Day 1 | Audi 3 – Session 2 : 2.00 pm
Harini Pagadal, Ashris Choudhury and Dr. Srinivasa Kumar Acharya
Focus must be directed toward the root of the problem: Harini Pagadal
Mangalore Lit Fest, Mangalore: “Generally, work is being done to provide superficial solutions to problems rather than identifying their root causes. A problem can only be solved fundamentally when its origin is traced,” said Harini Pagadal.
Speaking at the session ‘Gita for Gen Z’, she said, “Let us understand the root cause of depression. Usually, expectations are the cause. When expectations are not met, anxiety arises, eventually leading to depression. The failure to fulfill expectations is the core of the problem. Now, let us look at the Gita. The Gita tells us to change our thoughts. Additionally, it tells us to have faith in the work itself, not in the expectations of the result. Therefore, when we focus on the work, there is no room for expectation. In the absence of expectation, there is no stress or depression.”


Ashris Choudhury added, “Gen Z has access to an overwhelming amount of information, but they do not know where to begin. According to the principle of Nishkama Karma in the Gita, when you perform any task with intensity, you remain undisturbed by its outcome.” He further noted, “The Gita, which is a dialogue between Arjuna and Krishna, is also a dialogue between two cultures.”
Dr. Srinivasa Kumar Acharya moderated the discussion.
ಸಮಸ್ಯೆಯ ಮೂಲದ ಕಡೆಗೆ ಗಮನ ಹರಿಸಬೇಕು: ಹರಿಣಿ ಪಗದಲ್
‘ಸಾಮಾನ್ಯವಾಗಿ ಸಮಸ್ಯೆಗಳಿಗೆ ಮೇಲಿಂದ ಮೇಲೆ ಪರಿಹಾರ ಒದಗಿಸುವ ಕೆಲಸ ಆಗುತ್ತಿದೆಯೇ ಹೊರತು ಸಮಸ್ಯೆಗಳ ಮೂಲ ಕಾರಣ ಪತ್ತೆ ಹಚ್ಚುವ ಕೆಲಸ ಆಗುವುದಿಲ್ಲ. ಸಮಸ್ಯೆಯ ಮೂಲ ಪತ್ತೆ ಹಚ್ಚಿದಾಗ ಮಾತ್ರ ಸಮಸ್ಯೆಯನ್ನು ಮೂಲದಿಂದ ಪರಿಹರಿಸಲು ಸಾಧ್ಯ’ ಎಂದು ಹರಿಣಿ ಪಗದಲ್ ಹೇಳಿದರು.
‘ಗೀತಾ ಫಾರ್ ಜೆನ್ ಜೀ’ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಖಿನ್ನತೆಯ ಮೂಲ ಕಾರಣ ಏನು ಎಂದು ತಿಳಿಯೋಣ. ಸಾಮಾನ್ಯವಾಗಿ ನಿರೀಕ್ಷೆಗಳೇ ಕಾರಣವಾಗಿರುತ್ತವೆ. ನಿರೀಕ್ಷೆ ಪೂರೈಸದೇ ಇದ್ದಾಗ ಆತಂಕ ಉಂಟಾಗುತ್ತದೆ. ಆಮೇಲೆ ಅಂತಿಮವಾಗಿ ಖಿನ್ನತೆ ಉಂಟಾಗುತ್ತದೆ. ನಿರೀಕ್ಷೆ ಪೂರೈಸದೇ ಇರುವುದೇ ಸಮಸ್ಯೆಗೆ ಕಾರಣ. ಈಗ ಗೀತೆಗೆ ಬರೋಣ. ಯೋಚನೆಗಳನ್ನು ಬದಲಿಸಿ ಎಂದು ಗೀತೆ ಹೇಳುತ್ತದೆ. ಜೊತೆಗೆ ಕೆಲಸದ ಮೇಲೆ ನಂಬಿಕೆ ಇಡಿ, ನಿರೀಕ್ಷೆಗಳ ಮೇಲೆ ಅಲ್ಲ ಎನ್ನುತ್ತದೆ. ಹಾಗಾಗಿ ಕೆಲಸದ ಮೇಲೆ ಗಮನ ಕೊಟ್ಟಾಗ ನಿರೀಕ್ಷೆ ಇರುವುದಿಲ್ಲ. ನಿರೀಕ್ಷೆ ಇಲ್ಲದಿದ್ದಾಗ ಒತ್ತಡ, ಖಿನ್ನತೆ ಇರುವುದಿಲ್ಲ’ ಎಂದು ಅವರು ಹೇಳಿದರು.
ಆಶ್ರಿಸ್ ಚೌಧರಿ ಅವರು ಮಾತನಾಡಿ, ‘ಜೆನ್ ಜೀಗಳಿಗೆ ಸಿಕ್ಕಾಪಟ್ಟೆ ಮಾಹಿತಿ ಇರುತ್ತದೆ. ಆದರೆ ಎಲ್ಲಿಂದ ಶುರು ಮಾಡಬೇಕು ಎಂದು ತಿಳಿದಿರುವುದಿಲ್ಲ. ಗೀತೆಯಲ್ಲಿ ಬರುವ ನಿಷ್ಕಾಮ ಕರ್ಮ ತತ್ವದ ಪ್ರಕಾರ ನೀವು ತೀವ್ರವಾಗಿ ಯಾವುದೇ ಕೆಲಸವನ್ನು ಮಾಡಿದಾಗ ಅದರ ಪರಿಣಾಮದಿಂದ ನೀವು ಯಾವುದೇ ವಿಚಲಿತರಾಗುವುದಿಲ್ಲ’ ಎಂದು ಹೇಳಿದರು. ‘ಅರ್ಜುನ ಮತ್ತು ಶ್ರೀಕೃಷ್ಣನ ನಡುವಿನ ಸಂವಾದವಾಗಿರುವ ಗೀತೆ ಎರಡು ಸಂಸ್ಕೃತಿಗಳ ನಡುವಿನ ಸಂವಾದವೂ ಹೌದು’ ಎಂದು ಅವರು ಹೇಳಿದರು.
ಡಾ. ಶ್ರೀನಿವಾಸ ಕುಮಾರ್ ಆಚಾರ್ಯ ಸಂವಾದ ನಿರ್ವಹಿಸಿದರು.