#MlrLitFest
  • mlrlitfest@gmail.com

ಧಾರ್ಮಿಕ ವಿಷಯಗಳಲ್ಲಿ ಕೋರ್ಟ್ ಮಧ್ಯಪ್ರವೇಶ ಸಲ್ಲದು

Day 2 – 04-11-2018 at 10.00 am @ Manthan : Overreaching Regulations and Relentless Faith – Traditions, Courts & Constitution

ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಭಾನುವಾರ (ನ. 4) ’ಓವರ್‌ರೀಚಿಂಗ್ ರೆಗ್ಯುಲೇಷನ್ಸ್ ಆಂಡ್ ರಿಲೆಂಟ್‌ಲೆಸ್ ಫೈಥ್-ಟ್ರೆಡಿಷನ್, ಕೋರ್ಟ್ಸ್ ಆಂಡ್ ಕಾನ್ಸ್ಟಿಟ್ಯೂಷನ್ ’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ನಡೆದಿದ್ದು, ಸಂದೀಪ್ ಶಾಸ್ತ್ರೀ, ಲಕ್ಷೀ ಮತ್ತಿಘಟ್ಟ, ಲಕ್ಷ್ಮೀ ಐಯ್ಯಂಗಾರ್ ಅವರು ತೇಜಸ್ವಿ ಸೂರ್ಯ ಅವರೊಂದಿಗೆ ಸಂವಾದಿಸಿದರು.

ಹಿಂದೂ ಸಂಪ್ರದಾಯ, ಪದ್ಧತಿಗಳ ವಿಷಯದಲ್ಲಿ ನ್ಯಾಯಾಲಯಗಳ ಮಧ್ಯಪ್ರವೇಶ ಎಷ್ಟು ಸರಿ ಎಂಬ ಬಗ್ಗೆ ಇಲ್ಲಿ ವಿಷಯ ಚರ್ಚಿತಗೊಂಡಿದ್ದು, ಶಬರಿಮಲೆ ಸೇರಿದಂತೆ ಇತರ ಧಾರ್ಮಿಕ ವಿಷಯಗಳ ಬಗ್ಗೆ ಕೋರ್ಟ್‌ಗಳು ನೀಡಿರುವ ತೀರ್ಪಿನ ಬಗ್ಗೆ ಗಣ್ಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಲಕ್ಷ್ಮೀ ಐಯ್ಯಂಗಾರ್ ಮಾತನಾಡಿ, ಯಾವುದೇ ಧಾರ್ಮಿಕ ಆಚರಣೆಗಳು ಪ್ರಸ್ತುತ ಕಾಲಕ್ಕೆ ಸರಿಹೊಂದುವುದಿಲ್ಲ ಎಂದೆನಿಸಿದಾಗ ಅಥವಾ ಸತಿ ಪದ್ಧತಿಯಂತೆ ತೀವ್ರ ಹಾನಿಕಾರವಾಗಿದೆ ಎಂದೆನಿಸಿದಾಗ ಮಾತ್ರ ಧಾರ್ಮಿಕ ವಿಷಯಗಳಲ್ಲಿ ಕೋರ್ಟ್ ಮಧ್ಯಪ್ರವೇಶಿಸಬೇಕು. ಒಂದು ವೇಳೆ ಇಡೀ ಧಾರ್ಮಿಕ ವ್ಯವಸ್ಥೆ ತನ್ನ ಮಧ್ಯಪ್ರವೇಶದಿಂದ ನಶಿಸುತ್ತದೆ ಎಂದಾದಾಗ ಕೋರ್ಟ್ ದೂರ ಸರಿಯಬೇಕು ಎಂದರು.

ಸಂದೀಪ್ ಶಾಸ್ತ್ರೀ ಮಾತನಾಡಿ, ದೇಶದಲ್ಲಿ ಕೋರ್ಟ್, ನಿಯಮಗಳು ಇಲ್ಲದೆ ಏನೂ ನಡೆಯಲಾರದು. ಆದರೆ ಧಾರ್ಮಿಕ ವಿಷಯಗಳಲ್ಲಿ ಕೋರ್ಟ್‌ಗಳಿಗೆ ಅತ್ಯಂತ ಕಡಿಮೆ ಪಾತ್ರ ಇದೆ, ಮಿತಿಯಿದೆ. ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆಯಾಗುತ್ತಿದೆ ಎಂದಾದಾಗ, ಸಾರ್ವಜನಿಕರ ಹಿತಾಸಕ್ತಿ ಹೆಚ್ಚಿನ ಮಟ್ಟದಲ್ಲಿದ್ದಾಗ ಮಾತ್ರ ಕೋರ್ಟ್ ಧಾರ್ಮಿಕ ವಿಷಯಗಳಿಗೆ ಮಧ್ಯಪ್ರವೇಶಿಸಬೇಕು. ಎಂದರು.

ಚೈತ್ರ ಮತ್ತಿಘಟ್ಟ ಮಾತನಾಡಿ, ಯಾವುದೇ ಕಾನೂನುಗಳಿಗೆ ಸಂಪ್ರದಾಯಗಳ ಸಮಸ್ಯೆಯನ್ನು ನಿರ್ವಹಿಸಲು ಸಾಧ್ಯವಿಲ್ಲ. ಹಿಂದೂ ಧರ್ಮ ಪುಸ್ತಕ ಆಧಾರಿತ ಧರ್ಮವಲ್ಲ. ಆದರೆ ಕೋರ್ಟ್ ಪುಸ್ತಕಗಳನ್ನು ಆಧರಿಸಿ ಧಾರ್ಮಿಕ ತೀರ್ಪು ನೀಡುತ್ತಿದೆ. ನ್ಯಾಯಾಧೀಶರು, ವಕೀಲರು ಧಾರ್ಮಿಕ ತಜ್ಞತೆಯನ್ನು ಹೊಂದಿಲ್ಲ ಎಂದರು.

ಬಹುಸಂಖ್ಯಾತ ಮಹಿಳೆಯರಿಗೆ ಶಬರಿಮಲೆಗೆ ಹೋಗಲು ಇಷ್ಟವಿಲ್ಲ ಎಂದಾದಾಗ, ಸಾರ್ವಜನಿಕ ಹಿತಾಸಕ್ತಿ ಹಾಕಿದವರ ಹಿಂದಿನ ಅಜೆಂಡಾ ಎಂತದ್ದು ಎಂದು ಕೋರ್ಟ್ ಅರ್ಥ ಮಾಡಿಕೊಳ್ಳಬೇಕಿತ್ತು. ದೇವಸ್ಥಾನಗಳು ಒಂದು ಜನಸಮೂಹಕ್ಕೆ ಸೇರಿದ್ದಾಗಿದ್ದು, ಅಲ್ಲಿನ ನಿಯಮಾವಳಿಗಳನ್ನು ಅವರೇ ನಿರ್ಧರಿಸುತ್ತಾರೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುತ್ತಾರೆ. ಹಿಂದೂ ಧರ್ಮ ನಿಂತ ನೀರಲ್ಲ, ಅದು ಹರಿಯುತ್ತಿರುವ ನದಿ. ಸಮಯದೊಂದಿಗೆ ಅದು ಪರಿವರ್ತನೆಗೆ ತನ್ನನ್ನು ತೆರೆದುಕೊಂಡಿದೆ. ಹಿಂದೂ ಧರ್ಮವನ್ನು ಇತರ ಧರ್ಮದೊಂದಿಗೆ ಹೋಲಿಸುವ ವರ್ತನೆಗಳು ನಿಲ್ಲಬೇಕು ಎಂಬ ಅಭಿಪ್ರಾಯ ಇಲ್ಲಿ ವ್ಯಕ್ತವಾಯಿತು.