Day 1 | Audi 2 – Session 3 : 4.00 pm
ಡಾ. ರವೀಶ ಪಡುಮಲೆ, ಯದುಪತಿ ಗೌಡ ಮತ್ತು ಡಾ. ವಸಂತ ಕುಮಾರ್ ಪೆರ್ಲ
Tulu will remain the language of tomorrow: Yadupathi Gowda
“The Tulu language possesses immense strength. In the coming days, the culture, the Daiva (spirit worship), and the divine traditions of this land will only grow and never face a setback,” said senior scholar Yadupathi Gowda.
Speaking at the session titled “Tulu Language, Folklore, Literature, and Culture: Yesterday, Today, and Tomorrow,” he noted, “There was once a time when students were punished for speaking Tulu in school. But today, Tulu can be studied as a subject in the school curriculum. Amidst today’s globalization and modernization, we must nurture our inner consciousness (Antahkarana) toward our roots.”




“The strength of Tulu Nadu’s soil, the power of its Daivas, its language, and its culture are known to the entire world. After the release of the movie Kantara, the number of people eager to learn about this region has increased. Even foreigners have come to admire Tulu Nadu. Historically, missionaries learned Tulu and even created dictionaries here. It is worth remembering that during the freedom struggle, speeches were delivered in Tulu to reach the masses,” he said.
“Tulu now has its own Academy and its own Wikipedia. Tuluvas never abandon their language, no matter where they go. For this reason, the Tulu language is immortal; it will always remain the language of tomorrow. However, there is still a lack of documented collections regarding the origins of the local rituals,” he added.
Scholar Dr. Raveesh Padumale remarked, “The Paaddanas (oral epics) of the Daivas constitute the oral literature of Tulu Nadu. For ages, elders have passed down the ideologies of the Tulu language to children. This is why Tulu has grown so extensively today.”
Dr. Vasanthkumar Perla participated as the moderator.
ತುಳು ಭಾಷೆ ನಾಳೆಯ ಭಾಷೆಯಾಗಿಯೇ ಉಳಿಯಲಿದೆ: ಯದುಪತಿ ಗೌಡ
ಮಂಗಳೂರು ಲಿಟ್ ಫೆಸ್ಟ್, ಮಂಗಳೂರು: ‘ತುಳು ಭಾಷೆಗೆ ಗಟ್ಟಿತನವಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಸಂಸ್ಕೃತಿ, ದೈವ, ದೇವಾರಾಧನೆ ಹೆಚ್ಚಾಗುವುದೇ ವಿನಃ ಎಂದಿಗೂ ಹಿನ್ನಡೆ ಉಂಟಾಗದು’ ಎಂದು ಹಿರಿಯ ವಿದ್ವಾಂಸ ಯದುಪತಿ ಗೌಡ ಹೇಳಿದರು.
‘ತುಳುಭಾಷೆ, ಜನಪದ, ಸಾಹಿತ್ಯ ಹಾಗೂ ಸಂಸ್ಕೃತಿ: ನಿನ್ನೆ-ಇಂದು-ನಾಳೆ’ ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತುಳು ಭಾಷೆಯನ್ನು ಶಾಲೆಯಲ್ಲಿ ಮಾತನಾಡಿದರೆ ಶಿಕ್ಷೆ ಕೊಡುವ ಕಾಲವೊಂದಿತ್ತು. ಆದರೆ ಇಂದು ಶಾಲೆಗಳಲ್ಲಿ ಪಠ್ಯವಾಗಿ ತುಳು ಭಾಷೆಯನ್ನು ಕಲಿಯಬಹುದಾಗಿದೆ. ಇಂದಿನ ಜಾಗತೀಕರಣ, ಆಧುನೀಕರಣದ ನಡುವೆ ಅಂತಹರಣವನ್ನು ಬೆಳೆಸಬೇಕು’ ಎಂದು ತಿಳಿಸಿದರು.
‘ತುಳುವನಾಡಿನ ಮಣ್ಣಿನ ಗಟ್ಟಿತನ, ದೈವದ ಶಕ್ತಿ, ಭಾಷೆ, ಸಂಸ್ಕೃತಿ ಇಡೀ ಜಗತ್ತಿಗೆ ತಿಳಿದಿದೆ. ಕಾಂತಾರ ಚಲನಚಿತ್ರ ಬಂದ ಬಳಿಕ ಇಲ್ಲಿನ ಬಗ್ಗೆ ತಿಳಿದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ವಿದೇಶಿಗರು ಕೂಡ ತುಳುನಾಡಿನ ಬಗ್ಗೆ ಅಭಿಮಾನ ಪಡುವಂತಾಗಿದೆ. ಮಿಷನರಿಗಳು ತುಳು ಕಲಿತು ಇಲ್ಲಿ ನಿಘಂಟನ್ನೇ ಸೃಷ್ಟಿಸಿದರು. ಬರೆದರು. ಸ್ವಾತಂತ್ರ್ಯ ಹೋರಾಟದ ವೇಳೆ ತುಳುವಿನಲ್ಲೇ ಭಾಷಣಗಳು ನಡೆಯುತ್ತಿದ್ದದು ನೆನಪಿಸಿಕೊಳ್ಳಬಹುದು’ ಎಂದು ಅವರು ಹೇಳಿದರು.
‘ತುಳು ಭಾಷೆಗೆ ಅಕಾಡೆಮಿ, ವಿಕಿಪೀಡಿಯಾ ಎಲ್ಲಾ ಇದೆ. ತುಳುವರು ಎಲ್ಲಿ ಹೋದರೂ ತನ್ನ ಭಾಷೆ ಬಿಡುವುದಿಲ್ಲ. ಇದೇ ಕಾರಣಕ್ಕೆ ತುಳು ಭಾಷೆಗೆ ಸಾವಿಲ್ಲ, ನಾಳೆಯ ಭಾಷೆ ಆಗಿಯೇ ಇರುತ್ತದೆ ಎಂದರು. ಆದರೂ, ಇಲ್ಲಿನ ಆರಾಧನೆಗಳು ಹೇಗೆ ಬಂದಿದೆ ಎಂಬ ಬಗ್ಗೆ ಸಂಗ್ರಹ ಕಡಿಮೆ ಇದೆ’ ಎಂದು ಅವರು ಹೇಳಿದರು.
ವಿದ್ವಾಂಸ ಡಾ. ರವೀಶ್ ಪಡುಮಲೆ ಮಾತನಾಡಿ, ‘ದೈವಗಳ ಪಾಡ್ದನ ತುಳುನಾಡಿನ ಮೌಖಿಕ ಸಾಹಿತ್ಯ. ತುಳು ಭಾಷೆಯ ವಿಚಾರಧಾರೆಗಳನ್ನು ಅನಾದಿಕಾಲದಿಂದಲೂ ಹಿರಿಯರು ಮಕ್ಕಳಿಗೆ ಹೇಳಿಕೊಡುತ್ತಿದ್ದರು. ಇದೇ ಕಾರಣಕ್ಕೆ ತುಳು ಇಂದು ವಿಶಾಲವಾಗಿ ಬೆಳೆದಿದೆ’ ಎಂದು ಹೇಳಿದರು.
ಡಾ. ವಸಂತಕುಮಾರ್ ಪೆರ್ಲ ಸಂವಾದಕಾರರಾಗಿ ಭಾಗವಹಿಸಿದ್ದರು.