Creativity, Womanhood and Uniform

Audi 1 – Session 2 : 11.00 am 

“Once a Fauji, always a Fauji”- Major Rama Sharma. The second session of the Mangaluru LIT Festival organized by Barath Foundation in collaboration with Mythic Society. The panelists for the session were Capt. Sajita Nair, Lt Col Ankita Srivastava and Maj Rama Sharma. The moderator for was Dr Harshit Joseph.

The panelists were asked how they were motivated to join the army. Capt. Sajita Nair shares her experience wherein she had a difficult time convincing her parents to join the army with the other panelists agreeing to her point.

Lt Col Ankita Srivastava spoke about how it was very difficult as the first woman officer from Allahabad to join the army. She says that the male subordinate found it difficult to take orders from her. She shared a small incident wherein she says that the tailor refused to stich her a uniform thinking that she was a NCC cadet.

Major Rama Sharma gave her insights on how the stereotype of woman in the army is changing as the India is developing. The panelists spoke on how they transitioned from army officers to writers and the motivations behind the officers taking their up writing.

Capt. Sajita Nair says that the most important reason to take up writing was the quote “writing is a mightier weapon” and it is the statement that drived her to take up writing.

The session ended with a Q and A with the audience. Lt Gen Vinod Khandare felicitated the panelists of the session.

 

ಸೃಜನಶೀಲತೆ, ಹೆಣ್ತನ ಮತ್ತು ಸಮವಸ್ತ್ರ ಮಹಿಳೆಯರಾಗಿ ವಿವಿಧ ಸೇನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ 3 ಮಹಿಳಾ ಸೇನಾಧಿಕಾರಿಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ವಿಚಾರಗೋಷ್ಠಿಯಲ್ಲಿ ಅಂಕಿತಾ ಶ್ರೀವಾಸ್ತವ ಸೇನೆಯ ಸಮವಸ್ತ್ರವೇ ನನ್ನನ್ನು ಭೂ ಸೇನೆಗೆ ಸೇರಲು ಪ್ರೇರೇಪಿಸಿತು. ಆದರೆ, ಸೇನೆಗೆ ಸೇರಿಕೊಂಡ ಕ್ಷಣ ನಮಗೆ ಅಲ್ಲಿನ ಸಾಹಸಮಯ ಜೇವನ ಕಳೆಯುವುದನ್ನು ರೂಢಿ ಮಾಡಿಕೊಳ್ಳಬೇಕು. ಪ್ರಾರಂಭದಲ್ಲಿ ಇತರೆ ಅಧಿಕಾರಿಗಳಿಗೂ ನಮ್ಮಂಥ ಮಹಿಳೆಯರನ್ನು ಆಫೀಸರ್­ಗಳಂತೆ ಕಾಣುವುದು ಕಷ್ಟವಾಗಿತ್ತು. ಆದರೆ ಸೇನೆಯಲ್ಲಿ ವಿವಿಧ ಕೆಲಸಗಳನ್ನು ಜೊತೆಯಲ್ಲೇ ಮಾಡುತ್ತಿರುವಾಗ ಸಾಮಾನ್ಯವಾಗಿಯೇ ಹೊಂದಿಕೊಳುವಿಕೆ ಮತ್ತು ಸೃಜನಶೀಲತೆ ನಮ್ಮಲ್ಲಿ ಹುಟ್ಟಿಕೊಳ್ಳುತ್ತವೆ. ಇದೇ ತರಬೇತಿ ನಮ್ಮನ್ನು ಬರವಣಿಗೆಗೂ ಉತ್ತೇಜನವನ್ನು ನೀಡಿತು, ನಂತರ ಮಾತನಾಡಿದ ಸಜಿತಾ ನಾಯರ್ ಜನರಲ್ಲಿ ಸೇನೆಯ ಬಗೆಗಿನ ಪರಿಕಲ್ಪನೆ ಬಹಳ ಸಂಶಯದಿಂದ ಕೂಡಿದೆ, ಭಯ ಹೆಚ್ಚಿದೆ. ಈ ಕಡಿಮೆ ತಿಳುವಳಿಕೆಯಿಂದಾಗಿಯೇ ಸೇನೆಗೆ ಸೇರಲು ಯುವಕರು ಮತ್ತು ಪೋಷಕರು ಹಿಂಜರಿಯುತ್ತಾರೆ. ಆದರೆ ನಮ್ಮ ಭುಜಗಲ್ಲಿರುವ ನಕ್ಷತ್ರಗಳು ನೀಡುವ ಅದ್ಭುತ ಅನುಭವ ಮತ್ತು ಜವಾಬ್ದಾರಿಯ ಸಮಾಧಾನದ ಅನುಭವ ಬಹಳ ವಿಶಿಷ್ಟ. ನಾನು ಲೇಖನವನ್ನು ಶಸ್ತ್ರಗಳಿಂದಲೂ ಹೆಚ್ಚು ಪ್ರಭಾವಶಾಲಿ ಎಂದು ನಂಬಿದ್ದೇನೆ. ಕ್ರಮೇಣ ಜೀವನದಲ್ಲಿ ನಮ್ಮ ಆದ್ಯತೆಗಳು ಬದಲಾಗುತ್ತದೆ. ತಾಯ್ತನವು ನನ್ನನ್ನು ಇನ್ನಷ್ಟು ಸವಾಲುಗಳಿಗೆ ತಯಾರಾಗಿಸಿತು ಎಂದರು.

ಸಿನಿಮಾ ಅಥವಾ ಎಲ್ಲೇ ಆಗಲಿ ಸೇನೆಗಳ ಸಂದರ್ಭದಲ್ಲಿ ಯುದ್ಧಗಳ ಬಗ್ಗೆಯೇ ಮಾತನಾಡುತ್ತಾರೆ. ಆದರೆ ಅವರ ಜೀವನಶೈಲಿ, ಘನತೆಗಳ ಬಗ್ಗೆ ಅಷ್ಟು ಪ್ರಾಮುಖ್ಯತೆ ಕೊಡುವುದಿಲ್ಲ. ಏಳುಬೀಳುಗಳ ಪ್ರತಿದಿನ ಎಲ್ಲರ ಜೀವನದಲ್ಲೂ ನೋಡಲು ಸಿಗುತ್ತದೆ. ಧೈರ್ಯದಿಂದ ಪರಿಸ್ಥಿತಿಗಳನ್ನು ಎದುರಿಸಿ ಸೇನೆಯ ಬದುಕನ್ನು ನಾವೆಲ್ಲರೂ ಜೀವಿಸಿದ್ದೇವೆ. ಇದನ್ನು ನಾವು ವೈಭವೀಕರಿಸಿ ಜನರಿಗೆ ತಿಳಿಸಬೇಕು. ನಾವೂ ಇತರೆ ಮಹಿಳೆಯರಂತೆಯೇ, ಆದರೆ ನಾವು ಯಾವುದೇ ಕೆಲಸ ವಹಿಸಿಕೊಳ್ಳಲು ಧೈರ್ಯ ತೋರುತ್ತೇವೆ ಎಂದು ರಮಾ ಶರ್ಮಾ ಹೇಳಿದರು. ವಿಚಾರಗೋಷ್ಠಿಯನ್ನು ಡಾ. ಹರ್ಷಿತ್ ಜೋಸೆಫ್ ನಡೆಸಿಕೊಟ್ಟರು.