#MlrLitFest
  • mlrlitfest@gmail.com

ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ

Day 2 – 04-11-2018 at 2.15 pm @ Manthan : ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ

ರಾಷ್ಟ್ರೀಯತೆಗೆ ಒತ್ತು ಕೊಡುವಂತಹಾ ವಿಚಾರಗಳೇ ಹೆಚ್ಚಾಗಿ ಚರ್ಚೆಗೆ ಬಂದಿದ್ದ ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ರಾಷ್ಟ್ರ ವಿರೋಧೀ ಶಕ್ತಿಗಳ ಕಾರ್ಯತಂತ್ರಗಳ ಕುರಿತಾಗಿ ಸಾಕಷ್ಟು ಚಿಂತನ ಮಂಥನಗಳು ನಡೆದಿದ್ದವು.

ಲಿಟ್ ಫೆಸ್ಟ್­ನ ಎರಡನೆಯ ದಿನದ ಕಾರ್ಯಕ್ರಮಗಳ ಪಟ್ಟಿಯಲ್ಲಿದ್ದ “ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ” ಎನ್ನುವ ಸಂವಾದದಲ್ಲಿ, ದೇಶದ ಅತೀ ದೊಡ್ಡ ಬಹುಸಂಖ್ಯಾತ ಸಮುದಾಯವನ್ನು ಎದುರು ಹಾಕಿಕೊಂಡೂ ಭಾರತ ವಿರೋಧೀ ಶಕ್ತಿಗಳು, ಅದರಲ್ಲೂ ವಿಶೇಷವಾಗಿ ಕೆಲವು ನಿರ್ದಿಷ್ಟ ಭಾರತ ವಿರೋಧೀ ಮಾಧ್ಯಮಗಳು ಅದು ಹೇಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣಲು ಸಾಧ್ಯವಾಯಿತು ಎನ್ನುವ ಬಗ್ಗೆ ಗಂಭೀರ ಚಿಂತನೆಗಳು ನಡೆದವು.

ಅಂತಹಾ ಮಾಧ್ಯಮಗಳ ಕಾರ್ಯತಂತ್ರಗಳು ಹೇಗೆಲ್ಲಾ ಇರುತ್ತವೆ ಎನ್ನುವ ಬಗ್ಗೆಯೂ ಚರ್ಚೆಯಾಯಿತು. ಭಾರತ ಮಾತೆ, ವಂದೇ ಮಾತರಂ ಮುಂತಾದವುಗಳು ರಿಲಿಜಿಯಸ್ ನ್ಯಾಷನಲಿಸಂ ಎನ್ನುವಂತೆ ಬಿಂಬಿಸಿ ಭಾರತವನ್ನು ಕೇವಲ ಒಂದು ಭೂಭಾಗವಾಗಿಯಷ್ಟೇ ನೋಡುವ ಸಂಕುಚಿತ ಮನೋಭಾವನೆಯನ್ನು ಕೆಲವು ಮಾಧ್ಯಮಗಳ ಮೂಲಕ ಹೇಗೆ ಬೆಳೆಸಲಾಯಿತು ಎನ್ನುವ ಬಗ್ಗೆಯೂ ಬೆಳಕು ಚೆಲ್ಲಲಾಯಿತು.

ಇತ್ತೀಚಿನ ದಿನಗಳಲ್ಲಿ,ಅದರಲ್ಲೂ ಸಾಮಾಜಿಕ ಮಾಧ್ಯಮಗಳು ಹೆಚ್ಚಾಗಿ ಚಾಲ್ತಿಗೆ ಬಂದ ನಂತರ ದೇಶವಾಸಿಗಳಲ್ಲಿ ರಾಷ್ಟ್ರೀಯತೆಯ ಭಾವನೆಗಳು ಜಾಗೃತಗೊಳ್ಳುತ್ತಿರುವುದರ ಜೊತೆ ಜೊತೆಗೇ ನಿಜವಾದ ಶತ್ರುಗಳು ಯಾರು ಎನ್ನುವುದೂ ತಿಳಿಯತೊಡಗಿದೆ, ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾದವು. ಸಹನಾ ವಿಜಯಕುಮಾರ್ ಹಾಗೂ ಡಾ. ಅಜಕ್ಕಳ ಗಿರೀಶ್ ಭಟ್ ಅವರೊಂದಿಗೆ ರೋಹಿತ್ ಚಕ್ರತೀರ್ಥ ಅವರು ನಡೆಸಿದ ಆ ಸಂವಾದದಲ್ಲಿ ಇಂತಹಾ ಸಾಕಷ್ಟು ವಿಚಾರಗಳು ಚರ್ಚೆಗೆ ಬಂದವು.