#MlrLitFest
  • mlrlitfest@gmail.com

ಶಬರಿಮಲೆ ಮತ್ತು ಟ್ರಿಪಲ್ ತಲಾಕ್ – ಒಂದು ಸಂವಾದ

Day 2 – 04-11-2018 at 12.30 pm @ Manthan : Women & Religion – From Triple Talaq to Shabarimala

ದೇಶದ ಗಮನ ಸೆಳೆದ ಮಂಗಳೂರು ಲಿಟ್ ಫೆಸ್ಟ್‌ 2018 ಸಾಹಿತ್ಯ ಉತ್ಸವದ ವೇದಿಕೆಗಳಲ್ಲಿ ನಡೆದ ಸಂವಾದ ಕಾರ್ಯಕ್ರಮಗಳಲ್ಲಿ ವಿಮೆನ್ ಅಂಡ್ ರಿಲಿಜನ್ – ಫ್ರಂ ಟ್ರಿಪಲ್ ತಲಾಕ್ ಟು ಶಬರಿಮಲ (From Triple Talaq to Sabarimala) ಕಾರ್ಯಕ್ರಮವು ಅತ್ಯಂತ ಜನಪ್ರಿಯ ಸಂವಾದ ಕಾರ್ಯಕ್ರಮಗಳಲ್ಲಿ ಒಂದಾಯಿತು.

ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ನೂರಾರು ಸಭಿಕರು ನಿಂತುಕೊಂಡೇ ಸಂವಾದವನ್ನು ಆಲಿಸಬೇಕಾಯಿತು. ಪಾಲ್ಗೊಂಡರು. ಇನ್ನೊಬ್ಬರ ನಂಬಿಕೆಯನ್ನು ಗೌರವಿಸುವ ಹಕ್ಕು ಎಲ್ಲರಿಗೂ ಇದೆಯಾದರೂ ಇನ್ನೊಬ್ಬರ ನಂಬಿಕೆಗಳನ್ನು ನೋಯಿಸುವ ಅಧಿಕಾರ ಯಾರಿಗೂ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಶ್ರೀಮತಿ ಮಾಳವಿಕಾ ಅವಿನಾಶ್ ಅವರು ನಡೆಸಿಕೊಟ್ಟ ಸಂವಾದ ಕಾರ್ಯಕ್ರಮದಲ್ಲಿ ಯೋಗಿನಿ ಶಾಂಭವಿ ಛೋಪ್ರಾ, ಪ್ರೀತಿ ನಾಗರಾಜ್ ಮತ್ತು ಶ್ರೀಮತಿ ಪದ್ಮಾ ರಾಣಿಯವರು ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಹಿಂದೂ ಸಂಪ್ರದಾಯಗಳನ್ನೇ ಗುರಿ ಮಾಡಲಾಗುತ್ತಿದೆ ಎನ್ನುವ ಅನಿಸಿಕೆ ಅಲ್ಲಿ ವ್ಯಕ್ತವಾಯಿತು.

ಶಬರಿಮಲೆ ಚರ್ಚೆಯು ಆಸ್ತಿಕತೆ ಮತ್ತು ನಾಸ್ತಿಕತೆಗಳ ನಡುವಿನ ಚರ್ಚೆಯೇ ಹೊರತೂ ಅದು ಪುರುಷ ಮತ್ತು ಸ್ತ್ರೀಯರ ನಡುವಿನ ಚರ್ಚೆಯೇ ಅಲ್ಲ ಎನ್ನುವ ವಿಚಾರ ಸಂವಾದದಲ್ಲಿ ಹೊರಹೊಮ್ಮಿತು.

ಸಭಿಕರೊಂದಿಗೆ ನಡೆದ ಪ್ರಶ್ನೋತ್ತರ ಕಾರ್ಯಕ್ರಮವೂ ಕೂಡಾ ಮತ್ತಷ್ಟು ಬಿಸಿಬಿಸಿ ಚರ್ಚೆಗೆ ಪ್ರಚೋದನೆ ನೀಡಿತು.