ಕೊಡವ : ಭಾಷೆ, ಭೂಮಿ ಮತ್ತು ಬದುಕು

Day 2 | Audi 2 – Session 4 : 2.00 pm

ಡಾ. ರೇವತಿ ಸಿ. ಎಂ., ನಾಗೇಶ್‌ ಕಾಲೂರು ಮತ್ತು ಡಾ. ಕಿಶೋರ್‌ ಕುಮಾರ ರೈ ಶೇಣಿ


The responsibility of preserving the Kodava language lies with Kodava mothers: Dr. C.M. Revathi

“Kodava is not just a language; it is an ethnicity and a way of life. Foreign linguists have identified Kodava as a language rich in history. Experts have even suggested that the Proto-Dravidian language itself might have been Kodava. Therefore, it brings me pride to say that the Kodava language has a history spanning over 4,000 years,” said writer and thinker Dr. Revathi C.M.

She was speaking at the session titled “Kodava: Language, Land, and Life.” “In Kodava households today, the language parents use to speak with children is dominated by English words, with only a stray word or two in Kodava. Consequently, the responsibility of nurturing the language lies with all Kodava mothers,” she added.

Participating as another resource person, Nagesh Kalooru said, “Many linguists have noted the presence of Kodava words in Harappa and Mohenjo-daro. Several experts have stated the possibility that the original Proto-Dravidian language was indeed Kodava, and I feel the same. If one knows Malayalam, Tamil, or Tulu, the Kodava language can be understood well. Thus, it is an ‘insider’ language.”

He further stated, “We must pay attention to the antiquity of the language and its unique vowel system. The Kodava language is a symbol of culture and identity alike. Language and culture are mutually interconnected.”

Dr. Kishore Rai Sheni moderated the session.

ಕೊಡವ ಭಾಷೆ ಉಳಿಸುವ ಜವಾಬ್ದಾರಿ ಕೊಡವ ತಾಯಂದಿರಿಗಿದೆ: ಡಾ.ಸಿ.ಎಂ. ರೇವತಿ

‘ಕೊಡವ ಭಾಷೆಯೂ ಹೌದು, ಜನಾಂಗವೂ ಹೌದು, ಬದುಕೂ ಹೌದು. ಕೊಡವ ಭಾಷೆಯನ್ನು ಇತಿಹಾಸ ಸಮೃದ್ಧ ಭಾಷೆಯೆಂದು ವಿದೇಶಿ ಭಾಷಾ ತಜ್ಞರು ಗುರುತಿಸಿದ್ದಾರೆ. ಮೂಲ ದ್ರಾವಿಡ ಭಾಷೆ ಕೊಡವ ಭಾಷೆ ಆಗಿರಬಹುದು ಎಂದು ತಜ್ಞರು ಗುರುತಿಸಿದ್ದಾರೆ. ಹಾಗಾಗಿ ಕೊಡವ ಭಾಷೆಗೂ 4 ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ ಇದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ’ ಎಂದು ಸಾಹಿತಿ, ಚಿಂತಕಿ ಡಾ. ರೇವತಿ ಸಿಎಂ ಹೇಳಿದರು.

‘ಕೊಡವ: ಭಾಷೆ, ಭೂಮಿ ಮತ್ತು ಬದುಕು’ ಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಕೊಡವ ಭಾಷೆಯ ಮನೆಯಲ್ಲಿ ಮನೆಯವರು ಮಕ್ಕಳ ಜೊತೆ ಮಾತನಾಡುವ ಭಾಷೆಯಲ್ಲಿ ಹೆಚ್ಚು ಇಂಗ್ಲಿಷ್ ಪದಗಳೇ ಇವೆ. ಒಂದೆರಡು ಪದ ಮಾತ್ರ ಕೊಡವ ಭಾಷೆ ಇರುತ್ತದೆ. ಹಾಗಾಗಿ ಭಾಷೆ ಬೆಳೆಸುವ ಜವಾಬ್ದಾರಿ ಕೊಡವ ತಾಯಿಯರೆಲ್ಲರದೂ’ ಎಂದು ಅವರು ಹೇಳಿದರು.

ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಾಗೇಶ್ ಕಾಲೂರು ಅವರು, ‘ಹರಪ್ಪ, ಮೊಹೆಂಜೋದಾರೋ ಕೊಡವ ಪದಗಳು ಇದ್ದವು ಎಂದು ಹಲವು ಭಾಷಾ ತಜ್ಞರು ಉಲ್ಲೇಖ ಮಾಡಿದ್ದಾರೆ. ಮೂಲ ದ್ರಾವಿಡ ಭಾಷೆ ಏನಿತ್ತು ಅದೂ ಕೊಡವ ಭಾಷೆ ಆಗಿರುವ ಸಾಧ್ಯತೆ ಇದೆ ಎಂದು ಹಲವು ತಜ್ಞರು ಹೇಳಿದ್ದಾರೆ. ನನಗೂ ಹಾಗೇ ಅನ್ನಿಸುತ್ತದೆ. ಮಲಯಾಳಂ ಗೊತ್ತಿದ್ದರೆ, ತಮಿಳು ಗೊತ್ತಿದ್ದರೆ, ತುಳು ಗೊತ್ತಿದ್ದರೆ ಕೊಡವ ಭಾಷೆ ಚೆನ್ನಾಗಿ ಅರ್ಥವಾಗುತ್ತದೆ. ಹಾಗಾಗಿ ಇದು ಒಳಗಿನ ಭಾಷೆ’ ಎಂದು ಹೇಳಿದರು.

‘ಆ ಭಾಷೆಯ ಪ್ರಾಚೀನತೆ ಮತ್ತು ಅದರ ವಿಶಿಷ್ಟ ಸ್ವರ ವ್ಯವಸ್ಥೆ ಕುರಿತು ಗಮನ ಹರಿಸಬೇಕಾಗುತ್ತದೆ. ಕೊಡವ ಭಾಷೆ ಸಂಸ್ಕೃತಿಯ ಪ್ರತೀಕವೂ ಹೌದು, ಅಸ್ಮಿತೆಯೂ ಹೌದು. ಭಾಷೆ ಮತ್ತು ಸಂಸ್ಕೃತಿ ಪರಸ್ಪರ ಸಂಬಂಧಿತವಾಗಿದ್ದು’ ಎಂದು ಅವರು ಹೇಳಿದರು.

ಡಾ. ಕಿಶೋರ್ ರೈ ಶೇಣಿ ಈ ಗೋಷ್ಠಿಯನ್ನು ನಿರ್ವಹಿಸಿದರು.