ವೈಚಾರಿಕ ಆಂದೋಲನ : ರಾಷ್ಟ್ರೀಯ ಸಾಹಿತ್ಯದ ಭೂಮಿಕೆ

Day 1 | Audi 1 – Session 5 : 3.00 pm

ನರೇಂದ್ರ ಕುಮಾರ್‌ ಎಸ್.‌ ಎಸ್.‌, ಮತ್ತು ಪಲ್ಲವಿ ರಾವ್‌ ಕಾರಂತ್‌


National Literature is reaching a large number of people, but it needs to reach even more: Narendra Kumar

“When the country got independence, the consciousness of doing something for the nation had diminished among the people. Due to British influence, the feeling of ‘we are all one’ had diminished. At that time, the Rashtriya Swayamsevak Sangh (RSS) was started to awaken and cultivate national spirit. National literature was born as a part of this effort. Today, national literature is beaming with patriotism and reaching people on a large scale, but there is a need for it to reach an even wider audience,” said writer and thinker Narendra Kumar S.S.

Speaking at a session titled “Ideological Movement: The Foundation of National Literature,” he said, “It is the Sangh that brought national thought to the forefront. National consciousness had declined due to the British education system. There was a time when even great leaders would say, ‘Do not call me a Hindu.’ The feeling of unity was dormant among the common people and needed to be awakened. The thoughts of Vivekananda and Bankim Chandra’s Vande Mataram had stirred this spirit to some extent. National literature was born out of the belief that when the common man is awakened, the country also grows and awakens.”

“Any literature that carries the spirit of the nation and makes one feel ‘this is mine’ is national literature. It could be a story, a novel, or even a song. We must awaken the national spirit. Although national literature has reached people in large numbers, this spirit has not yet been awakened in a vast section of society. Therefore, it is necessary for national literature to reach more people,” he added.

Regarding the place of national literature in literary criticism, he stated, “The Leftist establishment kept us at a distance. They did not review our writers. On our part, there wasn’t a concerted effort to enter the world of criticism either. Consequently, we haven’t reached far in that direction. However, in terms of reaching the common people, we have succeeded on a very large scale. And isn’t reaching the people what matters most?”

“Decades ago, Rashtrotthana published the Bharata Bharati book series. Nearly one crore copies of that series have been published. If one wants to know about the great personalities and icons of our country, Bharata Bharati books are the primary source. They have reached people to that extent,” he said.

Speaking on the topic of publicity, he said, “Our view used to be that seeking publicity might lead us astray. However, while our literature reached the masses, it did not reach the scholarly world as much. We cannot say we neglected it intentionally, but our thinking regarding publicity has evolved. Earlier, we weren’t inclined towards promotion, but promoting literature is a necessity of the current times. Otherwise, those with different ideologies may spread misinformation. Therefore, we have now come forward to promote our literature.”

“People are now seeking out and buying national literature. Today’s generation is also reading it. Works by Vikram Sampath and Babu Krishnamurthy’s Ajeya are reaching people in large numbers. But they need to reach even further,” he concluded.

The session was moderated by author Pallavi Rao Karanth.

ರಾಷ್ಟ್ರೀಯ ಸಾಹಿತ್ಯ ದೊಡ್ಡ ಪ್ರಮಾಣದಲ್ಲಿ ಜನರನ್ನು ತಲುಪುತ್ತಿದೆ, ಇನ್ನೂ ಜಾಸ್ತಿ ತಲುಪಬೇಕಿದೆ: ನರೇಂದ್ರ ಕುಮಾರ್

‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ದೇಶಕ್ಕಾಗಿ ಏನಾದರೂ ಮಾಡಬೇಕು ಎನ್ನುವ ಪ್ರಜ್ಞೆ ಜನರಲ್ಲಿ ಕಡಿಮೆಯಾಗಿತ್ತು. ಬ್ರಿಟಿಷರ ಕಾರಣದಿಂದ ನಾವೆಲ್ಲಾ ಒಂದು ಅನ್ನುವ ಮನೋಭಾವ ಹಿನ್ನೆಲೆಗೆ ಸರಿದಿತ್ತು. ಆ ಹೊತ್ತಲ್ಲಿ ರಾಷ್ಟ್ರೀಯ ಭಾವ ಜಾಗೃತ ಆಗಬೇಕು, ಜಾಗೃತ ಮಾಡಬೇಕು ಎಂಬ ಕಾರಣಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರಂಭವಾಯಿತು. ಅದರ ಭಾಗವಾಗಿ ರಾಷ್ಟ್ರೀಯ ಸಾಹಿತ್ಯ ಹುಟ್ಟಿಕೊಂಡಿತು. ರಾಷ್ಟ್ರೀಯ ಭಾವ ಉಳ್ಳ ರಾಷ್ಟ್ರೀಯ ಸಾಹಿತ್ಯ ಈಗ ದೊಡ್ಡ ಪ್ರಮಾಣದಲ್ಲಿ ಜನರನ್ನು ತಲುಪುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಲುಪುವ ಅಗತ್ಯವಿದೆ’ ಎಂದು ಸಾಹಿತಿ, ಚಿಂತಕ ನರೇಂದ್ರ ಕುಮಾರ್ ಎಸ್.ಎಸ್. ಹೇಳಿದರು.

ವೈಚಾರಿಕ ಆಂದೋಲನ: ರಾಷ್ಟ್ರೀಯ ಸಾಹಿತ್ಯದ ಭೂಮಿಕೆ ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ರಾಷ್ಟ್ರೀಯ ವಿಚಾರ ಮುನ್ನೆಲೆಗೆ ತಂದು ನಿಲ್ಲಿಸಿರುವುದೇ ಸಂಘ. ಬ್ರಿಟಿಷರ ಶಿಕ್ಷಣ ಪದ್ಧತಿಯಿಂದ ರಾಷ್ಟ್ರ ಪ್ರಜ್ಞೆ ಕಡಿಮೆಯಾಗಿತ್ತು. ಒಂದು ಸಮಯದಲ್ಲಿ ದೊಡ್ಡ ದೊಡ್ಡ ನಾಯಕರು ಕೂಡ ತನ್ನನ್ನು ಹಿಂದೂ ಅಂತ ಕರೆಯಬೇಡಿ ಎನ್ನುತ್ತಿದ್ದರು. ಜನಸಾಮಾನ್ಯರಲ್ಲೂ ನಾವೆಲ್ಲಾ ಒಂದು ಅನ್ನುವ ಭಾವನೆ ಸುಪ್ತವಾಗಿತ್ತು. ಅದನ್ನು ಜಾಗೃತಗೊಳಿಸಬೇಕಿತ್ತು. ವಿವೇಕಾನಂದರು, ಬಂಕಿಚಂದ್ರರ ವಂದೇಮಾತರಂ ಸ್ವಲ್ಪ ಮಟ್ಟಿಗೆ ಜಾಗೃತ ಭಾವ ಬಡಿದೆಬ್ಬಿಸಿತ್ತು. ಆಗ ಸಾಮಾನ್ಯ ಜನ ಜಾಗೃತರಾಗಿದ್ದಾಗ ದೇಶ ಕೂಡ ಬೆಳೆಯುತ್ತದೆ ಮತ್ತು ಜಾಗೃತ ಆಗುತ್ತದೆ ಎಂಬ ಕಾರಣಕ್ಕೆ ರಾಷ್ಟ್ರೀಯ ಸಾಹಿತ್ಯ ಹುಟ್ಟಿಕೊಂಡಿತು’ ಎಂದು ಅವರು ಹೇಳಿದರು.

‘ಯಾವ ಸಾಹಿತ್ಯದಲ್ಲಿ ರಾಷ್ಟ್ರದ ಭಾವ ಇರುತ್ತದೆಯೋ, ಅದು ನನ್ನದು ಅನ್ನಿಸಲು ಶುರುವಾಗುತ್ತದೋ ಅದು ರಾಷ್ಟ್ರೀಯ ಸಾಹಿತ್ಯ. ಅದು ಕತೆ, ಕಾದಂಬರಿ ಅಥವಾ ಹಾಡು ಕೂಡ ಆಗಿರಬಹುದು. ರಾಷ್ಟ್ರ ಭಾವ ಜಾಗೃತ ಗೊಳಿಸಬೇಕು. ರಾಷ್ಟ್ರೀಯ ಸಾಹಿತ್ಯ ದೊಡ್ಡ ಪ್ರಮಾಣದಲ್ಲಿ ತಲುಪಿದ್ದರೂ, ಇನ್ನೂ ಬಹುದೊಡ್ಡ ಭಾಗದಲ್ಲಿ ರಾಷ್ಟ್ರ ಭಾವ ಜಾಗೃತ ಆಗಿಲ್ಲ. ರಾಷ್ಟ್ರ ಭಾವ ಇನ್ನೂ ಮೂಡಿಲ್ಲ. ಹಾಗಾಗಿ ರಾಷ್ಟ್ರೀಯ ಸಾಹಿತ್ಯ ಇನ್ನೂ ಹೆಚ್ಚು ಜನಕ್ಕೆ ತಲುಪುವ ಅಗತ್ಯವಿದೆ’ ಎಂದು ಅವರು ಹೇಳಿದರು.

ವಿಮರ್ಶೆಯಲ್ಲಿ ರಾಷ್ಟ್ರೀಯ ಸಾಹಿತ್ಯ ಎಂಬ ವಿಚಾರದ ಕುರಿತಾಗಿ ಅವರು, ‘ಎಡ ವ್ಯವಸ್ಥೆ ನಮ್ಮನ್ನು ದೂರವೇ ಇಟ್ಟಿದ್ದರು. ನಮ್ಮ ಸಾಹಿತಿಗಳನ್ನು ವಿಮರ್ಶೆ ಮಾಡುತ್ತಿರಲಿಲ್ಲ. ನಮ್ಮಲ್ಲೂ ವಿಮರ್ಶಾ ಲೋಕದ ಕಡೆಗೆ ಹೋಗಬೇಕು ಎನ್ನುವ ಪ್ರಯತ್ನ ನಡೆಯಲಿಲ್ಲ. ಹಾಗಾಗಿ ಆ ನಿಟ್ಟಿನಲ್ಲಿ ತಲುಪಿಲ್ಲ. ಆದರೆ ಜನರಿಗೆ ತಲುಪುವುದರಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ತಲುಪಿದೆ. ಜನರನ್ನು ತಲುಪುವುದೇ ಮುಖ್ಯವಲ್ಲವೇ’ ಎಂದು ಹೇಳಿದರು.

‘ರಾಷ್ಟ್ರೋತ್ಥಾನ ದಶಕಗಳ ಹಿಂದೆ ಭಾರತ ಭಾರತಿ ಪುಸ್ತಕ ಸಂಪದ ಪ್ರಕಟ ಮಾಡಿದೆ. ಆ ಸರಣಿ ಒಂದು ಕೋಟಿವರೆಗೂ ಪ್ರಕಟವಾಗಿದೆ. ನಮ್ಮ ದೇಶದ ಮಹಾಪುರುಷರು, ವ್ಯಕ್ತಿತ್ವಗಳ ಕುರಿತು ತಿಳಿಯಬೇಕು ಅಂದರೆ ಅದಕ್ಕೆ ಇರುವುದೇ ಭಾರತ ಭಾರತಿ ಪುಸ್ತಕಗಳು. ಅಷ್ಟರ ಮಟ್ಟಿಗೆ ದೊಡ್ಡದಾಗಿ ತಲುಪಿದೆ’ ಎಂದರು.

ಪ್ರಚಾರದ ಕುರಿತಾಗಿ ಮಾತನಾಡಿದ ಅವರಪು, ‘ಪ್ರಚಾರಕ್ಕೆ ಹೋದಾಗ ದಿಕ್ಕು ತಪ್ಪುತ್ತದೆ ಅನ್ನುವುದು ನಮ್ಮ ವಿಚಾರವಾಗಿತ್ತು. ಆದರೆ ಸಾಹಿತ್ಯದ ವಿಚಾರದಲ್ಲಿ ಬಂದಾಗ ಸಾಹಿತ್ಯ ದೊಡ್ಡ ಪ್ರಮಾಣದಲ್ಲಿ ತಲುಪಿದರೂ ವಿದ್ವತ್ ಲೋಕದಲ್ಲಿ ಹೆಚ್ಚು ತಲುಪಲಿಲ್ಲ. ಆ ಕಾರಣಕ್ಕೆ ಅನ್ನುವ ಕಾರಣಕ್ಕೆ ನಿರ್ಲ್ಯಕ್ಷ ಮಾಡಿದ್ದೇವೆ ಅನ್ನುವುದಕ್ಕೆ ಆಗುವುದಿಲ್ಲ. ಇನ್ನು ಪ್ರಚಾರದ ವಿಚಾರಕ್ಕೆ ಬಂದಾಗ ನಮ್ಮ ಚಿಂತನೆ ಬದಲಾಗುತ್ತಾ ಬಂದಿದೆ. ಮೊದಲು ಪ್ರಚಾರದ ಕಡೆಗೆ ಹೆಚ್ಚು ಒಲವಿರಲಿಲ್ಲ, ಆದರೆ ಸಾಹಿತ್ಯವನ್ನು ಪ್ರಚಾರ ಮಾಡುವುದು ಈ ಕಾಲದ ಅಗತ್ಯ. ಇಲ್ಲದಿದ್ದರೆ ಬೇರೆ ವಿಚಾರದವರು ಸುಳ್ಳು ಪ್ರಚಾರ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ನಮ್ಮ ಸಾಹಿತ್ಯವನ್ನು ಪ್ರಚಾರ ಮಾಡುವುದಕ್ಕೆ ಮುಂದಾಗಿದ್ದೇವೆ’ ಎಂದರು.

‘ರಾಷ್ಟ್ರೀಯ ಸಾಹಿತ್ಯವನ್ನು ಹುಡುಕಿಕೊಂಡು ಬಂದು ತೆಗೆದುಕೊಳ್ಳುತ್ತಿದ್ದಾರೆ. ಇವತ್ತಿನ ಪೀಳಿಗೆ ಕೂಡ ರಾಷ್ಟ್ರೀಯ ಸಾಹಿತ್ಯ ಓದುತ್ತಿದೆ. ವಿಕ್ರಂ ಸಂಪತ್ ಕೃತಿಗಳು, ಬಾಬು ಕೃಷ್ಣಮೂರ್ತಿಯವರ ಅಜೇಯ ಕೃತಿಗಳು ಹೆಚ್ಚಿನ ಪ್ರಮಾಣದಲ್ಲಿ ತಲುತ್ತಿವೆ. ಆದರೆ ಇನ್ನೂ ಜಾಸ್ತಿ ತಲುಪಬೇಕಿದೆ’ ಎಂದು ಅವರು ಹೇಳಿದರು.

ಲೇಖಕಿ ಪಲ್ಲವಿ ರಾವ್ ಕಾರಂತ್ ಸಂವಾದ ನಡೆಸಿಕೊಟ್ಟರು.