From India to the World : Musings on Democracy and Policy

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 1 ರಲ್ಲಿ ಸಾಲ್ವಟೋರ್ ಬಬ್ಬೊನೆಸ್ ಮತ್ತು ಸುರಭಿ ಹೊಡಿಗೆರೆ ಅವರು From India to the World : Musings on Democracy and Policy ಕುರಿತು ಸಂವಾದ ನಡೆಸಿದರು.

ಸಾಲ್ವಟೋರ್ ಬಬ್ಬೊನೆಸ್ ಅವರು ಮಾತನಾಡಿ, ಭಾರತದ ಪರ್ಫಾರ್ಮೆನ್ಸ್ ರ್ಯಾಂಕಿಂಗ್ ನನ್ನನ್ನು ಸೆಳೆಯಿತು. ಭಾರತವು ವಿಶ್ವದ ಯಶಸ್ವಿ ಪ್ರಜಾಪ್ರಭುತ್ವ ದೇಶ. ಜಪಾನ್, ಅಮೆರಿಕ ಎಲ್ಲವೂ ಪ್ರಜಾಪ್ರಭುತ್ವ ರಾಷ್ಟ್ರಗಳೇ. ಆದರೆ ಭಾರತವು ವಿಶ್ವದ ಅತ್ಯಂತ ದೊಡ್ದ ಪ್ರಜಾಪ್ರಭುತ್ವ ದೇಶ. ಸುವ್ಯವಸ್ಥಿತ ಪ್ರಜಾಪ್ರಭುತ್ವ ವ್ಯವಸ್ಥೆ ಎಂದರು.

2014 ರ ಬಳಿಕ ಬಹಳಷ್ಟು ಕಮೆಂಟ್‌ಗಳು ಬರುತ್ತಿವೆ. ಭಾರತದ ಪ್ರಜಾಪ್ರಭುತ್ವದ ಬಗ್ಗೆ. ನಿಮ್ಮ ಅಭಿಪ್ರಾಯವೇನು ಎಂದು ಸುರಭಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ನ್ಯೂ ಯಾರ್ಕ್ ಟೈಮ್ ಮುಂತಾದ ಪತ್ರಿಕೆಗಳು ಭಾರತವನ್ನು, ಮೋದಿಯನ್ನು, ಸುಪ್ರೀಂ ಕೋರ್ಟ್‌ ಅನ್ನು ನಿಂದಿಸುತ್ತವೆ. ಆದರೆ ಅವರಿಗೆ ಇಲ್ಲಿನ ಬಗೆಗೆ ಯಾವುದೇ ಜ್ಞಾನ ಇಲ್ಲ.

ಭಾರತದ ಚುನಾವಣಾ ಆಯೋಗ ಸರಕಾರದಿಂದ ಕಂಟ್ರೋಲ್ ಮಾಡಲ್ಪಡುತ್ತಿದೆ ಎಂಬುದೆಲ್ಲ ಮಿಥ್ಯಾರೋಪಗಳು. ಸರಕಾರವನ್ನು ವಿರೋಧಿಸುವವರ ಕೈವಾಡ ಎಂದರು.

98% ಜನ ನಮ್ಮ ಧರ್ಮಾಚರಣೆಗೆ ನಾವು ಸ್ವತಂತ್ರರು ಎಂದು ಹೇಳಿದ್ದಾರೆ. ಕೇವಲ 2% ಜನ ಮಾತ್ರ ನಾವು 24% ಜನ ಮಾತ್ರ ತಾವು ಡಿಸ್ಕ್ರಿಮಿನೇಶನ್ ಎದುರಿಸುತ್ತಿದ್ದೇವೆ ಅಂತ ಹೇಳಿದ್ದಾರೆ. ಕೆಲವು ಕಡೆ ಇರಬಹುದು. ಆದರೆ ಅದೇ ಅಮೆರಿಕದಲ್ಲಿ, 80% ಏಶ್ಯನ್ ಅಮೆರಿಕನ್ನರು ತಾವು ಭೇದನೀತಿಯನ್ನು ಎದುರಿಸುತ್ತಿದ್ದೇವೆ ಅಂತ ಹೇಳಿದ್ದಾರೆ.

ಜರ್ನಲ್‌ಗಳಿಗೆ ಕೇವಲ ಒಂದು ದೊಡ್ಡ ಸ್ಟೋರಿ ಬೇಕು. ಹಾಗಾಗಿ ಅವರು ತಪ್ಪುಮಾಹಿತಿಗಳನ್ನು ದೊಡ್ದಸುದ್ದಿಯಾಗಿ ಪ್ರಸರಿಸುತ್ತವೆ.

ನಾನು ಶೈಕ್ಷಣಿಕ ಅಧ್ಯಯನಕ್ಕಾಗಿ ಭಾರತವನ್ನು ಅಧ್ಯಯನ ಮಾಡುತ್ತಿದ್ದೇನೆ. ಆದರೆ, ಇದು ನನಗೆ ಬಹಳ ಖುಷಿ ಕೊಟ್ಟಿದೆ. ನಾನು ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣದಿಂದ ನನ್ನ ಅಧ್ಯಯನ ಆರಂಭಿಸಿದೆ. ಆಮೇಲೆ ಹಲವಾರು ಗ್ರಂಥಗಳನ್ನು ಅಧ್ಯಯನ ಮಾಡಿದೆ. ಡಾಕ್ಯುಮೆಂಟರಿಗಳನ್ನು ನೋಡಿದೆ.

ಅಮೆರಿಕದ ಮೀಡಿಯ ಸಮ್ಮನೆ ‘ಹಿಂದುಫೋಬಿಯ’ ದ ಬಗ್ಗೆ ಭಯಹುಟ್ಟಿಸುವ ರೀತಿಯಲ್ಲಿ ಪ್ರಸಾರಿಸುತ್ತಿವೆ. ಆದರೆ ನಿಜವಾಗಿ ಅಮೆರಿಕದ ಜನ ಹಿಂದೂಗಳ ಬಗ್ಗೆ ಯಾವುದೇ ರೀತಿಯ ಭಯ ಹೊಂದಿಲ್ಲ.

ಭಾರತದಲ್ಲಿ ಗಟ್ಟಿಯಾದ ವಿರೋಧ ಪಕ್ಷವೇ ಇಲ್ಲ. ಅದುವೇ ದೊಡ್ಡ ಸಮಸ್ಯೆ. ಭಾರತಕ್ಕೆ ಬಲವಾದ ವಿರೋಧ ಪಕ್ಷ ಬೇಕಾಗಿದೆ.
ಅಮೆರಿಕದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ. ಆದರೆ ಭಾರತದಲ್ಲಿ ಇದೆ ಎಂದರು.