಅವರು ಕಾರ್ಯಕ್ರಮ ನಡೆಸಿಕೊಟ್ಟರು.