ಚಿತ್ರ ಮತ್ತು ಚಿಂತನೆ : ಕನ್ನಡದ ಸೃಜನಶೀಲ ಜವಾಬ್ದಾರಿ

Day 2 | Audi 1 – Session 6 : 4.00 pm

ಪಿ. ಶೇಷಾದ್ರಿ, ಮಾಳವಿಕಾ ಅವಿನಾಶ್‌ ಮತ್ತು ಪಲ್ಲವಿ ರಾವ್‌ ಕಾರಂತ್‌


Subsidies are essential for experimental films: P. Sheshadri

“Government support is essential for experimental films. Without government subsidies, producing such films becomes difficult,” opined National Award-winning director P. Sheshadri.

Speaking at a session titled “Chitra mattu Chetana: Kannada’s Creative Responsibility” during the 8th edition of the Mangaluru Lit Fest held at the T.M.A. Pai Hall on Sunday, he said, “The first problem encountered while making experimental films is financial. In this regard, the government’s subsidy of ₹10 lakh is very crucial.”

“When I made Munnudi, the government used to provide ₹10 lakh each to 20 films. I was determined that my film should be one among those 20 quality films of the year. However, now it has become one among 200 films. This cannot be considered true competition. In this regard, the government should reduce the number of films and continue the practice of providing subsidies only to quality cinema,” he added.

Stressing the need to introduce the ‘language of cinema,’ he said, “Cinema is a mass medium and a collective art. Although the director is called the ‘Captain of the Ship,’ many people’s hard work goes into the formation of a film. Therefore, everyone should sit and discuss. But that isn’t happening currently; there is a lack of this collaborative spirit. Cinema has its own language—camera angles and lighting all have their own syntax. We need to introduce this, as there is a deficiency in our understanding of it.”

Regarding historical films, he said they must be made with great care and responsibility. “The number of historical films in our industry is low. We must be very cautious while making them. For instance, although the story of Kittur Chennamma belongs to the Belagavi region, the film used Mysuru or ‘cinema Kannada.’ In the film Sangolli Rayanna, the love story was glamorized. History should not be distorted through such glorification. While creative freedom plays a major role in cinema, it should not compromise historical facts. We must work with extreme caution so that the next generation does not develop misconceptions.”

Adding to this point, actress Malavika Avinash said, “I understand Sheshadri’s concern. It is better not to show something at all than to show it incorrectly. However, not everyone follows that principle. In the film Immadi Pulakeshi, Dr. Rajkumar’s portrayal is exactly as recorded in history. Extensive research is necessary in this regard; research is just as important as entertainment.”

She further emphasized the growing need for historical films, saying, “History often only mentions Mughals like Akbar and Babur. Many of us didn’t know about Tanaji. It was only after watching the movie that many people learned about him. Due to a bit of exaggeration and glorification, the story reached a vast audience. Some stories simply must be told. When Sheshadri made Munnudi, he did it authentically with a lot of research. Because of that, a specific issue reached many people through that film.”

The session was moderated by author Pallavi Rao Karanth.

ಪ್ರಯೋಗಾತ್ಮಕ ಚಿತ್ರಗಳಿಗೆ ಸಬ್ಸಿಡಿ ಅವಶ್ಯ: ಪಿ. ಶೇಷಾದ್ರಿ

‘ಪ್ರಯೋಗಾತ್ಮಕ ಚಿತ್ರಗಳಿಗೆ ಸರ್ಕಾರದ ಬೆಂಬಲ ಅಗತ್ಯ. ಸರ್ಕಾರದ ಸಬ್ಸಿಡಿ ಇಲ್ಲದಿದ್ದರೆ ಅಂತಹ ಚಿತ್ರಗಳ ನಿರ್ಮಾಣ ಕಷ್ಟವಾಗುತ್ತದೆ’ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟಿ.ಎಂ.ಎ ಪೈ ಸಭಾಂಗಣದಲ್ಲಿ ಭಾನುವಾರ ನಡೆದ ಎಂಟನೇ ಆವೃತ್ತಿಯ ಮಂಗಳೂರು ಲಿಟ್‌ ಫೆಸ್ಟ್ ನ ಚಿತ್ರ ಮತ್ತು ಚೇತನ – ಕನ್ನಡದ ಸೃಜನಶೀಲ ಜವಾಬ್ದಾರಿ ಎಂಬ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಪ್ರಯೋಗಾತ್ಮಕ ಚಿತ್ರಗಳನ್ನು ಮಾಡುವಾಗ ಮೊದಲು ಎದುರಾಗುವ ಸಮಸ್ಯೆ ಹಣಕಾಸಿನದ್ದು. ಈ ನಿಟ್ಟಿನಲ್ಲಿ ಸರ್ಕಾರದ 10 ಲಕ್ಷ ರೂ. ಸಬ್ಸಿಡಿ ಬಹಳ ಮುಖ್ಯವಾದದ್ದು. ನಾನು ಮುನ್ನುಡಿ ಚಿತ್ರ ಮಾಡಿದಾಗ, ಸರ್ಕಾರ 20 ಚಿತ್ರಗಳಿಗೆ ತಲಾ 10 ಲಕ್ಷ ಕೊಡುತ್ತಿತ್ತು. ವರ್ಷದ 20 ಗುಣಮಟ್ಟದ ಚಿತ್ರಗಳಲ್ಲಿ ನನ್ನದೂ ಒಂದು ಚಿತ್ರವಾಗಬೇಕು ಎಂಬ ಹಠವಿತ್ತು. ಆದರೆ, ಈಗ 200 ಚಿತ್ರಗಳಲ್ಲಿ ಒಂದಾಗುತ್ತಿದೆ. ಅದು ಪೈಪೋಟಿ ಎಂದು ಅನಿಸಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಸಂಖ್ಯೆ ಕಡಿಮೆ ಮಾಡಿ, ಗುಣಮಟ್ಟದ ಚಿತ್ರಗಳಿಗೆ ಮಾತ್ರ ಸಬ್ಸಿಡಿ ಕೊಡುವ ಪರಿಪಾಠ ಮುಂದುವರೆಸಬೇಕು’ ಎಂದರು.

‘ಸಿನಿಮಾ ಭಾಷೆಯನ್ನು ಪರಿಚಯಿಸಬೇಕು ಎಂದ ಅವರು, ಸಿನಿಮಾ ಎನ್ನುವುದು ಸಮೂಹ ಮಾಧ್ಯಮ. ಅದೊಂದು ಸಮೂಹ ಕಲೆ. ನಿರ್ದೇಶಕನಿಗೆ ಕ್ಯಾಪ್ಟನ್‌ ಆಫ್‌ ದಿ ಶಿಪ್‌ ಎಂದರೂ, ಒಂದು ಚಿತ್ರ ರೂಪುಗೊಳ್ಳುವಲ್ಲಿ ಹಲವರ ಶ್ರಮವಿರುತ್ತದೆ. ಹಾಗಾಗ, ಎಲ್ಲರೂ ಕೂಡಿ ಚರ್ಚೆ ಮಾಡಬೇಕು. ಆದರೆ, ಅದು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಕೊರತೆ ಇದೆ. ಸಿನಿಮಾಗೆ ಅದರದ್ದೇ ಆದ ಭಾಷೆ ಇದೆ. ಕ್ಯಾಮೆರಾ ಆ್ಯಂಗಲ್‌, ಲೈಟಿಂಗ್ ಎಲ್ಲಕ್ಕೂ ಅದರದ್ದೇ ಆದೆ ಭಾಷೆ ಇದೆ. ಅದನ್ನು ಪರಿಚಯಿಸಬೇಕು. ಆ ನಿಟ್ಟಿನಲ್ಲಿ ನಮ್ಮಲ್ಲಿ ಕೊರತೆ ಇದೆ’ ಎಂದರು.

‘ಐತಿಹಾಸಿಕ ಚಿತ್ರಗಳನ್ನು ಮಾಡುವಾಗ ಬಹಳ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಮಾಡಬೇಕು ಎಂದ ಅವರು, ನಮ್ಮಲ್ಲಿ ಐತಿಹಾಸಿಕ ಚಿತ್ರಗಳ ಸಂಖ್ಯೆ ಕಡಿಮೆಯೇ. ಅಂತಹ ಚಿತ್ರಗಳನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ಮಾಡಬೇಕು. ಕಿತ್ತೂರು ಚೆನ್ನಮ್ಮ ಕಥೆಯು ಬೆಳಗಾವಿಯ ಪ್ರಾಂತ್ಯದದ್ದಾರೂ ಚಿತ್ರದಲ್ಲಿ ಮೈಸೂರು ಅಥವಾ ಸಿನಿಮಾ ಕನ್ನಡವನ್ನು ಬಳಸಲಾಗಿತ್ತು. ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಪ್ರೇಮಕಥೆ ವೈಭವೀಕರಣಗೊಂಡಿತ್ತು. ಹೀಗೆ ವೈಭವೀಕರಣ ಮಾಡುವ ಮೂಲಕ ಇತಿಹಾಸವನ್ನು ತಿರುಚಬಾರದು. ಸಿನಿಮಾದಲ್ಲಿ ಸೃಜನಶೀಲ ಸ್ವಾತಂತ್ರ್ಯ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಅದರಿಂದ ಇತಿಹಾಸಕ್ಕೆ ಚ್ಯುತಿ ತರಬಾರದು. ಈ ನಿಟ್ಟಿನಲ್ಲಿ ಬಹಳ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಅದರಿಂದ ಮುಂದಿನ ತಲೆಮಾರಿನವರಿಗೆ ತಪ್ಪು ಗ್ರಹಿಕೆ ಆಗಬಾರದು’ ಎಂದು ಹೇಳಿದರು.

ಈ ವಿಷಯದಲ್ಲಿ ಪೂರಕವಾಗಿ ಮಾತನಾಡಿದ ಮಾಳವಿಕಾ ಅವಿನಾಶ್‌, ‘ನನಗೆ ಶೇಷಾದ್ರಿ ಅವರ ಭಯ ಅರ್ಥವಾಗುತ್ತದೆ. ತಪ್ಪು ತೋರಿಸುವುದಕ್ಕಿಂತ ತೋರಿಸದಿರುವುದೇ ಒಳ್ಳೆಯದು. ಆದರೆ, ಎಲ್ಲರೂ ಆ ರೀತಿ ಮಾಡುವುದಿಲ್ಲ. ಇಮ್ಮಡಿ ಪುಲಕೇಶಿ ಚಿತ್ರದಲ್ಲಿ ಡಾ. ರಾಜಕುಮಾರ್‌ ಅವರ ಚಿತ್ರಣ, ಇತಿಹಾಸದಲ್ಲಿ ದಾಖಲಾಗಿರುವಂತೆಯೇ ಇದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆ ಅಗತ್ಯ. ರಂಜನೆ ಜೊತೆಗೆ ಸಂಶೋಧನೆ ಸಹ’ ಮುಖ್ಯ ಎಂದರು.

‘ಐತಿಹಾಸಿಕ ಚಿತ್ರಗಳ ಅವಶ್ಯಕತೆ ಹೆಚ್ಚಿದೆ ಎಂದ ಅವರು, ಇತಿಹಾಸದಲ್ಲಿ ಅಕ್ಬರ್, ಬಾಬರ್‌ ಮುಂತಾದ ಹಲವು ಮೊಘಲರ ಉಲ್ಲೇಖವೇ ಇದೆ. ನಮಗೆ ತಾನಾಜಿ ಬಗ್ಗೆ ಗೊತ್ತಿಲ್ಲ. ಸಿನಿಮಾ ನೋಡಿದ ಮೇಲೆ ಎಷ್ಟೋ ಜನರಿಗೆ ತಾನಾಜಿ ಬಗ್ಗೆ ಗೊತ್ತಾಯಿತು. ಉತ್ಪ್ರೇಕ್ಷೆ ಮತ್ತು ವೈಭವೀಕರಣದಿಂದಾಗಿ ಬಹಳಷ್ಟು ಜನರಿಗೆ ತಲುಪಿದೆ. ಕೆಲವು ಕಥೆಗಳನ್ನು ಹೇಳಲೇಬೇಕು. ಶೇಷಾದ್ರಿ ಅವರು ಮುನ್ನುಡಿ ಮಾಡಿದಾಗ ಸಾಕಷ್ಟು ಸಂಶೋಧನೆ ಮಾಡಿ ಅಧಿಕೃತವಾಗಿ ಮಾಡಿದರು. ಒಂದು ಸಮಸ್ಯೆ, ಆ ಚಿತ್ರದಿಂದ ಹಲವರಿಗೆ ತಲುಪಿದಂತಾಯಿತು’ ಎಂದರು.

ಪಲ್ಲವಿ ರಾವ್ ಕಾರಂತ್ ಸಂವಾದ ನಿರ್ವಹಿಸಿದರು.