Session 2023 Archives - Mangaluru

ಪ್ರಸಕ್ತ ಕಾಲಘಟ್ಟದಲ್ಲಿ ಯಕ್ಷಗಾನ
ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 1 ರಲ್ಲಿ ಪಟ್ಲ ಸತೀಶ್ ಶೆಟ್ಟಿ, ಸಿಎ ವೃಂದಾ ಕೊನ್ನಾರ್ ಮತ್ತು ಪುರುಷೋತ್ತಮ ಭಂಡಾರಿ ಅವರು ಪ್ರಸಕ್ತ ಕಾಲಘಟ್ಟದಲ್ಲಿ ಯಕ್ಷಗಾನ ಕುರಿತು ಸಂವಾದ ನಡೆಸಿದರು.

ಪುರುಷೋತ್ತಮ ಭಂಡಾರಿ ಅವರು ಸಿಂಹವಾಹಿನಿಯಾದ, ನಗುಮೊಗದ ತಾಯಿ ಭಾರತಾಂಬೆಗೆ ಸಾಷ್ಟಾಂಗ ಪ್ರಣಾಮಗಳು. ಕರಾವಳಿ ಕರ್ನಾಟಕದ ಧೀಮಂತ ಕಲೆ ಯಕ್ಷಗಾನ. ನಮ್ಮ ಹಿರಿಯರಿಂದ ಬಂದ ಈ ಕಲೆ, ಒಂದು ಸಂದರ್ಭದಲ್ಲಿ ಯುವ ಜನತೆ ಅದರಿಂದ ದೂರ ಸರಿಯಲು ಪ್ರಾರಂಭಿಸಿದ್ದರು. ಪಟ್ಲ ಸತೀಶ್ ಶೆಟ್ಟಿ ಹಾಗೂ ವೃಂದಾರವರಂಥ ಕಲಾವಿದರು ಅದನ್ನು ಮತ್ತೆ ಪ್ರವರ್ಧಮಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಭಾಗವತರು ಅಂದ್ರೆ ನಿರ್ದೇಶಕರ ಸ್ಥಾನ ಇತ್ತು. ಈಗಿನ ಕಾಲದಲ್ಲಿ ಕಲಾವಿದರ ಮನಸ್ಥಿತಿ ಹೇಗಿದೆ ಎಂದು ಸಂವಾದವನ್ನು ಪ್ರಾರಂಭಿಸಿದರು.

ಪಟ್ಲ ಸತೀಶ್ ಶೆಟ್ಟಿ ಅವರು ಮಾತನಾಡಿ, ಭಾಗವತ ಎನ್ನುವ ನಾಲ್ಕಕ್ಷರಕ್ಕೆ ಶ್ರೇಷ್ಠ ಉದಾಹರಣೆಯಾಗಿದ್ದ ಬಲಿಪ ನಾರಾಯಣ ಭಾಗವತರಿಗೆ ಮೊತ್ತ ಮೊದಲಾಗಿ ನಮನಗಳು. ಬೇರೆ ಯಾವುದೇ ಕಲಾಪ್ರಕಾರದಲ್ಲಿ ಭಾಗವತ ಎಂಬ ಕಲ್ಪನೆಯೇ ಇಲ್ಲ. ನಮ್ಮ ಪುರಾಣವನ್ನು ಮನೆಮನೆಗೆ ತಲುಪಿಸಿದ ಹಿರಿಮೆ ಯಕ್ಷಗಾನದ್ದು. ಭಾಗವತ ಅಂದ್ರೆ ಕಥೆಯ ಸೂತ್ರಧಾರಿ. ಕಥೆಯನ್ನು ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಅವನ ಪಾತ್ರ ದೊಡ್ದದು ಎಂದರು.

ಒಂದು ಕಾಲದಲ್ಲಿ ರಾತ್ರಿ ಇಡೀ ಇದ್ದದ್ದು.. ಈಗ ಕಾಲಮಿತಿ ಆಗಿದೆ. ಈ ಬಗ್ಗೆ ಅನೇಕ ವಿಮರ್ಶೆಗಳು ನಡೆದಿವೆ. ನಿಮ್ಮ ಅಭಿಪ್ರಾಯ ಏನು? ಎಂದು ಪುರುಷೋತ್ತಮ ಭಂಡಾರಿ ಅವರು ಕೇಳಿದ ಪ್ರಶ್ನೆಗೆ ಪಟ್ಲ ಸತೀಶ್ ಶೆಟ್ಟಿ ಅವರು ಉತ್ತರಿಸುತ್ತಾ, ವಿಮರ್ಶೆಗಳು ಬೇಕೇಬೇಕು. ಮೊದಲು4-5 ದಿನಗಳ ಕಾಲ ನಡೆಯುತ್ತಿತ್ತು. ಈಗ ರಾತ್ರಿಯಿಡೀ ಮಾಡಿದ್ರೂ ನೋಡುವವರ ಸಂಖ್ಯೆ ಕಡಿಮೆ. ಪ್ರೇಕ್ಷಕರ ಅಭಿರುಚಿಯೂ ಬೇರೆಬೇರೆ ಇರುತ್ತದೆ. ಅದಕ್ಕನುಗುಣವಾಗಿ ಬದಲಾವಣೆ ಆಗಿದೆ ಎಂದರು

ಈಗಿನ ಕಾಲಘಟ್ಟದಲ್ಲಿ ಕಲಾವಿದರ ಹಾಗೂ ಪ್ರೇಕ್ಷಕರ ಮನಸ್ಥಿತಿ ಹೇಗಿದೆ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಯಕ್ಷಗಾನ ಇಂದು ಕೇವಲ ಕಲೆಯಾಗಿ ಉಳಿದಿಲ್ಲ. ಒಂದು ಧಾರ್ಮಿಕ ಆಚರಣೆಯಾಗಿದೆ. ಮಾಧ್ಯಮಗಳಲ್ಲಿ ಕನ್ನಡ ಕನ್ನಡ ಅಂತ ಹೇಳ್ತಾರೆ. ಆದ್ರೆ ಕನ್ನಡವನ್ನು ಸುಸ್ಪಷ್ಟವಾಗಿ ಉಳಿಸಿಕೊಂಡು ಬಂದಿರುವ ಏಕೈಕ ಕಲೆ ಯಕ್ಷಗಾನ. ಯಾವುದೇ ಪಾತ್ರಗಳನ್ನು ಪ್ರೇಕ್ಷಕರ ಮನಸ್ಸಿಗೆ ಮುಟ್ಟುವ ರೀತಿ ತೋರಿಸಿಕೊಡುವ ಶಕ್ತಿ ಯಕ್ಷಗಾನಕ್ಕಿದೆ ಎಂದರು.

ಸಿಎ ಪಾಸ್ ಮಾಡುವುದು ಅಂದರೆ ತುಂಬಾ ಕಠಿಣವಾದ ಸವಾಲು. ಅಂಥ ಸಂದರ್ಭದಲ್ಲಿ ನೀವು ಯಕ್ಷಗಾನದತ್ತ ಹೇಗೆ ಬಂದಿರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎ ವೃಂದಾ ಕೊನ್ನಾರ್ ಅವರು, ನನ್ನ ಜೀವನದಲ್ಲಿ ಯಕ್ಷಗಾನ ಮೊದಲೇ ಇತ್ತು. ಸಿಎ ಆಮೇಲೆ ಬಂದದ್ದು. ಬಾಲ್ಯದಲ್ಲಿ ಅಮ್ಮನ ಮಡಿಲಲ್ಲಿ ಯಕ್ಷಗಾನ ನೋಡುತ್ತಾ ಬೆಳೆದೆ. ಚೆಂಡೆ ಮದ್ದಲೆಗಳ ನಾದದೊಂದಿಗೆ ಬೆಳೆದೆ. ಯಾವುದೇ ಕಲೆಯಾಗಲಿ ಅದು ನಿಮ್ಮ ವಿದ್ಯಾಭ್ಯಾಸಕ್ಕೆ ಎಂದಿಗೂ ತೊಡಕುಂಟುಮಾಡುವುದಿಲ್ಲ. ಅದು ಪೂರಕವೇ ಆಗುತ್ತದೆ ಎಂದರು.

ನಿಮ್ಮ ದೃಷ್ಟಿಯಲ್ಲಿ ಯಕ್ಷಗಾನಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ವೃಂದಾ ಅವರು, ಅನೇಕ ಹಿರಿಯರು ಇದನ್ನು ಬೆಳೆಸಿಕೊಂಡು ಬಂದಿದ್ದಾರೆ. ನಾನು 16 ವರ್ಷಗಳಿಂದ ತೊಡಗಿಸಿಕೊಂಡಿದ್ದೇನೆ. ಮೊದಲಿದ್ದ ಮನಸ್ಥಿತಿ ಈಗಿಲ್ಲ. ಈಗ ವಿಸ್ತಾರವಾಗಿದೆ. ಜನ ನಮ್ಮನ್ನು ಸ್ವೀಕರಿಸುತ್ತಾ ಇದ್ದಾರೆ ಎಂದರು.

ಯಕ್ಷಗಾನ ಕಲಾವಿದರೆಂದರೆ ಒಂದು ರಾತ್ರಿ ಬೆಳಗಾಗುವುದರೊಳಗೆ ರಂಗಸ್ಥಳವನ್ನು ಸ್ವರ್ಗವನ್ನಾಗಿಸುವವರು. ಈಗ ಟಿ.ವಿ ಯಲ್ಲಿ ನೋಡ್ತಾರೆ . ಇದರಿಂದ ಯಕ್ಷಗಾನದ ಮೇಲೆ ಪರಿಣಾಮ ಇದೆಯ? ಎಂಬುದರ ಕುರಿತು ಪಟ್ಲ ಸತೀಶ್ ಶೆಟ್ಟಿ ಅವರು, ಪರಿಣಾಮ ಇದೆ. ಯಕ್ಷಗಾನ ಕಲಾವಿದರ ಜೀವನದ ಮೇಲೆ ಪರಿಣಾಮ ಬೀರ್ತದೆ. ಯಕ್ಷಗಾನ ಕಲಾವಿದರು ಸಂಜೆಯಿಂದ ಮರುದಿನ ಬೆಳಗಿನ ವರೆಗೆ ದುಡಿಯುತ್ತಾರೆ. ಆದರೆ ಅವರಿಗೆ ಸಿಗುವ ಸಂಭಾವನೆ ಅತ್ಯಲ್ಪ. ಬೇರೆ ಉದ್ಯೋಗಕ್ಕೆ ಹೋಗಲು ಅವರಿಗೆ ಕಷ್ಟ. ಈಗ ಟಿ.ವಿಯಲ್ಲಿ ಅನೇಕ ಮನೋರಂಜನೆಗಳು ಸಿಗುವ ಕಾರಣ, ಒಂದು ಪ್ರಸಂಗಕ್ಕೆ ಸಮಯ ಕೊಡುವ ಸಾವಧಾನತೆ ಯಾರಿಗೂ ಇಲ್ಲ ಎಂದರು.

ಅನೇಕ ಉನ್ನತ ವ್ಯಾಸಂಗ ಮಾಡಿದವರೆಲ್ಲ ಈಗ ಯಕ್ಷಗಾನದತ್ತ ಬರುತ್ತಿದ್ದಾರೆ. ಇದು ಮುಂದಿನ ಪೀಳಿಗೆಗೆ ಮುಂದುವರಿದೀತೆ? ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಸಿಎ ವೃಂದಾ ಕೊನ್ನಾರ್ ಅವರು ನಮ್ಮ ಅಭಿವ್ಯಕ್ತಿಗಳನ್ನು ಉತ್ತಮವಾದ ರೀತಿಯಲ್ಲಿ ಪ್ರಸ್ತುತಪಡಿಸಲು ಅವಕಾಶವಿರುವ ಕಲೆ ಯಕ್ಷಗಾನ. ಈಗ ಮಕ್ಕಳು, ಯುವಜನರು ಈ ಕಲೆಯತ್ತ ಹೊರಳ್ತಾ ಇದ್ದಾರೆ. ಯಕ್ಷಗಾನ ಕಲಿಕೆಗೆ ಒಂದು ಶೈಕ್ಷಣಿಕೆ ಚೌಕಟ್ಟು ಮಾಡಿದ್ರೆ ಇನ್ನೂ ಉತ್ತಮ ಎಂದರು.

ಯಕ್ಷಗಾನವನ್ನು ರಿಯಾಲಿಟಿ ಶೋಗೆ ತರುವಾಗ ಏನಾದ್ರೂ ನಿಯಮಗಳಿವೆಯ? ಎಂಬ ಸಭಿಕರ ಪ್ರಶ್ನೆಗೆ ಉತ್ತರಿದ ಪಟ್ಲ ಅವರು, ಯಕ್ಷಗಾನಕ್ಕೆ ಒಂದು ಚೌಕಟ್ಟು ಇದೆ. ಅದನ್ನು ಮೀರಿ ಹೋದ್ರೆ ಅಪಮಾನ ಮಾದಿದ ಹಾಗೆ. ನಮ್ಮ ಧಾರ್ಮಿಕ ನಂಬಿಕೆಗೆ ತೊಡಕಾಗ್ತದೆ. ಆ ರೀತಿ ಬಿಂಬಿಸಬಾರದು ಎಂಬುದು ನನ್ನ ಅಭಿಪ್ರಾಯ‌ ಎಂದರು.

ಈ ನಿಯಮಗಳನ್ನು ಪಾಲಿಸುವುದಕ್ಕೆ ಯಾರಾದ್ರೂ ಅಥಾರಿಟಿ ಇದ್ದಾರಾ ? ಗಮನ ಕೊಡುವವರು ಯಾರು? ಎಂಬ ಪ್ರಶ್ನೆಗೆ – ಇಲ್ಲ ಹಾಗೆ ಮಾಡಿಲ್ಲ. ಎಲ್ಲರೂ ಕೈಜೋಡಿಸಿ ಮಾಡಬೇಕೆನ್ನುವ ಒತ್ತಾಸೆ ನಮ್ಮದು ಎಂದು ಪಟ್ಲ ಸತೀಶ್‌ ಶೆಟ್ಟಿ ಅವರು ಹೇಳಿದರು.

The post ಪ್ರಸಕ್ತ ಕಾಲಘಟ್ಟದಲ್ಲಿ ಯಕ್ಷಗಾನ appeared first on Mangaluru.

Stories of Warriors (India’s Most Fearless)
ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 1 ರಲ್ಲಿ  ಶಿವ್‌ ಅರೂರ್‌ ಮತ್ತು ಕ್ಯಾಪ್ಟನ್‌ ಬೃಜೇಶ್‌ ಚೌಟ ಅವರು Stories of Warriors (India’s Most Fearless) ಕುರಿತು ಸಂವಾದ ನಡೆಸಿದರು.

ಶಿವ್‌ ಅರೂರ್ ಅವರು, ನಾನು ಸುಮಾರು 18 ವರ್ಷಗಳಿಂದ ಮಿಲಿಟರಿ ವ್ಯವಹಾರಗಳ ಬಗ್ಗೆ ವರದಿ ಮಾಡುತ್ತಾ ಬಂದಿದ್ದೇನೆ.  ನಿರಂತರವಾಗಿ ಯೋಧರನ್ನು ಭೇಟಿಯಾಗುತ್ತಾ ಬಂದಿದ್ದೇನೆ, ಪ್ರತಿಯೊಬ್ಬ ಯೋಧನ ಬಳಿಯೂ ಹೇಳಲು ಒಂದು ಅದ್ಭುತವಾದ ಕಥೆಯಿರುತ್ತದೆ. ಕೇವಲ ಸಾಹಸದ ಕಥೆ ಮಾತ್ರವಲ್ಲ ಆತನ ಬಳಿ ರಕ್ತದ ಕಥೆ, ಕುಟುಂಬದ ಕಥೆ, ಮಕ್ಕಳ ಕಥೆಯೂ ಇರುತ್ತದೆ. ಮನರಂಜನೆ ನೀಡುವ ಕಥೆಯೂ ಆತನ ಬಳಿ ಇರುತ್ತದೆ.  ನಾವು ವರ್ಷಕ್ಕೆ ಎರಡು ಬಾರಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವಕ್ಕೆ  ಮಾತ್ರ ಯೋಧರನ್ನು ನೆನಪಿಸಿಕೊಳ್ಳುತ್ತೇವೆ. ಶೌರ್ಯ ಚಕ್ರದಂತಹ ಪ್ರಶಸ್ತಿಗಳು ಬಂದಾಗ ಅವರ ಸಾಧನೆ ಬಗ್ಗೆ ಒಂದು ಪ್ಯಾರಾದ ಮಾಹಿತಿ ನೀಡಲಾಗುತ್ತದೆ. ಕೇವಲ ಒಂದು ಪ್ಯಾರದಲ್ಲಿ ಆತನ ಸಾಧನೆ ವಿವರಿಸುವುದು ಯೋಧನಿಗೆ ಮಾಡುವ ಅಪಮಾನ ಎಂದೇ ನಾನು ಭಾವಿಸಿದ್ದೇನೆ. ಯೋಧರ ಸಂಪೂರ್ಣ ಕಥೆ ಕೇಳುವ ಹಸಿವು ನನಗಿತ್ತು. ಅದುವೇ ಪುಸ್ತಕ ಬರೆಯಲು ನನ್ನನ್ನು ಪ್ರೇರೇಪಿಸಿತು. ಅಪಾಯದ ನಡುವೆಯೂ ತೇಜಸ್‌ ಯುದ್ಧ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡಿದ 24 ವರ್ಷದ ಯೋಧನ ಸಾಹಸಗಾಥೆ ನನ್ನನ್ನು ಪುಸ್ತಕ ಬರೆಯಲು ಮೊದಲ ಹೆಜ್ಜೆ ಇಡುವಂತೆ ಮಾಡಿತು. ಆತನ ಬಗ್ಗೆ ಬ್ಲಾಗ್‌ ಬರೆದು ಹಾಕಿದಾಗ ಜನ ಅದನ್ನು ಅತ್ಯಂತ ಉತ್ಸಾಹದಿಂದ ಸ್ವೀಕರಿಸಿದರು. ಆಗ ಜನರಿಗೆ ಯೋಧನ ಬಗ್ಗೆ ಒಂದು ಪ್ಯಾರಾ ಮಾಹಿತಿಯಲ್ಲ 500 ಪುಟಗಳ ಮಾಹಿತಿ ಬೇಕಾಗಿದೆ ಎಂಬುದು ತಿಳಿಯಿತು ಎಂದರು.

ಗಲ್ವಾನ್‌ ಘರ್ಷಣೆ ಚೀನಾಗೆ ಒಂದು ಪಾಠವೇ ಹೊರತು ಭಾರತಕ್ಕೆ ಪಾಠವಲ್ಲ. ಈ ಯುದ್ಧವನ್ನು ಚೀನಾ ಪೂರ್ವ ಯೋಜಿತವಾಗಿ ನಡೆಸಿತೇ ಹೊರತು ಭಾರತ ಇದಕ್ಕೆ ಸಿದ್ಧವಾಗಿರಲಿಲ್ಲ. ಆದರೆ ನಮ್ಮ ಯೋಧರು ಚೀನಾದ ಪ್ರದೇಶದೊಳಗೆ ಹೋಗಿ ಅವರನ್ನು ಹೊಡೆದಿದ್ದಾರೆ. ಭಾರತದ ಕಮಾಂಡರ್‌ ಮೇಲೆ ಚೀನಿಯರು ದಾಳಿ ಮಾಡಿದ್ದೇ ಭಾರತೀಯ ಯೋಧರನ್ನು ಆಕ್ರೋಶಿತರನ್ನಾಗಿ ಮಾಡಿತು. ಇದರಿಂದ ಚೀನಾಗೆ ಸಾಕಷ್ಟು ಹಾನಿಯಾಯಿತು. ಅವರ ಅಪಾರ ಸಂಖ್ಯೆಯ ಯೋಧರು ಮೃತರಾದರು. ಭಾರತದ 20 ಯೋಧರ ಸಾವು ನಮಗೆ ಸಹಿಸಲಸಾಧ್ಯವಾದ ಘಟನೆ. ಹೀಗಾಗಿ ಗಲ್ವಾನ್‌ ಅಲ್ಲಿ ನಾವು ಗೆದ್ದೆವು ಎಂದು ಹೇಳಿಕೊಳ್ಳುವಂತಿಲ್ಲ. ಆದರೆ ಈ ಘರ್ಷಣೆ ಚೀನಾಗೆ ದೊಡ್ಡ ಪಾಠವೇ ಆಗಿದೆ.

ಪ್ರಸ್ತುತ ನಮ್ಮ ದೇಶ ಸಾಕಷ್ಟು ಬದಲಾಗಿದೆ. ತಳಮಟ್ಟದಲ್ಲಿ ಯೋಧರು ದೇಶಕ್ಕಾಗಿ ಪ್ರಾಣವನ್ನೇ ನೀಡಲು ಸಿದ್ಧರಾಗಿದ್ದಾರೆ. ನಮ್ಮದು ಕರ್ಕಶವಾದ ಪ್ರಜಾಪ್ರಭುತ್ವ. ಇಲ್ಲಿ ಸಾಕಷ್ಟು ಗದ್ದಲಗಳಿವೆ. ಸೇನೆಯನ್ನು ಪ್ರಶ್ನೆ ಮಾಡುವುದರಲ್ಲಿ ತಪ್ಪಿಲ್ಲ. ಸಂಸತ್ತಿನಲ್ಲಿ ಅಥವಾ ಹೊರಗಡೆ ಸೇನೆಯ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು. ಆದರೆ ಸೇನೆ ನಡೆಸಿದ ಕಾರ್ಯಾಚರಣೆ ಬಗ್ಗೆ ಪುರಾವೆಗಳನ್ನು ಕೇಳುವ ಹಿಂದಿನ ಉದ್ದೇಶ ಏನು ಎಂಬುದು ಮುಖ್ಯ ಎಂದರು.

The post Stories of Warriors (India’s Most Fearless) appeared first on Mangaluru.

Need for Shifting Global Narrative on India
ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 1 ರಲ್ಲಿ ರಾಮ್‌ ಮಾಧವ್‌, ಎಂ. ಡಿ. ನಲಪತ್‌  ಮತ್ತು ಪ್ರಶಾಂತ್‌ ವೈದ್ಯರಾಜ್ ಅವರು Need for Shifting Global Narrative on India ಕುರಿತು ಸಂವಾದ ನಡೆಸಿದರು.

ರಾಮ್‌ ಮಾಧವ್ ಅವರು ಮಾತನಾಡಿ, ಗ್ಲೋಬಲ್‌ ನರೇಟಿವ್‌ ಎಂಬುದು ವಾಸ್ತವದಲ್ಲಿ ಇಲ್ಲ. ಆದರೆ ನ್ಯೂಯಾರ್ಕ್‌ ಟೈಮ್ಸ್‌ನಂತಹ ಪತ್ರಿಕೆಗಳ ಪ್ರಭಾವದಿಂದ ಗ್ಲೋಬಲ್‌ ನರೇಟಿವ್‌ ಇದೆ ಅಂದೆನಿಸುತ್ತದೆ. ವಿಶ್ವಬ್ಯಾಂಕ್‌, ಐಎಂಎಫ್‌ ಭಾರತದ ಬಗ್ಗೆ ಸಾಕಾರಾತ್ಮಕವಾಗಿಯೇ ಮಾತನಾಡುತ್ತಿವೆ. ಅದೇ ರೀತಿ ನಕಾರಾತ್ಮಕ ಟೀಕೆಗಳು ಬೇರೆ ಕಡೆಯಿಂದ ವ್ಯಕ್ತವಾಗುತ್ತಿವೆ. ಸಾರ್ವಜನಿಕ ಸ್ಥಾನದಲ್ಲಿ ಇರುವವರು ಟೀಕೆಗಳಿಗೆ ಸ್ಪಂದಿಸಲೇ ಬೇಕಾಗುತ್ತದೆ. ಇದು ಪ್ರಜಾಪ್ರಭುತ್ವ ದೇಶ. ಪ್ರಸ್ತುತ ಆಡಳಿತದಲ್ಲಿರುವ ಪಕ್ಷ ಕಳೆದ 70 ವರ್ಷಗಳಲ್ಲಿ ಚುನಾವಣೆಗಳನ್ನು ಸೋಲುತ್ತಾ ಬಂದಿತ್ತು ಎಂಬುದನ್ನು ನಾವು ನೆನಪಿಡಬೇಕು. ಇಂದು ನಮ್ಮ ಪ್ರಧಾನಿಗಳು ಹೇಳಿದ ಮಾತನ್ನು ವಿಶ್ವ ನಾಯಕರು ಪುನರುಚ್ಛರಿಸುತ್ತಾರೆ ಎಂದರು.

ಪ್ರತಿಯೊಂದು ವ್ಯವಸ್ಥೆಯಲ್ಲೂ ವಿರೋಧಿಸುವವರು ಇದ್ದೇ ಇರುತ್ತಾರೆ. ಅವುಗಳಿಗೆ ಬಯಸಿದರೆ ಪ್ರತಿಕ್ರಿಯೆ ಕೊಡಬಹುದು, ಸುಮ್ಮನೆಯೂ ಕೂರಬಹುದು. ಪ್ರಸ್ತುತ ಭಾರತವನ್ನು ಟೀಕಿಸುವವರು ಬೃಹತ್‌ ಪಿತೂರಿಯ ಭಾಗವಾಗಿದ್ದಾರೆ. ಮುಂದಿನ ಆರು ವರ್ಷಗಳ ಬಳಿಕ ಭಾರತ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ ಬಗೆಯನ್ನು ನಾವು ಆಳವಾಗಿ ಶ್ರದ್ಧೆಯಿಂದ ಅಧ್ಯಯನ ಮಾಡಲಿದ್ದೇವೆ. ಕಳೆದ 8 ವರ್ಷಗಳಲ್ಲಿ ಸರ್ಕಾರವು ನಾಗರಿಕ ರಾಷ್ಟ್ರದ ಚಿಂತನೆಯನ್ನು ಅಳವಡಿಸಿಕೊಂಡಿದೆ. ಪಾಶ್ಚಿಮಾತ್ಯರು, ಬುದ್ಧಿಜೀವಿಗಳು ಕೂಡ ಸಂವಿಧಾನ ಆಧಾರಿತ ರಾಷ್ಟ್ರೀಯತೆಯನ್ನು ಒಪ್ಪಿಕೊಳ್ಳುತ್ತಾರೆ. ಭಾರತ ಗ್ಲೋಬಲ್‌ ಸೌತ್‌ ಅಲ್ಲಿ ಪ್ರಮುಖನಾಗುತ್ತಿದೆ. ಇಂದು ಸೌತ್‌ ಈಸ್ಟ್‌ ಏಷ್ಯಾದಲ್ಲಿ ನಂ.1 ಸಿನಿಮಾ ಬಾಹುಬಲಿ, ನಂ.2 ಆರ್‌ಆರ್‌ಆರ್.‌ ಆರ್‌ಆರ್‌ಆರ್ ಅನ್ನು ಪಾಶ್ಚಿಮಾತ್ಯ ಮೀಡಿಯಾಗಳು ಯುರೋಪಿ ವಿರೋಧಿ ಸಿನಿಮಾ ಎಂದು ಬಿಂಬಿಸುತ್ತಿವೆ. ಬಾಲಿವುಡ್‌ಗಿಂತಲೂ ಸೌತ್‌ ಸಿನಿಮಾಗಳು ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಪ್ರಸ್ತುತ ಚೀನಾ ತನ್ನ ಸಿದ್ಧಾಂತ ಪಸರಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡಿದೆ. 70% ಜಗತ್ತು ಚೀನಾ ವಿರೋಧಿಯಾಗಿದೆ. ಇಂಡಿಯಾ ಪೆಸಿಫಿಕ್‌ಗೆ ಹಿಂದೆ ಹೆಚ್ಚಿನ ಗಮನ ನೀಡಲಾಗಿಲ್ಲ. ಕೇವಲ ಅಮೆರಿಕ ಮತ್ತು ಯುರೋಪ್‌ಗೆ ಗಮನ ನೀಡಲಾಗುತ್ತಿದೆ. ಭಾರತವು ಇಂಡಿಯಾ ಪೆಸಿಫಿಕ್‌ನಲ್ಲಿ ಪ್ರಮುಖನಾಗಿ ಹೊರಹೊಮ್ಮುವ ಅಗತ್ಯವಿದೆ ಎಂದರು.

ಎಂ.ಡಿ ನಲಪತ್‌ ಅವರು ಮಾತನಾಡಿ, ಭಾರತ ಹಿಂದೆ ಆತ್ಮವಿಶ್ವಾಸವನ್ನು ಕಳೆದುಕೊಂಡಿತ್ತು. ಆದರೀಗ ಆತ್ಮವಿಶ್ವಾಸ ಭಾರತಕ್ಕೆ ಇದೆ. ಈ ಆತ್ಮವಿಶ್ವಾಸ ಎಂಬುದು ಉನ್ನತ ಗುರಿಗಳನ್ನು ಇಟ್ಟುಕೊಂಡಿರುವ ಕಾರಣದಿಂದ ಬಂದಿದೆ. ಬಿಬಿಸಿ ಈಗ ಭಾರತಕ್ಕೆ ಬುದ್ಧಿ ಮಾತು ಹೇಳುವ ರೀತಿ ವರ್ತಿಸುತ್ತಿದೆ. ಆದರೆ ಬಹುತೇಕ ಜನರು ಅದರ ಬುದ್ಧಿಮಾತನ್ನು ಒಪ್ಪಿಕೊಳ್ಳಲು ಸಿದ್ಧರಾಗಿಲ್ಲ. ಚೀನಾದ ಆಕ್ರಮಣಶೀಲ ಧೋರಣೆ ಭಾರತಕ್ಕೆ ಸಹಾಯವನ್ನೇ ಮಾಡಿದೆ. ಯಾಕೆಂದರೆ ಅದರ ಬಹಿರಂಗ ಆಕ್ರಮಣಶೀಲ ಧೋರಣೆಯಿಂದ ಇಂಡೋ ಪೆಸಿಫಿಕ್‌ಗೆ ಸಂಬಂಧಿಸಿದ ದೇಶಗಳು ಭಾರತಕ್ಕೆ ಬೆಂಬಲವನ್ನು ನೀಡುತ್ತಿವೆ. ಪ್ರಸ್ತುತ ಭಾರತ ತನ್ನ ಸಾಮರ್ಥ್ಯವನ್ನು ಅರಿತುಕೊಂಡಿದೆ. ಚೀನಾದ ಬೆದರಿಕೆಗೆ ಭಾರತ ಇಂದು ಹೆದರುತ್ತಿಲ್ಲ,  ಚೀನಾದ ವಿರುದ್ಧ ತನ್ನನ್ನು ರಕ್ಷಣೆ ಮಾಡುವ ಸಾಮರ್ಥ್ಯ ಭಾರತಕ್ಕೆ ಬಂದಿದೆ. ಭಾರತ ವಿಶಿಷ್ಟ ನಾಗರಿಕ, ಸಾಂಸ್ಕೃತಿಕ ಮೌಲ್ಯ ವ್ಯವಸ್ಥೆಯನ್ನು ಹೊಂದಿದೆ. ಆರ್ಥಿಕ ಅಭಿವೃದ್ಧಿ, ಸಂತೋಷಭರಿತ ಜೀವನ ಎಂಬುದು ಭಾರತದ ನಾಗರಿಕತೆಯಲ್ಲೇ ಇದೆ.  ಪ್ರಸ್ತುತ ಜಗತ್ತು ಕೋಲ್ಡ್‌ ವಾರ್‌ 2.0 ಮೂಲಕ ಹಾದುಹೋಗುತ್ತಿದೆ. ಈ ಕೋಲ್ಡ್‌ ವಾರ್‌ ವಿರುದ್ಧ ಹೋರಾಡಲು ಬೇಕಾದ ಎಲ್ಲಾ ವ್ಯವಸ್ಥೆ ನಮ್ಮಲ್ಲಿ ಇದೆ.  ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಎಂಬುದು ಇಂದಿನ ಕಾಲಘಟ್ಟದ ಯುದ್ಧಕ್ಕೆ ನಿರ್ಣಾಯಕವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದರು.

The post Need for Shifting Global Narrative on India appeared first on Mangaluru.

Arya – Book Discussion
ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 2 ರಲ್ಲಿ ಶಿವಕುಮಾರ್‌ ಜಿ.ವಿ., ಮಂಜುಳಾ ತೇಕಲ್‌ ಮತ್ತು ಕ್ಷಮಾ ನರಗುಂದ ಅವರು ಆರ್ಯ ಪುಸ್ತಕ ಕುರಿತು ಸಂವಾದ ನಡೆಸಿದರು.

ಕ್ಷಮಾ ಅವರು ಮಾತನಾಡಿ, ಆರ್ಯ – ಪುಸ್ತಕ 10 ಮಹಿಳೆಯರ ಆಂಥಾಲಜಿ. ಈ ಪುಸ್ತಕ ಬರೆದ ಉದ್ದೇಶ ಏನು ಎಂದು ಶಿವಕುಮಾರ್‌ ಅವರನ್ನು ಪ್ರಶ್ನಿಸಿದರು.

ಶಿವಕುಮಾರ್ ಅವರು ಮಾತನಾಡಿ, ನನ್ನ ಒಂದು ವೈಯಕ್ತಿಕ ಅನುಭವದಿಂದ ಆರಂಭಿಸುತ್ತೇನೆ. ನಾನು ಬೆಳೆದ ವಾತಾವರಣದಲ್ಲಿ ಮಹಿಳೆಯರು ಮಾತ್ರ ಡಾಮಿನೆಂಟ್ ಆಗಿದ್ರು. ನಾನು ಓದಿದ ಮೊದಲ ಪುಸ್ತಕ, ಅಮರ ಚಿತ್ರಕಥೆಯ ‘ಸತಿ ಸಾವಿತ್ರಿ’. ಅದರಲ್ಲಿ ಸತಿ ಸಾವಿತ್ರಿಯನ್ನು ಬಹಳ ವೈಭವೀಕರಿಸಲಾಗಿದೆ. ಆದ್ರೆ ಇಂಡಸ್ಟ್ರಿಯಲ್ಲಿ ಮಹಿಳೆಯನ್ನು ಅಷ್ಟೊಂದು ದೊಡ್ಡದಾಗಿ ಬರೆದ ಉದಾಹರಣೆಗಳು ಕಡಿಮೆ. ಮಹಾಭಾರತದಲ್ಲಿ ಅನೇಕ ಮಹಿಳೆಯರು ಬರುತ್ತಾರೆ. ಆದರೆ ನಾಲ್ಕು ಪುಟಗಳಲ್ಲಿ ಅವರ ವಿವರಣೆ ಮುಗಿದುಬಿಡುತ್ತದೆ. ಆದರೆ ಅವರ ಪಾತ್ರ, ವ್ಯಕ್ತಿತ್ವ ಅದಕ್ಕಿಂತ ಎಷ್ಟೋ ದೊಡ್ಡದು. ಹೀಗಾಗಿ ಅಂಥ ಸಾಧಕ ಮಹಿಳೆಯರ ಬಗೆಗೆ ಬರೆಯಬೇಕೆಂಬ ಉದ್ದೇಶದಿಂದ ಈ ಪುಸ್ತಕ ತಂದಿದ್ದೇವೆ.

ಈ ಪುಸ್ತಕದ ಕಥೆಗಳು ಮೂಲಕ್ಕೆ ಹತ್ತಿರವಾಗಿವೆಯೇ? ಎಂಬ ಪ್ರಶ್ನೆಗೆ ಮಂಜುಳಾ ಅವರು, ಇದು ಮೂಲಕ್ಕೆ ಅಕ್ಷರಶಃ ಹತ್ತಿರವಾಗಿದೆ. ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಲಾಗಿಲ್ಲ. ದಮಯಂತಿಯ ಕಥೆಯಲ್ಲಿ ಮಾತ್ರ ಒಂದು ಕಡೆ, ದಮಯಂತಿಯ ಅಂತರಾಳದ ಮಾತುಗಳನ್ನು ಹೀಗಿದ್ದಿರಬಹುದು ಅಂತ ಕಲ್ಪಿಸಿಕೊಂಡು ಬರೆಯಲಾಗಿದೆ ಎಂದರು.

ಯಾಕೆ ಇದನ್ನು ಆಂಥಾಲಜಿಯಾಗಿ ಮಾಡಿದ್ರಿ? ಒಬ್ಬ ಆಥರ್ ಆಗಿ ನೀವ್ಯಾಕೆ ಇಲ್ಲಿ ನಿಮ್ಮದೇ ಪುಸ್ತಕವಾಗಿ ಬರೆದಿಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್,  ನಾವು ನಮ್ಮ ಕಥೆಯನ್ನು ಮತ್ತೆ-ಹೇಳುವ ಅಗತ್ಯ ಇದೆ. ಇವು ಈಗಾಗಲೇ ಇರುವ ಕಥೆಗಳು. ಆದರೆ ನಮ್ಮ ಜನರೇಷನ್‌ಗೆ ಸರಿಯಾದ ರೀತಿಯಲ್ಲಿ ತಲುಪಿಲ್ಲ. ನಾನು ಅದನ್ನು ನನ್ನದು ಅಂತ ಹೇಳಲು ಸಾಧ್ಯವಿಲ್ಲ. ನಾವು ಒಂದು ತಂಡವಾಗಿ ಇದನ್ನು ಮಾಡಿದ್ದೇವೆ. ಈ ಪುಸ್ತಕವನ್ನು ದೇಶಾದ್ಯಂತ ಹಂಚಲು ಬಯಸುತ್ತೇನೆ. ಒಂದು ರಾಜ್ಯದಿಂದ ಐದು ಜನ ಇದರಿಂದ ಪ್ರೇರಣೆ ಪಡೆದು ಇಂಥ ಮತ್ತಷ್ಟು ಪುಸ್ತಕಗಳನ್ನು ಬರೆದರೆ ನಮ್ಮ ಪ್ರಯತ್ನ ಸಾರ್ಥಕ ಎಂದರು.

ಯಾರಿಗೋಸ್ಕರ ಈ ಪುಸ್ತಕ ತಂದಿರಿ? ಎಂಬ ಪ್ರಶ್ನೆಗೆ ಶಿವಕುಮಾರ್ ಅವರು, ಮೊದಲನೆದಾಗಿ, ನಾನು ನನ್ನ ಮಗಳಿಗಾಗಿ ಈ ಪುಸ್ತಕ ತಂದೆ. ಇಂಥ ಉತ್ಕೃಷ್ಟ ವ್ಯಕ್ತಿತ್ವಗಳ ಪರಿಚಯ ಅವಳಿಗೆ ಆಗಬೇಕು ಅಂತ. ಅದನ್ನು ಬಿಟ್ರೆ, ಕನ್ನಡದಲ್ಲಿ ಬೇಕಾದಷ್ಟು ಕಥೆಗಳು ಪುರಾಣ ಪುಸ್ತಕಗಳು ಇವೆ. ಬೇರ ಭಾಷೆಗಳಲ್ಲೂ ಇವೆ. ಆದ್ರೆ ಇಂಗ್ಲಿಷ್ ನಲ್ಲಿ ಈ ರೀತಿ ನರೇಟಿವ್ಸ್‌ ಇಲ್ಲ. ಹದಗೆಡ್ತಾ ಇದೆ. ಹಾಗಾಗಿ ೨೧ ವಯಸ್ಸು ಮೇಲ್ಪಟ್ಟ ಯಾವುದೇ ಯುವಸಮುದಾಯಕ್ಕೆ ನಮ್ಮಲ್ಲಿನ ಈ ಗ್ರೇಟ್ ವ್ಯಕ್ತಿತ್ವಗಳ ಪರಿಚಯ ಆಗ್ಬೇಕು. ಅಂಥವರು ಇದನ್ನು ಓದಬೇಕು. ವೇದಕಾಲದಿಂದ ಆರಂಭಿಸುವುದಾದರೆ, ಸಾವಿರಾರು ಸಾಧಕ ಮಹಿಳೆಯರ ಯಶೋಗಾಥೆ ನಮ್ಮ ಮುಂದಿದೆ ಎಂದರು.

ಮಂಜುಳ ಅವರು ಮಾತನಾಡಿ, ಶಾಲೆಗಳಲ್ಲಿ ಈಗಾಗಲೇ ಇಸಮ್‌ಗಳನ್ನೆಲ್ಲ ತರುವುದಕ್ಕೆ ಪ್ರಾರಂಭಿಸಿದ್ದಾರೆ.  ಈಗಿನ ಮಕ್ಕಳು ಇಂಗ್ಲಿಷ್ ಪುಸ್ತಕಗಳನ್ನು ಓದುತ್ತಿದ್ದಾರೆ. ಹಾಗಾಗಿ ನಿಜವಾದ ಕಥೆಯನ್ನು ತಿಳಿಸೋದಕ್ಕೆ ಇದನ್ನು ಬರೆದಿದ್ದೇವೆ ಎಂದರು.

ಒಬ್ಬ ಲೇಖಕಿಯಾಗಿ, ನೀವು ಬಹಳಷ್ಟು ಮೈಂಡ್-ವರ್ಕ್ ಮಾಡಿರ್ತೀರ. ನಿಮಗಿದು ಸ್ವಾಭಾವಿಕವಾಗಿ ಸಾಧ್ಯವಾಯಿತೇ ಅಥವಾ ಸವಾಲುಗಳನ್ನು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಂಜುಳಾ ಅವರು, ನನ್ನ ತಾಯಿ ಬಹಳ ಧೈರ್ಯಸ್ಥ ಮಹಿಳೆ. ಪ್ರೇರಣಾದಾಯಕಿ. ನನ್ನ ತಂದೆ ನನಗೆ ಕನ್ನಡ ಮೀಡಿಯಂನಲ್ಲೇ ಕಲಿಸಿದ್ರು.ಆ ಮೂಲಕ ನನಗೆ ಈ ಪುರಾಣಗಳ ಜ್ಞಾನ ಸಿಗಲು ಸಾಧ್ಯವಾಯ್ತು. ಹಲವು ಜನ “ನಿಮ್ಗ ಯಾಕೆ ಬೇಕು ಇದೆಲ್ಲ?” ಅಂತ ಅನೇಕರು ಕೇಳಿದ್ದಾರೆ. ಆದರೆ ನನಗೆ ಬರೆಯಲು ಯಾವುದೇ ಕಷ್ಟ ಆಗ್ಲಿಲ್ಲ. ಸಹಜವಾಗಿ ಬರೆದೆ ಎಂದರು.

ಈ ಪುಸ್ತಕಕ್ಕೆ ಕಥೆಗಳನ್ನು ಆಯ್ಕೆ ಮಾಡುವಾಗ ಏನಾದ್ರೂ ವ್ಯವಸ್ಥಿತ ಪ್ರಕ್ರಿಯೆ ಅನುಸರಿಸಿದ್ದೀರಾ ಎಂಬ ಪ್ರಶ್ನೆಗೆ ಶಿವಕುಮಾರ್ ಅವರು, ನಾನೊಂದು ಪ್ರೊಪೋಸಲ್ ಮಾಡಿದೆ. ಭಾರತೀಯ ಸಾಧಕ ಮಹಿಳೆಯರ ನೈಜ ಕಥೆಯನ್ನು ಹೇಳುವವರು ಬೇಕು ಅಂತ ಕೇಳಿದೆವು. 47 ಕಥೆಗಳು ಬಂದವು. ಅವುಗಳಲ್ಲಿ ಅತ್ಯುತ್ಕೃಷ್ಟವಾದದ್ದನ್ನು ಕೆಲವನ್ನು ಹಾಗೆಯೇ ಸ್ವೀಕರಿಸಿದೆವು. ಕೆಲವನ್ನು ಮತ್ತಷ್ಟು ಚೆನ್ನಾಗಿ ಬರುವಂತೆ ಮಾಡಿ ತೆಗೆದುಕೊಂಡೆವು ಎಂದರು.

ಸ್ಥಳೀಯ ಭಾಷೆಯಲ್ಲಿ ಬರೆದಿದ್ರೆ ಇದೇ ರೀತಿಯ ಕೇರ್ ತಗೊಳ್ಬೇಕಾಗಿತ್ತಾ? ಎಂಬ ಪ್ರಶ್ನೆಗೆ  ಶಿವಕುಮಾರ್ ಅವರು, ಇಂಗ್ಲಿಷಿನಲ್ಲಿ ಬರೆಯುವುದಕ್ಕೂ ಕನ್ನಡದಲ್ಲಿ ಬರೆಯುವುದಕ್ಕೂ ಬಹಳ ವ್ಯತ್ಯಾಸಗಳಿವೆ. ಆ ಧ್ವನಿಯನ್ನು ಇಂಗ್ಲಿಷ್‌ನಲ್ಲಿ ತರುವುದು ಬಹಳ ಕಷ್ಟ. ಪದ ಪ್ರಯೋಗಗಳನ್ನು ಇಂಗ್ಲಿಷ್‌ನಲ್ಲಿ  ಮಾಡುವುದು ಬಹಳ ಸವಾಲಿನ ಕೆಲಸವಾಗಿತ್ತು. ನಾವು ಈ ಮಹಿಳೆಯರ ಎದುರು ನಮ್ಮ ತಲೆಬಾಗಿ ಈ ನರೇಟಿವ್‌ಗಳನ್ನ ಬರೆದಿದ್ದೇವೆ. ಆ ಥಾಟ್‌ಪ್ರಾಸೆಸ್ ನಮಗೆ ಸಹಾಯ ಮಾಡಿತು.

ವ್ಯಾಸಭಾರತ ಮತ್ತು ಬೇರೆ ಬೇರೆ ವರ್ಶನ್‌ಗಳು ಬೇರೆ ಬೇರೆ ರೀತಿ ಇವೆ. ಒಬ್ಬ ಕ್ಯುರೇಟರ್ ಆಗಿ, ಕಾಳಿದಾಸ ಯಾಕೆ ಶಾಕುಂತಲೆಯ ಕ್ಯಾರೆಕ್ಟರನ್ನು ಬದಲಾಯಿಸಿದ ಅಂತ ನಿಮಗನಿಸುತ್ತೆ ಎಂಬ ಪ್ರಶ್ನೆಗೆ ನಮ್ಮ ಇತಿಹಾಸ ಪುರಾಣಗಳಲ್ಲಿ ಹಾಗಿಲ್ಲ. ಧರ್ಮಾರ್ಥ ಕಾಮ ಮೋಕ್ಷ – ಧರ್ಮ-ಅರ್ಥಗಳ ನಡುವೆ ಏನು ಇರುತ್ತೆ? ಅರ್ಥ-ಕಾಮಗಳ ನಡುವೆ ಏನಿರುತ್ತೆ? ಮಹಾಭಾರತಕ್ಕೆ ಒಂದು ಡಿಸೈನ್ ಇದೆ. ಅದರೊಳಗೆ ಈ ಎಲ್ಲಾ ಕಥೆಗಳು ಬರುತ್ತವೆ. ಕ್ಲಾಸಿಕಲ್ ಕಾಲಘಟ್ಟದಲ್ಲಿ ಯಾವುದಾದರೊಂದು ವ್ಯಕ್ತಿಯನ್ನು ವೈಭವೀಕರಿಸಿ ಬರೆದಿದ್ದಾರೆ. ಕಾಳಿದಾಸ, ಶಾಕುಂತಲೆ ಬರೆದದ್ದಕ್ಕೂ ಇತರ ಕಾವ್ಯಗಳಿಗೂ ಪರಸ್ಪರ ಹೋಲಿಕೆಯೇ ಇಲ್ಲ. ಅವು ಪೂರ್ತಿ ವಿಭಿನ್ನವಾಗಿವೆ. ಕಾವ್ಯವನ್ನು ನಾವು ನಮ್ಮ ಕಾವ್ಯದ ಪರಿಕರಗಳೊಂದಿಗೆ ನೋಡಬೇಕು. ಕಾಲ-ದೇಶ-ವರ್ತಮಾನ ಮರೆತು, ಯಾವುದೋ ಗೊತ್ತಿಲ್ಲದ ವ್ಯಕ್ತಿಗೆ ಈ ಪುಸ್ತಕ ಕೊಟ್ರೆ, ಅವನು ಇದನ್ನು ಖುಷಿಪಟ್ಟು ಸ್ವೀಕರಿಸಬೇಕು. ಅದು ಇಲ್ಲಿನ ಮುಖ್ಯ ಉದ್ದೇಶ ಎಂದರು.

The post Arya – Book Discussion appeared first on Mangaluru.

Armed to lead-Indiaʼs Way Ahead
ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 1 ರಲ್ಲಿ ಎವಿಎಂ ಮನ್‌ಮೋಹನ್‌ ಬಹದ್ದೂರ್‌, ಭರತ್‌ ಕರ್ನಾಡ್‌, ಶಿವ್‌ ಕುನಾಲ್‌ ವೆರ್ಮಾ ಮತ್ತು ಶಿವ್‌ ಅರೂರು ಅವರು Armed to lead-Indiaʼs way ahead ಕುರಿತು ಸಂವಾದ ನಡೆಸಿದರು.

ಎವಿಎಂ ಮನ್‌ಮೋಹನ್‌ ಬಹದ್ದೂರ್‌ ಅವರು ಮಾತನಾಡಿ, ಯಾವುದೇ ದೇಶವಾದರೂ ಯಾವುದೇ ಬೆಲೆ ತೆತ್ತಾದರೂ ತನ್ನ ಗಡಿಗಳನ್ನು ರಕ್ಷಣೆ ಮಾಡುತ್ತದೆ. 2020ರಲ್ಲಿ ಚೀನಾ ಭಾರತ-ಚೀನಾ ಗಡಿಯಲ್ಲಿ ಭಾರೀ ಸಂಖ್ಯೆಯ ಸೇನೆ, ಸೇನಾ ಸೌಲಭ್ಯವನ್ನು ನಿಯೋಜಿಸಿತು. ಇದಕ್ಕೆ ಉತ್ತರವಾಗಿ ಭಾರತವೂ ಸೇನಾ ಸೌಲಭ್ಯವನ್ನು ಗಡಿಯತ್ತ ತಿರುಗಿಸಿತು. ಭಾರತ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವುದಿಲ್ಲ ಎಂಬುದನ್ನು ಚೀನಾ ಈಗ ಅರ್ಥ ಮಾಡಿಕೊಂಡಿದೆ. ಭಾರತದ ವಾಯುಸೇನೆ ಯಾವುದೇ ಪರಿಸ್ಥಿತಿಯನ್ನು ಎದುರಿಸುವಷ್ಟು ಈಗ ಸಿದ್ಧವಾಗಿದೆ.  ತನ್ನ ಶಸ್ತ್ರಾಸ್ತ್ರ ರಷ್ಯನ್‌ ಒರಿಜಿನ್‌ ಎಂಬುದನ್ನು ಚೀನಾ ಅರ್ಥ ಮಾಡಿಕೊಂಡಿದೆ. ರಷ್ಯಾ-ಉಕ್ರೇನ್‌ ಯುದ್ಧವನ್ನೂ ನೋಡುತ್ತಿದೆ. ರಷ್ಯಾ ಎಸಗಿದ ಪ್ರಮಾದವನ್ನು ಅರ್ಥ ಮಾಡಿಕೊಂಡಿದೆ. ಹೀಗಾಗಿ ಯುದ್ಧ ನಡೆಸುವ ಬಗ್ಗೆ ಅದು ಮರು ಚಿಂತನೆ ನಡೆಸುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ.  ಯುದ್ಧ ನಡೆಯುವುದಿಲ್ಲ ಎಂಬುದು ಕೂಡ ಸ್ಪಷ್ಟ. ಜಗತ್ತಿಗೂ ಯುದ್ಧ ಬೇಕಾಗಿಲ್ಲ. ಒಂದು ವೇಳೆ ಭಾರತ-ಚೀನಾ ನಡುವೆ ಯುದ್ಧ ನಡೆದರೆ ಜಗತ್ತಿನ ಅಭಿಪ್ರಾಯ ಭಾರತದ ಮೇಲೆ ಇರುತ್ತದೆ. ಯುದ್ಧವನ್ನು ನಿರ್ಧರಿಸುವಾಗ ನಾಯಕತ್ವ ಜಗತ್ತಿನ ಅಭಿಪ್ರಾಯವನ್ನು ಕೂಡ ಪರಿಗಣಿಸುತ್ತದೆ ಎಂದರು.

ಭರತ್ ಕರ್ನಾಡ್ ಅವರು ಮಾತನಾಡಿ, ಪ್ರಸ್ತುತ ಚೀನಾ ಪ್ರಚೋದನೆಗೆ ಭಾರತ ಕೇವಲ ಪ್ರತಿಕ್ರಿಯಿಸಿಲ್ಲ, ರಕ್ಷಣಾತ್ಮಕ ಕ್ರಮ ತೆಗೆದುಕೊಂಡಿದೆ. ಚೀನಾ ಮೂರ್ಖನಲ್ಲ, ಯುದ್ಧ ನಡೆಸದೆ ಪ್ರಚೋದಿಸುವುದು ಅದರ ತಂತ್ರ. 1962 ಯುದ್ಧದಲ್ಲಿ ಸಾಕಷ್ಟು ಗಡಿ ಅತಿಕ್ರಮಿಸಿದ್ದಾರೆ.  ಆಗ ಆ ಯುದ್ಧಕ್ಕೆ ಭಾರತ ಸಿದ್ಧವಾಗಿರಲಿಲ್ಲ. ವಾಯುಸೇನೆ ಯುದ್ಧದಲ್ಲಿ ಮುನ್ನುಗ್ಗಲು ಬಯಸಿದರೂ ರಾಜಕೀಯ ನಾಯಕತ್ವ ಅದನ್ನು ಬಳಸದಿರುವ ನಿರ್ಧಾರಕ್ಕೆ ಬಂತು.  ಕಳೆದ 70 ವರ್ಷಗಳಲ್ಲಿ ಚೀನಾ ಹೇಳಿದ್ದನ್ನು ಭಾರತ ಕೇಳುವ ಸ್ಥಿತಿಯಲ್ಲಿತ್ತು. ಭಾರತಕ್ಕೆ ಚೀನಾವನ್ನು ಎದುರಿಸಲು ಕಾರ್ಯತಂತ್ರದ ಕೊರತೆ ಇತ್ತು. ಈಗ ಪರಿಸ್ಥಿತಿ ಸುಧಾರಿಸಿದೆ ಎಂದರು.

ಶಿವ್‌ ಕುನಾಲ್‌ ವರ್ಮಾ ಅವರು ಮಾತನಾಡಿ, ಚೀನಾ ಭಾರತವನ್ನು ತನ್ನ ಪ್ರಮುಖ ಶತ್ರು ಎಂದೇ ಪರಿಗಣಿಸುತ್ತದೆ. ರಕ್ಷಣಾ ತಜ್ಞರು 1962 ಯುದ್ಧವನ್ನು ಊಹಿಸಿದ್ದರು. ಆದರೆ ಈಗ ನಾವು ಅಂದಿಗಿಂತ ಹೆಚ್ಚು ಸಿದ್ಧರಾಗಿದ್ದೇವೆ. ನಾವು ಸಾಕಷ್ಟು ಬಲಿಷ್ಠಗೊಂಡಿದ್ದೇವೆ. ಅವರು ಟ್ಯಾಂಕರ್‌ ನಿಯೋಜಿಸಿದರೆ ನಾವೂ ನಿಯೋಜಿಸುತ್ತಿದ್ದೇವೆ, ಅವರು ಗಡಿಯಲ್ಲಿ ಮೂಲಸೌಕರ್ಯ ಬಲಪಡಿಸುತ್ತಿದ್ದರೆ, ನಾವು ಕೂಡ ಮೂಲ ಸೌಕರ್ಯ ಬಲಪಡಿಸುತ್ತಿದ್ದೇವೆ. ಕೋವಿಡ್‌ ಸಾಂಕ್ರಾಮಿಕದ ಬಳಿಕ ಮೂರನೇ ವಿಶ್ವ ಯುದ್ಧದಂತಹ ಸನ್ನಿವೇಶ ಎದುರಾಗಿದೆ ಎಂದರು.

ಶಿವ್ ಆರೂರ್‌ ಅವರು ಮಾತನಾಡಿ, ಚೀನಿಯರು ಮೂಲತಃ ಕಾಲ್ಕೆರಕೊಂಡು ಜಗಳಕ್ಕೆ ಬರುವವರು. ಅವರಿಗೆ ಎದೆಗೊಟ್ಟು ನಿಲ್ಲದಿದ್ದರೆ ನಮ್ಮನ್ನು ಕೈಲಾಗದವರು ಎಂದು ಅಂದುಕೊಳ್ಳುತ್ತಾರೆ. ನಮ್ಮ ಸಮಸ್ಯೆ ಎಂದರೆ ಭಾರತ-ಚೀನಾ ಗಡಿ ಕಾಯುವ ಐಟಿಬಿಪಿ ಮತ್ತು ಸೇನೆಯ ನಡುವಣ ಸಮನ್ವಯದ ಕೊರತೆ. 1976ರಲ್ಲಿ ವಿಯೆಟ್ನಾಂ ಗಡಿ ಪಡೆ ಚೀನಾ ಪೀಪಲ್ಸ್‌ ಆರ್ಮಿಗೆ ದೊಡ್ಡ ಹೊಡತವನ್ನೇ ನೀಡಿತ್ತು ಎಂದರು.

The post Armed to lead-Indiaʼs Way Ahead appeared first on Mangaluru.

ದಕ್ಕಲ ಜಾಂಬವ ಪುರಾಣ
ಮಂಗಳೂರು ಲಿಟ್‌ಫೆಸ್ಟ್‌ 2023 ರ ಹರಟೆ ಕಟ್ಟೆಯಲ್ಲಿ ದಕ್ಕಲ ಮುನಿಸ್ವಾಮಿ, ಘನಶ್ಯಾಮ ಮತ್ತು ಸತ್ಯಭೋದ ಜೋಶಿ ಅವರು ದಕ್ಕಲ ಜಾಂಬವ ಪುರಾಣ ಕುರಿತು ಸಂವಾದ ನಡೆಸಿದರು.

ದಕ್ಕಲ ಮುನಿಸ್ವಾಮಿ ಅವರು ಕಿನ್ನರಿ ವಾದ್ಯ ನುಡಿಸುವುದರೊಂದಿಗೆ ಶುಭಾರಂಭ ಮಾಡಿದರು. ಬಳಿಕ ಸಾಂಪ್ರದಾಯಿಕ ರೀತಿಯಲ್ಲಿ ಎಲೆ ಅಡಿಕೆ ವೀಳ್ಯ ಸ್ವೀಕರಿಸಿ, ಎತ್ತುವಳಿ ಸ್ವೀಕರಿಸಿ ಆಶೀರ್ವಾದ ಮಾಡಿದರು.

ಘನಶ್ಯಾಮ ಅವರು ದಕ್ಕಲ ಜಾಂಬವ ಪುರಾಣವು, 18  ಯುಗದಿಂದ ಬಂದ ಕಥೆ. ಸರಳವಾದ ಕಾವ್ಯ. ಕಂದೆಲುಗು ಭಾಷೆಯಲ್ಲಿ ಇರುವಂಥ ಕಾವ್ಯ. ಇವರದ್ದು ಮುನಿಪರಂಪರೆಯ ಕುಟುಂಬ. ಮೂಲಮುನಿ ಜಾಂಬವ ಮುನಿ. ಸ್ವಂತ ಮನೆ ಇಲ್ಲದಿದ್ರೂ ದೇಶ ನಮ್ಮದು ಎಂಬ ಭಾವ. ಎಲ್ಲವೂ ನನ್ನದು ಎಲ್ಲವೂ ನಮ್ಮದು. ಈ ರೀತಿಯ ಜಾನಪದ ಪ್ರಾಕಾರಗಳು ಅಳಿವಿನಂಚಿನಲ್ಲಿವೆ. ಅದನ್ನು ದಾಖಲೀಕರಿಸುವ ಮುಂದುವರೆಸುವ ಪ್ರಯತ್ನಗಳು ಆಗಬೇಕು. ನಮ್ಮ ಭೂಮಿ ಹೇಗೆ ಹುಟ್ಟಿತು ಎಂಬ ಬಗ್ಗೆ ಅವರದ್ದೇ ಆದ ರೀತಿಯ ಪುರಾಣ ಕಥೆ ಇದೆ ಎಂದರು.

ದಕ್ಕಲ ಮುನಿಸ್ವಾಮಿ ಅವರು ಮಾತನಾಡಿ, ಸಮುದ್ರದಲ್ಲಿ ಹುಟ್ಟಿದವ ಜಾಂಬವಂತ. ಗಂಗಾದೇವಿ ತಾವರೆ ಎಲೆಯ ಮೇಲೆ ತಪಸ್ಸು ಮಾಡಿದ್ದ. ಆಗ ಬಂದ ಬೆವರನ್ನು ಸಮುದ್ರದ ನೀರಿಗೆ ಹಾಕಿದಾಗ ಅದೊಂದು ಕೋಳಿಮೊಟ್ಟೆಯ ಆಕಾರವಾಯ್ತು. ಆ ಮೊಟ್ಟೆಯೊಳಗೆ 7 ಮಕ್ಕಳು ಹುಟ್ಟುತ್ತಾರೆ. ೭ ಜನ ಗಂಡುಮಕ್ಕಳು. ಆಮೇಲೆ ಕೊಳಿಯೊಳಗೆ ಹೆಣ್ಣು ಗೊಂಬೆಯನ್ನು ಮಾಡ್ತಾನೆ. ಅವಳೇ ಆದಿಶಕ್ತಿ. ಹೀಗೆ ಜಾಂಬವಂತನ ಕಥೆ ಮುಂದುವರಿದು, ಸೂರ್ಯ ಚಂದ್ರರು, ಭೂಮಿ, ಆಕಾಶಗಳೆಲ್ಲ ಹುಟ್ಟಿದ ಕಥೆ, ಕುಲಗಳು, ಜಾತಿಗಳು ಹುಟ್ಟಿದ ಕಥೆ ಹೇಳಿದರು.

ಸಭಿಕರ ಕೋರಿಕೆಯ ಮೇರೆಗೆ, ತಾವೇ ಸ್ವತಃ ಸೋರೇಬುರುಡೆಯಿಂದ ತಯಾರಿಸಿದ ಕಿನ್ನರಿಯನ್ನು ಮತ್ತೊಮ್ಮೆ ನುಡಿಸಿದರು.

ಸತ್ಯಭೋದ ಜೋಶಿ ಅವರು ಮಾತನಾಡಿ, ನಿಜವಾದ ನೆಲದ ಮಕ್ಕಳು ಜಗತ್ತಿಗೆ ಗೊತ್ತಾಗಲಿ ಎಂಬ ಉದ್ದೇಶದಿಂದ ದಕ್ಕಲ ಮುನಿಸ್ವಾಮಿ ಅವರನ್ನು ಈ ಮೂಲಕ ಪರಿಚಯಿಸಲಾಗಿದೆ. ಎಪ್ಪತ್ತು ವರ್ಷದಿಂದ ಅವರು ಈ ಕಥೆ ಹೇಳುತ್ತಾ ಬಂದಿದ್ದಾರೆ. ಅವರ ಬದುಕು ಸುಂದರವಾಗುವ ಕಡೆಗೆ ನಾವೆಲ್ಲ ಪ್ರಯತ್ನ ಮಾಡೋಣ ಎಂದರು.

ಕೊನೆಯಲ್ಲಿ ದಕ್ಕಲ ಮುನಿಸ್ವಾಮಿ ಅವರು ಅವರ ಶೈಲಿಯ ಜನಪದ ಹಾಡನ್ನು ಹಾಡಿ, ಆಶೀರ್ವಾದ ಗಾಯನದ ಮೂಲಕ ಕಾರ್ಯಕ್ರಮ ಸಂಪನ್ನಗೊಳಿಸಿದರು.

The post ದಕ್ಕಲ ಜಾಂಬವ ಪುರಾಣ appeared first on Mangaluru.

ಮಾಧ್ಯಮ ಮತ್ತು ಅಖ್ಯಾಯಿಕೆ : ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಎಂಬ ಅಸ್ಮಿತೆಗಳು; ಒಂದು ವಿವೇಚನೆ
ಫೆಬ್ರವರಿ 19 ರಂದು ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 1 ರಲ್ಲಿ ಅಜಿತ್‌ ಹನಮಕ್ಕನವರ್‌ ಮತ್ತು ರಾಧಾಕೃಷ್ಣ ಹೊಳ್ಳ ಅವರು ಮಾಧ್ಯಮ ಮತ್ತು ಅಖ್ಯಾಯಿಕೆ : ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಎಂಬ ಅಸ್ಮಿತೆಗಳು; ಒಂದು ವಿವೇಚನೆ ಕುರಿತು ಸಂವಾದ ನಡೆಸಿದರು.

ಅಜಿತ್‌ ಹನಮಕ್ಕನವರ್ ಅವರು ಮಾತನಾಡಿ, ಸಾಮಾಜಿಕ ಜಾಲತಾಣಗಳು ಬಂದ ಬಳಿಕ ಮುಖ್ಯವಾಹಿನಿಯ ಮಾಧ್ಯಮಗಳು ನರೇಟಿವ್‌ ಸೆಟ್‌ ಮಾಡಲು ಸಾಧ್ಯವಾಗುವುದಿಲ್ಲ. ಮಾಧ್ಯಮಗಳು ಹೇಳಿದ್ದನ್ನು ಜನ ತೆಗೆದುಕೊಳ್ಳಬೇಕು ಎಂದಿಲ್ಲ, ಅವರಿಗೆ ಮಾಧ್ಯಮ ಹೇಳಿದ್ದನ್ನು ಪರಾಮರ್ಶಿಸುವ ಬುದ್ಧಿಶಕ್ತಿ ಇರುತ್ತದೆ, ಸತ್ಯ ಸುಳ್ಳನ್ನು ತಿಳಿಯಲು ಹಲವು ಮಾರ್ಗಗಳು ಇರುತ್ತವೆ. ಒಬ್ಬ ಕೆಟ್ಟ ಮನುಷ್ಯನನ್ನು ಮಾಧ್ಯಮಗಳು ಎಷ್ಟೇ ಪಾಸಿಟಿವ್‌ ಆಗಿ ತೋರಿಸಿದರೂ ಜನ ಒಪ್ಪುವುದಿಲ್ಲ, ಒಳ್ಳೆಯವನನ್ನು ಕೆಟ್ಟವನಾಗಿ ತೋರಿಸಲೂ ಸಾಧ್ಯವಾಗುವುದಿಲ್ಲ. ಮಾಧ್ಯಮಗಳು ಅದ್ಧೂರಿಯಾಗಿದೆ ಎಂದು ತೋರಿಸಿದ ತಕ್ಷಣ ಸಿನಿಮಾ ಹಿಟ್‌ ಆಗುವುದಿಲ್ಲ, ಮಾಧ್ಯಮಗಳು ತೋರಿಸದ ಸಿನಿಮಾಗಳು ಸೋಲುವುದಿಲ್ಲ.  ಮಾಧ್ಯಮಗಳ ಸಂಖ್ಯೆ  ಹೆಚ್ಚುತ್ತಾ ಹೋದಂತೆ ಡಿಬೆಟ್‌ಗಳಿಗೆ ಬರುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಬೇರೆ ಬೇರೆ ಅನಿಸಿಕೆಗಳು ನಮಗೆ ಸಿಗುತ್ತದೆ ಎಂದರು.

ಪ್ರತಿಯೊಂದು ನರೇಟಿವ್‌, ಪ್ರತಿಯೊಂದು ಥಿಯರಿಗೆ ಕೊಂಡುಕೊಳ್ಳುವವರು ಇರುತ್ತಾರೆ. ನರೇಟಿವ್‌ ಸ್ಥಾಪನೆಯಿಂದ ಒಂದು ಚಿಂತನೆ ಬೆಳೆಯುತ್ತದೆ ಎಂಬುದು ನಿಜ. ಕೌಂಟರ್‌ ನರೇಟಿವ್‌ ಇಲ್ಲದಾಗ ನರೇಟಿವ್‌ ಸೆಟ್‌ ಬಲಿಷ್ಠವಾಗುತ್ತದೆ.  ಪ್ರತಿಯೊಂದು ವೃತ್ತಿಗೂ ಅಪಾಯ ಎಂಬುದು ಇರುತ್ತದೆ. ಪತ್ರಕರ್ತನಾದವನಿಗೆ ಎಲ್ಲವನ್ನೂ ಸಹಿಸಿಕೊಂಡು ಸಾಗುವುದು ಅಗತ್ಯವಾಗಿರುತ್ತದೆ.  ನಾನು ಹೇಳಿದ್ದನ್ನು ಜನರು ಅವರ ವ್ಯಾಪ್ತಿಯಲ್ಲಿ ತೆಗೆದುಕೊಳ್ಳುತ್ತಾರೆ. ಸತ್ಯ ತಿಳಿಯಲು ಬಯಸುವವರು ಸತ್ಯ ಕಂಡುಕೊಳ್ಳುತ್ತಾರೆ. ಮಾಧ್ಯಮಗಳಿಗೆ ಸ್ವಯಂ ನಿಯಂತ್ರಣ ಎಂಬುದು ಇರಬೇಕು. ಕನ್ನಡ ನ್ಯೂಸ್‌ ಚಾನೆಲ್‌ಗಳು ಆರಂಭವಾಗಿ 18 ವರ್ಷಗಳಾಗಿದೆ. ನಿಧಾನಕ್ಕೆ ಪ್ರಬುದ್ಧತೆ ಬರುತ್ತಿದೆ. ಫ್ಯಾಕ್ಟ್‌ ಚೆಕ್‌ ಹೆಸರಿನಲ್ಲಿ ಕೆಲವೊಂದನ್ನು ಮಾತ್ರ ಎಕ್ಸ್‌ಪೋಸ್‌ ಮಾಡುವಂತದ್ದು ನಡೀತಾ ಇದೆ. ಪತ್ರಿಕೋದ್ಯಮದಲ್ಲಿ ಉದ್ಯಮ ಎಂಬ ಶಬ್ದ ಕೂಡ ಇರುತ್ತದೆ. ಟಿಆರ್‌ಪಿ  ಎಂಬುದು ಇಲ್ಲು ಅನಿವಾರ್ಯ.  ಸ್ಪರ್ಧೆಯಲ್ಲೇ ಇರಲೇಬೇಕಾಗುತ್ತದೆ.  ಪತ್ರಿಕೋದ್ಯಮದ ಘನತೆ ಎತ್ತಿಹಿಡಿಯುವುದು ಅತ್ಯಂತ ಮುಖ್ಯ. ತುರ್ತು ಕ್ರಾಂತಿ ಎಂಬುದು ಭ್ರಮೆ, ಶಸ್ತ್ರ ಹಿಡಿದು ಬದಲಾವಣೆ ಸಾಧ್ಯವಿಲ್ಲ. ಬದಲಾವಣೆ ಬೇರಿನಿಂದ ಆರಂಭವಾಗಬೇಕು, ಅದಕ್ಕೆ ಹಲವಾರು ತಲೆಮಾರುಗಳು ಬೇಕಾಗುತ್ತದೆ ಎಂದರು.

The post ಮಾಧ್ಯಮ ಮತ್ತು ಅಖ್ಯಾಯಿಕೆ : ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಎಂಬ ಅಸ್ಮಿತೆಗಳು; ಒಂದು ವಿವೇಚನೆ appeared first on Mangaluru.

Cinema and Culture : When local is Universal
ಮಂಗಳೂರು ಲಿಟ್ ಫೆಸ್ಟ್ 2023 ರಲ್ಲಿ Audi 1 ರಲ್ಲಿ ರಿಷಬ್ ಶೆಟ್ಟಿ, ಪ್ರಕಾಶ್ ಬೆಳವಾಡಿ,  ಅಶ್ವಿನಿ ಅಯ್ಯರ್ ತಿವಾರಿ ಮತ್ತು ಮಾಳವಿಕ ಅವಿನಾಶ್ ಅವರು Cinema and Culture : When local is Universal ಕುರಿತು ಸಂವಾದ ನಡೆಸಿದರು.

ಮಾಳವಿಕ ಅವಿನಾಶ್ ಅವರು ಮಾತನಾಡಿ, ಸಿನಿಮಾ ಮತ್ತು ನಮ್ಮ ಸಂಸ್ಕೃತಿ. ಮೊದಲನೆದಾಗಿ ನಾವು ಭಾರತೀಯರು. ಎಲ್ಲರನ್ನೂ ನಮ್ಮವರು ಅಂತ ಅಂದುಕೊಳ್ಳುವವರು. ಏಳು ಲೋಕಗಳೂ ನಮ್ಮವು ಅಂತ ಅಂದುಕೊಳ್ಳುವವರು. ನಾವು ಕಥೆಗಾರರು. ಕಥೆಯನ್ನು ಹೇಳುವ ಹಲವು ಪ್ರಾಕಾರಗಳಿವೆ. ಎಲ್ಲದರ ಮೂಲ ಭರತನ ನಾಟ್ಯಶಾಸ್ತ್ರ. ರಾಮಾಯಣ – ಲವ ಮತ್ತು ಕುಶರು ಹೇಳುವ ಕಥೆ. ಮಹಾಭಾರತ. ಇವುಗಳು ಮೂಲ ವಿಶುವಲ್ ನರೇಶನ್‌ಗಳು. ರಿಷಬ್ ಅವ್ರೆ, ನೀವು ನಿಮ್ ನೆಲದ ಕಥೆಯನ್ನು ನಿಮ್ಮ ಭಾಷೆಯಲ್ಲಿ ಹೇಳ್ತೀರಿ. ಇದು ನಿಜವಾಗಿ ಜಾಗತಿಕ ಅಂತ ಅನ್ನಿಸುತ್ತಾ ಎಂದು ಕೇಳಿದರು.

ರಿಷಬ್ ಅವರು ಮಾತನಾಡಿ, ನನಗೆ ಅಜ್ಜಿಕಥೆ ಮೇಲೆ ನಂಬಿಕೆ ಜಾಸ್ತಿ. ವೆಸ್ಟರ್ನ್ ಅಜ್ಜಿ ಇರಬಹುದು ಅಥವಾ ಇಲ್ಲಿಯವರು ಇರಬಹುದು. ನಾನು ಓದುವುದರಲ್ಲಿ ಹಿಂದೆ. ಆದರೆ ಪುರಾಣ ಕಥೆಗಳ ಪ್ರತಿ ಜನಪದದಿಂದ ನಮ್ಗೆ ಸಿಗ್ತಾ ಇದೆ. ಭಾರತದ ಯಾವುದೇ ಮೂಲೆಯಲ್ಲಿ ಪ್ರಕೃತಿ ಮಾತೆಯನ್ನ, ಶಕ್ತಿಯನ್ನ ಆರಾಧನೆ ಮಾಡುವಂಥದ್ದು ಇದೆ. ಇದು ಪ್ರಪಂಚದ ಯಾವುದೇ ಮೂಲೆಗೆ ಹೋದ್ರೂ ಇದೆ. ಹಾಗಾಗಿ ಇದು ಜಾಗತಿಕವೇ. ಅಮ್ಮನ ಪ್ರೀತಿ ಜಾಗತಿಕವಾಗಿ ಇರುವುದು ಎಂದರು.

ವಿಪರೀತವಾಗಿ ಮಮಕಾರ ಬಂದುಬಿಡುತ್ತೆ. ನಮ್ ಕಥೆ ನಮ್ಮ ನೆಲದ ಕಥೆ ಹೇಳುವಾಗ, ಇದು ಜಾಗತಿಕ ಅನ್ಸುತ್ತ ಅಥವ ನಾವು ವಿಪರೀತ ಮಮಕಾರ ತೋರಿಸ್ತೇವಾ ಎಂಬ ಪ್ರಶ್ನೆಗೆ ಪ್ರಕಾಶ್ ಬೆಳವಾಡಿ ಅವರು ಮಾತನಾಡಿ, ಒಬ್ಬಾತ ಯಾವುದೇ ನೆಲದಲ್ಲಿ ಇದ್ರೂ, ಸೆಂಟರ್ ಆಫ್ ಅರ್ಥ್‌ನಲ್ಲಿ ಇರ್ತಾರೆ. ನಾವು ಜಗತ್ತನ್ನು ನೋಡುವುದು ನಮ್ಮ ಭಾಷೆಯ ಮೂಲಕ, ಪ್ರಾದೇಶಿಕತೆಯ ಮೂಲಕ. ಒಬ್ಬ ವ್ಯಕ್ತಿ ಅಭಿವ್ಯಕ್ತಿಗೆ ಅವಕಾಶ ಆಗುವುದು ಪ್ರಾದೇಶಿಕತೆಯಿಂದ. ಭಾರತದಲ್ಲಿ ಎಲ್ಲಿ ಹೋದರೂ ಕೆಲವೊಂದು ರೀತಿಯ ಆರಾಧನೆಗಳಿವೆ. ಅದೇ ರೀತಿ ಇರುವ ಇತರ ರಾಷ್ಟ್ರಗಳಿಗೂ ಇದು ಸಲ್ಲುತ್ತದೆ.

ವರುಣ್ ಶೆಟ್ಟಿ ಎಂಬವರ ಜೊತೆ ಕೆಲಸ ಮಾಡ್ತಿದ್ದಾರೆ. ನೀವು ಮುಂಬೈಯಲ್ಲಿ ಕೆಲಸ ಮಾಡ್ತಿದ್ದೇವೆ. ನಾವು ನಮ್ಮ ಕಥೆಗಳನ್ನು ಹೇಳ್ತೇವೆ. ನಿಮ್ಮ ಪ್ರಕಾರ ಇದು ಜಾಗತಿಕ ಮಟ್ಟಕ್ಕೆ ತಲುಪುತ್ತೆ ಅನ್ನಿಸುತ್ತಾ ಎಂದು ಅಶ್ವಿನಿ ಅಯ್ಯರ್ ತಿವಾರಿ ಅವರಿಗೆ ಕೇಳಿದ ಪ್ರಶ್ನೆಗೆ ನಾನು ಬರೆಲಿ ಕಿ ಬರ್ಫಿ ಎಂಬ ಸಿನಿಮಾ ಮಾಡಿದೆ. ನಾವು ಕಲ್ಚರ್ ಅನ್ನು ಜನಪದ ಕಥೆಯಿಂದ ಹೆಳಿಲ್ಲ. ನಾನು ರೂರಲ್ ಭಾರತದ ಕಥೆಯ ಮೂಲಕ ಹೇಳಿದೆ. ಆಹಾರ, ಬಟ್ಟೆ ಪ್ರಾದೇಶಿಕವಾಗಿ ಇಂಥ ಅಂಶಗಳಿಂದ ಹೆಳಿದ್ದೇನೆ. ನಮ್ಮ ಹೆತ್ತವರು ನಮ್ಮನ್ನು ಚೆನ್ನಾಗಿ ಓದಬೇಕು ಅಂತ ಹೇಳ್ತಿದ್ರು. ನಾನು ಮೊದಲ ಬಾರಿ ವಿಮಾನ ಪ್ರಯಾಣ ಮಾಡಿದಾಗ ಅಮ್ಮ ಊರಿಗೆಲ್ಲ ಫೋನ್ ಮಾಡಿ ಹೇಳಿದ್ದಳು. ಮೊದಲೆಲ್ಲ ಹೊರಗೆ ಹೋಗುವಾಗ, ಜೀನ್ಸ್ ಇತ್ಯಾದಿ ಧರಿಸಬೇಕಿತ್ತು. ಈಗ ಹಾಗಿಲ್ಲ. ನಾನು ಸೀರೆ ಉಟ್ಟರೂ ಹೊರಗಿನವಳಂತೆ ಯಾರೂ ನೋಡುವುದಿಲ್ಲ. ನಾವು ಯುವಜನತೆ ನಮ್ಮ ಸಂಸ್ಕೃತಿಯನ್ನು ಹೆಗಲ ಮೇಲೆ ಹೊತ್ತು ನಡೆಯಬೇಕು ಎಂದರು.

ನೀವು ಈ ಹಿಂದೆ ಮಾಡಿದ ಸಿನಿಮಾಗಳೂ ನೆಲದ ಕಥೆ ಹೇಳಿವೆ. ಕಾಂತಾರ ಮಾತ್ರ ಜಾಗತಿಕ ಮಟ್ಟಕ್ಕೆ ಹೋಯ್ತು. ನೀವು ವಿಶೇಷ ಪ್ರಯತ್ನ ಮಾಡಿದ್ರ ಎಂಬ ಪ್ರಶ್ನೆಗೆ ಉತ್ತರಿಸಿದ ರಿಷಬ್‌, ಜನ ಅದನ್ನು ಆ ಮಟ್ಟಕ್ಕೆ ತಗೊಂಡು ಹೋದ್ರು. ನಮ್ಮ ಕೆಲಸ ಎಲ್ಲಾ ಸಿನಿಮಾಗಳಿಗೂ ಒಂದೇ ರೀತಿಯದ್ದು. ಇದು ನಮ್ಮಲ್ಲಿನ ಹಿಂದುಳಿದ ಸಮುದಾಯದ, ಕಾಡಂಚಿನ ಮಕ್ಕಳ ಕಥೆ. ಈಗ ಜನ ತುಂಬ ಸೆನ್ಸಿಟಿವ್ ಆಗಿದಾರೆ. ಎಲ್ಲೂ ಜಾತಿ ಬಗ್ಗೆ ಹೇಳಿಲ್ಲ. ಒಬ್ಬ ನಿರ್ದೇಶಕನಾಗಿ ಇಷ್ಟು ದೊಡ್ಡ ಬಜೆಟಿನ ಕಥೆ ಮೊದಲಿಗೆ ಮಾಡಿದೆ. ೭ ಭಾಷೆಗಳಲ್ಲಿ ಬಂದಿದೆ.

ಪ್ರಕಾಶ್ ಬೆಳವಾಡಿ ಅವರು ಮಾತನಾಡಿ, ಇವತ್ತಿನ ದೃಶ್ಯಾವಳಿಯೇ ಬದಲಾಗಿದೆ. ಕಲಾತ್ಮಕ ಸಿನಿಮಾ ಯಶಸ್ವಿಯಾಗಿದೆ. ಯಾರು ತಾವೇ ಭಾರತದ ಪ್ರತಿನಿಧಿ ಅಂದ್ಕೊಂಡಿದ್ರೋ ಅವ್ರಿಗೆ ಮುಖಭಂಗ ಆಗಿದೆ. ಒಂದು ಕಲಾತ್ಮಕ ಸಿನಿಮಾ ಮಾಡಿ, ಬೇರೆ ಬೇರೆ ಫೆಸ್ಟಿವಲ್‌ಗಳಿಗೆ ಕಳುಹಿಸಿದಾಗ ಅದು ಜಾಗತಿಕವಾಗುತ್ತ ಅಥವಾ ಈ ರೀತಿ ಮೈಕ್ರೂಲೋಕಲ್ ಸಿನಿಮಾ ಗ್ಲೋಬಲ್ ಆಗುತ್ತೋ? ಅದು ಜನರ ಯೋಚನೆಗಳ ಮೇಲೆ ಅವಲಂಬಿತವಾಗುತ್ತೆ. ಫಾರೆಸ್ಟ್ ಡಿಪಾರ್ಟ್‌ಮೆಂಟ್ ಬರುವ ಮುಂಚೆ ಭಾರತದಲ್ಲಿ ಕಾಡು ಚೆನ್ನಾಗಿತ್ತು. ಕಾಡನ್ನು ಆರಾಧಿಸುವ ಜನರಿಗೆ ಕಾಡನ್ನು ಕಾಪಾಡುವುದೂ ಗೊತ್ತು ಎಂದರು.

ಅಶ್ವಿನಿ ಅವರು ಮಾತನಾಡಿ, ನಾವು ಕಾಲೇಜುಗಳಲ್ಲಿ ವಿದ್ಯಅರ್ಥಿಗಳಿಗೆ, ನೀವು ಕಥೆಯನ್ನು ಹೇಳುವಾಗ ನಿಮಗೆ ಕಂಫರ್ಟೇಬಲ್ ಇರುವ ಭಾಷೆಯಲ್ಲಿ ಹೇಳಿ ಅಂತ ಹೇಳ್ತೇವೆ. ಪ್ರಾದೇಶಿಕ ಕಥೆಯನ್ನು ಪ್ರಾದೇಶಿಕ ಭಾಷೆಯಲ್ಲಿ ಹೇಳಿದರೇ ಅದು ಪರಿಣಾಮಕಾರಿಯಾಗುವುದು. ಈಗ ನಾವು ಅದನ್ನು ಬೇರೆ ಭಾಷೆಗಳಿಗೆ ಡಬ್ ಮಾಡಬಹುದು ಎಂದರು.

ಪ್ರಾದೇಶಿಕತೆಯನ್ನು ಹೇಳುವುದು ಬಾಲಿವುಡ್‌ನಲ್ಲಿ ಎಷ್ಟು ಕಷ್ಟ ಎಂಬ ಪ್ರಶ್ನೆಗೆ ಅಶ್ವಿನಿ ಅವರು ಬರೇಲಿ ಕಿ ಬರ್ಫಿ ಮಾಡುವಾಗ ಅನೇಕರು ಹೇಳಿದ್ದರು, ಇದು ವರ್ಕ್ ಆಗಲ್ಲ ಅಂತ. ಆದ್ರೆ ಆಮೇಲೆ ಪ್ರತಿಯೊಬ್ಬರೂ ತಮ್ಮ ಕಥೆಯನ್ನು ಅದರಲ್ಲಿ ಕಂಡರು. ನಾವು ಕಥೆ ಮಾಡುವಾಗ ನಮ್ಮ ಸಂಸ್ಕೃತಿಗೆ ಕನೆಕ್ಟ್ ಆಗುವ ರೀತಿಯಲ್ಲಿ ಮಾಡಬೇಕು. ಅದ್ರಲ್ಲೂ ವಿಶೇಷವಾಗಿ, ಭಾರತದಿಂದ ನಮ್ಮ ಕಥೆಯನ್ನು ಜಗತ್ತಿಗೆ ಹೇಳುವಾಗ ಜಾಸ್ತಿ ವರ್ಕ್‌ ಮಾಡಬೇಕು. ನೀವು ಎಲ್ಲಿದ್ದೀರಾ, ಎಲ್ಲಿಂದ ಬಂದಿದ್ದೀರಾ ಎಂಬುದು ಮುಖ್ಯವಲ್ಲ. ಹೇಳುವ ಕಥೆಯನ್ನು ಕಷ್ಟಪಟ್ಟು ಹೇಳಿದಾಗ ಯಶಸ್ಸು ಸಿಗುತ್ತೆ ಎಂದರು.

ಸಮಾಜಕ್ಕೆ ಸಂದೇಶ ಕೊಡ್ಬೇಕು ಅಂತ ಬರೀತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಿಶಬ್ ಶೆಟ್ಟಿ ಅವರು, ಇಲ್ಲ. ಹಾಗೇನಿಲ್ಲ. ಕಾಂತಾರದಲ್ಲಿ ಅದ್ಹೇಗೆ ಫಾರೆಸ್ಟಿನವರು ಬಂದು ಜೊತೆಗೆ ಸೇರ್ತಾರೆ ಅಂತ ಅನೇಕರು ಕೇಳ್ತಾರೆ. ಆದ್ರೆ ಈ ಸಿನಿಮಾದ ಮೂಲಕವಾದ್ರೂ ಹಾಗಾಗ್ಲಿ ಅಂತ ಹೇಳಿದ್ದು. ನಾವು ನಮ್ಮ ಕಥೆಗಳನ್ನು ಹೇಳ್ತೇವೆ. ನಾವು ಎಷ್ಟು ರೀಜನಲ್ ಆಗ್ತೇವೋ ಆಗ ಅದು ಜನರಿಗೆ ತಲುಪುತ್ತದೆ. ಈ ರೀತಿಯ ರೀಜನಲ್ ಕಥೆಗಳು ಓಟಿಟಿಯಲ್ಲಿ ಎಲ್ಲೂ ಸಿಗುವುದಿಲ್ಲ. ಹಾಗಾಗಿ ಜನ ನೋಡ್ತಾರೆ ಎಂದರು.

ಕಥೆ ಕಳ್ಳತನ ಮಾಡುವವರಿಗೆ ಇವತ್ತಿನ ಪರಿಸ್ಥಿತಿಯಲ್ಲಿ ಭವಿಷ್ಯ ಇದೆಯಾ ? ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್‌ ಬೆಳವಾಡಿ ಅವರು, ರಿಮೇಕ್ ಫಿಲ್ಮ್ ವರ್ಕ್ ಆಗುತ್ತೆ. ಆದ್ರೆ ಒರಿಜಿನಲ್ ಸಿನೆಮ ನೋಡಿದ್ರೆ ರಿಮೇಕ್ ವರ್ಕೌಟF ಆಗಲ್ಲ. ಸ್ವಂತ ಅನುಭವದಿಂದ ಬರೆದ ಕಥೆ ಅತ್ಯುತ್ತಮವಾಗಿರುತ್ತೆ. ಸಾಂಸ್ಕೃತಿಕ ಸ್ವಂತಿಕೆ ಇದ್ದಾಗ ಚೆನ್ನಾಗಿ ಮೂಡಿಬರ್ತದೆ. ಸಿನಿಮಾ ಹಾಡುಗಳು- ಸಂದರ್ಭಕ್ಕೆ ತಕ್ಕಂತೆ ಬರೆಯುತ್ತಿದ್ದರು. ಅದನ್ನು ಬೇರೆ ಕಡೇ ಉಪಯೋಸಲಾಗುವುದಿಲ್ಲ. ಆದ್ರೆ ಜನರಿಕ್ ಆದ ಹಾಡುಗಳನ್ನು ಎಲ್ಲಿ ಬೇಕಾದ್ರೂ ಉಪಯೋಗ ಮಾಡ್ಬಹುದು. ಕನ್ನಡ ಸಿನಿಮಾ ನೆನಪಾಗುವುದು ಹಳೆ ಹಾಡುಗಳಿಂದ. ಆದರೆ ಆಧುನಿಕ ಹಾಡುಗಳು ಹಾಗಿಲ್ಲ. ಭಾರತವನ್ನು ಸಾಫ್ಟ್‌ಪವರ್‌ ಮೂಲಕ ಆಕ್ರಮಣ ಮಾಡ್ತಿದ್ದಾರೆ. ನಾವು ಒಳಗಿಂದ ವಿಭಜನೆ ಮಾಡಲು ಬಿಡಬಾರದು ಎಂದರು.

ಯಶಸ್ಸು ಎಂಬುದು ಬಹಳ ಅಪಾಯಕಾರಿ. ಮೊದಲಿನ ಹಾಗೆ ಅದೇ ಸಹಜತೆಯಿಂದ ಕೆಲಸ ಮಾಡ್ತಿದ್ದೇನೆ. 99.99% ಜನ ಆಶೀರ್ವಾದ ಮಾಡಿದಾಗ, 0.01 % ಜನರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಭಾರತ ಅತ್ಯಂತ ವೈವಿಧ್ಯಮಯವಾದದ್ದು. 20-30 ಕಿ. ಮೀ. ಗೊಮ್ಮೆ ಭಾಷೆ ಬದಲಾಗುತ್ತದೆ, ಆಹಾರವೂ ಬದಲಾಗುತ್ತದೆ. ಎಲ್ಲಾ ಭಾಗದಿಂದಲೂ ಬರಹಗಾರರು ಬರಬೇಕು ಎಂದರು ರಿಷಬ್‌ ಶೆಟ್ಟಿ ಅವರು ಹೇಳಿದರು.

The post Cinema and Culture : When local is Universal appeared first on Mangaluru.

From India to the World : Musings on Democracy and Policy
ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 1 ರಲ್ಲಿ ಸಾಲ್ವಟೋರ್ ಬಬ್ಬೊನೆಸ್ ಮತ್ತು ಸುರಭಿ ಹೊಡಿಗೆರೆ ಅವರು From India to the World : Musings on Democracy and Policy ಕುರಿತು ಸಂವಾದ ನಡೆಸಿದರು.

ಸಾಲ್ವಟೋರ್ ಬಬ್ಬೊನೆಸ್ ಅವರು ಮಾತನಾಡಿ, ಭಾರತದ ಪರ್ಫಾರ್ಮೆನ್ಸ್ ರ್ಯಾಂಕಿಂಗ್ ನನ್ನನ್ನು ಸೆಳೆಯಿತು. ಭಾರತವು ವಿಶ್ವದ ಯಶಸ್ವಿ ಪ್ರಜಾಪ್ರಭುತ್ವ ದೇಶ. ಜಪಾನ್, ಅಮೆರಿಕ ಎಲ್ಲವೂ ಪ್ರಜಾಪ್ರಭುತ್ವ ರಾಷ್ಟ್ರಗಳೇ. ಆದರೆ ಭಾರತವು ವಿಶ್ವದ ಅತ್ಯಂತ ದೊಡ್ದ ಪ್ರಜಾಪ್ರಭುತ್ವ ದೇಶ. ಸುವ್ಯವಸ್ಥಿತ ಪ್ರಜಾಪ್ರಭುತ್ವ ವ್ಯವಸ್ಥೆ ಎಂದರು.

2014 ರ ಬಳಿಕ ಬಹಳಷ್ಟು ಕಮೆಂಟ್‌ಗಳು ಬರುತ್ತಿವೆ. ಭಾರತದ ಪ್ರಜಾಪ್ರಭುತ್ವದ ಬಗ್ಗೆ. ನಿಮ್ಮ ಅಭಿಪ್ರಾಯವೇನು ಎಂದು ಸುರಭಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ನ್ಯೂ ಯಾರ್ಕ್ ಟೈಮ್ ಮುಂತಾದ ಪತ್ರಿಕೆಗಳು ಭಾರತವನ್ನು, ಮೋದಿಯನ್ನು, ಸುಪ್ರೀಂ ಕೋರ್ಟ್‌ ಅನ್ನು ನಿಂದಿಸುತ್ತವೆ. ಆದರೆ ಅವರಿಗೆ ಇಲ್ಲಿನ ಬಗೆಗೆ ಯಾವುದೇ ಜ್ಞಾನ ಇಲ್ಲ.

ಭಾರತದ ಚುನಾವಣಾ ಆಯೋಗ ಸರಕಾರದಿಂದ ಕಂಟ್ರೋಲ್ ಮಾಡಲ್ಪಡುತ್ತಿದೆ ಎಂಬುದೆಲ್ಲ ಮಿಥ್ಯಾರೋಪಗಳು. ಸರಕಾರವನ್ನು ವಿರೋಧಿಸುವವರ ಕೈವಾಡ ಎಂದರು.

98% ಜನ ನಮ್ಮ ಧರ್ಮಾಚರಣೆಗೆ ನಾವು ಸ್ವತಂತ್ರರು ಎಂದು ಹೇಳಿದ್ದಾರೆ. ಕೇವಲ 2% ಜನ ಮಾತ್ರ ನಾವು 24% ಜನ ಮಾತ್ರ ತಾವು ಡಿಸ್ಕ್ರಿಮಿನೇಶನ್ ಎದುರಿಸುತ್ತಿದ್ದೇವೆ ಅಂತ ಹೇಳಿದ್ದಾರೆ. ಕೆಲವು ಕಡೆ ಇರಬಹುದು. ಆದರೆ ಅದೇ ಅಮೆರಿಕದಲ್ಲಿ, 80% ಏಶ್ಯನ್ ಅಮೆರಿಕನ್ನರು ತಾವು ಭೇದನೀತಿಯನ್ನು ಎದುರಿಸುತ್ತಿದ್ದೇವೆ ಅಂತ ಹೇಳಿದ್ದಾರೆ.

ಜರ್ನಲ್‌ಗಳಿಗೆ ಕೇವಲ ಒಂದು ದೊಡ್ಡ ಸ್ಟೋರಿ ಬೇಕು. ಹಾಗಾಗಿ ಅವರು ತಪ್ಪುಮಾಹಿತಿಗಳನ್ನು ದೊಡ್ದಸುದ್ದಿಯಾಗಿ ಪ್ರಸರಿಸುತ್ತವೆ.

ನಾನು ಶೈಕ್ಷಣಿಕ ಅಧ್ಯಯನಕ್ಕಾಗಿ ಭಾರತವನ್ನು ಅಧ್ಯಯನ ಮಾಡುತ್ತಿದ್ದೇನೆ. ಆದರೆ, ಇದು ನನಗೆ ಬಹಳ ಖುಷಿ ಕೊಟ್ಟಿದೆ. ನಾನು ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣದಿಂದ ನನ್ನ ಅಧ್ಯಯನ ಆರಂಭಿಸಿದೆ. ಆಮೇಲೆ ಹಲವಾರು ಗ್ರಂಥಗಳನ್ನು ಅಧ್ಯಯನ ಮಾಡಿದೆ. ಡಾಕ್ಯುಮೆಂಟರಿಗಳನ್ನು ನೋಡಿದೆ.

ಅಮೆರಿಕದ ಮೀಡಿಯ ಸಮ್ಮನೆ ‘ಹಿಂದುಫೋಬಿಯ’ ದ ಬಗ್ಗೆ ಭಯಹುಟ್ಟಿಸುವ ರೀತಿಯಲ್ಲಿ ಪ್ರಸಾರಿಸುತ್ತಿವೆ. ಆದರೆ ನಿಜವಾಗಿ ಅಮೆರಿಕದ ಜನ ಹಿಂದೂಗಳ ಬಗ್ಗೆ ಯಾವುದೇ ರೀತಿಯ ಭಯ ಹೊಂದಿಲ್ಲ.

ಭಾರತದಲ್ಲಿ ಗಟ್ಟಿಯಾದ ವಿರೋಧ ಪಕ್ಷವೇ ಇಲ್ಲ. ಅದುವೇ ದೊಡ್ಡ ಸಮಸ್ಯೆ. ಭಾರತಕ್ಕೆ ಬಲವಾದ ವಿರೋಧ ಪಕ್ಷ ಬೇಕಾಗಿದೆ.

ಅಮೆರಿಕದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ. ಆದರೆ ಭಾರತದಲ್ಲಿ ಇದೆ ಎಂದರು.

The post From India to the World : Musings on Democracy and Policy appeared first on Mangaluru.

Life of an Industani – Book Discussion
ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 1 ರಲ್ಲಿ ಶಿವ್‌ ಕುನಾಲ್‌ ವೆರ್ಮಾ ಮತ್ತು ಶರಣ್‌ ಸೆಟ್ಟಿ ಅವರು Life of an Industani ಪುಸ್ತಕದ ಕುರಿತು ಸಂವಾದ ನಡೆಸಿದರು.

ಶಿವ್‌ ಕುನಾಲ್‌ ವೆರ್ಮಾ ಅವರು ಮಾತನಾಡಿ, ಈ ಪುಸ್ತಕ ಆತ್ಮ ಚರಿತ್ರೆ ಅಲ್ಲ. ಮಿಲಿಟರಿಯ ಜೊತೆಗಿನ ಒಡನಾಟದ ಹಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಸೇನೆ ಬಗ್ಗೆ ಹೆಮ್ಮೆ, ಗೌರವ ಇರುವ ಪತ್ರಕರ್ತರ ಸಂಖ್ಯೆ ತೀರಾ ಕಡಿಮೆ ಇದೆ. ಇಂದು ಮಾಹಿತಿ ಪಡೆಯುವ ಹಸಿವು ಹೆಚ್ಚಿದೆ. ಮಿಲಿಟರಿ ಇತಿಹಾಸ ಬರೆಯಲು ಅತ್ಯಂತ ಕಠಿಣವಾದ ವಿಷಯ. ಪ್ರತಿಯೊಬ್ಬರು ತಮ್ಮದೇ ಆದ ಗ್ರಹಿಕೆ ಹೊಂದಿರುತ್ತಾರೆ. ತಾವು ಕಂಡಿದ್ದನ್ನು ತಮ್ಮದೇ ಆದ ದೃಷ್ಟಿಕೋನದೊಂದಿಗೆ ವಿಮರ್ಶಿಸುತ್ತಾರೆ. ನಾನು ಯುದ್ಧವನ್ನು ಬಂಕರ್‌ನಲ್ಲಿ ಕುಳಿತು ನೇರವಾಗಿ ಕಂಡಿದ್ದೇನೆ. ಇದು ನನಗೆ ಮಿಲಿಟರಿ ಬಗ್ಗೆ ಬರೆಯಲು ಪೂರಕವಾಯಿತು. ಮಿಲಿಟರಿ ಬಗ್ಗೆ ಕಲಿಸುವ ಮೊದಲು ಅದರ ಭೌಗೋಳಿಕ ಸನ್ನಿವೇಶವನ್ನು ಅರ್ಥ ಮಾಡಿಕೊಡಬೇಕು. ಸಂಶೋಧನೆ ಮಾಡಿದರೂ, ಪುಸ್ತಕ ಬರೆದರೂ ಮಿಲಿಟರಿ ಈ ನನ್ನ ಜ್ಞಾನ ಕಡಿಮೆಯೇ ಇದೆ ಎಂದರು.

ಚೀನಾ – ಭಾರತ ಗಡಿ ಬಗ್ಗೆ ಸಾಕಷ್ಟು ತಪ್ಪು ಗ್ರಹಿಕೆಗಳು ಇದೆ. ಇದು ಯಾವತ್ತೂ ಬಗೆ ಹರಿಯದ ಸಮಸ್ಯೆ. ವಿವಾದ ಬಗೆಹರಿಸಲು ಚೀನಾ ಆಸ್ಪದ ನೀಡುವುದಿಲ್ಲ ಎಂದರು.

The post Life of an Industani – Book Discussion appeared first on Mangaluru.