Sessions 2021 Archives - Mangaluru

ಗೋಷ್ಠಿ 6 : ವಿಷಮತೆಯ ಮಥನದಲ್ಲಿ ಮೂಡಿದ ಸಾಹಿತ್ಯ ಸುಧೆ: ಕನ್ನಡದ ಮುಂದಿನ ಹಾದಿ
ಆರನೇ ಗೋಷ್ಠಿಯಲ್ಲಿ ‘ವಿಷಮತೆಯ ಮಥನದಲ್ಲಿ ಮೂಡಿದ ಸಾಹಿತ್ಯ ಸುಧೆ: ಕನ್ನಡದ ಮುಂದಿನ ಹಾದಿ’ ಎಂಬ ವಿಷಯದಲ್ಲಿ ವಿಚಾರ ಸಂಕೀರ್ಣ ನಡೆಯಿತು. ಗೋಷ್ಠಿಯನ್ನು ರೋಹಿತ್ ಚಕ್ರತೀರ್ಥ ನಡೆಸಿಕೊಟ್ಟರು.

ಕನ್ನಡ ಸಾಹಿತ್ಯ ಅಕಾಡೆಮಿ‌ಯ ಅಧ್ಯಕ್ಷ ಡಾ ಬಿ ವಿ ವಸಂತ ಕುಮಾರ್ ಮಾತನಾಡಿ, ವಿಷಮತೆ ಅಂದರೆ ಸಂಕಷ್ಟ, ತೊಂದರೆ ಇತ್ಯಾದಿ. ಇದು ಮನುಷ್ಯ‌ನೇ ಕಂಡುಕೊಂಡ ಮನೋಲೋಕದ ಸೃಷ್ಟಿ. ಸಾಹಿತಿ ವರ್ತಮಾನದಲ್ಲಿ ಕಾಲ ಕಳೆಯುವವ. ಭೂತದ ಅನುಭವದ ಮೂಲಕ, ಭವಿಷ್ಯಕ್ಕೆ ಪರಿಹಾರ ಒದಗಿಸುವ ಕೆಲಸವನ್ನು ಸಾಹಿತ್ಯ ಮಾಡುತ್ತದೆ ಎಂದು ಹೇಳಿದರು. ಕಷ್ಟದ ಒಳಗಡೆ ಸುಖವನ್ನು ಕಂಡದ್ದು ಭಾರತೀಯ ಸಾಹಿತ್ಯ ಎಂದು ಅವರು ಹೇಳಿದರು.

ಸಾಹಿತ್ಯ ಹುಟ್ಟುವುದೇ ಸಂಘರ್ಷ, ವಿಷಮತೆಯಿಂದ. ಅದರ ಹೊರತಾಗಿ ಯಾವುದೇ ಸೃಷ್ಟಿ ಅಸಾಧ್ಯ. ಸವಾಲಿನಿಂದಲೇ ಬದುಕು. ಕೇವಲ ಸುಖವಷ್ಟೇ ಬದುಕಲ್ಲ. ಭಾರತೀಯ ಮನೋಧರ್ಮ ಮತ್ತು ಪಾಶ್ಚಾತ್ಯ ಮನೋಧರ್ಮ‌ದ ಬಗ್ಗೆ ಇಲ್ಲಿ ಅವಲೋಕನ ಮುಖ್ಯವಾಗುತ್ತದೆ. ಮುಂದೇನಾಗಬಹುದು ಎಂದು ನೊಂದು ಭವಿಷ್ಯದ ಚಿಂತೆಯಲ್ಲೇ ಕಳೆದರೆ ಸುಖ ಅಸಾಧ್ಯ. ಆಪತ್ತು ತೇಲಿಸಲೆಂದೇ ಸಾಹಿತ್ಯ‌ದ ದೋಣಿ ಇದ್ದು, ಅದನ್ನು ಬಳಕೆ ಮಾಡಿಕೊಳ್ಳಬೇಕಾದ ಅನಿವಾರ್ಯ‌ತೆ ಇದೆ. ಆಪತ್ತು ಮನುಷ್ಯ‌ ಸೃಷ್ಟಿ. ಉತ್ತರ, ಪರಿಹಾರ ನಾವೇ ಹುಡುಕಬೇಕಿದೆ ಎಂದರು. ಸಾಹಿತ್ಯ ಆತ್ಮಶೋಧನೆಯ ಸಾಧನ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕುವೆಂಪು ಭಾಷಾ ಭಾರತಿಯ ಅಧ್ಯಕ್ಷ ಡಾ. ಗಿರೀಶ್ ಭಟ್ ಅಜಕ್ಕಳ ಮಾತನಾಡಿ, ಕೊರೋನಾ ಪರಿಸ್ಥಿತಿ‌ಯಲ್ಲಿ ಅನೇಕ ಸಾಹಿತ್ಯ ಸೃಷ್ಟಿ‌ಯಾಗಿದೆ. ಸಾಹಿತಿಗೆ ಕಲಾತ್ಮಕ ಸೃಷ್ಟಿಯನ್ನು ಹೊರತರಬೇಕೆಂಬ ಅಭಿಲಾಷೆ ಇರುತ್ತದೆ. ಅದಕ್ಕೆ ಸಮಯ ಹಿಡಿಯುತ್ತದೆ. ಉತ್ತಮ ಸಾಹಿತಿ ಕಲಾತ್ಮಕ ಸೃಷ್ಟಿಯನ್ನೇ ನಿರೀಕ್ಷೆ ಮಾಡುತ್ತಾರೆ. ವಿಷಮತೆ ಎಲ್ಲರಿಗೂ ಒಂದೇ ರೀತಿ ಬಾಧಿಸದೇ ಇರಬಹುದು. ಇದರಿಂದಾಗಿ ಇಂತಹ ವಿಷಮ ಸ್ಥಿತಿಯಲ್ಲಿ ಸಾಹಿತ್ಯದ ಹುಟ್ಟು ನಿಧಾನವಾಗಿದೆ ಎಂದು ಹೇಳಬಹುದು. ನಮ್ಮೊಳಗಿನ ಕಲ್ಪನೆಯ ತೀವ್ರತೆಗೆ ಅನುಗುಣವಾಗಿಯೇ ಸಾಹಿತ್ಯ ಸೃಷ್ಟಿಯಾಗುವುದು ಎಂದು ಅವರು ತಿಳಿಸಿದರು.

ಅರೆ ಭಾಷಾ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಮಾತನಾಡಿ, ಸಮಾಜದ ಹಲವು ಕ್ಷೇತ್ರ‌ಗಳಿಗೆ ಸಂಬಂಧಿಸಿದಂತೆ ಹಲವು ವಿಷಮತೆ‌ಗಳನ್ನು ಗಮನಿಸುತ್ತಿದ್ದೇವೆ. ಕಥೆ, ಕವನ ಹುಟ್ಟುತ್ತಿಲ್ಲ. ಇದು ಹುಟ್ಟಬೇಕಾದರೆ ಒಂದು ಧ್ಯಾನ, ತಪಸ್ಸು ಬೇಕು. ಆ ತಪಸ್ಸು ಕಡಿಮೆಯಾಗುತ್ತಿದೆ. ವಿಷಮತೆ ಎಂಬುದು ಲೇಖನಗಳಷ್ಟೇ ಆಗುತ್ತಿದೆ. ವಸ್ತುಗಳಿದ್ದರೂ ಅದಕ್ಕೆ ಜೀವ ತುಂಬುವ ಸಾಹಿತಿಗಳು, ಸಾಹಿತ್ಯ ಹುಟ್ಟುತ್ತಿಲ್ಲ. ಸಾಹಿತ್ಯದ ಜಿಪುಣತನ ನಮ್ಮಲ್ಲಿಲ್ಲ. ಇಂದಿನ ತುರ್ತಿನಲ್ಲಿ ವಿಚಾರಗಳು ಬೇಗ ಸಿಗುವಂತಾಗುವ ದಿಸೆಯಲ್ಲಿ ಸಾಗುತ್ತಿದ್ದೇವೆ. ಇದರ ಹಿನ್ನೆಲೆಯಲ್ಲಿ ಸಾಹಿತ್ಯ ಸೃಷ್ಟಿ ನಿಧಾನವಾಗಿದೆ ಎಂದು ಹೇಳಿದರು. ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರೂ ಲೇಖಕರಾಗುತ್ತಿದ್ದಾರೆ. ಆದರೆ ಸಾಹಿತಿಗಳಾಗುತ್ತಿಲ್ಲ ಎಂದು ಅಭಿಪ್ರಾಯ‌ಪಟ್ಟರು. ತಲ್ಲಣಕ್ಕೆ ಮಿಡಿಯುವ ಮನಸ್ಸಿಲ್ಲದೇ ಇರುವುದೇ ಸಾಹಿತ್ಯದ ಹಿನ್ನಡೆಗೆ ಕಾರಣ ಎನ್ನಬಹುದು ಎಂದು ಹೇಳಿದರು.

ಸಮನ್ವಯಕಾರ ರೋಹಿತ್ ಚಕ್ರತೀರ್ಥ ಅವರು ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಹಿತ್ಯ ಹೇಗೆ ಕಾರ್ಯನಿರ್ವಹಿಸಬೇಕು, ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಸಿದರು. ಹಾಗೆಯೇ ಸಾಹಿತ್ಯ ಸಮಸ್ಯೆ‌ಗಳಿಗೆ ಪರಿಹಾರಗಳನ್ನು ಸೂಚಿಸುವುದಕ್ಕೂ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

The post ಗೋಷ್ಠಿ 6 : ವಿಷಮತೆಯ ಮಥನದಲ್ಲಿ ಮೂಡಿದ ಸಾಹಿತ್ಯ ಸುಧೆ: ಕನ್ನಡದ ಮುಂದಿನ ಹಾದಿ appeared first on Mangaluru.

ಗೋಷ್ಠಿ 5 : Untold Sagas, Unsung Heroes: Reimagining Bharath through Ithihas and its Retelling
ಐದನೇ ಗೋಷ್ಠಿಯಲ್ಲಿ Untold Sagas, Unsung Heroes: Reimagining Bharath through Ithihas and its Retelling ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ನಡೆಯಿತು. ಸಮನ್ವಯ‌ಕಾರರಾಗಿ ಪತ್ರಕರ್ತೆ ಹರ್ಷ ಭಟ್ ನಿರ್ವಹಿಸಿದರು.

ಲೇಖಕಿ ಸಾಯಿ ಸ್ವರೂಪ ಅಯ್ಯರ್ ಮಾತನಾಡಿ, ನಮ್ಮ ಐತಿಹಾಸಿಕ ನಾಯಕರ ಬಗ್ಗೆ ದಾಖಲೆ ಮಾಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕಿದೆ. ಇತಿಹಾಸ, ಪೌರಾಣಿಕ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಮ್ಮೊಳಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಥೆಗಳನ್ನು ಮತ್ತೆ ಹೇಳುವ ಕೆಲಸ ಇತಿಹಾಸ ಅರಿಯುವ ನಿಟ್ಟಿನಲ್ಲಿ ನಮ್ಮ ಇಂದಿನ ತುರ್ತಾಗಿದೆ. ಕುಟುಂಬಕ್ಕಾಗಿ ಸಮಯ ನೀಡುವುದಕ್ಕೆ ಸಮಯವಿಲ್ಲ‌ದ ಈ ಸಂದರ್ಭದಲ್ಲಿ ಇಂತಹ ಐತಿಹಾಸಿಕ ಹಿನ್ನೆಲೆಗಳನ್ನು ತಿಳಿಸುವತ್ತ ದೃಷ್ಟಿ ಹಾಯಿಸಿದಲ್ಲಿ ಮಾತ್ರ ಇತಿಹಾಸ ಉಳಿಯುತ್ತದೆ ಎಂದು ಹೇಳಿದರು. ಇಂತಹ ಕಥೆಗಳನ್ನು ಹೇಳುವ ತರಬೇತಿ ಪಡೆದ ಜನರ ಗುಂಪು ನಿರ್ಮಾಣ‌ವಾಗಬೇಕಿದೆ ಎಂದು ಅವರು ತಿಳಿಸಿದರು.

ಲೇಖಕಿ ಹಾಗೂ ಸಂಶೋಧಕರಾದ ವಸುಂಧರಾ ದೇಸಾಯಿ ಮಹಾಪುರುಷ್ ಅವರು ಮಾತನಾಡಿ, ಹಂಪಿಯನ್ನು ಯಾರು ನಿರ್ಮಾಣ ಮಾಡಿದರು ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇಂತಹ ವಿಚಾರವನ್ನು ಸಂಗ್ರಹಿಸಿ ಮಾಡುವ ಕೆಲಸವನ್ನು ತಾನು ಮಾಡುತ್ತಿರುವುದಾಗಿ ತಿಳಿಸಿದರು. ‘ಉಳಿದ ಹಂಪಿ ಮತ್ತು ಗುರು ಬಿಷ್ಟಪ್ಪಯ್ಯ’ ಎಂಬ ಪುಸ್ತಕದಲ್ಲಿ ಹಂಪಿಯ ಕಥೆಯನ್ನು ಕಟ್ಟಿಕೊಡುವ ಕೆಲಸ ಮಾಡಿರುವುದಾಗಿ ತಿಳಿಸಿದರು. ಇಂತಹ ದಾಖಲೆಗಳನ್ನು ಬರೆಯುವ ಅಥವಾ ಸಂಗ್ರಹಿಸಿಡುವ ಕೆಲಸವಾದಲ್ಲಿ ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯ ಎಂದು ಹೇಳಿದರು. ದಾಖಲೆಗಳಿಲ್ಲದ ವಿಚಾರ ಮುಂದಿನ ತಲೆಮಾರಿಗೆ ತಲುಪುವುದು ಕಷ್ಟ. ಈ ಹಿನ್ನೆಲೆಯಲ್ಲಿ ನಮ್ಮ ಐತಿಹಾಸಿಕ ಘಟನೆಗಳು, ಐತಿಹಾಸಿಕ ಕಟ್ಟಡ, ಸ್ಮಾರಕಗಳು, ವ್ಯಕ್ತಿಗಳ ಬಗ್ಗೆ ಸಿಕ್ಕ ಮಾಹಿತಿಗಳನ್ನು ಕೂಡಿಡುವ ಕೆಲಸವಾಗಬೇಕಿದೆ ಎಂದು ಹೇಳಿದರು. ಅವುಗಳ ಹಿಂದಿನ ಕಥೆಗಳನ್ನು ತಿಳಿದುಕೊಳ್ಳಲು ಈ ದಾಖಲೆಗಳು ಸಹಾಯ ಮಾಡುತ್ತದೆ. ಇದಕ್ಕೆ ಮುಕ್ತ ಮನಸ್ಸು ಬೇಕು. ಆಗ ದಾಖಲೆಗಳನ್ನು ಹುಡುಕಲು ಸಾಧ್ಯವಾಗುತ್ತದೆ. ಸಂಶೋಧಿಸುವ ಗುಣ ನಮ್ಮಲ್ಲಿರಬೇಕು, ಆಗ ಇತಿಹಾಸ ಉಳಿಯುತ್ತದೆ ಎಂದು ಹೇಳಿದರು.

ಪತ್ರ‌ಕರ್ತ ಅರವಿಂದ್ ನೀಲಕಂಡನ್ ಮಾತನಾಡಿ, ಇಂದಿನ ಯುವಜನಾಂಗ‌ಕ್ಕೆ ನಮ್ಮ ಐತಿಹಾಸಿಕ ವೀರರನ್ನು ಪರಿಚಯಿಸುವ, ಅವರ ಮಾಹಿತಿ‌ಗಳನ್ನು ತಿಳಿಸಿಕೊಡುವ ಕಾರ್ಯ ನಡೆಯಬೇಕಿದೆ. ಅದನ್ನು ತಿಳಿಸಿಕೊಡುವುದಕ್ಕೆ ಪೂರಕವಾಗುವಂತಹ ಸಂದರ್ಭಗಳನ್ನು, ಮಾಧ್ಯಮ‌ಗಳನ್ನು ಕಂಡುಕೊಳ್ಳಬೇಕಾಗಿದೆ. ಸರಿಯಾದ ದಾರಿಯ ಆಯ್ಕೆ ಮಾಡಿಕೊಂಡು ನಾವು ನಮ್ಮದೇ ನಾಯಕರ ಕಥೆಗಳನ್ನು ಮಕ್ಕಳಿಗೆ ಕಟ್ಟಿಕೊಡುವ ಕೆಲಸವಾಗಬೇಕಿದೆ. ಈ ಕಾರ್ಯ ಆಗಿಂದಾಗ್ಗೆ ನಡೆಯುತ್ತಿರಬೇಕು. ಹಾಗಾದಲ್ಲಿ ಮಾತ್ರ ಐತಿಹಾಸಿಕ ವೀರರನ್ನು ತಿಳಿದುಕೊಳ್ಳಲು ಯುವಜನತೆಗೆ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಾವು ನಮ್ಮ ಐತಿಹಾಸಿಕ ನಾಯಕರ ಕಥೆಗಳನ್ನು ಹೇಗೆ ಪ್ರಸ್ತುತ‌ಪಡಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈ ಬಗ್ಗೆ ನಮ್ಮೊಳಗೊಂದು ಅರಿವಿರಬೇಕು. ಸಣ್ಣಪುಟ್ಟ ವಿಚಾರಗಳ ಬಗ್ಗೆ‌ಯೂ ಗಮನವಿಟ್ಟು‌ಕೊಂಡು ಕಥೆಗಳನ್ನು ಕಟ್ಟುವ, ತಿಳಿಸುವ ಕೆಲಸ ನಡೆಯಬೇಕಿದೆ ಎಂದು ಹೇಳಿದರು. ಬ್ರಿಟಿಷರು ಭಾರತಕ್ಕೆ ಬಂದ ಮೇಲೆ ಅವರು ಭಾರತೀಯರ ನಂಬಿಕೆಗಳನ್ನು ಸುಳ್ಳು ಎಂಬಂತೆ ಬಿಂಬಿಸತೊಡಗಿದರು. ಹಾಗೆಯೇ ಇಲ್ಲಿನ ಕಥೆಗಳನ್ನು ಬೇರೇಯದೇ ರೂಪದ ಜೊತೆಗೆ ಜನರಿಗೆ ಕಟ್ಟಿಕೊಡತೊಡಗಿದರು. ಇಲ್ಲಿನ ಇತಿಹಾಸ‌ದ ಚಿತ್ರಣವೇ ಬದಲಾಯಿತು. ಇದರ ನೈಜತೆಯನ್ನು ಅರಿಯುವ ನಿಟ್ಟಿನಲ್ಲಿ ಐತಿಹಾಸಿಕ ಕಥೆಗಳನ್ನು ಮತ್ತೆ ಸರಿಯಾದ ಸ್ವರೂಪದಲ್ಲಿ ಕಟ್ಟಿಕೊಡುವಂತಾಗಬೇಕು ಎಂದು ಅವರು ಹೇಳಿದರು. ಇತಿಹಾಸ‌ದ ಮೂಲ ಹುಡುಕುವ, ಇತಿಹಾಸವನ್ನು ಅರಿಯುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಭಾರತೀಯತೆಗೆ ಅನುಗುಣವಾಗಿ ಸಾಗಬೇಕಿದೆ ಎಂದು ಅಭಿಪ್ರಾಯ‌ಪಟ್ಟರು.

The post ಗೋಷ್ಠಿ 5 : Untold Sagas, Unsung Heroes: Reimagining Bharath through Ithihas and its Retelling appeared first on Mangaluru.

ಗೋಷ್ಠಿ 4 : Exploring the Indian Identity through Cinema
ನಾಲ್ಕನೇ ಗೋಷ್ಠಿಯಲ್ಲಿ Exploring the Indian Identity through Cinema ಎಂಬ ವಿಚಾರದ ಬಗ್ಗೆ ವಿಚಾರ ಮಂಡನೆ ನಡೆಯಿತು. ಸಮನ್ವಯ‌ಕಾರರಾಗಿ ಸಮರ್ಥ್ ರಾವ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

ಕರ್ನಾಟಕ ಚಲನಚಿತ್ರ ಅಕಾಡೆಮಿ‌ಯ ಅಧ್ಯಕ್ಷ ಸುನಿಲ್ ಪುರಾಣಿಕ್ ಮಾತನಾಡಿ, ಭಾರತೀಯತೆ ಮತ್ತು ರಾಷ್ಟ್ರೀಯ‌ತೆ ಹತ್ತಿರದ ಪದಗಳು. ಹಿಂದಿನ ಸಿನೆಮಾಗಳಲ್ಲಿ ದೇವರ ಚಿತ್ರಗಳನ್ನು ತೋರಿಸಿ ಸಿನೆಮಾ ಮುಂದುವರೆಯುತ್ತಿತ್ತು. ಈಗ ಅದಿಲ್ಲ. ಕಳೆದ 6-7 ವರ್ಷಗಳಿಂದ ಭಾರತೀಯ‌ತೆ, ರಾಷ್ಟ್ರೀಯ‌ತೆ ಪ್ರವರ್ಧಮಾನಕ್ಕೆ ಬರುತ್ತಿದೆ. ಇಂದು ದೇಶದ ಅಸ್ಮಿತೆಯ ಕುರಿತು ಬರುತ್ತಿರುವ ಚಿತ್ರ‌ಗಳು ಯಶಸ್ವಿಯಾಗುತ್ತಿವೆ ಎಂಬುದು ಖುಷಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತ ಹಲವು ವೈವಿಧ್ಯಮಯ ವಿಚಾರಗಳನ್ನು ಒಳಗೊಂಡ ದೇಶ. ಕಳೆದ 70 ವರ್ಷಗಳಿಗಿಂತ ಭಿನ್ನವಾಗಿ ಕಳೆದ ಕೆಲ ವರ್ಷಗಳಲ್ಲಿ ಭಾರತೀಯ ಸಿನೆಮಾಗಳು ರಾಷ್ಟ್ರೀಯ‌ತೆಯನ್ನು ಬಿಂಬಿಸುತ್ತಿರುವುದು ಸಂತಸದ ವಿಚಾರ ಎಂದು ಪುರಾಣಿಕ್ ತಿಳಿಸಿದರು. ವಸ್ತು‌ನಿಷ್ಠೆ ಪ್ರಾಮುಖ್ಯತೆ ಪಡೆಯಬೇಕಿದೆ ಎಂದು ಹೇಳಿದರು. ಒಟಿಟಿ ಯಲ್ಲಿ ಭಾರತೀಯ ಸಿದ್ಧಾಂತ‌ಗಳಿಗೆ ಪೂರಕವಾಗಿಲ್ಲ ಎಂದು ಅವರು ಅಭಿಪ್ರಾಯ ತಿಳಿಸಿದರು. ಇತಿಹಾಸ ಪೂರಕ ಚಿತ್ರಗಳನ್ನು ಮಾಡಲು ಪ್ರೊಡ್ಯೂಸರ್‌ಗಳು ಮುಂದೆ ಬಂದಾಗ ಬದಲಾವಣೆ ಸಾಧ್ಯ ಎಂದು ಅವರು ಹೇಳಿದರು.

ನಟ ಸುಚೇಂದ್ರ ಪ್ರಸಾದ್ ಮಾತನಾಡಿ, ಭಾರತೀಯತೆ, ಅಸ್ಮಿತೆಗೆ ಸಂಬಂಧಿಸಿದಂತೆ ಚಿತ್ರರಂಗ ಸಹ ತನ್ನದೇ ಆದ ಕೊಡುಗೆ ನೀಡುತ್ತಿದೆ. ಭಾರತೀಯತೆ ಎಂಬುದು ವಾಸ್ತವಿಕತೆ. ಅದನ್ನು ಕಲ್ಪನೆ ಅಥವಾ ಮರುಕಲ್ಪನೆ ಎಂಬುದು ತಪ್ಪಾಗುತ್ತದೆ. ಅಂತಹ ಅಖಂಡತೆ ಭಾರತೀಯತೆಗೆ ಇದೆ. ಕಲಿತ ವಿಚಾರಗಳ ಜೊತೆಗೆ ಕಲಿಯದುದರೆಡೆಗೆ ಚಿತ್ರರಂಗದಲ್ಲಿ ತುಡಿತ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸ್ವಯಂ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಇತಿಹಾಸ ಅರಿಯದವರು ಇತಿಹಾಸ ಬರೆಯಲಾರರು. ಹೀಗಾಗಿ ವಿಕಾಸಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಪರಂಪರೆ ಎಂದರೆ ಪರಮವಾದದ್ದನ್ನು ರಕ್ಷಿಸುವುದು ಎಂದರ್ಥ. ಸಿನೆಮಾ‌ವೂ ಈ ಪೊರೆಯುವ ಕೆಲಸವನ್ನು ಸಿನೆಮಾ ಮಾಡಬೇಕಿದೆ. ಈಗ ಉತ್ತಮ ಮಾಧ್ಯಮ ಉದ್ಯಮವಾಗಿರುವುದು ದುರಂತ. ಕೆಲ ಸಂದರ್ಭದಲ್ಲಿ ಇಲ್ಲಿ ಆದರ್ಶಗಳು ಅಸಡ್ಡೆ‌ಗೆ ಒಳಗಾಗುತ್ತಿದೆ. ಪ್ರಶಸ್ತಿ ಎಂದರೆ ತಕ್ಕ ಶಾಸ್ತಿ ಎಂದುಕೊಳ್ಳುತ್ತಾರೆ ಎಂಬುದು ವಾಸ್ತವ ಎಂದು ಅವರು ಹೇಳಿದರು. ಸಿನೆಮಾ ಎಂಬುದು ಒಂದು ಸಾಂಘಿಕ ಕೈಂಕರ್ಯ ಎಂದವರು ತಿಳಿಸಿದರು. ವಿಕಾರತೆ ಬಿಟ್ಟು ವಿಕಾಸದತ್ತ ಸಾಗಬೇಕಿದೆ ಎಂದು ತಿಳಿಸಿದರು.

ನಿರ್ದೇಶಕ, ಸ್ಕ್ರೀನ್ ರೈಟರ್ ಅಭಿಷೇಕ್ ಅಯ್ಯಂಗಾರ್ ಮಾತನಾಡಿ, ಸಿನೆಮಾ ರಂಗಭೂಮಿ‌ಯ ಮುಂದುವರಿದ ಭಾಗವಾಗಿದೆ. ಸಾಹಿತ್ಯ‌ವನ್ನು ಸೃಷ್ಟಿ‌ಸುವ ರೀತಿ ಬದಲಾಗಿ ಸಿನೆಮಾ ಅಥವಾ ಯಾವುದೇ ವಿಶುವಲ್ ಮಾಧ್ಯಮ ಕೆಲವು ಬಾರಿ ತಪ್ಪು ಸಂದೇಶ‌ಗಳನ್ನು ಸೃಷ್ಟಿ‌ಸುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಬಗೆಗಿನ ಚಿತ್ರಗಳ ನಿರ್ಮಾಣ ಸಂದರ್ಭದಲ್ಲಿ ಈ ಬಗ್ಗೆ ಎಚ್ಚರ ಅತ್ಯಗತ್ಯ. ರಾಷ್ಟ್ರೀಯ‌ತೆಯನ್ನು ಸಿನೆಮಾಗಳಲ್ಲಿ ಹೇಗೆ ತೋರಿಸುತ್ತವೆ ಎಂಬುದರ ಮೇಲೆ ಸಿನಿಮಾ ರಾಷ್ಟ್ರೀಯ‌ತೆ ನಿಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿನೆಮಾ ಎಂಬುದು ಹಲವರನ್ನು ಸೆಳೆಯುತ್ತದೆ. ಆದ್ದರಿಂದ ಇದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿ ಉತ್ತಮ ಸಂದೇಶ‌ಗಳನ್ನು ತಲುಪಿಸುವ ಕೆಲಸವಾಗಬೇಕಿದೆ. ಸಿನೆಮಾ ತಂಡ ಜವಾಬ್ದಾರಿ‌ಯುತವಾಗಿ ಕಾರ್ಯ ನಿರ್ವಹಿಸಿದಾಗ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆ‌ಗಳು ಕಡಿಮೆಯಾಗುತ್ತದೆ. ರಂಗಭೂಮಿ ಮತ್ತು ಸಿನಿಮಾ ನಡುವಿನ ಗೆರೆ, ಅಂತರ ಮಾಯವಾಗಬೇಕು ಎಂದು ಅಭಿಷೇಕ್ ತಿಳಿಸಿದರು.

ಸಮನ್ವಯಕಾರ ಸಮರ್ಥ ರಾವ್ ಮಾತನಾಡಿ, ಸಿನೆಮಾ ಭಾರತದಲ್ಲಿ ಬಹಭ ಶಕ್ತಿಯುತ ಮಾಧ್ಯಮ. ಇದರಲ್ಲಿ ಭಾರತೀಯತೆ ಕಾಣಿಸುವ ಪ್ರಮಾಣ ಎಷ್ಟು ಎಂಬುದನ್ನು ಅರಿಯಬೇಕು.

The post ಗೋಷ್ಠಿ 4 : Exploring the Indian Identity through Cinema appeared first on Mangaluru.

ಗೋಷ್ಠಿ 3 : Azadi ke 75 Saal: Swarajya Then And Now
ಮೂರನೇ ಗೋಷ್ಠಿಯಲ್ಲಿ Azadi ke 75 Saal: Swarajya Then And Now ಎಂಬ ವಿಚಾರದ ಬಗ್ಗೆ ಅಭ್ಯಾಗತರು ಅಭಿಪ್ರಾಯ ಮಂಡನೆ ಮಾಡಿದರು. ಸಮನ್ವಯ‌ಕಾರ ಡಾ. ನಂದನ್ ಪ್ರಭು ಕಾರ್ಯಕ್ರಮ ನಡೆಸಿಕೊಟ್ಟರು.

ಆರ್ಗನೈಸರ್‌ನ ಮಾಜಿ ಸಂಪಾದಕರಾದ ಶ್ರೀ ಶೇಷಾದ್ರಿ ಚಾರಿ ಅಖಂಡ ಭಾರತ ಪರಿಕಲ್ಪನೆ‌ಯ ಬಗ್ಗೆ ಮಾತನಾಡಿ, 1947-2021 ರ ವರೆಗಿನ ಭಾರತದ ಸ್ವಾತಂತ್ರ್ಯದ ಬಗ್ಗೆ ಹೇಳುವುದಾದರೆ ಇಂಡಿಯಾ ಎಂಬ ಶಬ್ದ ಭಾರತದ ಸ್ವಾತಂತ್ರ್ಯ‌ಕ್ಕೂ ಮೊದಲೇ ಹುಟ್ಟಿರುವಂತಹದ್ದು. ಭೌಗೋಳಿಕವಾಗಿ, ಐತಿಹಾಸಿಕವಾಗಿ ಭಾರತದಲ್ಲಿ ಹಲವು ಬದಲಾವಣೆಗಳು ಘಟಿಸಿವೆ. ಪ್ರದೇಶದಿಂದ ಪ್ರದೇಶಕ್ಕೆ ಈ ಬದಲಾವಣೆ‌ಯನ್ನು ನಾವು ಗಮನಿಸಬಹುದು. ಸಂಸ್ಕೃತಿ ಮತ್ತು ಸಭ್ಯತೆ ಇವೆರಡೂ ವಿಭಿನ್ನ ನೆಲೆಗಟ್ಟಿನಲ್ಲಿ ಅರಿತುಕೊಳ್ಳಬೇಕಾದ ವಿಚಾರಗಳು. ಭೌಗೋಳಿಕ ವಿಚಾರಗಳು ಹಿಂದಿನಂತೆಯೇ ಇಂದಿಗೂ ಇದೆ. ಆದರೆ ಸಾಂಸ್ಕೃತಿಕ ವಿಚಾರಗಳು ಮಾತ್ರ ಹಲವು ಮಹತ್ತರ ಬದಲಾವಣೆ‌ಗಳಿಗೆ ಸಾಕ್ಷಿಯಾಗಿದೆ ಎಂದರು.

ಸ್ವರಾಜ್ಯ ಎಂಬ ಕಲ್ಪನೆ ನಾವು ಯಾವುದನ್ನು ಪ್ರತಿನಿಧಿಸುತ್ತಿದ್ದೇವೆ ಎಂಬುದು. ಅಖಂಡ ಭಾರತ ಎಂಬುದು ದೇಶದ ಭೌಗೋಳಿಕ ಮತ್ತು ಐತಿಹಾಸಿಕ ವಿಚಾರಗಳಿಗೆ ಸಂಬಂಧಿಸಿದಂತೆ ಇದೆ. ಅದರೊಂದಿಗೆ ಸಾಂಸ್ಕೃತಿಕ ಭಾರತವೂ ಅಡಕವಾಗಿದೆ. ಈ ಸಾಂಸ್ಕೃತಿಕ ಭಾರತದ ವಿಚಾರಧಾರೆಗಳೇನು ಎಂಬುದು ಅಖಂಡ ಭಾರತದ ಪರಿಕಲ್ಪನೆ‌ಯಾಗಿದೆ. ಈ ಒಂದು ಅಜೆಂಡಾದ ಮಿತಿಯೊಳಗೆ ಎಲ್ಲಾ ರಾಜಕೀಯ ವಿಚಾರಗಳೂ ಬರುತ್ತದೆ ಎಂದು ತಿಳಿಸಿದರು. ಭಾರತ ವಿಶ್ವ ಕುಟುಂಬ‌ಕಂ ಪರಿಕಲ್ಪನೆ‌ಯಲ್ಲಿ ಮುನ್ನಡೆಯುತ್ತಿದೆ ಎಂಬುದು ನಮ್ಮ ಗಮನದಲ್ಲಿರಬೇಕು. ನಾಗರೀಕ‌ತೆಯ ಮುಂದುವರಿಕೆಯ ಬಗ್ಗೆ ನಾವು ಅರಿತುಕೊಳ್ಳಬೇಕಾಗಿದೆ. ಈ ಕಲಿಕೆಯ ಪ್ರವೃತ್ತಿ ನಮ್ಮೊಂದಿಗೆ ಸದಾ ಇರಬೇಕು ಎಂದು ಚಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಚಾರ ಮಂಡಿಸಿದ ಲೇಖಕ ಡಾ. ವಿಕ್ರಂ ಸಂಪತ್ ಮಾತನಾಡಿ, ನಮ್ಮಲ್ಲಿ ಭಾರತದ ಬಗ್ಗೆ ಅನೇಕ ಕಲ್ಪನೆಗಳಿವೆ. ಈ ಕಾರಣದಿಂದ‌ಲೇ ಸ್ವಾತಂತ್ರ್ಯ ಪಡೆಯುವುದಕ್ಕೂ ಕಷ್ಟಪಡಬೇಕಾಯಿತು. ಅನೇಕ ಚಿಂತನೆಗಳ ಕಾರಣದಿಂದ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಭಾರತದ ಪರಿಕಲ್ಪನೆ ಇರುವುದು ಕೇವಲ ರಾಜಕೀಯ ವಿಚಾರದಲ್ಲಿ ಅಲ್ಲ. ಬದಲಾಗಿ ನಾಗರೀಕತೆ, ಸಂಸ್ಕೃತಿಯೂ, ಅಧ್ಯಾತ್ಮ ಮೊದಲಾದವುಗಳ ಬಗೆಗೂ ಚಿಂತನೆಗಳನ್ನು ಒಳಗೊಂಡಿದೆ. ಕೇವಲ ರಾಜಕೀಯ ಸ್ವಾತಂತ್ರ್ಯ‌ದ ಪರಿಕಲ್ಪನೆ ಸ್ವಾತಂತ್ರ್ಯ ವಲ್ಲ. ಸ್ವರಾಜ್ಯ, ಸಂಸ್ಕೃತಿ ಮೊದಲಾದವುಗಳ ಕಲ್ಪನೆ ಇದರಲ್ಲಿ ಪಾಲು ಪಡೆಯುತ್ತವೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಎಂಬುದು ನಾವೆಲ್ಲರೂ ಒಂದೇ ಎಂಬ ಭಾವ, ಸಾಂಸ್ಕೃತಿಕ ಸಮಾನತೆಯ ಕಲ್ಪನೆಯಿಂದ ಸೃಜಿಸಬೇಕು. ಇದೇ ಚಿಂತನೆಗಳನ್ನು ಸಂವಿಧಾನದಲ್ಲಿ‌ಯೂ ನಾವು ಗಮನಿಸಬಹುದು. ಈ ಸಂವಿಧಾನ‌ದ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಇಂತಹ ಜ್ಞಾನೋದಯವಾದಾಗ ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯ. ನಮ್ಮ ಸಮಾಜದಲ್ಲಿ ಕಳೆದ 75 ವರ್ಷಗಳಿಂದ ವೈದ್ಯಕೀಯ, ಶಿಕ್ಷಣ, ಸಮಾನತೆ ಮೊದಲಾದಂತೆ ಎಲ್ಲಾ ಕ್ಷೇತ್ರ‌ಗಳಲ್ಲಿಯೂ ನಾವು ಅಭಿವೃದ್ಧಿ ಕಂಡಿದ್ದೇವೆ. ಇದು ನಮಗೆ ಹೆಮ್ಮೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಗಳೂರು ವಿವಿಯ ಪ್ರೊಫೆಸರ್ ಡಾ. ಧರ್ಮ ಅವರು ಮಾತನಾಡಿ, ಸ್ವರಾಜ್ಯ, ಸ್ವ ಎಂಬ ಕಲ್ಪನೆಯೇ ವಿಶೇಷ ಮತ್ತು ವಿಸ್ತಾರವಾಗಿದೆ. ಪಾರ್ಲಿಮೆಂಟ್ ಕಲ್ಪನೆಯನ್ನು ಜಾರಿಗೆ ತಂದವರಿಗೂ ಈ ವಿಸ್ತಾರದ ಅರಿವು ಮತ್ತು ಸ್ವ ಎಂದರೇನು ಎಂಬ ಕಲ್ಪನೆ, ಅರಿವು ಇತ್ತೆಂಬುದು ಸ್ಪಷ್ಟ. ಭಾರತದ ಸ್ವಾತಂತ್ರ್ಯ‌ಕ್ಕೆ 75 ವರ್ಷಗಳಾಗುತ್ತಿದೆ. ಆದರೆ ಭಾರತದ ಪರಿಕಲ್ಪನೆ ಅದಕ್ಕೂ ಮುನ್ನ‌ವೇ ಇತ್ತು ಎಂಬುದನ್ನು ಅರಿಯಬೇಕು. ಬ್ರಿಟಿಷ್‌ರು ಭಾರತದಿಂದ ಹೋದರು. ಆದರೆ ಅವರ ಚಿಃತನೆಗಳ ಜೊತೆಗೆ ನಮ್ಮಲ್ಲೇ ಜೀವಂತವಾಗಿದ್ದಾರೆ. ಅಲ್ಲಿ ನಮ್ಮ ‘ಸ್ವ’ ದ ಪರಿಕಲ್ಪನೆ ಪಾಲನೆಯಾಗಿಲ್ಲ ಎಂಬುದು ಸತ್ಯ ಎಂದು ಹೇಳಿದರು.

ಸ್ವ ಎಂಬುದೇ ಭಾರತದ ಕಲ್ಪನೆಯಾಗಿತ್ತು. ಇವೆಲ್ಲವೂ ವ್ಯಕ್ತಿಗತವಾಗಿ ಬೇರೆಬೇರೆಯಾದರೂ, ಎಲ್ಲರನ್ನೂ ಒಗ್ಗೂಡಿಸಿ ‘ಸ್ವ’ ದ ಪರಿಕಲ್ಪನೆ‌ಗೆ ಶಕ್ತಿ ತುಂಬುತ್ತಿದ್ದ ಕೆಲಸ ಪಾರ್ಲಿಮೆಂಟ್‌ನಿಂದಾಗುತ್ತಿತ್ತು ಎಂಬುದನ್ನು ಅರಿಯಬೇಕು. ಇನ್ನೊಂದು’ಸ್ವ’ದ ಪರಿಕಲ್ಪನೆ‌ಯ ಬಗ್ಗೆ ಹೇಳುವುದಾದರೆ ನಮ್ಮತನ ಎಂಬುದೇ ಅದರರ್ಥ. ಭಾರತದ ಸತ್ವ ಅರಿತ ಹಿರಿಯರು ಪಾರ್ಲಿಮೆಂಟ್ ಎಂಬ ಕಲ್ಪನೆಯ ಮೂಲಕ ನಮ್ಮತನದ ಕಲ್ಪನೆಗೆ ರೂಪ ನೀಡಿದ್ದಾರೆ. ನಮ್ಮಲ್ಲಿ ಜಾತಿಗೊಂದು, ಧರ್ಮಕ್ಕೊಂದು ಸಾಹಿತ್ಯ ಸೃಷ್ಟಿಯಾಗಿ ಏಕತೆಯ ರಾಷ್ಟ್ರ ನಿರ್ಮಾಣವಾಗುವ ಮಾತೇ ಬಂದಿಲ್ಲ ಎಂಬುದು ದುರಂತ. ಆದ್ದರಿಂದ ಎಲ್ಲಾ ವಿಭಿನ್ನ ನಿಲುವುಗಳನ್ನು ಹೊಂದಿರುವ ಕ್ಷೇತ್ರ‌ಗಳೂ ದೇಶದ ವಿಚಾರದಲ್ಲಿ ಒಗ್ಗೂಡುವ ಮೂಲಕ ‘ಸ್ವರಾಜ್ಯ’ ಪರಿಕಲ್ಪನೆ‌ಗೆ ಶಕ್ತಿ ತುಂಬುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಿತಿಕಾ ಆಚಾರ್ಯ ಅವರು ಲಿಂಗ ಸಮಾನತೆಯ ಬಗ್ಗೆ ಮಾತನಾಡುತ್ತಾ, ನಮ್ಮ ಸಂಪ್ರದಾಯ‌ಗಳ ಬಗ್ಗೆ ಅವುಗಳ ಹಿಂದಿನ ವೈಜ್ಞಾನಿಕ‌ತೆಯ ಬಗ್ಗೆ ಯುವಜನತೆ ತಿಳಿಯಬೇಕಿದೆ. ಮಹಿಳೆಗೆ ಆಕೆಯದ್ದೇ ಆದ ಚಿಂತನೆಗಳ ಮೂಲಕ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಬೇಕು. ಪುರುಷ‌ರಿಗೆ ಸಿಕ್ಕ ಸ್ವಾತಂತ್ರ್ಯ ಆಕೆಗೆ ಎಲ್ಲಾ ವಿಚಾರಗಳಲ್ಲಿ‌ಯೂ ತಿಳಿಯಬೇಕಿದೆ. ಭಾರತದ ಮಹಿಳೆಯರು ಯಾವ ಕ್ಷೇತ್ರದ‌ಲ್ಲೂ ಹಿಂದುಳಿದಿಲ್ಲ. ಮನೆ ನಡೆಸುವುದರಿಂದ ಹಿಡಿದು ಕಾರ್ಪೊರೇಟ್ ಸಂಸ್ಥೆ‌ಯಲ್ಲಿ ದುಡಿಯುವ ವರೆಗೆ ಮಹಿಳೆ ಮುಂದುವರಿದಿದ್ದಾಳೆ. ಅವಳನ್ನು ಭಿನ್ನ ದೃಷ್ಟಿಕೋನದಿಂದ ನೋಡುವುದನ್ನು ನಿಲ್ಲಿಸಬೇಕು. ಸಂಪ್ರದಾಯ, ಸಂಸ್ಕೃತಿ‌ಗಳ ಹಿಂದಿರು ವೈಜ್ಞಾನಿಕ‌ತೆಯನ್ನು ಯುವಜನರಿಗೆ ತಿಳಿಯಪಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮನ್ವಯ‌ಕಾರ ನಂದನ್ ಪ್ರಭು ಅವರು ನಾವು ಸ್ವಾತಂತ್ರ್ಯ ಬಯಸುವುದು ನಮ್ಮ ಸಂಸ್ಕೃತಿ, ನಮ್ಮ ಸಂಪ್ರದಾಯಗಳನ್ನು ಉಳಿಸುವುದಕ್ಕಾಗಿ. ಭಾರತದ ಸ್ವಾತಂತ್ರ್ಯ‌ಕ್ಕೆ 75 ವರ್ಷಗಳಾಗುವ ಸಂದರ್ಭದಲ್ಲಿ ನಾವೊಮ್ಮೆ ಸಿಂಹಾವಲೋಕನ ಮಾಡಬೇಕಿದೆ. ಭಾರತದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಸೇರಿದಂತೆ ಎಲ್ಲಾ ವಲಯಗಳಲ್ಲಾದ ಬದಲಾವಣೆಗಳ ಬಗ್ಗೆ ವಿಮರ್ಶೆ ಮಾಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

The post ಗೋಷ್ಠಿ 3 : Azadi ke 75 Saal: Swarajya Then And Now appeared first on Mangaluru.

ಗೋಷ್ಠಿ 2 : ನೆಲದ ಭಾಷೆ, ಮನದ ಮಾತು : ನವಭಾರತಕೆ ದೇಸೀ ಸೊಗಡಿನ ಬಗ್ಗೆ ದಾಖಲೀಕರಣವಾಗಬೇಕು
ಎರಡನೇ ಗೋಷ್ಠಿಯಲ್ಲಿ ‘ನೆಲದ ಭಾಷೆ, ಮನದ ಮಾತು : ನವಭಾರತಕೆ ದೇಸೀ ಸೊಗಡು ಬಗ್ಗೆ ಅಭ್ಯಾಗತರು ವಿಚಾರ ಮಂಡಿಸಿದರು. ಗೋಷ್ಠಿಯನ್ನು ಡಾ. ರೋಹಿಣಾಕ್ಷ ಶಿರ್ಲಾಲು ಅವರು ನಡೆಸಿಕೊಟ್ಟರು.

ಹಾವೇರಿ ಜಾನಪದ ವಿವಿಯ ಡಾ. ಆನಂದಪ್ಪ ಬಿ. ಎಚ್. ಜೋಗಿ ಮಾತನಾಡಿ, ಹಂಚಿ ಉಣ್ಣುವ ಪದ್ಧತಿ ನಮ್ಮಲ್ಲಿ ಕಡಿಮೆ ಆಗುತ್ತಿವೆಯಾ? ಎಂಬ ಚಿಂತನೆ ಮಾಡಬೇಕಾಗಿದೆ. ದೇಸೀ ಎಂಬುದು ನಿಸರ್ಗ ಜೀವಿಗಳನ್ನು ಸೂಚಿಸುತ್ತದೆ. ಇವರಲ್ಲಿ ಹಂಚಿ ತಿನ್ನುವ ಸೊಬಗನ್ನು ನಾವು ಗಮನಿಸಬಹುದು. ಅಲ್ಲಿ ಬೇಧವಿರಲಿಲ್ಲ. ಎಲ್ಲರಿಗೂ ಪಾಲಿತ್ತು. ದೇಸೀ ಜನರಲ್ಲಿ ಅಂತಹ ಅನ್ಯೋನ್ಯತೆ ಇತ್ತು. ಅದನ್ನು ಗೌರವಿಸಬೇಕಾಗಿದೆ. ದೇಸೀ ಹಿನ್ನೆಲೆಯ ಒಳಗೊಳ್ಳುವಿಕೆಯ, ನೆರವಾಗುವ ಮೂಲಕವೇ ನಾವು ಈ ಸಂಕಷ್ಟ‌ವನ್ನು ಎದುರಿಸಬಹುದಾಗಿದೆ. ಮಾನವೀಯತೆಯ ಮುಂದೆ ಯಾವ ಧರ್ಮ ಸಹ ಮುಖ್ಯ‌ವಲ್ಲ. ಸವಾಲಿಗೆ ಇದೇ ಉತ್ತರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿಶ್ವದ ಮೊಟ್ಟಮೊದಲ ಸಂಸ್ಕೃತಿ ನಿಸರ್ಗ, ಜನಪದ ಸಂಸ್ಕೃತಿ ಎಂದು ತಿಳಿಸಿದರು.

ಜಾನಪದ ವಿಶೇಷವಾದದ್ದು. ಅದಕ್ಕೆ ಒಂದು ಹಿನ್ನೆಲೆ ಇದೆ. ಇವೆಲ್ಲದರ ಬಗ್ಗೆಯೂ ಜನಪದದಲ್ಲಿ ನಾವು ಕಥೆ, ಹಾಡುಗಳನ್ನು ಗಮನಿಸಬಹುದು. ಇದೆಲ್ಲ ದೇಸೀ ಆಹಾರದಂತೆ. ಇದನ್ನು ಸೇವಿಸಿದಲ್ಲಿ ಮಾತ್ರ ಈ ಸಂಸ್ಕೃತಿ, ಕಲೆ ಉಳಿಯಲು ಸಾಧ್ಯ ಎಂದು ಆನಂದಪ್ಪ ಹೇಳಿದರು. ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವ, ಹೃದಯ ವೈಶಾಲ್ಯವನ್ನು ಬೆಳೆಸಿಕೊಳ್ಳುವ ಕೆಲಸವಾಗಬೇಕು ಎಂದು ಹೇಳಿದರು. ನಮ್ಮದು ವೈಜ್ಞಾನಿಕವಾಗಿ ಚಿಂತನೆ ನಡೆಸುವ ಸಂಸ್ಕೃತಿ. ಈ ಸಂಸ್ಕೃತಿ ನಮ್ಮ ಹಿರಿಯರಾದ ಜನಪದರಲ್ಲಿತ್ತು ಎಂದು ತಿಳಿಸಿದರು. ಭಾರತದ ಸಂವಿಧಾನ‌ದಲ್ಲಿಯೂ ಜನಪದವನ್ನು ಗಮನಿಸಬಹುದು. ಸ್ವಾಮಿ ವಿವೇಕಾನಂದರೂ ಜನಪದದ ಬಗ್ಗೆ ಮಾತನಾಡಿದ್ದಾರೆ. ಇದು ಪಾರಂಪರಿಕ ಜ್ಞಾನ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಏಷ್ಯಾ‌ನೆಟ್ ಸುವರ್ಣ ಬೆಂಗಳೂರು ಇದರ ಕ್ರಿಯೇಟಿವ್ ಹೆಡ್ ಆಗಿರುವ ಸತ್ಯಬೋಧ್ ಜೋಶಿ ಮಾತನಾಡಿ, ತಾಂತ್ರಿಕ‌ತೆಯಿಂದ ಹೆಚ್ಚಿನ ವಿಚಾರಗಳನ್ನು ದಾಖಲೀಕರಿಸಿಡಲು, ಸಮಾಜಕ್ಕೆ ಯಾವುದನ್ನೋ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಮುಖ್ಯವಾಗುತ್ತದೆ. ಯಾವ ಮಹಾಕಾವ್ಯ‌ಗಳಲ್ಲಿ ಗುರುತಿಸಲಾಗಿಲ್ಲವೋ ಅವುಗಳನ್ನು ಜನಪದರು ಗುರುತಿಸಿದ್ದಾರೆ. ಇದನ್ನು ದಾಖಲೀಕರಿಸಲು ಸಾಧ್ಯವಿದೆ. ಗೊತ್ತಿಲ್ಲದ ಹಲವು ಕಥೆಗಳು ಜನಪದದ ಮೂಲಕ ತಿಳಿಯುವುದು ಸಾಧ್ಯವಿದೆ. ಅದು ಈ ನೆಲದ ಮಾತು. ಜನಪದ ಸಂಸ್ಕೃತಿ, ಆಚಾರ, ವಿಚಾರ, ಆಚರಣೆಗಳು ಈ ನೆಲದ ಮಾತು. ಇದನ್ನು ಕೂಡಿಡುವ ಕೆಲಸವನ್ನು ಮಾಡುವ ತುರ್ತು ನಮ್ಮದಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನೆಲದ ಮಾತಾಗಿರುವ ಜನಪದ ಮಾಧ್ಯಮವನ್ನು ಜನರಿಗೆ ತಲುಪಿಸುವ, ದಾಖಲಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ ಎಂದು ತಿಳಿಸಿದರು.

ನಾವು ಏನು, ನಮ್ಮ ಸೊಬಗೇನು ಎಂಬುದನ್ನು ಅರಿಯುವ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿ‌ಯ ದಾಖಲೀಕರಣವಾಗಬೇಕಿದೆ. ಎಷ್ಟೋ ಮಹಾಕಾವ್ಯ‌ಗಳು, ಪುಸ್ತಕಗಳು ಹೇಳದ ವಿಚಾರಗಳನ್ನು ಜನಪದದ ಮೂಲಕ ತಿಳಿಯಬಹುದು. ಅದನ್ನು ಮುಂದಿನ ಜನಾಂಗಕ್ಕೆ ತಿಳಿಸಲು ದಾಖಲೀಕರಣ ಪ್ರಕ್ರಿಯೆ ಮುಖ್ಯ‌ವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಬಗ್ಗೆ ಯುವಜನತೆ ಗಮನಹರಿಸಬೇಕಿದೆ, ಆ ಇಚ್ಛೆ ಬೆಳೆಯಬೇಕಾಗಿದೆ ಎಂದು ಅವರು ಹೇಳಿದರು. ಜನಪದರ ನೆಲೆಗೇ ಹೋಗಿ ಆ ಸಂಸ್ಕೃತಿ‌ಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯ ನಡೆಯಬೇಕು. ಇದು ಇಂದಿನ ತುರ್ತು ಎಂದು ತಿಳಿಸಿದರು.

ಜಾನಪದ ಕಲಾವಿದೆ ಮಂಗಳಾ ಸಿದ್ದಿ ಅವರು ಮಾತನಾಡಿ, ಈ ಸಮಾಜದ ನೆಲದ ಮಾತನ್ನು ಉಳಿಸುವ ಕೆಲಸವನ್ನು ಹಿರಿಯರು ಮಾಡಿದ್ದಾರೆ. ಆಧುನಿಕತೆಯ ಭರಾಟೆಯಲ್ಲಿ ಜನಪದ ಎಂಬುದು ಕಳೆದು ಹೋಗುತ್ತದೆ. ಅದನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯ ನಡೆಯಬೇಕು. ಆಧುನಿಕ ಶಿಕ್ಷಣ‌ದ ಜೊತೆಗೆ ನಮ್ಮ ಸಂಸ್ಕೃತಿ, ನಮ್ಮ ಪರಂಪರೆ, ನಮ್ಮ ನೆಲದ ಸೊಗಡಾಗಿರುವ ಜನಪದವನ್ನು ಬೆಳೆಸುವ ಕೆಲಸ ಮಾಡಬೇಕು. ಆಗ ಇವುಗಳ ಉಳಿವು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜನಪದವನ್ನು ದಾಖಲೀಕರಣ ಮಾಡುವ ಕೆಲಸವಾಗಬೇಕು ಎಂದು ನುಡಿದರು.

ನೆಲದ ಸಂಸ್ಕೃತಿ ಮೆರೆಯಬೇಕಾದವರು ಮರೆಯುತ್ತಿದ್ದೇವೆ. ಬೇರೆಯೇ ಲೋಕದಲ್ಲಿ ಬದುಕುತ್ತಿದ್ದೇವೆ. ಇದು ಅಪಾಯದ ಸನ್ನಿವೇಶವೋ, ಸವಾಲೋ ಎಂಬುದು ಇಂದಿನ ಪ್ರಶ್ನೆ. ಇದಕ್ಕೆ ಉತ್ತರ ನೆಲದ ಮಾತಾದ ಜನಪದದಲ್ಲಿ ಸಿಗುತ್ತದೆ. ಅವನ್ನು ಉಳಿಸಬೇಕು ಎಂದು ವಿಚಾರ ಸಂಕೀರ್ಣದ ಸಮನ್ವಯಕಾರ ರೋಹಿಣಾಕ್ಷ ಶಿರ್ಲಾಲು ತಿಳಿಸಿದರು.

The post ಗೋಷ್ಠಿ 2 : ನೆಲದ ಭಾಷೆ, ಮನದ ಮಾತು : ನವಭಾರತಕೆ ದೇಸೀ ಸೊಗಡಿನ ಬಗ್ಗೆ ದಾಖಲೀಕರಣವಾಗಬೇಕು appeared first on Mangaluru.

ಗೋಷ್ಠಿ 1 – Post Pandemic Narrative: Reimagining the India Way
ಮೊದಲ ಗೋಷ್ಠಿಯಲ್ಲಿ Post Pandemic Narrative: Reimagining the India Way ಬಗ್ಗೆ ಅಭ್ಯಾಗತರು ವಿಚಾರ ಮಂಡಿಸಿದರು.

ಶಕ್ತಿ ಸಿನ್ಹಾ ಅವರು, ಕೊರೋನಾ ಬಳಿಕ ಭಾರತ ತನ್ನದೇ ಆದ ರೀತಿಯಲ್ಲಿ ಈ ಸಂಕಷ್ಟ‌ದ ಸ್ಥಿತಿಯನ್ನು ನಿಯಂತ್ರಣ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಭಾರತ ವಿಶ್ವಗುರುವಾಗುವತ್ತ ಭಾರತದ ಈ ನಿಲುವುಗಳು ಸಹ ಪ್ರಾಮುಖ್ಯತೆ ಪಡೆದಿದೆ. ಆರ್ಥಿಕ, ಸಾಮಾಜಿಕ, ರಾಜಕೀಯ, ಅಂತರಾಷ್ಟ್ರೀಯ ವಿಚಾರಗಳಲ್ಲಿ ಸಾಧನೆ ಮೆರೆದಿದೆ. ಕೊರೋನಾಗೆ ಲಸಿಕೆ ಹುಡುಕಿ ಅದನ್ನು ದೇಶ, ವಿದೇಶಗಳಿಗೆ ತಲುಪಿಸುವ ಕೆಲಸವನ್ನು ಮಾಡಿದೆ ಎಂದು ಹೇಳಿದರು.

ನಾವು ಈ ಸಂಕಷ್ಟ‌ದ ಸಂದರ್ಭದಲ್ಲಿ‌ಯೂ ಅಭಿವೃದ್ಧಿ‌ಯತ್ತ ಹೆಜ್ಜೆ ಇರಿಸಿದ್ದೇವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದೆ. ಆತ್ಮನಿರ್ಭರದ ಮೂಲಕ ಎಲ್ಲಾ ಕ್ಷೇತ್ರ‌ಗಳಲ್ಲಿಯೂ ಅಭಿವೃದ್ಧಿ ಸಾಧಿಸಿದೆ. ಆ ಮೂಲಕ ನಾಯಕನ ಸ್ಥಾನವನ್ನು ಪಡೆದಿದೆ ಎಂದು ಅವರು ಹೇಳಿದರು.

ವಿಕ್ರಂ ಸೂದ್ ಅವರು, ಕೊರೋನಾ ಬಳಿಕ ಭಾರತ ಚೇತರಿಸಿಕೊಳ್ಳಲು ಆಯ್ಕೆ ಮಾಡಿದ ದಾರಿಯೇ ಅದ್ಭುತ. ಭಾರತ ಪಡೆದುಕೊಳ್ಳುವ ಸಂಸ್ಕೃತಿ‌ಯಿಂದ ನೀಡುವ ಸಂಸ್ಕೃತಿ‌ಗೆ ಬೆಳೆದಿದೆ. ಭಾರತ ಚೀನಾ ವಿರುದ್ಧ ತನ್ನ ಸಾಮರ್ಥ್ಯ ಪ್ರದರ್ಶನ ಮಾಡಿದೆ. ಭಾರತದ ರಾಷ್ಟ್ರೀಯ ಆಸ್ಥೆಗಳು ದೇಶವನ್ನು ಸಮೃದ್ಧವಾಗಿಸಿದೆ. ನಮ್ಮ ಸಂಸ್ಕೃತಿ ಇತಿಹಾಸವನ್ನು ಮರೆಯದೆ ಮುಂದುವರೆಯಬೇಕು ಎಂದು ಹೇಳಿದರು.

ಪ್ರೊ. ಮಾಧವ್ ನಲಪತ್ ಮಾತನಾಡಿ, ನಮ್ಮ ದೇಶಕ್ಕೆ ಅದರದ್ದೇ ಆದ ಇತಿಹಾಸವಿದೆ. ನಾವು ನಮ್ಮಲ್ಲಿನ ಶಕ್ತಿಯನ್ನು ತಿಳಿದುಕೊಳ್ಳುವಲ್ಲಿ ಸಾಧ್ಯವಾಗಿದೆ. ನಮ್ಮ ಸಂಸ್ಕೃತಿಯನ್ನು ತಿಳಿದುಕೊಳ್ಳಲು, ಅರ್ಥ ಮಾಡಿಕೊಳ್ಳಲು ಸಹಾಯವಾಗಿದೆ. ನಾಗರೀಕತೆಯ ಬಗ್ಗೆ ನಮ್ಮಲ್ಲಿ ಅರಿವು ಮೂಡಿದೆ. ಆ ಮೂಲಕ ಜಗತ್ತಿಗೆ ನಾವು ಯಾವ ರೀತಿಯಲ್ಲಿ ಗುರುತಿಸಿಕೊಳ್ಳಬೇಕು ಎಂಬುದರ ಬಗ್ಗೆ ಭಾರತ ತಿಳಿದುಕೊಂಡಿದೆ. ವಿಶ್ವಕ್ಕೆ ಸಮಸ್ಯೆ‌ಗಳನ್ನು ಹೇಳುವ ಬದಲು, ವಿಶ್ವ‌ದ ಸಮಸ್ಯೆ‌ಗೆ ಪರಿಹಾರ ನೀಡುವಂತಾಗಬೇಕು ಎಂಬ ಗುರಿಯ ಜೊತೆಗೆ ಭಾರತ ಇಂದು ಹೆಜ್ಜೆ ನೆಟ್ಟಿದೆ. ಭಾರತ ವಸುದೈವ ಕುಟುಂಬಕಂ ಎಂಬ ಧ್ಯೇಯದ ಜೊತೆಗೆ ವಿಶ್ವಮಾನ್ಯವಾಗುತ್ತಿದೆ ಎಂದು ತಿಳಿಸಿದರು. ಕೊರೋನಾ ಸಂಕಷ್ಟ‌ದಲ್ಲಿ ಜಗತ್ತು ಒಂದು ಕುಟುಂಬ ಎಂಬಂತೆ ಭಾರತ ವಿಶ್ವವನ್ನು ಗಣನೆಗೆ ತೆಗೆದುಕೊಂಡಿದೆ. ಕೊರೋನಾ ಅವಧಿಯ‌ನ್ನು ಭಾರತ ಅವಕಾಶ‌ವಾಗಿ ಬಳಸಿಕೊಂಡಿದೆ ಎಂದು ಹೇಳಿದರು.

ಡಾ. ದತ್ತೇಶ್ ಡಿ ಪ್ರಭು ಪರುಲೇಖಾ ಅವರು ಮಾತನಾಡಿ, ಕೊರೋನಾ ನಂತರದಲ್ಲಿ ಭಾರತದ ವಿದೇಶೀ ನೀತಿಯಲ್ಲಿ ಬದಲಾವಣೆ‌ಯಾಗಿದೆ. ಭಾರತದ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಈ ಸಂಕಷ್ಟ‌ದ ಸಮಯ ಸಹಾಯ ಮಾಡಿದೆ. ನಾಲ್ಕೂ ದಿಕ್ಕುಗಳಲ್ಲಿ ಭಾರತದ ಸ್ಥಾನ ಉನ್ನತಸ್ಥರಕ್ಕೇರಿದೆ. ಭಾರತ ರಾಜಕೀಯವಾಗಿ ವಿಶ್ವದೆದುರು ತನ್ನನ್ನು ಪ್ರದರ್ಶಿಸದೆ, ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಕೆಲಸಗಳನ್ನು ನಿರ್ವಹಿಸಿದೆ. ಕೊರೋನಾ ಸಂಕಷ್ಟ ನಿವಾರಣೆಯ ನಾಯಕತ್ವ‌ವನ್ನು ಭಾರತ ವಹಿಸಿದೆ ಎಂದೆನ್ನಬಹುದು ಎಂದು ತಮ್ಮ ವಿಚಾರಗಳನ್ನು ಮಂಡಿಸಿದರು.

ಕೊರೋನಾ ಬಳಿಕ ದೇಶ ಸಮೃದ್ಧವಾಗಿ‌ದೆ. ತನ್ನ ಜೊತೆಗೆ ಜಗತ್ತಿನ ಸುರಕ್ಷತೆಗೂ ಭಾರತ ಪ್ರಾಮುಖ್ಯತೆ ನೀಡಿದೆ. ಆ ಮೂಲಕ ಭಾರತ ವಿಶ್ವದಲ್ಲಿಯೇ ಮಹತ್ವದ ಸ್ಥಾನವನ್ನು ಪಡೆದಿದೆ ಎಂದು ಡಾ. ನಂದಕಿಶೋರ್ ತಿಳಿಸಿದರು.

The post ಗೋಷ್ಠಿ 1 – Post Pandemic Narrative: Reimagining the India Way appeared first on Mangaluru.

ಮಂಗಳೂರು ಲಿಟ್ ಫೆಸ್ಟ್‌ನ 3ನೇ ಆವೃತ್ತಿಯ ಉದ್ಘಾಟನಾ ಸಮಾರಂಭ
ಮಂಗಳೂರು: ಎಲ್ಲಾ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಂಡು ‘ಮಂಗಳೂರು ಲಿಟ್ ಫೆಸ್ಟ್’ ಇಂದು ಕೊಡಿಯಾಲ್‌ಬೈಲ್‌ನ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ‌ವನ್ನು ಮಣಿಪಾಲ ಮಾಹೆ ವಿದ್ಯಾಸಂಸ್ಥೆ‌ಯ ಡಾ ನಂದಕಿಶೋರ್ ಎಂ ಎಸ್, ನಿವೃತ್ತ ಐಎಎಸ್ ಅಧಿಕಾರಿ ಶಕ್ತಿ ಸಿನ್ಹಾ ಅವರು ದೀಪ ಬೆಳಗುವ ಉದ್ಘಾಟಿಸಿದರು.

ಮಿಥಿಕ್ ಸೊಸೈಟಿ ಸದಸ್ಯ ಪ್ರಸನ್ನ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶರಣ್ಯ ಮತ್ತು ಸುಮೇಧ ಪ್ರಾರ್ಥಿಸಿದರು. ಸುನೀಲ್ ಕುಲಕರ್ಣಿ ಸ್ವಾಗತಿಸಿದರು. ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ , ಮಾಳವಿಕಾ ಕಾರ್ಯಕ್ರಮ ನಿರೂಪಿಸಿದರು.

The post ಮಂಗಳೂರು ಲಿಟ್ ಫೆಸ್ಟ್‌ನ 3ನೇ ಆವೃತ್ತಿಯ ಉದ್ಘಾಟನಾ ಸಮಾರಂಭ appeared first on Mangaluru.