Role and Goal of Indian Diaspora

Day 1 | Audi 3 – Session 3 : 3.00 pm

Veena Rao and B. Archana Baliga

Veena Rao Shares Her Journey as an Indian Diaspora Author at Mangalore Literature Fest.

Veena Rao, a Mangalorian born author, shared her inspiring journey at the 7th edition of the Mangalore Literature Fest.

Veena moved to America at 17. Later she worked as a journalist in Indian Express. She later transitioned to fiction writing and published her debut novel.

Veena emphasized the importance of preserving cultural heritage, embracing diversity, and celebrating traditions. She acknowledged the challenges of maintaining cultural traditions in a foreign land but believes it’s essential to pass them down to future generations.

The session highlighted Veena’s unique storytelling style, her passion for preserving cultural heritage, and her advocacy for more diverse storytelling.

ಮಂಗಳೂರು ಸಾಹಿತ್ಯದ ೭ನೇ ಆವೃತ್ತಿಯ ಅಂಗವಾಗಿ ಭಾರತೀಯ ವಲಸಿಗರ ಪಾತ್ರ ಮತ್ತು ಗುರಿ ಎಂಬ ವಿಚಾರಗೋಷ್ಠಿ 2024 ರ ಜನವರಿ 11 ರಂದು ನಡೆಯಿತು. ಈ ವಿಚಾರಗೋಷ್ಠಿಯಲ್ಲಿ ಪತ್ರಕರ್ತೆ ಹಾಗೂ ಲೇಖಕಿಯಾಗಿರುವ ವೀಣಾ ರಾವ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಹಾಗೂಅರ್ಚನಾ ಬಾಳಿಗ ಅವರ ನಡುವೆ ಭಾರತೀಯ ವಲಸೆ ಸಮುದಾಯದ ಪಾತ್ರ ಹಾಗೂ ಗುರಿಗಳನ್ನು ಕುರಿತ ಸಂವಾದ ನಡೆಯಿತು.

ಮಂಗಳೂರಿನ ಶ್ರೀಮಂತ ಸಂಸ್ಕೃತಿಯು ಗಡಿಗಳನ್ನು ಮೀರಿ ಪ್ಪ್ರಸಾರವಾಗುತ್ತಿದೆ ಉದಾಹರಣೆ ಗೆ ’ಕಾಂತಾರ’ ಚಿತ್ರಕ್ಕೆ ಸಿಕ್ಕಿರುವ ಪ್ರಶಂಸೆಬಗ್ಗೆ ಅವರು ಚರ್ಚಿಸಿದರು. ಮಂಗಳೂರು ಭಾಗದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತವನ್ನೂ ವಿದೇಶದಲ್ಲಿರುವ ಕುಟುಂಬಗಳು ಮುಂದಿನ ತಲೆಮಾರಿಗೆ ಪರಿಚಯಿಸುತ್ತಿದ್ದಾರೆ. ಮಕ್ಕಳು ಈ ಕಲಾವಿಧಿಗಳನ್ನು ಕಲಿಯಲು ಸೇರುತ್ತಿದ್ದಾರೆ, ಇದರಿಂದ ಸಂಸ್ಕೃತಿ ಹಾಗೂ ಸಂಪರ್ಕ ಕಳೆದುಕೊಳ್ಳುವುದಿಲ್ಲ.

”ನಾವು ಥ್ಯಾಂಕ್ಸ್ಗಿವಿಂಗ್ ಹಾಗೂ ಕ್ರಿಸ್ಮಸ್ ಅನ್ನು ಸಂಭ್ರಮಿಸುತ್ತೇವೆ, ಆದರೆ ನಮ್ಮ ಮೂಲಗಳನ್ನು ಎಂದಿಗೂ ಮರೆತುದಿಲ್ಲ. ಈ ಸಂಸ್ಕೃತಿಯ ಸಂಯೋಜನೆ ಜೀವನವನ್ನು ಇನ್ನ? ಶ್ರೀಮಂತಗೊಳಿಸುತ್ತದೆ ಎಂದರು ವೀಣಾ ರಾವ್ ಅವರ ಇತ್ತೀಚಿನ ಪುಸ್ತಕವು ಏಳು ವ?ಗಳ ವಲಸೆ ಜೀವನದ ಅನುಭವವನ್ನು ಕಟ್ಟಿಕೊಡುತ್ತದೆ. ಈ ಕೃತಿಯು ವಿದೇಶದಲ್ಲಿರುವ ಭಾರತೀಯರ ಸವಾಲುಗಳು, ಸಂಯೋಜನೆ ಮತ್ತು ಅವರ ಸಂಸ್ಕೃತಿ ಪ್ರೀತಿಯ ಅನಾವರಣ ಮಾಡುತ್ತದೆ.

ಈ ಸಂವಾದವು ವಲಸೆ ಸಮುದಾಯದ ಜೋಡಣೆ ಮತ್ತು ಸಂಸ್ಕೃತಿಯ ಉಳಿವಿನ ಅವಶ್ಯಕತೆಯನ್ನು ಒತ್ತಿಹೇಳಿತು. ಹೊಸ ಸಂಸ್ಕೃತಿಗಳನ್ನು ಸ್ವೀಕರಿಸುವಾಗ ಭಾರತೀಯ ಧಾರ್ಮಿಕತೆ ಮತ್ತು ಪರಂಪರೆಗಳನ್ನು ಉಳಿಸಿಕೊಂಡು ಹೋಗುವ ತಂತ್ರಗಳನ್ನು ವಿವರಿಸಲಾಯಿತು. ಚರ್ಚೆಯ ಅಂತ್ಯದಲ್ಲಿ, ಭಾರತೀಯ ವಲಸೆ ಸಮುದಾಯವು ಹೊಸತನ್ನು ಅಳವಡಿಸಿಕೊಳ್ಳುತ್ತಲೇ ತಮ್ಮ ಮೂಲ ಸಂಸ್ಕೃತಿಯನ್ನು ಜಗತ್ತಿಗೆ ಹಂಚಿಕೊಳ್ಳುವ ಮಹತ್ವದ ಪಾತ್ರ ವಹಿಸುತ್ತಿದೆಂದು ಹೇಳಿದರು.