Day 1 | Audi 3 – Session 4 : 4.00 pm
ವಿಠ್ಠಲ್ ಗೋಂದಳೆ
ಮಂಗಳೂರು ಸಾಹಿತ್ಯ ಉತ್ಸವದ 7ನೇ ಆವೃತ್ತಿಯ ಅಂಗವಾಗಿ ಜಾನಪದ: ಗೊಂದಲಿಗರ ಪದಗಳು ಹಾಡು ಮತ್ತು ಕಥೆಯನ್ನು ಧಾರವಾಡದ ಪ್ರಸಿದ್ಧ ಜಾನಪದ ಗಾಯಕರಾದ ವಿಠ್ಠಲ್ ಗೋಂದಳೆ ಮತ್ತು ಭಲಾರಾಮ ಜನಪದ ಗಾಯನವನ್ನು ಪ್ರಸ್ತುತಪಡಿಸಿದರು. ಅವರು ತಮ್ಮ ಗಾಯನದ ಮೂಲಕ ಧಾರವಾಡದ ಸಾಂಸ್ಕೃತಿಕ ಪರಂಪರೆಯನ್ನು ಪ್ರೇಕ್ಷಕರಿಗೆ ಪರಿಚಯಿಸಿದರು.
ಈ ಕಾರ್ಯಕ್ರಮವನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ನ ಸಂವಹನಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಶ್ರೀರಾಜ್ ಗುಡಿ ನಿರ್ವಹಿಸಿದರು. ಅವರು ಗೀತೆಗಳ ಸಾಂಸ್ಕೃತಿಕ ಪರಿಪೂರ್ಣತೆ ಹಾಗೂ ಈಗಿನ ಕಾಲದಲ್ಲೂ ನುಡಿಸಂಪ್ರದಾಯಗಳ ಸಂರಕ್ಷಣೆ ಅತ್ಯಗತ್ಯವೆಂದು ಹೇಳಿದರು ಕುಟುಂಬದ ಆರಾಧ್ಯ ದೇವತೆ ದೇವಿಯಾಗಿರುವ ಸಂದರ್ಭದಲ್ಲಿ, ಈ ಹಾಡುಗಳನ್ನು ವಿಶೇಷ ಸಂದರ್ಭಗಳಲ್ಲಿ ಹಾಡುವ ಸಂಪ್ರದಾಯವಿದೆ. ಇವು ನಂಬಿಕೆಯನ್ನು ಮಾತ್ರವಲ್ಲ, ಸಮಾಜದ ಜೊತೆಗಿನ ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತವೆ.
ಕಲಾವಿದರು ತಮ್ಮ ಪರಂಪರೆಯನ್ನು ಸಂರಕ್ಷಿಸುತ್ತಿರುವ ಪರಿಶ್ರಮವನ್ನು ಹಿಗ್ಗಿ ವರ್ಣಿಸುತ್ತಾ, ಇವರು ಕೇವಲ ವೇದಿಕೆ ಪ್ರದರ್ಶನಕ್ಕಾಗಿ ಅಲ್ಲ, ಅವರ ಶ್ರೀಮಂತ ಜಾನಪದ ಪರಂಪರೆಯ ಉಳಿವಿಗಾಗಿ ತಮ್ಮ ಕಲೆ ಮುಂದುವರಿಸಿಕೊಂಡಿದ್ದಾರೆ ಎಂದು ಅವರು ಶ್ಲಾಘಿಸಿದರು.
ವಿಠ್ಠಲ್ ಗೋಂದಳೆ ಮತ್ತು ಭಲಾರಾಮ ಅವರು ಗೊಂದಲಿಗರ ಪದಗಳು ಎಂಬ ಹಲವಾರು ಜನಪದ ಗೀತೆಗಳನ್ನು ಹಾಡಿದರು. ಇವು ಭಕ್ತಿ, ನೈತಿಕ ಮೌಲ್ಯಗಳು ಮತ್ತು ಸಮುದಾಯದ ಜೀವನಪದ್ಧತಿಯ ಕಥೆಗಳನ್ನು ಹೇಳುವ ಪ್ರಮುಖ ಜನಪದ ಗೀತೆಗಳು. ಅವರ ಲಯಬದ್ಧ ಶೈಲಿ ಮತ್ತು ಹಾಡಿನ ಭಾವನಾತ್ಮಕತೆ ಪ್ರೇಕ್ಷಕರಿಗೆ ಧಾರವಾಡದ ಸಂಸ್ಕೃತಿಯ ಜೀವಂತ ಚಿತ್ರಣವನ್ನು ನೀಡಿದರು.
ವಿಠ್ಠಲ್ ಗೋಂದಳೆ ಮತ್ತು ಭಲಾರಾಮ ತಮ್ಮ ಹಾಡುಗಳ ಮೂಲಕ ಪ್ರೇಕ್ಷಕರನ್ನು ಮನರಂಜನೆ ಮಾಡಿದ್ದಷ್ಟೇ ಅಲ್ಲ, ಜಾನಪದ ಕಲೆಯ ಆಳವಾದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಪ್ರತಿಬಿಂಬಿಸಿದರು.
ಜಾನಪದ ಕಲೆಯನ್ನು ಬೆಸೆಯುವ, ಅದನ್ನು ಉಳಿಸುವ, ಮತ್ತು ಹೊಸ ಪೀಳಿಗೆಗೆ ಪರಿಚಯಿಸುವ ಕೆಲಸ ನಿರಂತರವಾಗಿರಬೇಕು ಎಂಬ ಮನದಾಳದ ಸಂದೇಶದೊಂದಿಗೆ ಕಾರ್ಯಕ್ರಮ ಅಂತ್ಯವಾಯಿತು.
In a heartwarming tribute to Tulu’s vibrant cultural legacy, MAHE’s Senior Assistant Professor, Shreeraj Gudi, hosted a mesmerizing performance of Gondaligara Padagalu. This ancient folk art form, born in the Tulu-speaking community, weaves a captivating tapestry of music, mythology, and everyday life stories.
As the performers took to the stage, accompanied by the haunting melodies of the maddale and chimta, the audience was transported to a another era . The two artistes, with their passion of Gondaligara Padagalu, breathed life into the timeless traditions of the Tulu community.
For centuries, Gondaligara Padagalu has been a cornerstone of Tulu culture, fostering social bonding, cultural expression, and community pride. In a world where traditions are constantly evolving, Gondaligara Padagalu stands as a testament to the enduring power of cultural legacy.
This enchanting performance was a reminder of the importance of preserving the cultural roots, and the Tulu community’s unwavering commitment to keeping their heritage alive.