Audi 2 – Session 2 : 11.15 am
“India is functioning like a cold Nation” – Dr G B HarishThe Sixth-edition of Mangalore lit fest oragnised by Bharath Foundation in collaboration with Mythic society held a session on ‘Nakutanti: Ondu Payana’ by Dr G B Harish on Saturday January 20.
Speaking about D. R. Bendre and his litrature, Researcher and Jouranist Harish said, “Envy was unnecessary for Bendre. His literature dictionary is a vedic dictionary. Bendre’s poetry gives us a glimpse into his personality. Because of the language we utilise we have moved away from the literature. Even though litrature requires knowledge, literature is not difficult.” The session was followed up by a questions and answer session.Kajal commenced the event.
ನಾಕುತಂತಿ – ಒಂದು ಪಯಣ ಎಂಬ ಅಧಿವೇಶನದಲ್ಲಿ ಡಾ. ಜಿ. ಬಿ. ಹರೀಶ್ ಅವರು ತಮ್ಮ ಜ್ಞಾನಕುಂಚವನ್ನು ಜನರಿಗೆ ತಿಳಿಸಿದರು. ಜ್ಞಾನಪೀಠ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ಕೇವಲ ಕವಿ ಅಲ್ಲ ವರಕವಿ ಎಂದು ಹೇಳಿ ಅವರ ಕೃತಿಯ ವಿಶಿಷ್ಟತೆಯನ್ನು ವಿಮರ್ಷಿಸಿದರು. ಡಾ. ಜಿ.ಬಿ.ಹರೀಶ್ ಅವರು ದ. ರಾ. ಬೇಂದ್ರೆಯ ಜೀವನ ಲಯ ಹಾಗೂ ಕಾವ್ಯಲಯವನ್ನು ಮಂಡಿಸಿ, ನಾಕುತಂತಿಯ ಅಂತರಾಳದಲ್ಲಿರುವ 44 ಕವನಗಳನ್ನು ಹಂತ ಹಂತವಾಗಿ ವಿಶ್ಲೇಷಿಸಿದರು. ಬೇಂದ್ರೆಯವರ ಮಂತ್ರದ ಕುಣಿತ ಮತ್ತು ಮಾತಿನ ಬಲದ ಬಗ್ಗೆ ಅವರು ಮನನ ಮಾಡಿದರು.
ಅಧಿವೇಶನವು ಆಕರ್ಷಕ ಅಂಶಗಳಿಂದ ಕೂಡಿದ್ದು ಸಾಹಿತ್ಯವು ಅರಣ್ಯದಂತೆ ಹೊಸ ಹೊಸ ದಾರಿಗಳನ್ನು ಅನ್ವೇಷಿಸುವ ಕಾಡಿಗೆ ಹೋಲುತ್ತದೆ ಎಂದು ಹೇಳಿದ್ದಾರೆ. ಈ ಅನುಭವದಲ್ಲಿ ಹೊಸ ಮಾರ್ಗಗಳನ್ನು ಸಹಜವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿ “ಬೇಂದ್ರೆಯವರನ್ನು ಅರ್ಥಮಾಡಿಕೊಳ್ಳಲು ಬೇರೆ ಎಲ್ಲೂ ಹೋಗುವ ಅವಶ್ಯಕತೆ ಇಲ್ಲ, ಅವರ ಕವನದ ಒಳಗೆ ಹೋದರೆ ಸಾಕು” ಎಂದು ನುಡಿದರು.